ಉಪೇಂದ್ರ ಅಭಿನಯದ ‘UI’ ಚಿತ್ರ ಬಿಡುಗಡೆಯಾಗಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಚಿತ್ರವು ಮೊದಲ ವಾರ 26 ಕೋಟಿ ರೂ ಗಳಿಕೆ ಮಾಡಿದೆ ಎಂದು ಹೇಳಲಾಗುತ್ತಿದೆ. ಚಿತ್ರಕ್ಕೆ ಸಿಗುತ್ತಿರುವ ಪ್ರತಿಕ್ರಿಯೆ ಬಗ್ಗೆ ಉಪೇಂದ್ರ ಮತ್ತು ‘UI’ ಚಿತ್ರತಂಡದವರು ಖುಷಿಯಾಗಿದ್ದಾರೆ. ಇದೇ ಸಂಭ್ರಮದಲ್ಲಿ ಕೇಕು ಕತ್ತರಿಸಿ ಸಂಭ್ರಮಿಸಿದ್ದಾರೆ.
‘UI’ ಚಿತ್ರವನ್ನು ನೋಡಿದವರು, ಸಹಜವಾಗಿಯೇ ಚಿತ್ರವನ್ನು ಉಪೇಂದ್ರ ಅವರ ಹಿಂದಿನ ಚಿತ್ರಗಳ ಜೊತೆಗೆ ಹೋಲಿಕೆ ಮಾಡುತ್ತಿದ್ದಾರೆ. ಈ ಹೋಲಿಕೆಗಳು ಸಹಜ ಎನ್ನುವ ಉಪೇಂದ್ರ, ‘ಸಾಮಾನ್ಯವಾಗಿ ಯಾರೇ ಚಿತ್ರಗಳನ್ನು ಮಾಡಲಿ. ಅವರ ಹಿಂದಿನ ಯಶಸ್ವಿ ಚಿತ್ರಗಳ ಜೊತೆಗೆ ಹೋಲಿಕೆ ಮಾಡಲಾಗುತ್ತದೆ. ಅದೇ ತರಹದ ಹೋಲಿಕೆ ಇದ್ದರೆ, ಇದನ್ನು ಬಿಟ್ಟು ಇವನಿಗೆ ಬೇರೆ ಮಾಡುವುದಕ್ಕೆ ಬರುವುದಿಲ್ಲ ಎನ್ನುತ್ತಾರೆ. ಬೇರೆ ಮಾಡಿದರೆ, ಹಿಂದಿನ ಚಿತ್ರದ ತರಹ ಇಲ್ಲ ಎನ್ನುತ್ತಾರೆ. ಹಾಗಾದರೆ, ಯಾವ ತರಹದ ಚಿತ್ರಗಳನ್ನು ಮಾಡಬೇಕು?’ ಎಂಬುದು ಅವರ ಪ್ರಶ್ನೆ.
ಪ್ರತಿಯೊಂದು ಕಥೆಗೂ ಅದರದ್ದೇ ಹರಿವು ಇರುತ್ತದೆ ಎನ್ನುವ ಉಪೇಂದ್ರ, ‘ಒಂದು ಚಿತ್ರದಲ್ಲಿ ಒಂದು ಅಂಶ ಗೆದ್ದಿತು ಎಂದರೆ, ಈ ಚಿತ್ರದಲ್ಲಿ ತುರುಕೋಕೆ ಆಗಲ್ಲ. ಏಕೆಂದರೆ, ಇದು ಬೇರೆಯದೇ ಕಥೆ. ಯಾವುದೇ ಕಥೆ ಆಗಲಿ, ಅದನ್ನು ಅದರ ಫ್ಲೋ ಪ್ರಕಾರ ಬೆಳೆಸಬೇಕೇ ಹೊರತು, ಸುಮ್ಮನೆ ತುರುಕುವುದಕ್ಕೆ ಸಾಧ್ಯವಿಲ್ಲ. ನಾನು ಇಲ್ಲಿ ಏನೋ ತಲೆ ಉಪಯೋಗಿಸಿ ಬರೆದೆ ಎಂದರೆ ತಪ್ಪಾಗುತ್ತದೆ. ಐಡಿಯ ಬಂತು ಬಳಸಿಕೊಂಡೆ. ಯಾವುದೇ ಪ್ಲಾನ್ ಮಾಡಿಕೊಂಡು ಮಾಡಲಿಲ್ಲ. ಧಿಕ್ಕಾರ ಸಂಭಾಷಣೆ ಸಹ ಅದಾಗಿಯೇ ಬಂತೇ ಹೊರತು, ನಾನು ಅದನ್ನು ಉದ್ದೇಶಪೂರ್ವಕವಾಗಿ ಸೇರಿಸಿಲ್ಲ’ ಎಂದರು.
ತಾನಂದುಕೊಂಡಂತೆ ಪ್ರೇಕ್ಷಕರು ಚಿತ್ರವನ್ನು ಚೆನ್ನಾಗಿಯೇ ಡೀಕೋಡ್ ಮಾಡಿದ್ದಾರೆ ಎನ್ನುವ ಉಪೇಂದ್ರ, ‘ಕನ್ನಡಕ್ಕಿಂತ ಬೇರೆ ಭಾಷೆಗಳಲ್ಲಿ ಜನ ಚೆನ್ನಾಗಿ ಡೀಕೋಡ್ ಮಾಡುತ್ತಿದ್ದಾರೆ. ಚಿತ್ರದ ಕೊನೆಯ ಶಾಟ್ ಬಗ್ಗೆ ಒಬ್ಬರು ಮಾತ್ರ ಮಾತನಾಡಿದ್ದಾರೆ. ಈ ಚಿತ್ರದಿಂದ ಏನೇನು ಅರ್ಥವಾಯ್ತು ಎಂಬುದು ಅವರವರಿಗೆ ಬಿಟ್ಟಿದ್ದು. ಅವರವರ ಗ್ರಹಿಕೆಯ ಮೇಲೆ ಚಿತ್ರವು ಬೇರೆಬೇರೆ ರೀತಿ ಅರ್ಥವಾಗುತ್ತಾ ಹೋಗುತ್ತದೆ. ಹಾಗೆ ನೋಡಿದರೆ, ಇಲ್ಲಿ ತಲೆಗೆ ಹುಳ ಬಿಡುವಂತದ್ದೇನ್ನೂ ಇಲ್ಲ. ಎಲ್ಲವೂ ನೇರವಾಗಿಯೇ ಇದೆ. ಆದರೆ, ಇಂಥ ಚಿತ್ರಗಳಿಗೆ ಚೆನ್ನಾಗಿದೆ ಅಥವಾ ಚೆನ್ನಾಗಿಲ್ಲ ಎಂಬ ಸರ್ವಾನುಮತದ ಅಭಿಪ್ರಾಯ ಸಿಗುವುದಿಲ್ಲ. ಒಬ್ಬೊಬ್ಬರು ಒಂದೊಂದು ರೀತಿ ಗ್ರಹಿಸುತ್ತಾರೆ ಮತ್ತು ತಾವು ಅರ್ಥ ಮಾಡಿಕೊಂಡಿದ್ದನ್ನು ಹೇಳುತ್ತಾರೆ’ ಎಂದರು ಉಪೇಂದ್ರ.
ಮಂಡ್ಯ: ಡಿವೈಡರ್‌ಗೆ ಡಿಕ್ಕಿ ಹೊಡೆದ ಕಾರು ಪಲ್ಟಿಯಾಗಿ ಬಿದ್ದ ಪರಿಣಾಮ ಸ್ಥಳದಲ್ಲೇ ಮೂವರು ಸಾವನ್ನಪ್ಪಿರುವ ಧಾರುಣ ಘಟನೆ ಮಂಡ್ಯದಲ್ಲಿ ನಡೆದಿದೆ.…
ಬೆಂಗಳೂರು: ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಬೆಳಗಿನ ಜಾವ ದಟ್ಟವಾದ ಮಂಜು ಕವಿದ ವಾತಾವರಣ ಇರಲಿದೆ.…
ಕೊಳ್ಳೇಗಾಲ: ಮೇಯಲು ಬಿಟ್ಟಿದ್ದ ಮೇಕೆಗಳು ಯೂರಿಯಾ ಗೊಬ್ಬರ ತಿಂದು ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ಜಾಗೇರಿ ಹಳೆ…
ಚಾಮರಾಜನಗರ: ಪಾದಾಚಾರಿಗಳ ಮೇಲೆ ಏಕಾಏಕಿ ಹುಚ್ಚುನಾಯಿ ದಾಳಿ ನಡೆಸಿದ ಪರಿಣಾಮ 7 ಮಂದಿ ಗಾಯಗೊಂಡಿರುವ ಘಟನೆ ಯಳಂದೂರು ಪಟ್ಟಣದಲ್ಲಿ ನಡೆದಿದೆ.…
ಮಡಿಕೇರಿ: ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಮ್ಮ ವಸ್ತುಗಳು ಏನೇ ಇದ್ದರೂ ಅಫಿಡವಿಟ್‌ನಲ್ಲಿ ತೋರಿಸಿದ್ದರೆ ಯಾವುದೇ ಸಮಸ್ಯೆ ಆಗಲ್ಲ. ಈ ಹಿಂದೆ…
ಬೆಂಗಳೂರು: ನಟ ಕಿಚ್ಚ ಸುದೀಪ್ ಅಭಿನಯದ ಮಾರ್ಕ್ ಸಿನಿಮಾ ಟ್ರೈಲರ್ ಅದ್ಧೂರಿಯಾಗಿ ಬಿಡುಗಡೆ ಮಾಡಲಾಗಿದೆ. ವಿಜಯ್ ಕಾರ್ತಿಕೇಯ-ಸುದೀಪ್ ಕಾಂಬಿನೇಷನ್‌ನಲ್ಲಿ ಮೂಡಿಬಂದಿರುವ…