ಮನರಂಜನೆ

‘ಬಿಗ್ ಬಾಸ್‍’ನಿಂದ ಎಷ್ಟು ಜನರಿಗೆ ಪ್ರಯೋಜನ ಆಯಿತು ಎಂಬುದು ಮುಖ್ಯ: ಸುದೀಪ್‍

ಕನ್ನಡ ಕಿರುತೆರೆಯ ಜನಪ್ರಿಯ ಕಾರ್ಯಕ್ರಮವಾದ ‘ಬಿಗ್‍ ಬಾಸ್‍ -ಸೀಸನ್‍ 11’ಕ್ಕೆ ದಿನಗಣನೆ ಪ್ರಾರಂಭವಾಗುತ್ತಿದೆ. ಈ ಕಾರ್ಯಕ್ರಮವನ್ನು ಸುದೀಪ್‍ ನಡೆಸಿಕೊಡಲಿದ್ದಾರೆ. ಕಾರ್ಯಕ್ರಮವು ಸೆ. 20ರಂದು ಸಂಜೆ ಆರಕ್ಕೆ ಪ್ರಾರಂಭವಾಗಲಿದ್ದು, ಅಂದು ಸುದೀಪ್‍ ಸ್ಪರ್ಧಿಗಳನ್ನು ಮನೆಗೆ ಬಿಡಲಿದ್ದಾರೆ.

ಅಂದಹಾಗೆ, ಈ ಕಾರ್ಯಕ್ರಮದ ಪ್ರಾಯೋಜಕತ್ವವನ್ನು ಆನ್‍ಲೈನ್‍ ರಮ್ಮಿ ಸಂಸ್ಥೆಯೊಂದು ಪಡೆದಿದೆ. ಈ ಹಿಂದೆ ರಮ್ಮಿ ಆನ್‍ಲೈನ್‍ ಗೇಮ್‍ಗೆ ಪ್ರಚಾರ ಮಾಡಿ, ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದರು ಸುದೀಪ್‍. ಸಮಾಜದಲ್ಲಿ ಜವಾಬ್ದಾರಿ ಸ್ಥಾನದಲ್ಲಿರುವ ಅವರು, ರಮ್ಮಿ ಆಟಕ್ಕೆ ಪ್ರಚಾರ ನೀಡಬಾರದು, ಅದರಿಂದ ಸಾಕಷ್ಟು ಸಮಸ್ಯೆಗಳಾಗುತ್ತವೆ ಎಂಬ ಮಾತುಗಳು ಕೇಳಿ ಬಂದಿದ್ದವು. ಸಂಸ್ಥೇಯ ಪ್ರಚಾರದಿಂದ ಸುದೀಪ್‍ ದೂರ ಉಳಿದರೂ, ಇದೀಗ ‘ಬಿಗ್‍ ಬಾಸ್’ ಕಾರ್ಯಕ್ರಮದ ಪ್ರಾಯೋಜಕತ್ವವನ್ನು ಆನ್‍ಲೈನ್‍ ರಮ್ಮಿ ಗೇಮ್‍ ಪಡೆದಿದೆ.

ಸಾಮಾಜಿಕ ಜವಾಬ್ದಾರಿ ಇರುವ ನಟನೊಬ್ಬ ಸಮಾಜಕ್ಕೆ ಮಾರಕವಾಗಿರುವ ಆನ್‍ಲೈನ್‍ ರಮ್ಮಿ ಆಟವನ್ನು ಪ್ರಚಾರ ಮಾಡುವುದು ಎಷ್ಟು ಸರಿ ಎಂಬ ಪ್ರಶ್ನೆಗೆ ಉತ್ತರಿಸಿದ ಸುದೀಪ್‍, ‘ನಮ್ಮದು ತಿಳವಳಿಕೆ ಇರುವ ಒಂದು ಸಮಾಜ. ಇಲ್ಲಿ ಸಿಗರೇಟ್‍, ಕುಡಿತ, ಸಾಕಷ್ಟು ಇದೆ. ಎಲ್ಲಕ್ಕಿಂತ ಹೆಚ್ಚಾಗಿ ಮನೆಯಲ್ಲಿ ತಂದೆ-ತಾಯಿ ಇದ್ದಾರೆ. ನಮಗೆ ಏನು ಬೇಕೋ ಅದನ್ನು ನಾವು ಆಯ್ಕೆ ಮಾಡಬೇಕು. ಸರ್ಕಾರ ನಮ್ಮಿಂದ ಪಡೆಯುವ ತೆರಿಗೆ ತುಂಬಾ ದುಬಾರಿ ಎಂಬ ಅನಿಸಿಕೆ ಜನರಲ್ಲಿದೆ. ಆದರೆ, ಒಂದು ದೇಶ ನಡೆಸುವಾಗ, ಈ ತರಹದ ಹಣ ಅವಶ್ಯಕವಾಗಬಹುದು. ಅದೇ ತರಹ ಈ ತರಹದ ಕಾರ್ಯಕ್ರಮಗಳನ್ನು ರೂಪಿಸುವಾಗ, ಈ ತರಹದ ಜಾಹೀರಾತುಗಳು ಬೇಕಾಗಬಹುದು. ವರ್ಷದಿಂದ ವರ್ಷಕ್ಕೆ ಕಾರ್ಯಕ್ರಮದ ಖರ್ಚು ವೆಚ್ಚಗಳು ಹೆಚ್ಚಾಗುತ್ತವೆ. ಅದನ್ನು ಸರಿದೂಗಿಸುವುದಕ್ಕೆ ಈ ತರಹದ ಜಾಹೀರಾತುಗಳು ಬೇಕಾಗಬಹುದು. ಇದಕ್ಕೂ ನನಗೂ ಸಂಬಂಧವಿಲ್ಲ. ಇದು ಸಂಸ್ಥೆಗೆ ಬಿಟ್ಟ ವಿಷಯ’ ಎಂದರು.

ಇದೆಲ್ಲದರ ಹೊರತಾಗಿ ತಾವು ‘ಬಿಗ್‍ ಬಾಸ್‍’ನಿಂದ ಬಹಳಷ್ಟು ಜನರಿಗೆ ಉಪಯೋಗವಾಗುತ್ತಿದೆ ಎಂದ ಸುದೀಪ್‍, ‘ಬರೀ ರಮ್ಮಿ ಬಗ್ಗೆ ಮಾತ್ರವಲ್ಲ, ನಾನು ಅದನ್ನ ಮೀರಿ ನೋಡುತ್ತಿದ್ದೇನೆ. ‘ಬಿಗ್ ಬಾಸ್‍’ನಂತಹ ಕಾರ್ಯಕ್ರಮದಿಂದ ಎಷ್ಟೋ ಕುಟುಂಬಗಳಿಗೆ ಪ್ರಯೋಜನವಾಗಿವೆ, ಎಷ್ಟೋ ವ್ಯಕ್ತಿತ್ವಗಳು ಉದ್ಧಾರವಾಗಿವೆ, ಹಲವರಿಗೆ ಕೆಲಸ ಸಿಕ್ಕಿದೆ. ಕಾರ್ಯಕ್ರಮ ನೋಡಿದವರೆಲ್ಲಾ ರಮ್ಮಿ ಆಡುತ್ತಾರಾ? ಸಮಾಜದಲ್ಲಿ ತಿಳವಳಿಕೆ ಇರುವ ಪ್ರತಿಯೊಬ್ಬರೂ ತನ್ನ ಆಯ್ಕೆ ಏನಿರಬೇಕೆಂದು ಯೋಚಿಸುತ್ತಾರೆ’ಎಂದರು.

ಆನ್‍ಲೈನ್‍ ರಮ್ಮಿ ತಪ್ಪು ಎನ್ನುವವರು ಸಿದ್ದರಾಮಯ್ಯ ಅಥವಾ ಮೋದಿ ಅವರನ್ನು ಕೇಳಿ ಎನ್ನುವ ಸುದೀಪ್‍, ‘ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮನೆಗೆ ಹೋಗಿ, ಪ್ರಧಾನಿ ಮೋದಿ ಮನೆಗೆ ಹೋಗಿ ಇವೆಲ್ಲಾ ಬೇಡ ಎಂದು ಸ್ಟ್ರೈಕ್‍ ಮಾಡಿ. ನನಗೆ ಕೆಲವು ಪ್ರಶ್ನೆಗಳಿಗೆ ಉತ್ತರಿಸುವ ಶಕ್ತಿ ಇಲ್ಲ. ಮೋದಿ ಮತ್ತು ಸಿದ್ದರಾಮಯ್ಯನವರು ನನ್ನ ಹಿಡಿತದಲ್ಲಿದ್ದರೆ, ಬೇರೆ ವಿಷಯ. ಬಹುಶಃ ನಾನು ರಾಜಕಾರಣಿಯಾದರೆ, ನನಗೆ ಸಾಧ್ಯವಾಗಿದ್ದು ಮಾಡುತ್ತೇನೆ’ ಎಂದರು.

ಭೂಮಿಕಾ

Recent Posts

ತಿರುವಿನಲ್ಲಿ ಉರುಳಿಬಿದ್ದ ಲಾರಿ: ತಪ್ಪಿದ ಭಾರೀ ಅನಾಹುತ

ಕೊಡಗು: ಕೊಡಗು ಜಿಲ್ಲೆ ಶನಿವಾರಸಂತೆ ಬಳಿಯ ಗುಡುಗಳಲೆಯಲ್ಲಿ ಸಿಮೆಂಟ್ ತುಂಬಿದ್ದ ಲಾರಿ ಉರುಳಿಬಿದ್ದಿದೆ. ಶನಿವಾರಸಂತೆ–ಅರಕಲಗೂಡು ರಸ್ತೆಯ ಗುಡುಗಳಲೆ ತಿರುವಿನಲ್ಲಿ ಘಟನೆ…

8 hours ago

ದುಬಾರೆ ಆನೆ ಶಿಬಿರದಲ್ಲಿ19 ವರ್ಷದ ಗಂಡಾನೆ ಸಾವು

ಕುಶಾಲನಗರ: ದುಬಾರೆ ಆನೆ ಶಿಬಿರದಲ್ಲಿದ್ದ ಸುಮಾರು 19 ವರ್ಷ ಪ್ರಾಯದ ಗಂಡಾನೆಯೊಂದು ಐದು ತಿಂಗಳಿಗೂ ಹೆಚ್ಚು ಕಾಲ ನಿರಂತರ ಚಿಕಿತ್ಸೆ…

9 hours ago

ಪ್ರೀತಿಗೆ ನಿರಾಕರಣೆ: ಮೈಸೂರಿನಲ್ಲಿ ಬೆಚ್ಚಿಬೀಳಿಸಿದ ಒನ್‌ ಸೈಡ್‌ ಲವ್‌ ಕೃತ್ಯ

ಮೈಸೂರು: ಪ್ರೀತಿಗೆ ನಿರಾಕರಿಸಿದ ಪರಿಣಾಮ ಯುವಕನೋರ್ವ ಯುವತಿಯನ್ನು ತಬ್ಬಿಕೊಂಡು ಪೆಟ್ರೋಲ್‌ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮೈಸೂರಿನ ವಿಜಯನಗರದ ಬಳಿ…

11 hours ago

ಮನ್​​ಮುಲ್​ ಹಾಲಿನ ಪುಡಿ ಕಲಬೆರಕೆ ಪ್ರಕರಣ: ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಅಧ್ಯಕ್ಷ ಶಿವಕುಮಾರ್ ಅರೆಸ್ಟ್​!

ಮಂಡ್ಯ: ಮನ್​​ಮುಲ್​ ಹಾಲಿನ ಪುಡಿ ಕಲಬೆರಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಮನ್ ಮುಲ್ ಅಧ್ಯಕ್ಷ ಶಿವಕುಮಾರ್(ಶಿವಪ್ಪ)…

13 hours ago

ಭಾರೀ ಮಳೆಗೆ ರೈತರ ಬೆಳೆ ನಾಶ: ಲಕ್ಷಾಂತರ ರೂ. ನಷ್ಟ, ಮನೆ ಗೋಡೆ ಕುಸಿತ

ಹನೂರು: ಸೋಮವಾರ ತಡರಾತ್ರಿ ಸುರಿದ ಭಾರಿ ಮಳೆಗೆ ಕ್ಷೇತ್ರದ ಹಲವು ಜಮೀನುಗಳಲ್ಲಿ ಬೆಳೆದಿದ್ದ ಬೆಳೆಗಳು ಸಂಪೂರ್ಣ ಜಲಾವೃತಗೊಂಡು ಲಕ್ಷಾಂತರ ರೂಪಾಯಿ…

13 hours ago

ಸ್ಕೂಲ್ ಬಸ್‌ ಹರಿದು ಒಂದೂವರೆ ವರ್ಷದ ಮಗು ಸಾವು

ಮೈಸೂರು: ಜಿಲ್ಲೆಯ ಹುಣಸೂರು ತಾಲೂಕಿನ ನಂಜಾಪುರ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ರಸ್ತೆ ಬದಿ ನಿಂತಿದ್ದ ಒಂದೂವರೆ ವರ್ಷದ ಪುಟ್ಟ…

14 hours ago