ಮನರಂಜನೆ

ದೇವರು ಒಳ್ಳೆಯವರನ್ನು ಕೈಬಿಡಲ್ಲ; ದರ್ಶನ್‍ ಬಗ್ಗೆ ಮಾಲಾಶ್ರೀ ಮಾತು

ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಇದೀಗ ಬಳ್ಳಾರಿ ಸೆಂಟ್ರಲ್‍ ಜೂಲ್‍ ಸೇರಿರುವ ನಟ ದರ್ಶನ್‍ ಅವರ ಪರವಾಗಿ ಕನ್ನಡ ಚಿತ್ರರಂಗದ ಸಾಕಷ್ಟು ನಟ-ನಟಿಯರು ನಿಂತಿದ್ದಾರೆ. ಇದೀಗ ಹಿರಿಯ ನಟಿ ಮಾಲಾಶ್ರೀ ಸಹ ದರ್ಶನ್‍ ಪರ ಮಾತನಾಡಿದ್ದು, ದರ್ಶನ್‍ ಬಹಳ ಒಳ್ಳೆಯವರು ಮತ್ತು ದೇವರು ಒಳ್ಳೆಯವರನ್ನು ಯಾವತ್ತೂ ಕೈಬಿಡುವುದಿಲ್ಲ ಎಂದು ಹೇಳಿದ್ದಾರೆ.

ಶುಕ್ರವಾರ ಮಧ್ಯಾಹ್ನ, ‘ಮೆಜೆಸ್ಟಿಕ್‍ 2’ ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ಮಾತನಾಡಿರುವ ಅವರು, ‘ನನಗೆ ಗೊತ್ತಿರುವ ದರ್ಶನ್‍ ಬೇರೆ. ಅವರೊಬ್ಬ ಜಂಟಲ್‍ಮ್ಯಾನನ್‍. ಅವರಿಗೆ ಬಹಳ ಒಳ್ಳೆಯ ವ್ಯಕ್ತಿತ್ವ ಇದೆ. ನಾನು ಅವರನ್ನು ‘ಕಲಾಸಿಪಾಳ್ಯ’ ಚಿತ್ರದಿಂದ ಬಲ್ಲೆ. ಅದು ನಮ್ಮ ನಿರ್ಮಾಣದ ಚಿತ್ರ. ಅದರಲ್ಲಿ ದರ್ಶನ್ ನಟಿಸಿದ್ದರು. ಆಗ ಅವರು ಹೇಗಿದ್ದರೋ, ‘ಕಾಟೇರ’ ಚಿತ್ರದಲ್ಲೂ ಅದೇ ರೀತಿ ಇದ್ದರು. ಅವರಲ್ಲಿ ಯಾವುದೇ ಬದಲಾವಣೆ ಕಾಣಲಿಲ್ಲ’ ಎಂದರು.

‘ಕಾಟೇರ’ ಚಿತ್ರದ ಮೂಲಕ ತಮ್ಮ ಮಗಳು ಆರಾಧನಾಳನ್ನು ಪರಿಚಯಿಸಿದ ಕುರಿತು ಮಾತನಾಡಿದ ಮಾಲಾಶ್ರೀ, ‘ಆ ಚಿತ್ರದಲ್ಲಿ ಆರಾಧನಾಳನ್ನು ಅವರು ಪರಿಚಯಿಸಿದಾಗ ಥ್ಯಾಂಕ್ಸ್ ಹೇಳಿದ್ದೆ. ಅದಕ್ಕವರು, ಆರಾಧನಾ ಜೊತೆಗೆ ನಟಿಸುತ್ತಿರುವುದು ತಮ್ಮ ಅದೃಷ್ಟ ಎಂದು ಹೇಳಿದ್ದರು. ನಮ್ಮ ಜೊತೆಗೆ ಇರುವಾಗ ತುಂಬಾ ಚೆನ್ನಾಗಿ ನಡೆದುಕೊಂಡಿದ್ದಾರೆ, ತುಂಬಾ ಗೌರವ ತೋರಿದ್ದಾರೆ’ ಎಂದರು.

ತಮಗೆ ದೇವರ ಮೇಲೆ ಬಹಳ ನಂಬಿಕೆ ಎಂದು ಈ ಸಂದರ್ಭದಲ್ಲಿ ಹೇಳಿದ ಮಾಲಾಶ್ರೀ, ‘ದೇವರು ಯಾವತ್ತೂ ಒಳ್ಳೆಯವರನ್ನು ಕೈಬಿಡುವುದಿಲ್ಲ. ಈ ಪ್ರಕರಣದ ಬಗ್ಗೆ ನನಗೆ ನಿಜವಾಗಲೂ ಗೊತ್‍ತಿಲ್ಲ. ನನಗೆ ಗೊತ್‍ತಿರುವ ದರ್ಶನ್ ಬೇರೆ. ಅವರ ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳು ದರ್ಶನ್‍ ಮೇಲೆ ಅದೆಷ್ಟು ಅಭಿಮಾನ ಇಟ್ಟಿದ್ದಾರೋ, ನನಗೆ ಮತ್ತು ಆರಾಧನಾಗೆ ಅಷ್ಟೇ ಅಭಿಮಾನವಿದೆ. ಅದರಲ್ಲಿ ಯಾವುದೇ ಸಂಶಯವಿಲ್ಲ’ ಎಂದರು.

ರಾಮು ನಿರ್ದೇಶನದ ‘ಮೆಜೆಸ್ಟಿಕ್‍ 2’ ಚಿತ್ರದಲ್ಲಿ ಮಾಲಾಶ್ರೀ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದಲ್ಲಿ ಭರತ್‍ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದು, ಅವರಿಗೆ ನಾಯಕಿಯಾಗಿ ಸಂಹಿತಾ ವಿನ್ಯಾ ನಟಿಸಿದ್ದಾರೆ. ಹಿರಿಯ ನಟಿ ಶೃತಿ ಅವರು ತಾಯಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವಿನು ಮನಸು ಸಂಗೀತ ಮತ್ತು ವೀನಸ್‍ ಮೂರ್ತಿ ಛಾಯಾಗ್ರಹಣ ಈ ಚಿತ್ರಕ್ಕಿದೆ.

ಭೂಮಿಕಾ

Recent Posts

ಚಿರತೆ ಸೆರೆ | ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

ಗುಂಡ್ಲುಪೇಟೆ : ತಾಲ್ಲೂಕಿನ ಬರಗಿ ಗ್ರಾಮದ ಜಮೀನುಗಳಲ್ಲಿ ಜಾನುವಾರುಗಳ ಮೇಲೆ ದಾಳಿ ನಡೆಸಿ ಕೊಂದುಹಾಕಿದ್ದ ವಿಚಾರವಾಗಿ ಅರಣ್ಯ ಇಲಾಖೆ ಚಿರತೆ…

6 hours ago

ಮೈಸೂರಲ್ಲಿ ಡ್ರಗ್ಸ್‌ ಉತ್ಪಾದನೆ ಶಂಕೆ : ಓರ್ವನ ಬಂಧನ

ಮೈಸೂರು : ಬುಧವಾರವಷ್ಟೇ ಹೆಬ್ಬಾಳ್‌ನಲ್ಲಿ ಶೆಡ್‌ವೊಂದರ ಮೇಲೆ ದಾಳಿ ನಡೆಸಿದ್ದ ಎನ್‌ಸಿಬಿ ಪೊಲೀಸರು, ಮಾದಕ ವಸ್ತು ಮಾರಾಟ ಆರೋಪ ಪ್ರಕರಣದಲ್ಲಿ…

6 hours ago

ತೇಗದ ಮರ ಅಕ್ರಮ ಕಟಾವು : ಓರ್ವ ಬಂಧನ

ಹನೂರು : ತಾಲ್ಲೂಕಿನ ಬಿ.ಆರ್.ಟಿ ಹುಲಿ ಸಂರಕ್ಷಿತ ಪ್ರದೇಶದ ಬೈಲೂರು ವನ್ಯಜೀವಿ ವಲಯ ವ್ಯಾಪ್ತಿಯಲ್ಲಿ ಅಕ್ರಮವಾಗಿ ತೇಗದ ಮರಗಳನ್ನು ಕಟಾವು…

7 hours ago

ಮೈಸೂರು ವಿ.ವಿ | ಯುಜಿಸಿ ಉದ್ದೇಶಿತ ಹೊಸ ನಿಯಾಮವಳಿ ಜಾರಿಗೆ ಒತ್ತಾಯ

ಮೈಸೂರು : ವಿಶ್ವವಿದ್ಯಾನಿಲಯಗಳ ಕ್ಯಾಂಪಸ್‌ನಲ್ಲಿ ಜಾತಿ, ಧರ್ಮ,ಲಿಂಗ ಆಧಾರಿತ ಶೋಷಣೆಯನ್ನು ತಡೆಗಟ್ಟಲು ಯುಜಿಸಿಯ ಉದ್ದೇಶಿತ ಹೊಸ ನಿಯಮಾವಳಿಗಳ ಜಾರಿಗೆ ಒತ್ತಾಯಿಸಿ…

8 hours ago

ಸರ್ಕಾರಿ ನೌಕರರಿಗೆ ತಿಂಗಳಿಗೊಮ್ಮೆ ಖಾದಿ ಧಿರಿಸು ಕಡ್ಡಾಯ

ಬೆಂಗಳೂರು : ರಾಜ್ಯ ಸರ್ಕಾರಿ ನೌಕರರಿಗೆ ಖಾದಿ ಬಟ್ಟೆ ಬಳಕೆ ಕಡ್ಡಾಯಗೊಳಿಸಲಾಗಿದೆ. ಪ್ರತಿ ತಿಂಗಳ ಮೊದಲ ಶನಿವಾರ ಖಾದಿ ಬಟ್ಟೆ…

8 hours ago

ಕ್ಯಾಂಪಸ್‌ಗಳಲ್ಲಿ ಜಾತಿ ತಾರತಮ್ಯ : ಯುಜಿಸಿ ನಿಯಮಾವಳಿಗೆ ʻಸುಪ್ರೀಂʼ ತಡೆ

ಹೊಸದಿಲ್ಲಿ : ಮಹತ್ವದ ಬೆಳವಣಿಗೆಯಲ್ಲಿ ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಹೊಸ ನಿಯಮಗಳಿಗೆ ಸರ್ವೋಚ್ಚ ನ್ಯಾಯಾಲಯ ತಡೆ ನೀಡಿದೆ. ವಿಶ್ವವಿದ್ಯಾಲಯ…

9 hours ago