ಮನರಂಜನೆ

‘ಮಿಸ್ಟರ್ ರಾಣಿ’ಯಾದ ದೀಪಕ್‍; ಹೊಸ ಕಲ್ಪನೆಯೊಂದಿಗೆ ಬಂದ ಮಧುಚಂದ್ರ

ಪ್ರತಿ ಚಿತ್ರದಲ್ಲೂ ವಿಭಿನ್ನವಾದ ಪರಿಕಲ್ಪನೆಯೊಂದಿಗೆ ಗುರುತಿಸಿಕೊಂಡಿರುವ ನಿರ್ದೇಶಕ ಮಧುಚಂದ್ರ ಇದೀಗ ‘ಸೆಲ್ಫಿ ಮಮ್ಮಿ ಗೂಗಲ್‍ ಡ್ಯಾಡಿ’ ಚಿತ್ರದ ನಂತರ ಹೊಸ ಚಿತ್ರದೊಂದಿಗೆ ವಾಪಸ್ಸಾಗಿದ್ದಾರೆ. ಹೆಸರು ‘ಮಿಸ್ಟರ್‍ ರಾಣಿ’.

‘ಮಿಸ್ಟರ್ ರಾಣಿ’ ಸಿನಿಮಾದ ಪೋಸ್ಟರ್ ಕೆಲವು ದಿನಗಳ ಹಿಂದೆ ಬಿಡುಗಡೆಯಾಗಿತ್ತು. ಇದೀಗ ಮಧುಚಂದ್ರ ಚಿತ್ರದ ಟೀಸರ್‍ ಬಿಡುಗಡೆ ಮಾಡಿದ್ದಾರೆ. ಎ2 ಮ್ಯೂಸಿಕ್‍ ಚಾನಲ್‍ನಲ್ಲಿ ಚಿತ್ರದ ಟೀಸರ್‍ ಬಿಡುಗಡೆ ಆಗಿದೆ.

‘ಲಕ್ಷ್ಮಿ ನಿಮಾಸ’ ಧಾರಾವಾಹಿಯಲ್ಲಿ ಜಯಂತ್ ಪ್ರಾತ ಮಾಡಿ ಜನಪ್ರಿಯವಾಗಿರುವ ದೀಪಕ್ ಸುಬ್ರಹ್ಮಣ್ಯ ಈ ಚಿತ್ರದ ಹೀರೋ(ಯಿನ್!?) ರಾಣಿ ಪಾತ್ರ ಮಾಡಿದ್ದಾರೆ. ಇದೊಂದು ಕ್ರೌಡ್‍ ಫಂಡೆಂಡ್ ಚಿತ್ರವಾಗಿದ್ದು, 100ಕ್ಕೂ ಹೆಚ್ಚು ಜನ ಈ ಚಿತ್ರದಲ್ಲಿ ಹಣ ತೊಡಗಿಸಿದ್ದಾರೆ.

ಚಿತ್ರರಂಗದಲ್ಲಿ ನಾಯಕನಾಗಬೇಕೆಂದು ಹೆಜ್ಜೆ ಇಡುವ ಸಾಮಾನ್ಯ ಯುವಕನೊಬ್ಬ, ಅನಿವಾರ್ಯವಾಗಿ ನಾಯಕಿಯಾಗುವ ಕಥೆ ಈ ಚಿತ್ರದಲ್ಲಿದೆ. ನಾಯಕಿಯಾಗಿ ದೀಪಕ್‍ ಸುಬ್ರಹ್ಮಣ್ಯ ಕಾಣಿಸಿಕೊಂಡಿರುವುದು ವಿಶೇಷ. ಹಾಗೆ ನಾಯಕಿಯಾದ ನಾಯಕನು ಚಿತ್ರರಂಗದಲ್ಲಿ ಏನೆಲ್ಲಾ ಅನುಭವಿಸುತ್ತಾನೆ ಎನ್ನುವುದು ಚಿತ್ರದ ಕಥೆ.

ಈ ಚಿತ್ರವನ್ನು ಎಕ್ಸೆಲ್‍ ಆರ್ಬಿಟ್‍ ಕ್ರಿಯೇಷನ್ಸ್ ಸಂಸ್ಥೆಯಡಿ ನಿರ್ಮಾಣ ಮಾಡಲಾಗಿದ್ದು, ಚಿತ್ರದಲ್ಲಿ ದೀಪಕ್‍ ಸುಬ್ರಹ್ಮಣ್ಯ ಜೊತೆಗೆ ಪಾರ್ವತಿ ನಾಯರ್, ಶ್ರೀವತ್ಸ, ಮಧುಚಂದ್ರ, ರೂಪಾ ಪ್ರಭಾಕರ್‍, ಆನಂದ್‍ ನೀನಾಸಂ ಮುಂತಾದವರು ನಟಿಸಿದ್ದಾರೆ.

‘ಮಿಸ್ಟರ್‍ ರಾಣಿ’ ಚಿತ್ರವನ್ನು ನಿರ್ದೇಶಿಸುವುದರ ಜೊತೆಗೆ ಮಧುಚಂದ್ರ ಕಥೆ, ಚಿತ್ರಕಥೆಯನ್ನು ನಚಿಸಿದ್ದಾರೆ. ರವೀಂದ್ರನಾಥ್‍ ಛಾಯಾಗ್ರಹಣವಿದ್ದು, ಜ್ಯೂಡಾ ಸ್ಯಾಂಡಿ ಮತ್ತು ರಿತ್ವಿಕ್‍ ಮುರಳೀಧರ್‍ ಅವರ ಸಂಗೀತವಿದೆ. ಈಗಾಗಲೇ ಚಿತ್ರದ ಚಿತ್ರೀಕರಣ ಸಂಪೂರ್ಣವಾಗಿದ್ದು, ಸದ್ಯದಲ್ಲೇ ‘ಮಿಸ್ಟರ್‍ ರಾಣಿ’ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಭೂಮಿಕಾ

Recent Posts

ಮೈಸೂರು | ಕ್ಷುಲ್ಲಕ ಕಾರಣಕ್ಕೆ ಸ್ನೇಹಿತನಿಗೇ ಚಾಕು ಇರಿತ

ಮೈಸೂರು : ಕೇಳಿದ ತಕ್ಷಣ ಹಣ ಕೊಡಲಿಲ್ಲ ಎಂಬ ಕಾರಣಕ್ಕಾಗಿ ಸ್ನೇಹಿತನ ಮೇಲೆ ಯುವಕನೊಬ್ಬ ಚಾಕುವಿನಿಂದ ಇರಿದಿರುವ ಘಟನೆ ನಗರದಲ್ಲಿ…

42 mins ago

ಮಹಿಳಾ ಉದ್ಯೋಗಿಗೆ ಕಿರುಕುಳ : ಕಾರ್ಖಾನೆ ಮಾಲೀಕನ ವಿರುದ್ದ ದೂರು

ಮೈಸೂರು : ಲೈಂಗಿಕವಾಗಿ ಸಹಕರಿಸಿದಲ್ಲಿ ಚೆನ್ನಾಗಿ ನೋಡಿಕೊಳ್ಳುತ್ತೀನಿ ಎಂದು ಮಹಿಳಾ ಉದ್ಯೋಗಿಗೆ ಕಿರುಕುಳ ನೀಡಿದ ಖಾಸಗಿ ಕಾರ್ಖಾನೆ ಮಾಲೀಕನ ವಿರುದ್ದ…

51 mins ago

ಚಾಮುಂಡೇಶ್ವರಿ ದರ್ಶನ : ಸೇವಾ ಶುಲ್ಕ ಏರಿಕೆಗೆ ಖಂಡನೆ

ಮೈಸೂರು : ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ದೇವಿಯ ದರ್ಶನ ಹಾಗೂ ಸಮೂಹ ದೇವಾಲಯಗಳ ಸೇವೆಗಳ ಶುಲ್ಕಗಳನ್ನು ಏರಿಸಿರುವ ರಾಜ್ಯ…

55 mins ago

ಮೂರು ತಿಂಗಳಲ್ಲಿ ಪಿಎಸ್‌ಐ ಖಾಲಿ ಹುದ್ದೆ ಭರ್ತಿ : ಗೃಹ ಸಚಿವ ಪರಮೇಶ್ವರ್‌

ಬೆಳಗಾವಿ : ರಾಜ್ಯದಲ್ಲಿ 545 ಪಿಎಸ್‌ಐ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದು, ಈಗಾಗಲೇ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ. ಮೂರು ತಿಂಗಳ…

1 hour ago

ಋತುಚಕ್ರದ ರಜೆ : ತನ್ನದೆ ತಡೆಯಾಜ್ಞೆ ಹಿಂಪಡೆದ ನ್ಯಾಯಮೂರ್ತಿ…!

ಬೆಂಗಳೂರು : ಮಹಿಳಾ ನೌಕರರಿಗೆ ಅವರ ಋತುಚಕ್ರದ ಸಮಯದಲ್ಲಿ ತಿಂಗಳಲ್ಲಿ ಒಂದು ದಿನದ ವೇತನ ಸಹಿತ ರಜೆ ಸೌಲಭ್ಯ ಒದಗಿಸುವಂತೆ…

1 hour ago

ಜಪಾನ್‌ನಲ್ಲಿ ಪ್ರಬಲ ಭೂಕಂಪ : ಸುನಾಮಿ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ

ಟೋಕಿಯೋ : ಜಪಾನ್‌ನ ಪೂರ್ವ ಮತ್ತು ಉತ್ತರ ಕರಾವಳಿ ತೀರದಲ್ಲಿ ೭.೬ ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಇಡೀ ಪ್ರದೇಶವನ್ನೇ…

1 hour ago