ಮನರಂಜನೆ

ಡಿಕೆಶಿ ಅವರ ನಟ್ಟುಬೋಲ್ಟು ಟೈಟ್‌ ಹೇಳಿಕೆ : ಮೌನ ಮುರಿದ ನಟ ಕಿಚ್ಚ ಸುದೀಪ್‌ ಹೇಳಿದ್ದೇನು?

ಬೆಂಗಳೂರು : ಹುಟ್ಟುಹಬ್ಬದ ಸಂಭ್ರಮದಲ್ಲಿರುವ ನಟ ಸುದೀಪ್ ಸುದ್ದಿಗೋಷ್ಠಿ ನಡೆಸಿ ಸಾಕಷ್ಟು ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ. ದರ್ಶನ್‌ ಹಾಗೂ ತಮ್ಮ ನಡುವಿನ ಸ್ನೇಹದ ಬಗ್ಗೆಯೂ ಒಂದಿಷ್ಟು ಮೆಲುಕು ಹಾಕಿದ್ದು, ಇದೇ ವೇಳೆ ಡಿಕೆ ಶಿವಕುಮಾರ್‌ ಅವರ ನಟ್ಟು ಬೋಲ್ಟು ಹೇಳಿಕೆಗೆ ಸ್ಪಷ್ಟನೆ ಕೊಟ್ಟಿದ್ದಾರೆ.

ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ನಟ ಸುದೀಪ್‌, ನಟ್ಟು ಬೋಲ್ಟು ಕಿತಾಪತಿ ಸಾಧು ಕೋಕಿಲ ಅವರದ್ದು, ಇದ್ರಲ್ಲಿ ಡಿಕೆ ಸಾಹೇಬರದ್ದು ಏನೂ ಇಲ್ಲ ಅಂತ‌ ಸ್ಪಷ್ಟಪಡಿಸಿದ್ದಾರೆ. ಸಾಧು ಕೋಕಿಲ ಅವರು ಆಮೇಲೆ ಹೇಳ್ತಾರೆ, ಎಲ್ಲಾರನ್ನೂ ಒಟ್ಟಿಗೆ ಕರೆದ್ರೆ ನಾನು ಹೇಗೆ ಮೆಂಟೇನ್‌ ಮಾಡ್ಲಿ? ಯಾರಿಗೆ ಸೆಕ್ಯೂರಿಟಿ ಕೊಡ್ಲಿ ಅಂತಾರೆ. ಅದನ್ನ ಮೊದಲೇ ಅವರಿಗೆ ಹೇಳ್ಬೇಕು ತಾನೆ. ಅಲ್ಲಿ ಬಂದು ಹೇಳಿದಾಗ ಸೈಲೆಂಟ್‌ ಆಗಿದ್ದರು. ಇದು ಸಾಧು ಅವರದ್ದೇ ಕಿತಾಪತಿ. ವೈಯಕ್ತಿಕವಾಗಿ ಕಾರ್ಯಕ್ರಮಕ್ಕೆ ಕರೆದವರು ಬಂದಿದ್ದಾರೆ. ಕೆಲವರಿಗೆ ಬರೋಕಾಗಿಲ್ಲ. ಅಷ್ಟಕ್ಕೆ ಕೆಲವರು ದೊಡ್ಡ ದೊಡ್ಡ ಮಾತುಗಳನ್ನಾಡಿದರು, ಪರ್ವಾಗಿಲ್ಲ ಅಂದರು.

ಪಾಪ ಸಾಧು ಅವರದ್ದು ಇದರಲ್ಲಿ ಏನೂ ತಪ್ಪಿಲ್ಲ. ಅವರು ತಮಾಷೆ ಮಾಡಿಕೊಂಡೇ ಇರ್ತಾರೆ. ಇದನ್ನೂ ತಮಾಷೆಯಾಗೇ ಹೇಳಿದ್ದಾರೆ. ಆದ್ರೆ ಸೀರಿಯಸ್‌ ಆಗಿಬಿಡ್ತು ಅಷ್ಟೇ ಅಂತ ಹೇಳಿದರು.

ಡಿಕೆಶಿ ನಟ್ಟು ಬೋಲ್ಟು ಟೈಟ್‌ ಮಾಡೋದಾಗಿ ಹೇಳಿದ್ದೇಕೆ?
ಬೆಂಗಳೂರಲ್ಲೇ ಸಿನಿ ಕಾರ್ಯಕ್ರಮವೊಂದರಲ್ಲಿ ಡಿಕೆಶಿ ಮಾತನಾಡುವಾಗ, ಚಿತ್ರರಂಗದಲ್ಲಿ ಯಾರಿಗೆ ಹೇಗೆ ನಟ್ಟು ಬೋಲ್ಟ್ ಟೈಟ್ ಮಾಡಬೇಕು ಎನ್ನುವುದು ಗೊತ್ತಿದೆ. ಇದನ್ನು ವಾರ್ನಿಂಗ್ ಅಂತಾ ಆದ್ರೂ ಅಂದುಕೊಳ್ಳಿ, ಮನವಿ ಅಂತಾ ಆದ್ರೂ ಅಂದುಕೊಳ್ಳಿ. ಥಿಯೇಟರ್‌ಗೆ ಪರ್ಮಿಷನ್‌ ಕೊಡಲಿಲ್ಲಾ ಅಂದ್ರೆ ಸಿನಿಮಾನೇ ರಿಲೀಸ್‌ ಆಗಲ್ವಲ್ಲ ಅಂತ ಹೇಳಿದ್ದರು. ಈ ಹೇಳಿಕೆ ಸಿನಿಮಾರಂಗದಲ್ಲಿ ಭಾರೀ ಸಂಚಲನ ಮೂಡಿಸಿತ್ತು, ಇಡೀ ಚಿತ್ರರಂಗವೇ ದಂಗಾಗಿತ್ತು. ಆ ಸಮಯಕ್ಕೆ ಕೆಲವು ನಟ ನಟಿಯರು ಪ್ರತಿಕ್ರಿಯಿಸಿದ್ರು, ಕೆಲವರು ಡಿಕೆಶಿ ವಿರುದ್ಧ ಬೇಸರವನ್ನು ಸಹ ಹೊರ ಹಾಕಿದ್ದರು.

ಆಂದೋಲನ ಡೆಸ್ಕ್

Recent Posts

ಚಿರತೆ ಸೆರೆ | ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

ಗುಂಡ್ಲುಪೇಟೆ : ತಾಲ್ಲೂಕಿನ ಬರಗಿ ಗ್ರಾಮದ ಜಮೀನುಗಳಲ್ಲಿ ಜಾನುವಾರುಗಳ ಮೇಲೆ ದಾಳಿ ನಡೆಸಿ ಕೊಂದುಹಾಕಿದ್ದ ವಿಚಾರವಾಗಿ ಅರಣ್ಯ ಇಲಾಖೆ ಚಿರತೆ…

9 hours ago

ಮೈಸೂರಲ್ಲಿ ಡ್ರಗ್ಸ್‌ ಉತ್ಪಾದನೆ ಶಂಕೆ : ಓರ್ವನ ಬಂಧನ

ಮೈಸೂರು : ಬುಧವಾರವಷ್ಟೇ ಹೆಬ್ಬಾಳ್‌ನಲ್ಲಿ ಶೆಡ್‌ವೊಂದರ ಮೇಲೆ ದಾಳಿ ನಡೆಸಿದ್ದ ಎನ್‌ಸಿಬಿ ಪೊಲೀಸರು, ಮಾದಕ ವಸ್ತು ಮಾರಾಟ ಆರೋಪ ಪ್ರಕರಣದಲ್ಲಿ…

9 hours ago

ತೇಗದ ಮರ ಅಕ್ರಮ ಕಟಾವು : ಓರ್ವ ಬಂಧನ

ಹನೂರು : ತಾಲ್ಲೂಕಿನ ಬಿ.ಆರ್.ಟಿ ಹುಲಿ ಸಂರಕ್ಷಿತ ಪ್ರದೇಶದ ಬೈಲೂರು ವನ್ಯಜೀವಿ ವಲಯ ವ್ಯಾಪ್ತಿಯಲ್ಲಿ ಅಕ್ರಮವಾಗಿ ತೇಗದ ಮರಗಳನ್ನು ಕಟಾವು…

10 hours ago

ಮೈಸೂರು ವಿ.ವಿ | ಯುಜಿಸಿ ಉದ್ದೇಶಿತ ಹೊಸ ನಿಯಾಮವಳಿ ಜಾರಿಗೆ ಒತ್ತಾಯ

ಮೈಸೂರು : ವಿಶ್ವವಿದ್ಯಾನಿಲಯಗಳ ಕ್ಯಾಂಪಸ್‌ನಲ್ಲಿ ಜಾತಿ, ಧರ್ಮ,ಲಿಂಗ ಆಧಾರಿತ ಶೋಷಣೆಯನ್ನು ತಡೆಗಟ್ಟಲು ಯುಜಿಸಿಯ ಉದ್ದೇಶಿತ ಹೊಸ ನಿಯಮಾವಳಿಗಳ ಜಾರಿಗೆ ಒತ್ತಾಯಿಸಿ…

11 hours ago

ಸರ್ಕಾರಿ ನೌಕರರಿಗೆ ತಿಂಗಳಿಗೊಮ್ಮೆ ಖಾದಿ ಧಿರಿಸು ಕಡ್ಡಾಯ

ಬೆಂಗಳೂರು : ರಾಜ್ಯ ಸರ್ಕಾರಿ ನೌಕರರಿಗೆ ಖಾದಿ ಬಟ್ಟೆ ಬಳಕೆ ಕಡ್ಡಾಯಗೊಳಿಸಲಾಗಿದೆ. ಪ್ರತಿ ತಿಂಗಳ ಮೊದಲ ಶನಿವಾರ ಖಾದಿ ಬಟ್ಟೆ…

11 hours ago

ಕ್ಯಾಂಪಸ್‌ಗಳಲ್ಲಿ ಜಾತಿ ತಾರತಮ್ಯ : ಯುಜಿಸಿ ನಿಯಮಾವಳಿಗೆ ʻಸುಪ್ರೀಂʼ ತಡೆ

ಹೊಸದಿಲ್ಲಿ : ಮಹತ್ವದ ಬೆಳವಣಿಗೆಯಲ್ಲಿ ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಹೊಸ ನಿಯಮಗಳಿಗೆ ಸರ್ವೋಚ್ಚ ನ್ಯಾಯಾಲಯ ತಡೆ ನೀಡಿದೆ. ವಿಶ್ವವಿದ್ಯಾಲಯ…

12 hours ago