ಮನರಂಜನೆ

ಸಿನಿಮಾ ಆಗುತ್ತಿದೆ ಪಂಕಜ್‍ ತ್ರಿಪಾಠಿ ಅಭಿನಯದ ‘ಮಿರ್ಜಾಪುರ್‍’; 2026ರಲ್ಲಿ ಬಿಡುಗಡೆ

ಅಮೇಜಾನ್‍ ಪ್ರೈಮ್‍ನಲ್ಲಿರುವ ಜನಪ್ರಿಯ ವೆಬ್‍ ಸರಣಿಗಳ ಪೈಕಿ ಪಂಕಜ್‍ ತ್ರಿಪಾಠಿ ಅಭಿನಯದ ‘ಮಿರ್ಜಾಪುರ್’ ಸಹ ಒಂದು. ಈಗ ಈ ವೆಬ್‍ಸರಣಿಯು ಸಿನಿಮಾ ಆಗಿ ರೂಪುಗೊಳ್ಳುತ್ತಿದ್ದು, ಇದನ್ನು ಅಮೇಜಾನ್‍ MGM ಸ್ಟುಡಿಯೋಸ್‍ ಮತ್ತು ಎಕ್ಸೆಲ್‍ ಎಂಟರ್‍ಟೈನ್‍ಮೆಂಟ್‍ ಸಂಸ್ಥೆಗಳು ಜೊತೆಯಾಗಿ ನಿರ್ಮಿಸುತ್ತಿದೆ. ಈ ಚಿತ್ರವು 2026ರಲ್ಲಿ ತೆರೆಗೆ ಬರಲಿದೆ.

‘ಮಿರ್ಜಾಪುರ್‍’ ಒಂದು ಕ್ರೈಂ ಥ್ರಿಲ್ಲರ್‍ ಸರಣಿಯಾಗಿದ್ದು, 2018ರಲ್ಲಿ ಅಮೇಜಾನ್‍ ಪ್ರೈಮ್‍ನಲ್ಲಿ ಮೊದಲು ಬಿಡುಗಡೆಯಾಗಿತ್ತು. ಪಂಕಜ್‍ ತ್ರಿಪಾಠಿ, ಅಲಿ ಫಜಲ್‍, ದಿವ್ಯೆಂದು, ಅಭಿಷೇಕ್ ‍ಬ್ಯಾನರ್ಜಿ ಮುಂತಾದವರು ಈ ಸರಣಿಯಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಈ ಸರಣಿಯು ಅದೆಷ್ಟು ಜನಪ್ರಿಯವಾಗಿತ್ತು ಎಂದರೆ, 2020ರ ಅಕ್ಟೋಬರ್‍ನಲ್ಲಿ ಎರಡನೇ ಸೀಸನ್‍ ಪ್ರಸಾರವಾಗಿತ್ತು. ಇದೂ ಸಹ ಜನಪ್ರಿಯವಾಗಿ ಮೂರನೇ ಸೀಸನ್‍ ಈ ವರ್ಷದ ಜುಲೈ ತಿಂಗಳಲ್ಲಿ ಬಂದಿತ್ತು.

ಇದೀಗ ಈ ಸರಣಿಯನ್ನು ಸಿನಿಮಾ ಮಾಡುವುದಕ್ಕೆ ತಂಡ ನಿರ್ಮಿಸಿದೆ. ಅದರಂತೆ, ಇದೇ ಕಥೆಯನ್ನಿಟ್ಟುಕೊಂಡು ಒಂದು ಚಿತ್ರ ಮಾಡಲಾಗುತ್ತದೆ. ವೆಬ್‍ ಸರಣಿಯಲ್ಲಿ ಇರುವ ಪಾತ್ರಧಾರಿಗಳು ಮತ್ತು ಕಲಾವಿದರೇ ಇಲ್ಲೂ ಮುಂದುವರೆಯುತ್ತಾರೆ. ಈ ಸಂಬಂಧ ಅಮೇಜಾನ್‍ ಪ್ರೈಮ್‍ನ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಹೊಸದೊಂದು ಟೀಸರ್‍ ಬಿಡುಗಡೆಯಾಗಿದೆ. ಅದರಲ್ಲಿ ಪಂಕಜ್‍ ತ್ರಿಪಾಠಿ, ಅಲಿ ಫಜಲ್‍, ದಿವ್ಯೆಂದು ಮತ್ತು ಅಭಿಷೇಕ್ ‍ಬ್ಯಾನರ್ಜಿ ಕಾಣಿಸಿಕೊಂಡಿದ್ದು, ‘ಮಿರ್ಜಾಪುರ್‍’ ಸಿನಿಮಾ ಆಗುತ್ತಿರುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ. ಇದುವರೆಗೂ ‘ಮಿರ್ಜಾಪುರ್’ ಸರಣಿಯನ್ನು ಟಿವಿ ಮತ್ತು ಮೊಬೈಲ್‍ನಲ್ಲಿ ನೋಡಿದ್ದು ಸಾಕು, ಇನ್ನು ಚಿತ್ರಮಂದಿರಗಳಲ್ಲಿ ಸಿನಿಮಾ ಆಗಿ ನೋಡಿ ಎಂದು ಕರೆ ನೀಡಿದ್ದಾರೆ.

‘ಮಿರ್ಜಾಪುರ್‍’ ವೆಬ್‍ ಸರಣಿಯನ್ನು ನಿರ್ದೇಶನ ಮಾಡಿದ್ದ ಗುರ್ಮೀಸ್ ಸಿಂಗ್‍ ಅವರೇ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಸದ್ಯ ಈ ಚಿತ್ರದ ಘೋಷಣೆಯಾಗಿದ್ದು, 2025ರಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆಯಂತೆ. ಆ ನಂತರ 2026ರಲ್ಲಿ ಚಿತ್ರ ಜಗತ್ತಿನಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗಿ ಎಂಟು ವಾರಗಳ ನಂತರ ಅಮೇಜಾನ್‍ ಪ್ರೈಂನಲ್ಲಿ ಬಿಡುಗಡೆಯಾಗಲಿದೆ.

ಭೂಮಿಕಾ

Recent Posts

ಓದುಗರ ಪತ್ರ: ಜನಪ್ರತಿನಿಧಿಗಳಿಂದಲೇ ಕಾನೂನು ಉಲ್ಲಂಘನೆ

ರಾಜಕಾರಣಿಗಳು ಪ್ರತಿನಿತ್ಯ ತಮ್ಮ ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವ, ವೈಯಕ್ತಿಕ ಪ್ರಚಾರ ಸಂಬಂಧ ಸಾರ್ವಜನಿಕ ಸ್ಥಳಗಳಲ್ಲಿ ಫ್ಲೆಕ್ಸ್, ಪೋಸ್ಟರ್, ಬ್ಯಾನರ್‌ಗಳನ್ನು ಅಳವಡಿಸಿ…

2 hours ago

ಓದುಗರ ಪತ್ರ: ಗಗನಕ್ಕೇರುತ್ತಿರುವ ಚಿನ್ನ, ಬೆಳ್ಳಿ ಬೆಲೆ

ಕಳೆದ ೨೫ ವರ್ಷಗಳಲ್ಲಿ ಷೇರುಪೇಟೆ ಸೇರಿದಂತೆ ಉಳಿದೆಲ್ಲ ಸ್ಥಿರಾಸ್ತಿಗಳ ಮೇಲಿನ ಹೂಡಿಕೆಗಿಂತ ಚಿನ್ನ ಮತ್ತು ಬೆಳ್ಳಿಯ ಮೇಲಿನ ಹೂಡಿಕೆ ಅತಿ…

2 hours ago

ಓದುಗರ ಪತ್ರ: ಕೆ.ಆರ್.ಆಸ್ಪತ್ರೆ ಆವರಣದಲ್ಲಿ ಕೋತಿಗಳ ಹಾವಳಿ ನಿಯಂತ್ರಿಸಿ

ಮೈಸೂರಿನ ಕೆ.ಆರ್. ಆಸ್ಪತ್ರೆಯ ಕಲ್ಲು ಬಿಲ್ಡಿಂಗ್ ಬಳಿ ಕೋತಿಗಳ ಹಾವಳಿ ಮಿತಿ ಮೀರಿದ್ದು, ರೋಗಿಗಳ ಸಂಬಂಧಿಕರು ತರುವ ಊಟ, ತಿಂಡಿ…

2 hours ago

ಓದುಗರ ಪತ್ರ: ಶ್ರೀಕಂಠೇಶ್ವರ ದೇಗುಲದಲ್ಲಿ ಹಿರಿಯ ನಾಗರಿಕರಿಗೆ ಪ್ರತ್ಯೇಕ ಸಾಲು ಇರಲಿ

ದಕ್ಷಿಣಕಾಶಿ ಎಂದೇ ಪ್ರಖ್ಯಾತವಾಗಿರುವ ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯಕ್ಕೆ ದೇಶ ವಿದೇಶಗಳಿಂದ ಭಕ್ತಾದಿಗಳು ಆಗಮಿಸುತ್ತಾರೆ. ಸರ್ಕಾರಿ ರಜಾ ದಿನಗಳಲ್ಲಿ ಭಕ್ತರ ಸಂಖ್ಯೆ…

2 hours ago

ರಾಜಾಸೀಟ್‌ನಲ್ಲಿ ಸ್ಥಾಪನೆಯಾಗಲಿದೆ ಫುಡ್‌ ಕೋರ್ಟ್‌

ನವೀನ್ ಡಿಸೋಜ ಖಾಸಗಿ ಸಹಭಾಗಿತ್ವದಲ್ಲಿ ಆರಂಭಕ್ಕೆ ಸಚಿವ ಸಂಪುಟದಲ್ಲಿ ಒಪ್ಪಿಗೆ; ಟ್ರಾಫಿಕ್ ಕಿರಿಕಿರಿಗೂ ಕಡಿವಾಣ ಮಡಿಕೇರಿ: ನಗರದ ರಾಜಾಸೀಟ್ ಆವರಣದಲ್ಲಿ…

2 hours ago

ಜಲಾಶಯಗಳ ಹಿನ್ನೀರಿನಲ್ಲಿ ರಿವರ್ ಟರ್ನ್ ಪಕ್ಷಿಗಳ ಕಲರವ

ಮಂಜು ಕೋಟೆ ಕೋಟೆ: ಹಿಮಾಲಯ, ಇನ್ನಿತರ ಪ್ರದೇಶಗಳಿಂದ ವಲಸೆ ಬಂದಿರುವ ಹಕ್ಕಿಗಳು; ಪರಿಸರ ಪ್ರಿಯರಲ್ಲಿ ಸಂತ ಎಚ್.ಡಿ.ಕೋಟೆ: ತಾಲ್ಲೂಕಿನಲ್ಲಿರುವ ಜಲಾಶಯಗಳ…

2 hours ago