ಮನರಂಜನೆ

ಒಂದೇ ಸಿನಿಮಾದಲ್ಲಿ ಐವರು ನಿರ್ದೇಶಕರ ಐದು ವಿಭಿನ್ನ ಕಥೆಗಳು

ಕನ್ನಡದಲ್ಲಿ ಹೈಪರ್ ಲಿಂಕ್‍ ಸಿನಿಮಾಗಳ ಟ್ರೆಂಡ್‍ ಶುರುವಾಗಿದೆ. ಇತ್ತೀಚಿನ ಉದಾಹರಣೆ ರಾಜ್‍ ಬಿ ಶೆಟ್ಟಿ ಅಭಿನಯದ ‘ರೂಪಾಂತರ’. ಈ ಚಿತ್ರದಲ್ಲಿ ನಾಲ್ಕು ವಿಭಿನ್ನ ಕಥೆಗಳಿದ್ದು, ಅವೆಲ್ಲವೂ ಒಂದಕ್ಕೊಂದು ಲಿಂಕ್‍ ಆಗಿವೆ. ಇದಕ್ಕೂ ಮುನ್ನ ‘ಟೇಲ್ಸ್ ಆಫ್‍ ಮಹಾನಗರ’ ಸೇರಿದಂತೆ ವಿಭಿನ್ನ ಕಥೆಗಳಿರುವ ಒಂದೇ ಚಿತ್ರಗಳು ಕೆಲವು ಬಂದಿವೆ.

ಈ ಸಾಲಿಗೆ ಇದೀಗ ‘ಬಿಟಿಎಸ್‍’ ಸಹ ಸೇರಿದೆ. ‘ಬಿಟಿಎಸ್‍’ ಎಂದರೆ ಮೊದಲಿಗೆ ನೆನಪಿಗೆ ಬರುವುದು ‘ಬ್ಯಾಂಗ್ಟನ್‍ ಬಾಯ್ಸ್’ ಎಂಬ ದಕ್ಷಿಣ ಕೊರಿಯಾದ ಜನಪ್ರಿಯ ಮ್ಯೂಸಿಕ್ ಬ್ಯಾಂಡ್. ಬಿಟಿಎಸ್ ಎಂದರೆ ಬಿಹೈಂದ್‍ ದಿ ಸೀನ್ಸ್ ಅಂತಲೂ ಹೇಳುತ್ತಾರೆ. ಆದರೆ, ಈ ‘ಬಿಟಿಎಸ್‍’ ಎಂದರೆ, ಬಿಹೈಂಡ್‍ ದಿ ಸ್ಕ್ರೀನ್‍ ಎಂದರ್ಥ.

ಇದು ಸಿನಿಮಾದ ಹಿಂದಿನ ಕಥೆಗಳ ಕುರಿತ ಒಂದು ಸಿನಿಮಾ. ಒಂದೇ ಕಥೆಯಲ್ಲಿ ಚಿತ್ರರಂಗದ ಹಲವು ಪ್ಲಸ್, ಮೈನಸ್‍ಗಳನ್ನು ಹೇಳುವ ಪ್ರಯತ್ನ ಮಾಡಲಾಗಿದೆಯಂತೆ. ಚಿತ್ರರಂಗದ ಕುರಿತು ಐದು ವಿಭಿನ್ನ ಕಥೆಗಳನ್ನು ಹೇಳುವ ಪ್ರಯತ್ನ ಮಾಡಲಾಗಿದ್ದು, ಈ ಚಿತ್ರವನ್ನು ಐವರು ನಿರ್ದೇಶಕರು ನಿರ್ದೇಶನ ಮಾಡಿದ್ದಾರೆ.

‘ಬಿಟಿಎಸ್’ ( ಬಿಹೈಂಡ್ ದಿ ಸ್ಕ್ರೀನ್ ) ಚಿತ್ರದ ಟ್ರೇಲರ್‍ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಬಿಡುಗಡೆ ಆಗಿದೆ. ಈ ಟ್ರೇಲರ್‍ಗೆ ರಾಜ್ ಬಿ. ಶೆಟ್ಟಿ ಧ್ವನಿ ನೀಡಿದ್ದಾರೆ. ‘ಭೀಮ’ ಚಿತ್ರದ ನಿರ್ಮಾಪಕ ಕೃಷ್ಣ ಸಾರ್ಥಕ್ ಬಿಡುಗಡೆ ಮಾಡಿದ್ದಾರೆ. ಈ ಚಿತ್ರವನ್ನು ಪ್ರಜ್ಚಲ್ ರಾಜು, ಸಾಯಿ ಶ್ರೀನಿಧಿ, ಕುಲದೀಪ್ ಕಾರಿಯಪ್ಪ, ರಾಜೇಶ್ ಎನ್ ಶಂಕದ್ ಮತ್ತು ಅಪೂರ್ವ ಭಾರದ್ವಾಜ್ ನಿರ್ದೇಶನ ಮಾಡಿದ್ದಾರೆ.

ಈ ಪೈಕಿ ಅಪೂರ್ವ ಭಾರದ್ವಾಜ್‍ ಇದಕ್ಕೂ ಮುನ್ನ ‘ನಾನು ಅದು ಮತ್ತು ಸರೋಜ’, ‘ಬ್ಯಾಡ್‍’, ‘ಕ್ರಿಟಿಕಲ್‍ ಕೀರ್ತನೆಗಳು’ ಸೇರಿದಂತೆ ಕೆಲವು ಚಿತ್ರಗಳಲ್ಲಿ ನಟಿಸಿದ್ದರು. ಇದೇ ಮೊದಲ ಬಾರಿಗೆ ಅವರು ನಿರ್ದೇಶನ ಮಾಡಿದ್ದಾರೆ. ತಮ್ಮ ಚಿತ್ರದ ಕುರಿತು ಮಾತನಾಡಿರುವ ಅಪೂರ್ವ, ‘ಸಿನಿಮಾದಲ್ಲಿ ಕೆಳ ಹಂತದಿಂದ ಬಂದ ಜನ ಸಾಕಷ್ಟು ಕಷ್ಟಪಟ್ಟಿರುತ್ತಾರೆ ಮತ್ತು ಹಲವು ಅವಮಾನಗಳನ್ನು ಎದುರಿಸಿರುತ್ತಾರೆ. ಒಬ್ಬ ಮೇಕಪ್‍ ಮ್ಯಾನ್, ತಾನು ಟಚಪ್‍ ಹುಡುಗನಾಗಿದ್ದಾಗ ಬೇರೆಯವರಿಂದ ಸಾಕಷ್ಟು ಅವಮಾನ ಎದುರಿಸಿರುತ್ತಾರೆ. ಅದೇ ರೀತಿ ಒಬ್ಬ ಸಹಾಯಕ ನಿರ್ದೇಶಕ ಸಹ ದಿನನಿತ್ಯ ಸಾಕಷ್ಟು ನೋವು ತಂದಿರುತ್ತಾರೆ. ಆ ತರಹದ ನೋವುಗಳನ್ನು ಈ ಚಿತ್ರದಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದೆ. ಈ ಕಥೆಯನ್ನು ನನಗೆ ಮೇಕಪ್‍ ಮಾಡಿದ ಹುಡುಗರಿಗೆ, ಸಹಾಯಕರಿಗೆ ಅರ್ಪಿಸುತ್ತೇನೆ’ ಎಂದರು.

‘ಬಿಟಿಎಸ್‍’ ಚಿತ್ರವನನ್ನು ಮುರಳಿಕೃಷ್ಣ ನಿರ್ಮಿಸಿದ್ದಾರೆ. ಚಿತ್ರದಲ್ಲಿ ವಿಜಯ್ ಕೃಷ್ಣ, ಮಹದೇವ ಪ್ರಸಾದ್, ಶ್ರೀಪ್ರಿಯ, ಕೌಶಿಕ್, ಚಂದನ, ವಿಜಯ್ ಕೃಷ್ಣ ಮುಂತಾದವರು ನಟಿಸಿದ್ದಾರೆ.

ಭೂಮಿಕಾ

Recent Posts

ತಿ.‌ ನರಸೀಪುರ: ಬೈಕ್ ಡಿಕ್ಕಿ ಚಿರತೆ ಸಾವು

ತಿ. ನರಸೀಪುರ: ತಾಲೂಕಿನ ಬನ್ನೂರು ಹೋಬಳಿಯ ಬಸವನಹಳ್ಳಿ ಗ್ರಾಮದ ಸಮೀಪದ ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನ ಚಿರತೆಗೆ ಡಿಕ್ಕಿ ಹೊಡೆದ ಪರಿಣಾಮ…

6 hours ago

ತಿರುಪತಿ ಲಡ್ಡು: ತುಪ್ಪದಲ್ಲಿ ಪ್ರಾಣಿ ಕೊಬ್ಬು ಬಳಕೆ

ಅಮರಾವತಿ: ಜಗತ್‌ ಪ್ರಸಿದ್ಧ ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಹಾಗೂ ಕಳಪೆ ಗುಣಮಟ್ಟದ ಪದಾರ್ಥಗಳು ಪತ್ತೆಯಾಗಿದೆ ಎಂದು ತೆಲುಗು…

8 hours ago

ಬುರ್ಖಾಧಾರಿ ಮಹಿಳೆಯಿಂದ ಸಲ್ಮಾನ್‌ ಖಾನ್‌ ತಂದೆಗೆ ಜೀವ ಬೆದರಿಕೆ: ಮಹಿಳೆ ಸೇರಿ ಇಬ್ಬರ ಬಂಧನ

ಮುಂಬೈ:‌ ಬಾಲಿವುಡ್‌ನ ಭಾಯಿಜಾನ್ ಸಲ್ಮಾನ್‌ ಖಾನ್‌ ಅವರ ತಂದೆಗೆ ಬುರ್ಖಾ ಧರಿಸಿದ್ದ ಮಹಿಳೆ ಹಾಗೂ ಇನ್ನೊರ್ವ ವ್ಯಕ್ತಿ ಜೀವ ಬೆದರಿಕೆ…

8 hours ago

ಶಾಸಕ ಮುನಿರತ್ನಗೆ ಜಾಮೀನು: ಅತ್ಯಾಚಾರ ಪ್ರಕರಣದಲ್ಲಿ ಮತ್ತೆ ಬಂಧನ ಸಾಧ್ಯತೆ

ಬೆಂಗಳೂರು: ಗುತ್ತಿಗೆದಾರರೊಬ್ಬರಿಗೆ ಜಾತಿನಿಂದನೆ ಹಾಗೂ ಪ್ರಾಣ ಬೆದರಿಕೆ ಹಾಕಿದ ಪ್ರಕರಣದಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನಗೆ…

9 hours ago

ನುಡಿ ಹಬ್ಬಕ್ಕೆ ಆಹ್ವಾನಿಸಲು ಸಿದ್ಧವಾಗಿದೆ ಕನ್ನಡ ರಥ

ಮಂಡ್ಯ: ಜಿಲ್ಲೆಯಲ್ಲಿ ಡಿಸೆಂಬರ್ 20, 21, 22 ರಂದು ನಡೆಯಲಿರುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ…

10 hours ago

ಬಸ್‌ನಲ್ಲಿ ಪ್ರಯಾಣ: ಮಹಿಳೆಯರಿಂದ ಶಕ್ತಿಯೋಜನೆಯ ಅಭಿಪ್ರಾಯ ಪಡೆದ ಪುಷ್ಪ ಅಮರನಾಥ್‌

ಮೈಸೂರು: ರಾಜ್ಯ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಶಕ್ತಿಯೋಜನೆ ಫಲಾನುಭವಿಗಳ ಅಭಿಪ್ರಾಯ ಸಂಗ್ರಹಿಸಲು ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆಯಾದ ಡಾ…

10 hours ago