fathers day
ಈ ಹಿಂದೆ ‘ಆಚಾರ್ ಆ್ಯಂಡ್ ಕೋ’, ‘ಅನಾಮಧ್ಯೇಯ ಅಶೋಕ್ ಕುಮಾರ್’ ಮುಂತಾದ ಚಿತ್ರಗಳಲ್ಲಿ ನಟಿಸಿದ್ದ ಹರ್ಷಿಲ್ ಕೌಶಿಕ್, ಸದ್ದಿಲ್ಲದೆ ಹೊಸ ಚಿತ್ರದೊಂದಿಗೆ ಬಂದಿದ್ದಾರೆ. ಈ ಬಾರಿ ಅವರು ತಂದೆ-ಮಗನ ಭಾಂದವ್ಯ ಸಾರುವ ‘ಫಾದರ್ಸ್ ಡೇ’ ಎಂಬ ಚಿತ್ರದಲ್ಲಿ ನಟಿಸಿದ್ದು, ಚಿತ್ರವು ಸದ್ಯದಲ್ಲೇ ಬಿಡುಗಡೆಯಾಗಲಿದೆ.
‘ಫಾದರ್ಸ್ ಡೇ’ ಚಿತ್ರವನ್ನು Eleven Elements ಮತ್ತು Rectangle Studios ಸಂಸ್ಥೆಗಳಡಿ ರಾಜಾರಾಮ್ ರಾಜೇಂದ್ರನ್ ಮತ್ತು ಯೋಗೇಶ್ ಶ್ರೀನಿವಾಸ್ ಜೊತೆಯಾಗಿ ನಿರ್ಮಿಸುತ್ತಿದ್ದಾರೆ. ಈ ಚಿತ್ರವನ್ನು ರಾಜಾರಾಮ್ ರಾಜೇಂದ್ರನ್ ನಿರ್ದೇಶಿಸಿದ್ದು, ಹರ್ಷಿಲ್ ಕೌಶಿಕ್ ಹಾಗೂ ‘ಶ್ರೀರಸ್ತು ಶುಭಮಸ್ತು’ ಸೇರಿದಂತೆ ಅನೇಕ ಧಾರಾವಾಹಿಗಳಲ್ಲಿ ಅಭಿನಯಿಸಿ ಜನಪ್ರಿಯರಾಗಿರುವ ಅಜಿತ್ ಹಂಡೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಜನಪ್ರಿಯ ಗಾಯಕ ALL OK ಹಾಗೂ ಸಾಮ್ರಾಗ್ನಿ ರಾಜನ್ ಸಹ ಈ ಚಿತ್ರದಲ್ಲಿದ್ದಾರೆ.
ಇದೊಂದು ಪ್ರವಾಸ ಕಥನದ ಚಿತ್ರವಾಗಿದ್ದು, ಕನ್ನಡದ ಮೊದಲ ಬೈಕರ್ ಚಿತ್ರ ಎಂದು ಚಿತ್ರತಂಡ ಹೇಳಿಕೊಂಡಿದೆ. ಈ ಚಿತ್ರದ ಕಥೆ ಇಬ್ಬರು ಬೈಕರ್‍ಗಳ ಸುತ್ತ ಸಾಗುತ್ತದೆ. ಇಬ್ಬರು ಸಹ ಪಯಣಿಗರಾಗಿದ್ದರೂ, ತಾವಿಬ್ಬರು ತಂದೆ – ಮಗ ಎಂದು ಕೊನೆಯವರೆಗೂ ತಿಳಿಯುವುದಿಲ್ಲ. ಅಂತಹ ಕೌತುಕ ಚಿತ್ರಕಥೆ ಹೊಂದಿರುವ ‘ಫಾದರ್ಸ್ ಡೇ’ ಚಿತ್ರವು ತಂದೆ – ಮಗನ ಬಾಂಧವ್ಯದ ಸುತ್ತ ಸಾಗುತ್ತದೆ.
ಈಗಾಗಲೇ ಚಿತ್ರೀಕರಣ ಮುಗಿಸಿರುವ ಈ ಚಿತ್ರ ತೆರೆಗೆ ಬರಲು ಅಣಿಯಾಗುತ್ತಿದೆ. ಬಿಡುಗಡೆಗೂ ಪೂರ್ವಭಾವಿಯಾಗಿ ಟೀಸರ್ ಬಿಡುಗಡೆಯಾಗಿದೆ. ಜ್ಯೋತ್ಸ್ನಾ ಪಣಿಕರ್ ಸಂಕಲನ ಹಾಗೂ ಜೋ ಪಣಿಕರ್ ಹಾಗೂ ALL OK ಸಂಗೀತ ಈ ಚಿತ್ರಕ್ಕಿದೆ.
ನವದೆಹಲಿ: ಶನಿವಾರ ಐದನೇ ದಿನವೂ ಇಂಡಿಗೋ ವಿಮಾನ ಹಾರಾಟ ಅಡಚಣೆಗಳು ಮುಂದುವರೆದಿದ್ದು, ದೇಶಾದ್ಯಂತ ಹಲವಾರು ವಿಮಾನಗಳು ರದ್ದಾಗಿವೆ. ಕಳೆದ ನಾಲ್ಕು…
ಮೈಸೂರು: 9 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ ಕಾಮುಕನನ್ನು ಗ್ರಾಮಸ್ಥರು ಹಿಡಿದು ಥಳಿಸಿರುವ ಘಟನೆ ನಡೆದಿದೆ. ಮೈಸೂರು ಜಿಲ್ಲೆಯ…
ಕೇರಳದ ಕೋಯಿಕ್ಕೋಡಿನಲ್ಲಿ ಸುದ್ದಿಸಂಸ್ಥೆಯೊಂದಕ್ಕೆ ಸಂದರ್ಶನ ನೀಡಿರುವ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ಎಎಸ್‌ಐ) ಮಾಜಿ ಪ್ರಾದೇಶಿಕ ನಿರ್ದೇಶಕರಾದ ಕೆ.ಕೆ. ಮಹಮ್ಮದ್…
ಕಂದಾಯ ಇಲಾಖೆ ಡಿಜಿಟಲ್ ಇ-ಸ್ಟ್ಯಾಂಪ್ ವ್ಯವಸ್ಥೆ ಜಾರಿಗೆ ದಿಟ್ಟ ಹೆಜ್ಜೆ ಇಟ್ಟಿದೆ. ಇದು ನಾಗರಿಕ ಸ್ನೇಹಿಯೂ ಆಗಿದೆ. ಇಂದಿಗೂ ತಾಲ್ಲೂಕು…
ರಾಜ್ಯದಲ್ಲಿ ಇನ್ನು ಮುಂದೆ, ಜಾತಿ, ಧರ್ಮ ಭಾಷೆ, ಧಾರ್ಮಿಕ ಮತ್ತು ಜನಾಂಗೀಯ ನಿಂದನೆ, ಲೈಂಗಿಕ ದೃಷ್ಟಿಕೋನ ಮತ್ತು ಜನ್ಮ ಸ್ಥಳದ…
ಮಲ್ಕುಂಡಿ ಮಹದೇವಸ್ವಾಮಿ ವಿಕಲ್ಪಗಳ ಅಲೆಯ ಮೇಲೆ ಸದಾ ತೇಲಿ ಬರುವ ಸಂಕಲ್ಪ ಬಾಬಾ ಸಾಹೇಬರ ಪಾರ್ಥಿವ ಶರೀರ ಪ್ರಕೃತಿಯಲ್ಲಿ ಲೀನವಾಗುವ…