ಬೆಂಗಳೂರು: ನಿರ್ದೇಶಕ ದಿನಕರ್ ತೂಗುದೀಪ್ ಇನ್ನೂ ಬಾಡಿಗೆ ಮನೆಯಲ್ಲಿದ್ದಾರೆ. ಕನ್ನಡದ ಸೂಪರ್ ಸ್ಟಾರ್ ದರ್ಶನ್ ತಮ್ಮನಾಗಿದ್ದರೂ ಯಾಕೆ ಅವರಿನ್ನೂ ಹಾಗೆ ಇದ್ದಾರೆ ಎಂಬುದಕ್ಕೆ ಸ್ವತಃ ದಿನಕರ್ ಅವರು ಹಲವಾರು ಬಾರಿ ಉತ್ತರಿಸಿದ್ದಾರೆ.
ನಿರ್ದೇಶಕ ದಿನಕರ್ ತೂಗುದೀಪ್ ಅವರದು ಸಿಂಪಲ್ ಲೈಫ್. ಮಡದಿ, ಮಗಳು ಹಾಗೂ ಮಗನೊಟ್ಟಿಗೆ ಚಿಕ್ಕ ಮನೆಯಲ್ಲಿ ವಾಸವಾಗಿದ್ದಾರೆ. ಸದ್ಯ ನಟ ದರ್ಶನ್ ಕೊಲೆ ಕೇಸ್‌ನಲ್ಲಿ ಆರೋಪಿ ಆಗಿರುವುದರಿಂದ ಸಹಜವಾಗಿಯೇ ತೂಗುದೀಪ್ ಫ್ಯಾಮಿಲಿ ಆಸಕ್ತಿ ಎಲ್ಲರಿಗೂ ಹೆಚ್ಚಾಗಿದೆ.
ನಟ ದರ್ಶನ್ ಅವರ ಸಹೋದರ ದಿನಕರ್ ತೂಗುದೀಪ್ ಅವರು ಸಾರಥಿ ಚಿತ್ರದ ಮೂಲಕ ಕನ್ನಡ ಸಿನಿಪ್ರೇಮಿಗಳ ಮನಸ್ಸಿಗೆ ಬಹಳಷ್ಟು ಹತ್ತಿರವಾದರು. ೨೦೧೧ರಲ್ಲಿ ನಟ ದರ್ಶನ್ ಮುಖ್ಯ ಭೂಮಿಕೆಯಲ್ಲಿ ದಿನಕರ್ ತೂಗುದೀಪ್ ನಿರ್ದೇಶನದಲ್ಲಿ ಬಂದ ಸಾರಥಿ ಚಿತ್ರವು ಹಿಟ್ ಆಗಿತ್ತು. ಅಂದು ಆ ಚಿತ್ರವು ಅದೆಷ್ಟು ಕಲೆಕ್ಷನ್ ಮಾಡಿತ್ತು ಹಾಗೂ ಮೆಚ್ಚುಗೆ ಗಳಿಸಿತ್ತು ಎಂದರೆ ಅಂದಿನ ಕಾಲದಲ್ಲಿ ಚಿತ್ರರಂಗವೇ ಒಮ್ಮೆ ಮೂಗಿನ ಮೇಲೆ ಬೆರಳಿಟ್ಟಿತ್ತು.
ನಿರ್ದೇಶಕ ದಿನಕರ್ ಇನ್ನೂ ಬಾಡಿಗೆ ಮನೆಯಲ್ಲೇ ಇದ್ದಾರೆ. ಕನ್ನಡದ ಸೂಪರ್ ಸ್ಟಾರ್ ದರ್ಶನ್ ತಮ್ಮನಾಗಿದ್ದರೂ ಯಾಕೆ ಅವರಿನ್ನೂ ಹಾಗೆ ಇದ್ದಾರೆ ಎಂಬುದಕ್ಕೆ ಸ್ವತಃ ದಿನಕರ್ ಅವರು ಹಲವಾರು ಬಾರಿ ಉತ್ತರ ಕೊಟ್ಟಿದ್ದಾರೆ. ಅದನ್ನು ಇನ್ನೊಮ್ಮೆ ಹೇಳಬೇಕು ಎಂದರೆ, ದಿನಕರ್ ಅಮ್ಮ ಮೀನಾ ಅವರು ನೀನು ಸ್ವಂತ ದುಡಿಮೆಯ ಹಣದಿಂದ ಏನಾದರೂ ಮಾಡು. ಮನೆ ಕಟ್ಟುವುದಿರಲಿ, ವಾಹನ ಖರೀದಿ ಮಾಡುವುದಿರಲಿ ಎಂದಿದ್ರಂತೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ದಿನಕರ್ ಅವರು, ನನಗೆ ಅಮ್ಮನ ಮಾತು ತುಂಬಾ ಇಷ್ಟವಾಯ್ತು. ಅದು ನನ್ನ ಹೃದಯ ತಟ್ಟಿತು. ಅದಕ್ಕಾಗಿ ನಾನು ನನ್ನ ಅಮ್ಮನ ಮಾತಿನಂತೆ ನನ್ನದೇ ಹಣದಿಂದ ಮನೆ ಕಟ್ಟುತ್ತೇನೆ. ಏನೇ ಖರೀದಿ ಮಾಡುವುದಿದ್ದರೂ ಅದು ನನ್ನದೇ ಹಣದಿಂದ ಅಷ್ಟೇ. ನಾನು ಈಗಾಗಲೇ ಸೈಟ್ ಮಾಡಿದ್ದು, ಮನೆ ಕಟ್ಟಲು ಶುರು ಮಾಡಿದ್ದೇನೆ. ಅದು ನನ್ನದೇ ದುಡ್ಡು, ಅಮ್ಮನ ಮಾತು ಎಂದು ಖುಷಿ ಹಂಚಿಕೊಂಡಿದ್ದಾರೆ.
ಮಹೇಂದ್ರ ಹಸಗೂಲಿ, ಗುಂಡ್ಲುಪೇಟೆ ತಾಲ್ಲೂಕು ವರದಿಗಾರರು ಗುಂಡ್ಲುಪೇಟೆ: ಪಟ್ಟಣದ ಜನತಾ ಕಾಲೋನಿಯ ಮನೆಯೊಂದರ ಮೇಲೆ ಪೊಲೀಸರು ದಾಳಿ ನಡೆಸಿ ವೇಶ್ಯಾವಾಟಿಕೆ…
ನವದೆಹಲಿ: ಮದರ್ ಆಫ್ ಆಲ್ ಡೀಲ್ಸ್ ಎಂದೇ ಕರೆಯಲ್ಪಡುವ ಭಾರತ-ಯುರೋಪ್ ಒಕ್ಕೂಟವು ಮುಕಕ್ತ ವ್ಯಾಪಾರ ಒಪ್ಪಂದಕ್ಕೆ ಇಂದು ಅಧಿಕೃತವಾಗಿ ಸಹಿ…
ಬೆಂಗಳೂರು: ಶಿಡ್ಲಘಟ್ಟದಲ್ಲಿ ಪೌರಾಯುಕ್ತಗೆ ಧಮ್ಕಿ ಹಾಕಿದ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡ ರಾಜೀವ್‌ಗೌಡನನ್ನು ಸರ್ಕಾರ ರಕ್ಷಣೆ ಮಾಡಲ್ಲ. ಕಾನೂನು ಪ್ರಕಾರ ಶಿಕ್ಷೆ…
ಪಿರಿಯಾಪಟ್ಟಣ: ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಗೋಣಿಕೊಪ್ಪ-ಪಿರಿಯಾಪಟ್ಟಣ ರಸ್ತೆಯಲ್ಲಿ ನಡೆದಿದೆ. ತಾಲ್ಲೂಕಿನ…
ಮೈಸೂರು: ಮೈಸೂರಿನ ಸಮತಾ ಅಧ್ಯಯನ ಕೇಂದ್ರ(ರಿ)ವು ಸಂಸ್ಥಾಪಕ ಅಧ್ಯಕ್ಷೆ, ಖ್ಯಾತ ಸ್ತ್ರೀವಾದಿ ವಿಮರ್ಶಕಿ ಹಾಗೂ ಲೇಖಕಿ ಡಾ.ವಿಜಯಾ ದಬ್ಬೆ ಅವರ ಹೆಸರಿನಲ್ಲಿ 2022…
ಮಹೇಂದ್ರ ಹಸಗೂಲಿ: ಗುಂಡ್ಲುಪೇಟೆ ತಾಲ್ಲೂಕು ವರದಿಗಾರರು ಗುಂಡ್ಲುಪೇಟೆ: ತಾಲ್ಲೂಕಿನ ಬೊಮ್ಮಲಾಪುರ ಗ್ರಾಮದ ದೊರೆ ಎಂಬುವವರ ವಾಸದ ಮನೆಗೆ ನುಗ್ಗಿದ ಕಡವೆಯನ್ನು…