ಮನರಂಜನೆ

ಹನಿಮೂನ್ ‍ಮುಗಿಸಿ ಬೇಗ ಬನ್ನಿ: ಹೀರೋಗಳಿಗೆ ಹಂಸಲೇಖ ಕರೆ

ಕನ್ನಡ ಚಿತ್ರರಂಗದಲ್ಲಿ ಪ್ಯಾನ್‍ ಇಂಡಿಯಾ ಹುಚ್ಚು ಆಳವಾಗಿ ಬೇರೂರುತ್ತಿದೆ. ‘ಕೆಜಿಎಫ್‍’ ಮತ್ತು ‘ಕಾಂತಾರ’ ಚಿತ್ರಗಳ ಯಶಸ್ಸಿನ ನಂತರ ಎಲ್ಲಾ ಚಿತ್ರಗಳು ಪ್ಯಾನ್ ಇಂಡಿಯಾ ಹೀರೋಗಳಾಗುವುದಕ್ಕೆ ಪ್ರಯತ್ನ ನಡೆಸಿದ್ದಾರೆ. ಅದಕ್ಕಾಗಿ ಸಾಕಷ್ಟು ತಲೆ ಕೆಡಿಸಿಕೊಳ್ಳುತ್ತಿದ್ದಾರೆ. ಇದರಿಂದ ದೊಡ್ಡ ಹೀರೋಗಳ ಚಿತ್ರಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಇದರಿಂದ ಪ್ರೇಕ್ಷಕರು ಸಹ ಚಿತ್ರಮಂದಿರಗಳತ್ತ ಬರುತ್ತಿಲ್ಲ. ಹಾಗಾಗಿ, ಹೀರೋಗಳಿಗೆ ಹೆಚ್ಚುಹೆಚ್ಚು ಚಿತ್ರಗಳನ್ನು ಮಾಡಿ, ಪ್ರೇಕ್ಷಕರು ಚಿತ್ರಮಂದಿರಗಳಿಗೆ ಬರುವಂತೆ ಮಾಡಿ ಎಂದು ಚಿತ್ರಮಂದಿರದವರು ಸೇರಿ ಹಲವರು ಮನವಿ ಮಾಡುತ್ತಿದ್ದಾರೆ. ಈಗ ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ ಸಹ ಧ್ವನಿಗೂಡಿಸಿದ್ದಾರೆ.

ಸೋಮವಾರ ಸಂಜೆ ‘ಗೌರಿ’ ಚಿತ್ರದ ಹಾಡು ಬಿಡುಗಡೆ ಸಮಾರಂಭವಿತ್ತು. ಈ ಸಂದರ್ಭದಲ್ಲಿ ಮಾತನಾಡಿರುವ ಅವರು, ಈ ಪ್ಯಾನ್‍ ಇಂಡಿಯಾ ಎಂಬ ಹುಚ್ಚಿನಿಂದಾಗಿ ಕನ್ನಡದ ಸ್ಟಾರ್‍ಗಳಿಗೆ ಕನ್ನಡದ ಬೇರುಗಳು ಕಟ್‍ ಆಗಿದೆ ಎಂದು ಹೇಳಿದ್ದಾರೆ.

‘ಇವರೆಲ್ಲಾ ಭಾರತದಾದ್ಯಂತ ಖ್ಯಾತ ನಾಯಕರಾಗುತ್ತಾರೆ ಅನ್ನೋದು ಒಂದು ಭ್ರಮೆ. ದಕ್ಷಿಣದಲ್ಲಿ ಯಾರಾದರೂ ಸುಂದರ ನಾಯಕಿಯರಿದ್ದರೆ, ಅವರು ಉತ್ತರ ಭಾರತದಲ್ಲಿ 20 ವರ್ಷ ಬದುಕಬಹುದೇ ಹೊರತು, ರಜನಿಕಾಂತ್‍ ಆಗಲೀ, ಕಮಲ್‍ ಹಾಸನ್‍, ಮೋಹನ್ ಲಾಲ್‍, ಮಮ್ಮೂಟ್ಟಿ ಮುಂತಾದವರು ಅದೆಷ್ಟೇ ಪ್ರತಿಭಾವಂತರಿದ್ದರೂ ಮುಂಬೈನಲ್ಲಿ ಎರಡು ವರ್ಷ ಇರೋಕೆ ಆಗಲ್ಲ. ಒಂದೋ, ಎರಡೋ ಸಿನಿಮಾ ಮುಗಿಸಿ ವಾಪಸ್ಸು ಬಂದುಬಿಡ್ತಾರೆ. ನಮ್ಮ ಹೀರೋಗಳು ಹನಿಮೂನ್‍ ತರಹ ಹೋಗಿ ಪ್ಯಾನ್ ಇಂಡಿಯಾ ಎಲ್ಲಾ ಸುತ್ತಾಡಿಕೊಂಡು ಬರಬಹುದು. ಅದೆಲ್ಲಿ ಸುತ್ತಿದರೂ ಕೊನೆಗೆ ಕನ್ನಡಕ್ಕೆ ಬರಲೇ ಬೇಕು’ ಎಂದರು.

ಕನ್ನಡ ಚಿತ್ರರಂಗದ ಮಹತ್ವದ ಕುರಿತು ಮಾತನಾಡಿದ ಅವರು, ‘ಈ ದೇಶದಲ್ಲಿ ಎಷ್ಟೊಂದು ಪ್ರಾದೇಶಿಕ ಭಾಷೆಗಳಿವೆ, ಎಷ್ಟೊಂದು ಪ್ರಾದೇಶಿಕ ಚಿತ್ರರಂಗಗಳಿವೆ. ಅದರಲ್ಲಿ ಕೇಳೋದಕ್ಕೆ ಬಹಳ ಅರ್ಥಗಭಿತವಾದ ಶೀರ್ಷಿಕೆ ಎಂದರೆ ಅದು ಸ್ಯಾಂಡಲ್‍ವುಡ್‍. ಅದನ್ನು ನಾವು ಅಚ್ಚ ಕನ್ನಡದಲ್ಲಿ ಚಂದನವನ ಅಂತ ಕರೆಯುತ್ತೇವೆ. ಸ್ಯಾಂಡಲ್‍ವುಡ್‍ನ್ನು ಬೇರೆ ಯಾವುದಾದರೂ ಭಾಷೆಗಳ ವುಡ್‍ಗಳ ಜೊತೆಗೆ ಹೋಲಿಸುವುದಕ್ಕೆ ಸಾಧ್ಯವಾ? ಬಾಲಿವುಡ್‍, ಕಾಲಿವುಡ್‍ ಏನೇನೋ ಇದೆ. ಅದ್ಯಾವುದರ ಜೊತೆಗೆ ಹೋಲಿಕೆ ಮಾಡೋದಕ್ಕೆ ಸಾಧ್ಯವೇ ಇಲ್ಲ. ಏಕೆಂದರೆ, ಸ್ಯಾಂಡಲ್‍ವುಡ್‍ ಅಂದರೆ ಅದೊಂದು ಪರಿಮಳ. ಗಂಧದ ಪರಿಮಳ. ಅದಕ್ಕೆ ಗಂಧದ ಮರದ ಗುಣಗಳಿವೆ. ಗಂಧದ ಮರ ಸುತ್ತ ಬೇರೆ 20-30 ಗಿಡಗಳ ಸಸಿ ನೆಟ್ಟರೆ ಮಾತ್ರ ಅದು ಉಳಿಯುತ್ತೆ. ಎಲ್ಲರೊಳಗೂ ಒಳಗೊಂಡು ಬೆಳೆಯುವುದೇ ಸ್ಯಾಂಡಲ್‍ವುಡ್‍’ ಎಂದರು.

ಕನ್ನಡ ಚಿತ್ರರಂಗಕ್ಕೊಂದು ದೊಡ್ಡ ಪರಂಪರೆಯೇ ಇದೆ ಎಂದು ಅರ್ಥ ಮಾಡಿಸಿದ ಅವರು, ‘ಒಬ್ಬರೇ ಬೆಳೆಯುವುದಲ್ಲ. ಎಲ್ಲರ ಜೊತೆಗೆ ಬೆಳೆಯುವುದು ಮುಖ್ಯ. ಇದಕ್ಕೊಂದು ಪರಂಪರೆ ಇದೆ. ಭಾಷೆಯಿಂದಲೇ ಕನ್ನಡ ಚಿತ್ರರಂಗವನ್ನು ಬೆಳೆಸಿದ ದೊಡ್ಡ ಪರಂಪರೆ ಇದೆ. ಆ ಪರಂಪರೆಯಿಂದ ಬಂದು ಪ್ಯಾನ್‍ ಇಂಡಿಯಾ ಅಂತ ಹೋದರೆ ಸ್ವಲ್ಪ ವ್ಯಾಪಾರ ಜಾಸ್ತಿ ಆಗುತ್ತೆ. ಬಾಡಿ, ದಾಡಿ ಬೆಳೆಯಬಹುದು. ಅದು ಬಿಟ್ಟು ಬೇರೇನೂ ಆಗುವುದಿಲ್ಲ. ಹಾಗಾಗಿ, ಮೊದಲು ಇಲ್ಲಿಗೆ ಚಿತ್ರ ಮಾಡಿ’ ಎಂದು ಅರ್ಥ ಮಾಡಿಸಿದರು.

ಭೂಮಿಕಾ

Recent Posts

ಮನ್​​ಮುಲ್​ ಹಾಲಿನ ಪುಡಿ ಕಲಬೆರಕೆ ಪ್ರಕರಣ: ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಅಧ್ಯಕ್ಷ ಶಿವಕುಮಾರ್ ಅರೆಸ್ಟ್​!

ಮಂಡ್ಯ: ಮನ್​​ಮುಲ್​ ಹಾಲಿನ ಪುಡಿ ಕಲಬೆರಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಮನ್ ಮುಲ್ ಅಧ್ಯಕ್ಷ ಶಿವಕುಮಾರ್(ಶಿವಪ್ಪ)…

1 hour ago

ಭಾರೀ ಮಳೆಗೆ ರೈತರ ಬೆಳೆ ನಾಶ: ಲಕ್ಷಾಂತರ ರೂ. ನಷ್ಟ, ಮನೆ ಗೋಡೆ ಕುಸಿತ

ಹನೂರು: ಸೋಮವಾರ ತಡರಾತ್ರಿ ಸುರಿದ ಭಾರಿ ಮಳೆಗೆ ಕ್ಷೇತ್ರದ ಹಲವು ಜಮೀನುಗಳಲ್ಲಿ ಬೆಳೆದಿದ್ದ ಬೆಳೆಗಳು ಸಂಪೂರ್ಣ ಜಲಾವೃತಗೊಂಡು ಲಕ್ಷಾಂತರ ರೂಪಾಯಿ…

1 hour ago

ಸ್ಕೂಲ್ ಬಸ್‌ ಹರಿದು ಒಂದೂವರೆ ವರ್ಷದ ಮಗು ಸಾವು

ಮೈಸೂರು: ಜಿಲ್ಲೆಯ ಹುಣಸೂರು ತಾಲೂಕಿನ ನಂಜಾಪುರ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ರಸ್ತೆ ಬದಿ ನಿಂತಿದ್ದ ಒಂದೂವರೆ ವರ್ಷದ ಪುಟ್ಟ…

2 hours ago

ಓದುಗರ ಪತ್ರ: ‘ಪ್ರತಾಪ’ಕ್ಕೆ ಸವಾಲು ಈ ನೀಲಿ

‘ಪ್ರತಾಪ’ಕ್ಕೆ ಸವಾಲು ಈ ನೀಲಿ ಇದು ನಮ್ಮ ಸೂರು ಆಕಾಶದ ನೀಲಿ ಇದು ನನ್ನವ್ವ ಸುತ್ತಿಕೊಂಡ ಸೀರೆಯ ನೀಲಿ ನನಗೆ…

7 hours ago

ಓದುಗರ ಪತ್ರ: ಟೆಲಿಕಾಂ ಕಂಪೆನಿಗಳ ಹಗಲು ದರೋಡೆ ನಿಯಂತ್ರಿಸಿ

ಪ್ರಸ್ತುತ ಆಂಡ್ರಾಯ್ಡ ಮೊಬೈಲ್‌ನಿಂದಲೇ ದಿನನಿತ್ಯದ ಕೆಲಸಗಳು ಆರಂಭವಾಗಿ ಅವುಗಳಿಂದಲೇ ದಿನ ಮುಕ್ತಾಯ ಅನ್ನುವಷ್ಟರ ಮಟ್ಟಿಗೆ ಅನಿವಾರ್ಯತೆ ನಿರ್ಮಾಣವಾಗಿದೆ. ಮೊಬೈಲ್ ಇಲ್ಲದೆ…

7 hours ago

ಓದುಗರ ಪತ್ರ: ಸರ್ಕಾರಿ ಕಚೇರಿಗಳ ಅನಗತ್ಯ ಬಾಡಿಗೆ ವೆಚ್ಚಗಳನ್ನು ತಪ್ಪಿಸಿ

ಹೆಚ್. ಡಿ. ಕೋಟೆ ತಾಲ್ಲೂಕು ಕೇಂದ್ರ ಸ್ಥಳದಲ್ಲಿ ಕೆಲವು ಸರ್ಕಾರಿ ಇಲಾಖೆಗಳು ಹಾಗೂ ಹಾಸ್ಟೆಲ್‌ಗಳು ಖಾಸಗಿ ಕಟ್ಟಡಗಳಲ್ಲಿ ಕಾರ್ಯನಿರ್ವಣೆ ಮಾಡುತ್ತಿವೆ.…

7 hours ago