ಕನ್ನಡ ಚಿತ್ರರಂಗಕ್ಕೆ ‘ಮಣ್ಣಿನ ದೋಣಿ’, ‘ಮುಸುಕು’ ‘ಮೊಮ್ಮಗ’, ‘ಮೇಘ ಬಂತು ಮೇಘ’, ‘ಸಿಂಗಾರೆವ್ವ’, ‘ಚಂದ್ರೋದಯ’, ‘ಗೌಡ್ರು’, ‘ಪ್ರಿನ್ಸ್’, ‘ಐರಾವತ’, ‘ಘೋಸ್ಟ್’ ಮುಂತಾದ ಚಿತ್ರಗಳನ್ನು ಹಲವು ಯಶಸ್ವಿ ಮತ್ತು ಜನಪ್ರಿಯ ಚಿತ್ರಗಳನ್ನು ನಿರ್ಮಿಸಿರುವ ನಿರ್ಮಾಪಕ, ಮಾಜಿ ಎಂ.ಎಲ್.ಸಿ ಸಂದೇಶ್ ನಾಗರಾಜ್ ಈಗ 80ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.
ಆಗಸ್ಟ್ 16, ಸಂದೇಶ ನಾಗರಾಜ್ ಅವರು 79 ಪೂರೈಸುತ್ತಿದ್ದು, 80ನೇ ವಸಂತಕ್ಕೆ ಕಾಲಿಡಲಿದ್ದಾರೆ. ಸಂದೇಶ್ ನಾಗರಾಜ್ ಅವರ 80ನೇ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ಅವರ ಕುಟುಂಬ ಮುಂದಾಗಿದೆ. ಆಗಸ್ಟ್ 31ರಂದು ಮೈಸೂರಿನ ಎಕ್ಸಿಬಿಷನ್ ಗ್ರೌಂಡ್‌ನಲ್ಲಿ ದೊಡ್ಡಮಟ್ಟದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ನಟರಾದ ಶಿವರಾಜಕುಮಾರ್, ಸುದೀಪ್ ಸೇರಿದಂತೆ ಚಿತ್ರರಂಗದ ಹಲವಾರು ಕಲಾವಿದರು, ತಂತ್ರಜ್ಞರು ಹಾಗೂ ರಾಜಕೀಯ ಮುಖಂಡರು ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.
ಆಗಸ್ಟ್.31ರಂದು ಮುಂಜಾನೆ 11 ಗಂಟೆಗೆ ಆರಂಭವಾಗುವ ಕಾರ್ಯಕ್ರಮದಲ್ಲಿ ಅರ್ಜುನ್ ಜನ್ಯ ಅವರಿಂದ ಮನರಂಜನಾ ಕಾರ್ಯಕ್ರಮ ಇರಲಿದೆ. ಇದೇ ಸಂದರ್ಭದಲ್ಲಿ ಸಂದೇಶ್ ನಾಗರಾಜ್ ಕುರಿತು ಸಾಕ್ಷ್ಯಚಿತ್ರ ಪ್ರದರ್ಶನ ಮಾಡಲಾಗುತ್ತದೆ. ಅಂದು ಸುಮಾರು 50,000 ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ.
ಈ ಕಾರ್ಯಕ್ರಮದ ಕುರಿತು ಮಾತನಾಡುವ ನಾಗರಾಜ್ ಅವರ ಮಗ ಸಂದೇಶ್, ‘ಸಂದೇಶ ಕಂಬೈನ್ಸ್ ಹಾಗೂ ಸಂದೇಶ್ ಪ್ರೊಡಕ್ಷನ್ಸ್ ಮೂಲಕ ನಮ್ಮ ತಂದೆ ಹಲವಾರು ಯಶಸ್ವಿ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಈಗ ನಾನು ಒಂದಿಷ್ಟು ಸಿನಿಮಾ ನಿರ್ಮಿಸುತ್ತಿದ್ದು, ಕಳೆದ 30 ವರ್ಷಗಳಲ್ಲಿ 34 ಸಿನಿಮಾ ನಿರ್ಮಿಸಲಾಗಿದೆ. ‘ಮಣ್ಣಿನ ದೋಣಿ’ ಚಿತ್ರದಿಂದ ಶುರುವಾದ ನಮ್ಮ ಸಿನಿಮಾ ಜರ್ನಿ ಈಗಲೂ ಮುಂದುವರೆದಿದೆ. ಚಿತ್ರರಂಗವಲ್ಲದೆ, ರಾಜಕೀಯ, ಉದ್ಯಮದಲ್ಲೂ ಯಶಸ್ಸಿನ ಮೆಟ್ಟಿಲು ಏರಿದ್ದಾರೆ’ ಎಂದು ಹೇಳಿದರು.
ಸಂದೇಶ್ ನಾಗರಾಜ್ ಅವರ ಮಗಳು ಬೃಂದಾ ಮಾತನಾಡಿ, ‘ಆಗಸ್ಟ್ 16 ಅವರ ಹುಟ್ಟುಹಬ್ಬ. ಅಂದು ನಾವೆಲ್ಲಾ ಫ್ಯಾಮಿಲಿ ಸೇರಿ ಆಚರಣೆ ಮಾಡುತ್ತೇವೆ. ಅಂದು ಪೂಜೆ, ಹೋಮ ಇರುವುದರಿಂದ ಆಗಸ್ಟ್ 31ರಂದು ಸಾರ್ವಜನಿಕವಾಗಿ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ಮಾಡುತ್ತಿದ್ದೇವೆ’ ಎಂದರು.
ಮುಂಬೈ : ಸೌದಿ ಅರೇಬಿಯಾದಿಂದ ಅಂತರರಾಷ್ಟ್ರೀಯ ಕೊರಿಯರ್ ಟರ್ಮಿನಲ್‌ನಲ್ಲಿ ಸಾಗಿಸುತ್ತಿದ್ದ ಗ್ರೈಂಡರ್‌ನಲ್ಲಿ ಬಚ್ಚಿಟ್ಟಿದ್ದ 2.89 ಕೋಟಿ ರೂ.ಮೌಲ್ಯದ ಚಿನ್ನವನ್ನು ಕಂದಾಯ…
ಭುಗಿಲೆದ್ದ ಆಕ್ರೋಶ; ಬಿಜೆಪಿ -ಕಾಂಗ್ರೆಸ್ ಆರೋಪ-ಪ್ರತ್ಯಾರೋಪ ಬೆಂಗಳೂರು : ದೇಶದ 77ನೇ ಗಣರಾಜ್ಯೋತ್ಸವ ಸಂಭ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ. ಆದರೆ, ಈ…
ಮಂಡ್ಯ : ಮೈಷುಗರ್ ಕಾರ್ಖಾನೆಯನ್ನು ಯಾವುದೇ ಕಾರಣಕ್ಕೂ ಖಾಸಗಿಯವರಿಗೆ ವಹಿಸುವ ಪ್ರಶ್ನೆಯೇ ಇಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ…
ಮೈಸೂರು : ಮೈಸೂರು-ಕುಶಾಲನಗರ ರೈಲ್ವೆ ಯೋಜನೆ ಸ್ಥಗಿತವಾಗಿದೆ, ಯೋಜನೆಗೆ ಅಗತ್ಯವಿರುವ ಭೂಮಿಯನ್ನು ರಾಜ್ಯ ಸರ್ಕಾರ ಹಸ್ತಾಂತರ ಮಾಡಿಲ್ಲ. ಈ ಬಗ್ಗೆ…
ಹನೂರು: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಟಿವಿ ಸೇರಿದಂತೆ ಅತ್ಯಮೂಲ್ಯ ದಾಖಲಾತಿಗಳು ಸುಟ್ಟು ಕರಕಲಾದ ಘಟನೆ ಹನೂರು ತಾಲೂಕಿನ ಬಂಡಳ್ಳಿಯಲ್ಲಿ…
ಮಹಾದೇಶ್ ಎಂ ಗೌಡ ಹನೂರು: ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಂಡೆ ಕುರುಬನ ದೊಡ್ಡಿ ಗ್ರಾಮದ ಡಾಂಬರು ರಸ್ತೆ ಅಭಿವೃದ್ಧಿಗೆ…