ಮನರಂಜನೆ

ಹೊಸ ಚಿತ್ರಕ್ಕೆ ಸೈ ಎಂದ ಗೋಲ್ಡನ್‌ ಸ್ಟಾರ್‌ ಗಣೇಶ್‌

ಈ ಹಿಂದೆ ʼಲವ್‌ ಇನ್‌ ಮಂಡ್ಯʼ ಚಿತ್ರ ನಿರ್ದೇಶಿಸಿದ್ದ ಅರಸು ಅಂತಾರೆ ಈಗ ಹೊಸ ಸಿನಿಮಾ ನಿರ್ದೇಶನಕ್ಕೆ ಕೈಹಾಕಿದ್ದು, ಈ ಸಿನಿಮಾದಲ್ಲಿ ಗೋಲ್ಡನ್‌ ಸ್ಟಾರ್‌ ಗಣೇಶ್‌ ನಾಯಕನಾಗಿ ನಟಿಸುತ್ತಿದ್ದಾರೆ.

ಈ ಚಿತ್ರದಲ್ಲಿ ಗಣೇಶ್‌ಗೆ ಜೋಡಿಯಾಗಿ ತೆಲುಗಿನ ʼಹನುಮಾನ್‌ʼ ಚಿತ್ರದಲ್ಲಿ ನಟಿಸಿದ್ದ ಅಮೃತಾ ಅಯ್ಯರ್‌ ನಟಿಸುತ್ತಿದ್ದು, ಈ ಚಿತ್ರದೊಂದಿಗೆ ಸ್ಯಾಂಡಲ್‌ವುಡ್‌ ಪ್ರವೇಶಿಸಿದ್ದಾರೆ.

ಬಹಳ ಹಿಂದೆಯೇ ಅರಸು ಅಂತಾರೆ ಈ ಕಥೆ ಹೇಳಿದ್ದರು. ಮುಂದೂಡತ್ತಲೇ ಬಂದಿದೆ. ಈಗ ಈ ಸಿನಿಮಾಗೆ ಕಾಲ ಕೂಡಿ ಬಂದಿದೆ. ಹಾಸ್ಯಮಯ ಕಥೆಯೊಂದಿಗೆ ಕುಟುಂಬವೇ ಕುಳಿತು ನೋಡಬಹುದಾದ ಚಿತ್ರವಾಗಲಿದೆ ಎಂದು ಗಣೇಶ್‌ ಹೇಳಿದರು.

ಒಂದು ಸಿನಿಮಾ ಹಿಟ್‌ ಕೊಟ್ಟ ಮೇಲೆ ಮತ್ತೊಂದು ಚಿತ್ರಕ್ಕೆ ಇಷ್ಟು ಸಮಯ ತೆಗೆದುಕೊಂಡೆ. ಚಿತ್ರದ ಶೀರ್ಷಿಕೆ ಮುಂತಾದ ವಿವರಗಳನ್ನು ಮುಂದಿನ ಹಂತದಲ್ಲಿ ನೀಡುತ್ತೇವೆ ಎಂದು ನಿರ್ದೇಶಕ ಅರಸು ಅಂತಾರೆ ತಿಳಿಸಿದರು.

ಈ ಚಿತ್ರಕ್ಕೆ ರವಿಕುಮಾರ್‌ ಭದ್ರವಾತಿ ಬಂಡವಾಳ ಹೂಡಿದ್ದು, ರಂಗಾಯಣ ರಘು, ರವಿಶಂಕರ್‌ ಗೌಡ, ಕಾಕ್ರೋಚ್‌ ಸುಧಿ ಮುಂತಾದವರು ಚಿತ್ರದಲ್ಲಿದ್ದಾರೆ. ಸುಜ್ಞಾನ್‌ ಛಾಯಾಚಿತ್ರಗ್ರಹಣ, ಅಕ್ಷಯ್‌ ಸಂಕಲನ ಚಿತ್ರಕ್ಕಿದೆ.

ಆಂದೋಲನ ಡೆಸ್ಕ್

Recent Posts

ತಂತ್ರಜ್ಞಾನ ಶಸ್ತ್ರಾಸ್ತ್ರೀಕರಣದ ಬಗ್ಗೆ ಕಳವಳಗಳ ವ್ಯಕ್ತಪಡಿಸಿದ ಪ್ರಧಾನಿ ಮೋದಿ

ನವದೆಹಲಿ : ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಜಾಗತಿಕವಾಗಿ ಸಾಮಾನ್ಯ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಪ್ರಧಾನಿ…

34 mins ago

ಭಾನುವಾರದ ಹಾಡುಪಾಡು | ಹೊರಗೆ ನಗುವಿನ ಮೇಕಪ್‌, ಒಳಗೆ ಕುದಿಯುವ ಬೇಗುದಿ

ಮೇಘನ ಕೆ.ಆರ್‌ ಕೇರಳಿಗಳಾದ ನನಗೆ ವರ್ಷಕ್ಕೆರಡು ಹಬ್ಬ-ಓಣಂ, ವಿಶು ಮಾತ್ರ ತಿಳಿದಿತ್ತು. ದೀಪಾವಳಿಗೆ ದನಗಳಿಗೆ ಪೂಜೆ ಮಾಡಿ ಅಮ್ಮ ಕೆಲಸಕ್ಕೆ…

4 hours ago

ಭಾನುವಾರದ ಹಾಡುಪಾಡು | ಮಳೆ ತರುವ ತಾಯಯಿ ಈ ಪುಟ್ಟ ಗೌರಿ

ಡಾ. ಶಿಲಿನಾ ಕೋಟೆ ಎನ್.‌ ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳು ಕೇವಲ ಧಾರ್ಮಿಕ ಆಚರಣೆ ಗಳಲ್ಲ; ಅವು ಪ್ರಕೃತಿ, ಕೃಷಿ, ಮಳೆ,…

4 hours ago

ಗೌರಮ್ಮ ಭೂಮಿಗೆ ಬರುವ ದಿನ

ಶುಭಮಂಗಳ ರಾಮಾಪುರ ಗೌರಿಹಬ್ಬವೆಂದ ಕೂಡಲೇ ಸಂಭ್ರಮದ ನೆನಪು ಒಂದೆಡೆಯಾದರೆ ಕೆಲಸದ ಹೊರೆ ಮತ್ತೊಂದೆಡೆ. ನನ್ನೂರಿನಲ್ಲಂತೂ ಗೌರಿಹಬ್ಬಕ್ಕೆ ಮಡಿ ಮಾಡುವುದೇ ದೊಡ್ಡ…

4 hours ago

ಮಗಳು ಗೌರಿ, ದೇವತೆಯೂ ಗೌರಿ, ಮಳೆಯು ಗೌರಿ, ಬೆಂಕಿಯೂ ಗೌರಿ

ನಾಳಿನ ಗೌರಿ ಗಣೇಶ ಸಂಭ್ರಮಕ್ಕೆ ಬರಹಗಳ ಬಾಗಿನ ಡಾ.ಶುಭಶ್ರೀ ಪ್ರಸಾದ್‌, ಮಂಡ್ಯ ‘ಮಗಳು’ಎಂದ ಕ್ಷಣ ಕಣ್ಮುಂದೆ ಬರುವುದು ಜರಿ ಲಂಗ,…

5 hours ago

ಗೌರಿ-ಗಣೇಶ ಹಬ್ಬಕ್ಕೆ ಸಕಲ ಸಿದ್ಧತೆ

ಅರಮನೆ ನಗರಿಯ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಜೋರು ಸೇವಂತಿಗೆ ಹೂವು, ಏಲಕ್ಕಿ ಬಾಳೆಹಣ್ಣು ಸೇರಿ ಇನ್ನಿತರೆ ಹಣ್ಣುಗಳ ಬೆಲೆ ಹೆಚ್ಚಳ…

5 hours ago