ರಾಜ್ ಬಿ ಶೆಟ್ಟಿ ಅಭಿನಯದ ‘ಏಕಂ’ ಎಂಬ ವೆಬ್‍ಸರಣಿ ಇತ್ತೀಚೆಗಷ್ಟೇ ಬಿಡುಗಡೆಯಾಯಿತು. ಈಗ ಇದೇ ಶುಕ್ರವಾರ (ಜುಲೈ 26), ರಾಜ್ ಅಭಿನಯದ ‘ರೂಪಾಂತರ’ ಚಿತ್ರ ಬಿಡುಗಡೆ ಆಗಲಿದೆ. ಈ ಚಿತ್ರದಲ್ಲಿ ಅವರು ಬರೀ ನಟ ಮತ್ತು ಸಂಭಾಷಣೆಕಾರ. ಮಿಕ್ಕ ಜವಾಬ್ದಾರಿಗಳು ಅವರ ಸ್ನೇಹಿತರದ್ದು. ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಬಿಡುಗಡೆ ಆಗಿದೆ.
‘ರೂಪಾಂತರ’ ಬಗ್ಗೆ ಮಾತನಾಡುವ ರಾಜ್ ಬಿ ಶೆಟ್ಟಿ, ‘ನನಗೆ ಬಹಳ ಇಷ್ಟವಾದ ಚಿತ್ರಗಳ ಪೈಕಿ ‘ರೂಪಾಂತರ’ ಸಹ ಒಂದು. ಈ ಚಿತ್ರದಲ್ಲಿ ನಾನು ನಟ ಮತ್ತು ಸಣ್ಣಮಟ್ಟದಲ್ಲಿ ಬರಹಗಾರನಾಗಿ ಕೆಲಸ ಮಾಡಿದ್ದೇನೆ. ಬಿಟ್ಟರೆ, ಇದು ಇವರ ಕನಸು. ಇದರಲ್ಲಿ ಬೇರೆಬೇರೆ ಪಾತ್ರಗಳ, ಬೇರೆಬೇರೆ ಕಥೆಗಳಿವೆ. ಅವು ರೂಪಾಂತರಗೊಳ್ಳುವುದೇ ಈ ಚಿತ್ರದ ಕಥೆ. ಜೀವನದ ಒಂದು ಮಗ್ಗುಲಲ್ಲಿ ಅವರಲ್ಲಿ ರೂಪಾಂತರವಾಗುವ ಕಥೆ ಇದೆ. ಎಲ್ಲಾ ಕಥೆಗಳು ಸಮಾನಾಂತರವಾಗಿ ಸಾಗುತ್ತಿರುತ್ತದೆ. ಒಂದು ಹಂತದಲ್ಲಿ ಅವರೆಲ್ಲಾ ಭೇಟಿಯಾಗುತ್ತಾರೆ. ಒಬ್ಬನ ರೂಪಾಂತರಕ್ಕೆ ಇನ್ನೊಬ್ಬರ ಕೊಡುಗೆ ಇರುತ್ತದೆ’ ಎಂದರು.
ಈ ಚಿತ್ರವನ್ನು ಮಿಥಿಲೇಶ್ ಎಡವಲತ್ ನಿರ್ದೇಶಿಸಿದ್ದಾರೆ. ಅವರು ಮೂಲತಃ ಕೇರಳದವರು. ಬಹಳ ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿರುವುದರ ಜೊತೆಗೆ ಕಥೆ ಬರೆದು ಕನ್ನಡದಲ್ಲಿ ನಿರ್ದೇಶನ ಮಾಡಿದ್ದಾರೆ. ‘ಬೆಂಗಳೂರಿನಲ್ಲಿ ನಾನು ನೋಡಿ, ಸ್ಫೂರ್ತಿಗೊಂಡ ಜನರ ಕಥೆ ಇದು. ಐದು ಪ್ರಮುಖ ಪಾತ್ರಗಳ ಸುತ್ತ ಈ ಕಥೆ ಸುತ್ತತ್ತದೆ’ ಎಂದು ಹೇಳಿಕೊಂಡರು ಮಿಥಿಲೇಶ್.
ನಿರ್ಮಾಪಕ ಸುಹಾನ್ ಪ್ರಸಾದ್ ಇದಕ್ಕೂ ಮೊದಲು ‘ಒಂದು ಮೊಟ್ಟೆಯ ಕಥೆ’ ನಿರ್ಮಿಸಿದ್ದರು. ಈ ಚಿತ್ರದ ಮೂಲಕ ತಾವೂ ರೂಪಾಂತರಗೊಂಡಿರುವ ಕುರಿತು ಹೇಳಿದ ಅವರು, ‘ನಾವು ಇಷ್ಟು ದಿನ ಮಂಗಳೂರಿನ ಭಾಷೆ ಮತ್ತು ಸೊಗಡು ಇಟ್ಟುಕೊಂಡು ಚಿತ್ರ ಮಾಡುತ್ತಿದ್ದೆವು. ಹೊರಗೆ ಬಂದು ಬೇರೆ ತರಹದ ಸಿನಿಮಾ ಮಾಡೋಣ ಎಂಬ ಆಸೆ ಇತ್ತು. ಕಾರಣಾಂತರಗಳಿಂದ ಅದು ನಿಧಾನವಾಯ್ತು. ಈ ಚಿತ್ರದಿಂದ ಅದು ಸಾಧ್ಯವಾಗಿದೆ. ಇಲ್ಲಿ ಮಂಗಳೂರಿನ ಸೊಗಡಿಲ್ಲ. ಅಲ್ಲಿ ಚಿತ್ರೀಕರಣವನ್ನೂ ಮಾಡಿಲ್ಲ. ರಾಜ್ಯದ ಬೇರೆಬೇರೆ ಮೂಲೆಗಳ ಸಾಕಷ್ಟು ಕಲಾವಿದರು ಚಿತ್ರದಲ್ಲಿದ್ದಾರೆ. ಒಂದರ್ಥದಲ್ಲಿ ನಾವು ಸಹ ಈ ಚಿತ್ರದ ಮೂಲಕ ‘ರೂಪಾಂತರ’ ಆಗಿದ್ದೇವೆ’ ಎಂದರು.
ಮಿಥುನ್ ಮುಕುಂದನ್ ಸಂಗೀತ ಮತ್ತು ಪ್ರವೀಣ್ ಶ್ರೀಯಾನ್ ಛಾಯಾಗ್ರಹಣವಿರುವ ‘ರೂಪಾಂತರ’ ಚಿತ್ರದಲ್ಲಿ ರಾಜ್ ಬಿ. ಶೆಟ್ಟಿ ಜೊತೆಗೆ ಸೋಮಶೇಖರ್ ಬೋಲೇಗಾಂವ್, ಲೇಖಾ ನಾಯ್ಡು, ಹನುಮ್ಮಕ್ಕ, ಭರತ್ ಜಿ.ಬಿ, ಅಂಜನ್ ಭಾರಧ್ವಾಜ್ ಮುಂತಾದವರು ನಟಿಸಿದ್ದಾರೆ.
ಐತಿಹಾಸಿಕ ಸಂಗತಿ! ಸರ್ಕಾರದ ನಿರ್ದೇಶನದ ಮೇರೆಗೆ ಬೆಳಗಾವಿ ನಗರಪಾಲಿಕೆ ‘ಗಡಿ ವಿಷಯದಲ್ಲಿ ಮಹಾಜನ್ ವರದಿಯೇ ಅಂತಿಮ’ಎಂಬ ನಿರ್ಣಯ ಅಂಗೀಕರಿಸಿರುವುದು ಐತಿಹಾಸಿಕ…
ಟ್ರಾಫಿಕ್ ನಿಯಮ ಉಲ್ಲಂಘಿಸಿ ದಂಡ ಪಾವತಿಸದೆ ಬಾಕಿ ಉಳಿಸಿಕೊಂಡಿರುವವರಿಂದ ಹಣ ವಸೂಲಿ ಮಾಡಲು, ಆ ದಂಡದ ಮೊತ್ತವನ್ನು ಅವರ ಮನೆ…
ತನ್ನ ಪ್ರಾಣವನ್ನೇ ಒತ್ತೆಯಿಟ್ಟು ದುಬೈನಿಂದ ಇಸ್ರೇಲ್‌ನ ಅವೀವ್‌ಗೆ ತೆರಳುತ್ತಿದ್ದ -ದುಬೈ ವಿಮಾನ ಹೈಜಾಕ್ ತಪ್ಪಿಸಿದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್…
ಡಾ . ಚೇತನ ಗುರುರಾಜು, ಮುಖ್ಯ ಶಿಕ್ಷಕಿ, ಅರಿವು ವಿದ್ಯಾಸಂಸ್ಥೆ, ಮೈಸೂರು ಸಾಮಾಜಿಕ ಮಾಧ್ಯಮಗಳ ಬಲೆಗೆ ಸಿಲುಕಿವೆ ಹಲವು ದೇಶಗಳು…
ಸ್ವಾವಲಂಬನೆಯ ಸಂಕೇತ ಮಹಾತ್ಮ ಗಾಂಧೀಜಿ ಮಹಾತ್ಮ ಗಾಂಧೀಜಿ ಅವರು ಭಾರತದ ಸ್ವಾತಂತ್ರ್ಯ ಹೋರಾಟದ ಮಹಾನ್ ನಾಯಕ ಹಾಗೂ ರಾಷ್ಟ್ರಪಿತ ಎಂದು…
ಪರಶುರಾಮ್, ನಿರ್ದೇಶಕರು, ಒಡನಾಡಿ ಸೇವಾ ಸಂಸ್ಥೆ ಗಾಂಧಿ ವಿಚಾರಗಳನ್ನು ಸಂವಾದದ ಮೂಲಕ ಮುನ್ನಡೆಸಲು ಸಾಧ್ಯವೇ? ಅಥವಾ ಅನುಸರಿಸಲು ಸಾಧ್ಯವಾಗದಿರುವ ನಡೆಯನ್ನು…