ಮೈಸೂರಿನಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ಚಿತ್ರನಗರಿಯು ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಕಾಲದಲ್ಲಿ ಆದರೆ ಆಯಿತು, ಇಲ್ಲವಾದರೆ ಅದು ಕನಸಿನ ಮಾತು ಎಂದು ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಹೇಳಿದ್ದಾರೆ.
‘ರಕ್ತ ಕಾಶ್ಮೀರ’ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ‘ದೇವರಾಜ ಅರಸರ ಕಾಲದಿಂದ ಇಲ್ಲಿಯವರೆಗೂ ಇಲ್ಲಿ ಚಿತ್ರನಗರಿ ಆಗುವುದಕ್ಕೂ ಬಿಡುತ್ತಿಲ್ಲ. ಚಿತ್ರ ನಗರಿಗಾಗಿ ಮೈಸೂರಿನಲ್ಲಿ 150 ಎಕರೆ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಇರುವವರೆಗೂ ಫಿಲಂ ಸಿಟಿ ಆದರೆ ಉಂಟು, ಇಲ್ಲವಾದರೆ ಖಂಡಿತಾ ಆಗುವುದಿಲ್ಲ. ಅವರಿಗೆ ಸಿನಿಮಾ ಬಗ್ಗೆ ಕಾಳಜಿ, ಕನಿಕರ ಇದೆ. ಆದರೆ, ಅಧಿಕಾರಿಗಳು ಅದನ್ನು ತಡೆ ಹಿಡಿಯುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.
ಇದನ್ನು ಓದಿ: ವೈಡ್ ಆಂಗಲ್: ಉದ್ಯಮದತ್ತ ಸರ್ಕಾರದ ಗಮನ; ಚಿತ್ರನಗರಿ ಯೋಜನೆಗೆ ಮತ್ತೆ ಚಾಲನೆ
ಬರೀ ಚಿತ್ರನಗರಿಯಷ್ಟೇ ಅಲ್ಲ, ಜನತಾ ಚಿತ್ರಮಂದಿರಗಳ ನಿರ್ಮಾಣದಲ್ಲೂ ವಿಳಂಬವಾಗುತ್ತಿದೆ ಎಂದಿರುವ ಅವರು, ‘ಚಿಕ್ಕ ಚಿತ್ರಗಳಿಗೆ ಜನತಾ ಚಿತ್ರಮಂದಿರಗಳು ಸೂಕ್ತವಾದ್ದರಿಂದ, ಜನತಾ ಚಿತ್ರಮಂದಿರಗಳನ್ನು ಮಾಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮನವಿ ಮಾಡಿದ್ದೆ. ಅವರು ತಕ್ಷಣವೇ 50 ಲಕ್ಷ ರೂ. ಸಬ್ಸಿಡಿ ಘೋಷಿಸಿದರು. ಸರ್ಕಾರದ 50 ಬೈ 80 ಅಡಿ ಜಾಗ ಕೊಡಿ ಎಂದು ಆದೇಶಿಸಿದ್ದರು. ಆದರೆ, ನಮ್ಮ ದುರಾದೃಷ್ಟವೋ, ಶಾಪವೋ ಗೊತ್ತಿಲ್ಲ. ಮುಖ್ಯಮಂತ್ರಿಗಳು ಒಪ್ಪಿಗೆ ಸೂಚಿಸಿದರೂ ಅಧಿಕಾರಿಗಳು ಕೊಕ್ಕೆ ಹಾಕಿಡುತ್ತಾರೆ. ಯಾವುದೂ ಮುಂದುವರೆಯುವುದಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಚಿತ್ರಮಂದಿರಗಳು ಮುಚ್ಚುವುದರಿಂದ ವ್ಯಾಪಾರಕ್ಕೆ ಏಟು ಬೀಳುತ್ತಿದೆ ಎಂದಿರುವ ಅವರು, ‘ಹೆಚ್ಚು ಚಿತ್ರಮಂದಿರಗಳು ಪ್ರಾರಂಭವಾಗುವುದರಿಂದ ಸಾಕಷ್ಟು ಉದ್ಯೋಗ ಸಿಗುತ್ತದೆ. ಬಸ್ ನಿಲ್ದಾಣಗಳಲ್ಲಿ ಚಿತ್ರಮಂದಿರ ಪ್ರಾರಂಭ ಮಾಡಬಹುದು ಎಂದು ರಾಮಲಿಂಗಾ ರೆಡ್ಡಿ ಆದೇಶ ಮಾಡಿದರು. ಆದರೆ, ಅಧಿಕಾರಿಗಳು ಕೊಕ್ಕೆ ಇಟ್ಟಿದ್ದಾರೆ. ಒಂದೊಂದು ಪ್ರದೇಶದಲ್ಲಿ 250 ಸೀಟ್‍ಗಳಿರುವ ಚಿತ್ರಮಂದಿರಗಳು ಇದ್ದರೆ ಸಾಕು. ಇವತ್ತು ಬೆಂಗಳೂರಿನಲ್ಲೇ ಇಂದಿರಾನಗರ, ಕೋರಮಂಗಲ ಮುಂತಾದ ಕಡೆ ಚಿತ್ರಮಂದಿರಗಳೇ ಇಲ್ಲ. ಜನ ಚಿತ್ರ ನೋಡಬೇಕೆಂದರೂ, ನೋಡುವುದಕ್ಕೆ ಆಗುತ್ತಿಲ್ಲ. 75 ರೂ.ಗಳಿಗೆ ಸಿನಿಮಾ ತೋರಿಸಬೇಕೆಂಬ ಆಸೆ ಸಿದ್ದರಾಮಯ್ಯನವರದ್ದು. ಅದಕ್ಕೆ ಅಧಿಕಾರಿಗಳು ಜೀವ ಕೊಡುತ್ತಿಲ್ಲ’ ಎಂದು ಹೇಳಿದ್ದಾರೆ.
ಗುಂಡ್ಲುಪೇಟೆ : ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಫಾರಿ ಪುನರಾರಂಭಿಸುವ ಸರ್ಕಾರದ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ, ಕರ್ನಾಟಕ ರಾಜ್ಯ…
ಹೊಸದಿಲ್ಲಿ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಿವಿಧ ದೇಶಗಳ ಮೇಲೆ ಹೇರಿರುವ ಹೆಚ್ಚುವರಿ ಸಾಮೂಹಿಕ ಸುಂಕಗಳನ್ನು ಅಮೆರಿಕ…
ಹನೂರು : ಮುಂದಿನ ದಿನಗಳಲ್ಲಿ ತಮಿಳುನಾಡು ವಿಧಾನಸಭೆ ಚುನಾವಣೆ ನಡೆಯಲಿದ್ದು ಯಶಸ್ವಿಯಾಗಿ ನಡೆಸಲು ಕರ್ನಾಟಕ ಪೊಲೀಸರು ಹಾಗೂ ಅಬಕಾರಿ ಇಲಾಖೆ…
ಕೆ.ಆರ್.ಪೇಟೆ : ಪಟ್ಟಣದ ಪಿ.ಎಲ್.ಡಿ ಬ್ಯಾಂಕ್ ಮುಂಭಾಗದಲ್ಲಿ ಶಫಿಉಲ್ಲಾ ಅವರು ನಡೆಸುತ್ತಿದ್ದ ಮೊಬೈಲ್ ಹಾಗೂ ಎಲೆಕ್ಟ್ರಾನಿಕ್ಸ್ ಅಂಗಡಿಯು ವಿದ್ಯುತ್ ಶಾರ್ಟ್…
ಬೆಂಗಳೂರು : ಬೆಂಗಳೂರು ನಗರ ಮಾತ್ರವಲ್ಲದೆ ಇಡೀ ಕರ್ನಾಟಕ ಎಲೆಕ್ಟ್ರಿಕ್ ವಾಹನ ಉದ್ಯಮದ ಹಬ್ ಆಗಿ ಅಭಿವೃದ್ಧಿ ಹೊಂದುತ್ತಿದ್ದು, ಅದಕ್ಕೆ…
ಸುಪ್ರೀಂ ತೀರ್ಪಿಗೆ ಆಕ್ರೋಶ ವ್ಯಕ್ತಪಡಿಸಿದ ಅಮೆರಿಕ ಅಧ್ಯಕ್ಷ ವಾಷಿಂಗ್ಟನ್ : ವಿವಿಧ ದೇಶಗಳ ಸರಕುಗಳ ಮೇಲೆ ವಿಧಿಸಿದ್ದ ಭಾರಿ ಸುಂಕಗಳನ್ನು…