ಕನ್ನಡ ಚಿತ್ರರಂಗದಲ್ಲಿ ತಾಯಿ ಸೆಂಟಿಮೆಂಟ್ ಹಾಡುಗಳನ್ನು ಹಾಡುವುದರಲ್ಲಿ ‘ಜೋಗಿ’ ಪ್ರೇಮ್ ಜನಪ್ರಿಯರು. ‘ಬ್ರಹ್ಮ ವಿಷ್ಣು …’, ‘ಬೇಡುವೆನು ವರವನ್ನು …’ ಮುಂತಾದ ಕೆಲವು ಜನಪ್ರಿಯ ಹಾಡುಗಳನ್ನು ಹಾಡಿರುವ ಪ್ರೇಮ್, ಇದೀಗ ಬೇರೆ ತರಹದ ಹಾಡನ್ನು ಹಾಡಿದ್ದಾರೆ.
‘ಲೈಫ್ ಟುಡೇ’ ಎಂಬ ಚಿತ್ರಕ್ಕೆ ಪ್ರೇಮ್, ‘ಸಿಕ್ಕರೇ ಸಿಕ್ಕರೇ …’ ಎಂಬ ಹಾಡನ್ನು ಹಾಡಿದ್ದಾರೆ. ಕನ್ನಡ ಮತ್ತು ತಮಿಳಿನಲ್ಲಿ ಏಕಕಾಲಕ್ಕೆ ತಯಾರಾಗುತ್ತಿರುವ ಈ ಚಿತ್ರದ ತಮಿಳು ಅವತರಣಿಕೆಗೆ ಅಲ್ಲಿನ ಖ್ಯಾತ ಸಂಗೀತ ನಿರ್ದೇಶ ಜಿ.ವಿ. ಪ್ರಕಾಶ್ ಕುಮಾರ್ ಧ್ವನಿಯಾಗಿದ್ದರು. ಈಗ ಕನ್ನಡ ಅವತರಣಿಕೆಯ ‘ಸಿಕ್ಕರೆ ಸಿಕ್ಕರೆ ಒಳ್ಳೆಯ ಹುಡುಗರು ಸಿಕ್ಕರೆ …’ ಎಂಬ ಹಾಡನ್ನು ಪ್ರೇಮ್ ಹಾಡಿದ್ದಾರೆ. ಶ್ರೀಧರ್ ವಿ. ಸಂಭ್ರಮ್ ಸಂಗೀತ ಸಂಯೋಜಿಸಿದ್ದು, ರಾಮನಾರಾಯಣ್ ಸಾಹಿತ್ಯ ರಚಿಸಿದ್ದಾರೆ. ಇತ್ತೀಚೆಗೆ ಈ ಹಾಡಿನ ರೆಕಾರ್ಡಿಂಗ್ ಆಗಿದೆ.
ಇತ್ತೀಚೆಗೆ ಪ್ರೇಮ್ ಒಂದು ಹಾಡು ಹಾಡೋದಕ್ಕೆ ಐದು ಲಕ್ಷ ಸಂಭಾವನೆ ತೆಗೆದುಕೊಳ್ಳುತ್ತಾರೆ ಎಂಬ ಸುದ್ದಿಯಾಗಿತ್ತು. ಹೀಗಿರುವಾಗಲೇ, ‘ಲೈಫ್ ಟುಡೇ’ ಚಿತ್ರಕ್ಕೆ ಪ್ರೇಮ್ ಎಷ್ಟು ಸಂಭಾವನೆ ಪಡೆದರು ಎಂಬ ಪ್ರಶ್ನೆ ಸಹಜವಾಗಿಯೇ ಎದುರಾಗುತ್ತದೆ. ಮುಂಬೈನ ಗಾಯಕ-ಗಾಯಕಿಯರಿಗೆ ಅಷ್ಟು ದುಡ್ಡು ಕೊಡುವಾಗ, ತಮಗೇಕೆ ಕೊಡುವುದಿಲ್ಲ ಎಂದು ಪ್ರೇಮ್ ಪ್ರಶ್ನಿಸುತ್ತಾರೆ.
ಈ ಕುರಿತು ಮಾತನಾಡುವ ಅವರು, ‘ನಾನು 10ಲಕ್ಷ ಸಂಭಾವನೆ ಕೇಳುತ್ತೇನೆ. ಮುಂಬೈಯವರಿಗೆ ಕೊಡುವಾಗ, ಕನ್ನಡಿಗರಿಗೆ ಯಾಕೆ ಕೊಡಬಾರದು? ನಾನು ಹಾಡುವ ಹಾಡಿನ ಸಂಭಾವನೆ ಟ್ರಸ್ಟ್ ಸೇರುತ್ತೆ. ಅಮ್ಮನ ಟ್ರಸ್ಟ್ ಮೂಲಕ ಅನೇಕ ಸಾಮಾಜಿಕ ಸೇವೆಗೆ ಬಳಕೆಯಾಗುತ್ತದೆ’ ಎನ್ನುತ್ತಾರೆ.
ಪ್ರೇಮ್ ತಮ್ಮ ಸಂಯೋಜನೆಯ ಹಾಡನ್ನು ಹಾಡಿರುವುದು ತಮ್ಮ ಪುಣ್ಯ ಎನ್ನುವ ಶ್ರೀಧರ್ ವಿ. ಸಂಭ್ರಮ್, ‘ನಾನು ಅವರ ದೊಡ್ಡ ಅಭಿಮಾನಿ. ಅವರ ಧ್ವನಿಯಲ್ಲಿರುವ ಮುಗ್ಧತೆ ಮತ್ತು ನೋವಿನ ಗಾಢತೆ ಈ ಹಾಡಿಗೆ ಬೇಕಿತ್ತು. ಅದು ಸಿಕ್ಕಿದೆ. ಈ ಹಾಡು ದೊಡ್ಡ ಯಶಸ್ವಿಯಾಗುತ್ತದೆ ಎಂಬ ನಂಬಿಕೆ ಇದೆ ಎನ್ನುತ್ತಾರೆ.
‘ಲೈಫ್ ಟುಡೇ’ ಚಿತ್ರವನ್ನು ಕಾಂತ ಕನ್ನಲ್ಲಿ ನಿರ್ದೇಶಿಸುತ್ತಿದ್ದು, ಪ್ರದೀಪ್ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರದಲ್ಲಿ ಕಿರಣ್ ಆದಿತ್ಯ ನಾಯಕನಾಗಿ ಅಭಿನಯಿಸಿದ್ದು, ಲೇಖಚಂದ್ರ ನಾಯಕಿಯಾಗಿ ಅಭಿನಯಿಸಿದ್ದಾರೆ. ಮಿಕ್ಕಂತೆ ತಬಲ ನಾಣಿ, ಅಪೂರ್ವ, ಕಾಕ್ರೋಚ್ ಸುಧಿ, ಜಗ್ಗಪ್ಪ ಮುಂತಾದವರು ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಬೆಳಗಾವಿಯ ಸುವರ್ಣಸೌಧದಲ್ಲಿ ನಡೆದ ಕರ್ನಾಟಕ ವಿಧಾನಮಂಡಲದ ಚಳಿಗಾಲದ ಅಧಿವೇಶನದಲ್ಲಿ ವಿರೋಧ ಪಕ್ಷಗಳ ಪ್ರಬಲ ವಿರೋಧದ ನಡುವೆಯೂ ಕಾಂಗ್ರೆಸ್ ಸರ್ಕಾರ, ಕರ್ನಾಟಕ…
ಕೊಡಗಿನ ಖ್ಯಾತಿ ಹೆಚ್ಚಿಸುವಲ್ಲಿ ಕ್ರೀಡಾಪಟುಗಳ ಕೊಡುಗೆ ಅಪಾರ: ಸುಜಾ ಕುಶಾಲಪ್ಪ ಪೊನ್ನಂಪೇಟೆ: ಕೊಡಗು ಜಿಲ್ಲೆ ರಾಷ್ಟ್ರಮಟ್ಟದಲ್ಲಿ ವಿಭಿನ್ನವಾಗಿ ಗುರುತಿಸಿಕೊಂಡಿದೆ. ಎಲ್ಲ…
ಮುಚ್ಚಲ್ಪಟ್ಟಿರುವ ಶಾಲೆಯ ಕೊಠಡಿಯಲ್ಲಿ ರಾರಾಜಿಸುತ್ತಿರುವ ಮದ್ಯದ ಬಾಟಲಿಗಳು; ನಾಗರಿಕರ ಆಕ್ರೋಶ ಹನೂರು: ನಿಗದಿತ ಸಂಖ್ಯೆಯ ಮಕ್ಕಳಿಲ್ಲ ಎಂಬ ಕಾರಣಕ್ಕೆ ಮುಚ್ಚಲ್ಪಟ್ಟಿರುವ…
ಕೆ.ಬಿ.ರಮೇಶನಾಯಕ ಅಪೆಕ್ಸ್ ಬ್ಯಾಂಕ್ ಉಪಾಧ್ಯಕ್ಷರ ಹುದ್ದೆಯತ್ತ ಶಾಸಕ ಅನಿಲ್ ಚಿತ್ತ ತಂದೆಗೆ ಅಧ್ಯಕ್ಷ ಹುದ್ದೆ ಕೊಡಿಸಲು ಶಾಸಕ ಡಿ.ರವಿಶಂಕರ್ ಯತ್ನ …
ನಂಜನಗೂಡು : ಜಾತೀಯತೆ ಎಂಬುದು ಸಂಪೂರ್ಣವಾಗಿ ತೊಲಗಬೇಕು. ಎಲ್ಲ ಸಮುದಾಯದವರು ನಮ್ಮವರೇ ಎಂದು ತಿಳಿದಾಗ ಮಾತ್ರ ಜಾತೀಯತೆ ದೂರವಾಗಲು ಸಾಧ್ಯ…