hejje
ಒಂದೊಂದು ಚಿತ್ರ ಒಂದೊಂದು ಜಾನರ್‍ಗೆ ಸೇರಿರುತ್ತದೆ. ಆದರೆ, ಹೊಸಬರ ‘ಹಚ್ಚೆ’ ಚಿತ್ರವು ಯಾವೊಂದು ಜಾನರ್‍ಗೂ ಸೇರುವ ಚಿತ್ರವಲ್ಲವಂತೆ. ಕಾರಣ, ಇದರಲ್ಲಿ ಎಲ್ಲಾ ರೀತಿಯ ಭಾವನೆಗಳಿದ್ದು, ಯಾವುದೋ ಒಂದು ಶೈಲಿಗೆ ಸೇರಿಸಲು ಅಸಾಧ್ಯ ಎನ್ನುತ್ತಾರೆ ನಿರ್ದೇಶಕ ಯಶೋಧರ. ಈ ಚಿತ್ರ ಸದ್ಯದಲ್ಲೇ ಬಿಡುಗಡೆಯಾಗುತ್ತಿದ್ದು, ಅದಕ್ಕೂ ಮೊದಲು ಚಿತ್ರದ ಹಾಡೊಂದು ಇತ್ತೀಚೆಗೆ ಬಿಡುಗಡೆಯಾಗಿದೆ.
ಅಶ್ವ ಫಿಲಂಸ್ ಲಾಂಛನದಲ್ಲಿ ಯಶೋಧರ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಹಾಗೂ ಅಭಿಮನ್ಯು ನಾಯಕನಾಗಿ ನಟಿಸಿರುವ ‘ಹಚ್ಚೆ’ ಚಿತ್ರದ ‘ವಿಘ್ನೇಶ್ವರಾಯ …’ ಹಾಡು ಬಿಡುಗಡೆಯಾಗಿದೆ. ಈ ಹಾಡನ್ನು ನಿರ್ದೇಶಕರೇ ಬರೆದಿದ್ದು, ವಿವೇಕ್ ಚಕ್ರವರ್ತಿ ಸಂಗೀತ ಸಂಯೋಜಿಸಿದ್ದಾರೆ. ಇನ್ನು, ಶಿವಂ ಈ ಹಾಡನ್ನು ಹಾಡಿದ್ದಾರೆ.
‘ಹಚ್ಚೆ’ ಚಿತ್ರದ ಕುರಿತು ಮಾತನಾಡುವ ಯಶೋಧರ, ‘ಚಿತ್ರದ ಮೊದಲ ಹಾಡನ್ನು ಬಿಡುಗಡೆ ಮಾಡುವ ಮೂಲಕ ಚಿತ್ರದ ಪ್ರಚಾರಕ್ಕೆ ಚಾಲನೆ ನೀಡಿದ್ದೇವೆ. ಚಿತ್ರದ ಹೆಸರಿನಲ್ಲೇ ಒಂದು ಕುತೂಹಲವಿದೆ. ಆ ಹೆಸರು ಚಿತ್ರಕ್ಕೆ ಇಟ್ಟಿರುವುದು ಏಕೆ ಎನ್ನುವುದರ ಬಗ್ಗೆ ಚಿತ್ರದಲ್ಲಿ ತಿಳಿಸಿದ್ದೇವೆ. ಇದು ಒಂದು ಜಾನರ್‍ನ ಚಿತ್ರವಲ್ಲ. ಲವ್, ಸೆಂಟಿಮೆಂಟ್, ಸಸ್ಪೆನ್ಸ್, ಥ್ರಿಲ್ಲರ್ … ಹೀಗೆ ನೋಡುಗರಿಗೆ ಬೇಕಾದ ಎಲ್ಲಾ ಅಂಶಗಳು ಈ ಚಿತ್ರದಲ್ಲಿದೆ. ಅಭಿಮನ್ಯು ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ಆದರೆ, ಅವರ ಅಭಿನಯ ನೋಡಿದವರು ಮೊದಲ ಚಿತ್ರ ಅಂತ ಹೇಳುವುದಿಲ್ಲ. ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಮುಂದಿನ ಎರಡು ತಿಂಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ’ ಎಂದರು.
ಮೂಲತಃ ಮೈಸೂರಿನವರಾದ ಅಭಿಮನ್ಯು, ರಂಗಭೂಮಿಯಲ್ಲಿ ತೊಡಗಿಸಿಕೊಂಡವರಂತೆ. ‘ಸಾಕಷ್ಟು ಜನಪ್ರಿಯ ನಾಟಕಗಳಲ್ಲಿ ಅಭಿನಯಿಸಿದ್ದೇನೆ. ‘ಅಂಜನಿ ಪುತ್ರ’ ಸೇರಿದಂತೆ ಅನೇಕ ಚಿತ್ರಗಳಲ್ಲೂ ಸಹ ಕಲಾವಿದನಾಗಿ ನಟಿಸಿದ್ದೇನೆ. ನನ್ನ ಪ್ರತಿಭೆ ಗುರುತಿಸಿ ಯಶೋಧರ ಅವರು ಈ ಚಿತ್ರದ ಮೂಲಕ ನಾಯಕನನ್ನಾಗಿ ಮಾಡಿದ್ದಾರೆ. ನನ್ನ ಪಾತ್ರ ಚೆನ್ನಾಗಿದೆ’ ಎಂದರು.
‘ಹಚ್ಚೆ’ ಚಿತ್ರದಲ್ಲಿ ಆದ್ಯಪ್ರಿಯಾ ಮತ್ತು ಅನುಪ್ರೇಮ ನಾಯಕಿಯರಾಗಿ ನಟಿಸಿದ್ದು, ವಿವೇಕ್ ಚಕ್ರವರ್ತಿ ಸಂಗೀತ, ಯಾಸಿನ್ ಛಾಯಾಗ್ರಹಣವಿದೆ.
ನವದೆಹಲಿ: ಇಂದಿನಿಂದ ಆರಂಭವಾಗಿರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಕೇಂದ್ರ ಸರ್ಕಾರವು ಮೂರು ಪ್ರಮುಖ ಮಸೂದೆಗಳನ್ನು ಮಂಡಿಸಿದೆ. ಸಂವಿಧಾನದ ತಿದ್ದುಪಡಿ ಮಸೂದೆ-2026,…
ಬೆಂಗಳೂರು: ಪ್ರಕೃತಿ, ಪರಿಸರ ಸಂರಕ್ಷಣೆ ಹಾಗೂ ಹಸಿರು ಹೊದಿಕೆ ಹೆಚ್ಚಳದಲ್ಲಿ ಸುಸ್ಥಿರ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಪಾತ್ರ ಹಿರಿದಾಗಿದೆ ಎಂದು…
ನವದೆಹಲಿ: ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಇಂದು ಲೋಕಸಭೆಯಲ್ಲಿ ಕ್ಷೇತ್ರ ಮರುವಿಂಗಡಣೆ ಮಸೂದೆ 2026ನ್ನು ಮಂಡಿಸಿದರು. ಈ…
ಚೆನ್ನೈ: ಕೇಂದ್ರ ಸರ್ಕಾರ ಜಾರಿ ಮಾಡಲು ಹೊರಟಿರುವ ಲೋಕಸಭಾ ಕ್ಷೇತ್ರ ಮರು ವಿಂಗಡಣೆ ಮಸೂದೆಗೆ ವಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದು,…
ಬೆಂಗಳೂರು: ರಾಜ್ಯದಲ್ಲಿ ರಣ ಬಿಸಿಲ ಧಗೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕೆಲ ಜಿಲ್ಲೆಗಳಲ್ಲಿ ಅತ್ಯಧಿಕ ತಾಪಮಾನ ದಾಖಲಾಗುತ್ತಿದ್ದು, ಜನರು ಬಿಸಿಲ…
ಮಧ್ಯ ಪ್ರಾಚ್ಯ ದೇಶಗಳಲ್ಲಿ ಕಳೆದ ೪೦ ದಿನಗಳಿಂದಲೂ ಯುದ್ಧ ನಡೆಯುತ್ತಿರುವುದರಿಂದ ವಿವಿಧ ದೇಶಗಳು ಸಂಕಷ್ಟಕ್ಕೆ ಸಿಲುಕಿವೆ. ಪೋಪ್ ೧೪ನೇ ಲಿಯೋರವರು…