ಮನರಂಜನೆ

ಮೊದಲ ದಿನದ ಗಳಿಕೆಯಲ್ಲಿ ‘ವಾರ್ 2’ ಚಿತ್ರವನ್ನು ಹಿಂದಿಕ್ಕಿದ ‘ಕೂಲಿ’

ಈ ಸ್ವಾತಂತ್ರ್ಯ ದಿನದ ಪ್ರಯುಕ್ತ ಎರಡು ನಿರೀಕ್ಷಿತ ಚಿತ್ರಗಳು ಬಿಡುಗಡೆಯಾಗಿವೆ. ರಜನಿಕಾಂತ್‍ ಅಭಿನಯದ ‘ಕೂಲಿ’ ಮತ್ತು ಹೃತಿಕ್‍ ರೋಶನ್‍ ಮತ್ತು ಜ್ಯೂನಿಯರ್‍ NTR ಮೊದಲ ಬಾರಿಗೆ ಜೊತೆಯಾಗಿ ನಟಿಸಿರುವ ‘ವಾರ್ 2’ ಚಿತ್ರವು ಗುರುವಾರ (ಆಗಸ್ಟ್ 14) ಜಗತ್ತಿನಾದ್ಯಂತ ಬಿಡುಗಡೆಯಾಗಿದೆ. ಎರಡೂ ಚಿತ್ರಗಳು ಬಹುತಾರಾಗಣದ ಮತ್ತು ಬಹು ಬಜೆಟ್‍ನ ಚಿತ್ರಗಳಾಗಿದ್ದು, ಈ ಪೈಕಿ ‘ಕೂಲಿ’ ಚಿತ್ರವು ಮೊದಲ ದಿನದ ಗಳಿಕೆಯಲ್ಲಿ ‘ವಾರ್ 2’ ಚಿತ್ರವನ್ನು ಹಿಂದಿಕ್ಕಿದೆ.

‘ಕೂಲಿ’ ಚಿತ್ರದ ಮೊದಲ ದಿನದ ಗಳಿಕೆ 100 ಕೋಟಿ ರೂ. ದಾಟಲಿದೆ ಎಂದು ಮೊದಲೇ ಅಂದಾಜಿಸಲಾಗಿತ್ತು. ರಜನಿಕಾಂತ್‍ ಅಭಿನಯದ ‘ಕೂಲಿ’ ಚಿತ್ರದ ಮೊದಲ ದಿನದ ಗಳಿಕೆ 100 ಕೋಟಿ ರೂ. ಮೀರಬಹುದು ಎಂದು ಅಂದಾಜಿಸಲಾಗಿತ್ತು. ಅದರಂತೆ ಮೊದಲ ದಿನ ಜಾಗತಿಕವಾಗಿ 151 ಕೋಟಿ ರೂ. ಗಳಿಕೆ ಮಾಡಿದೆ ಎಂದು ಸ್ವತಃ ಚಿತ್ರ ನಿರ್ಮಿಸಿರುವ ಸನ್‍ ಪಿಕ್ಚರ್ಸ್ ಸಂಸ್ಥೆಯೇ ಅಧಿಕೃತವಾಗಿ ಘೋಷಿಸಿದೆ. ಚಿತ್ರದಲ್ಲಿ ರಜನಿಕಾಂತ್‍ ಜೊತೆಗೆ ಉಪೇಂದ್ರ, ನಾಗಾರ್ಜುನ, ಆಮೀರ್ ಖಾನ್‍, ಶ್ರುತಿ ಹಾಸನ್‍, ಸತ್ಯರಾಜ್‍ ಮುಂತಾದವರು ನಟಿಸಿದ್ದು, ಲೋಕೇಶ್‍ ಕನಕರಾಜ್‍ ನಿರ್ದೇಶನ ಮಾಡಿದ್ದಾರೆ.

ಇನ್ನು, ‘ವಾರ್ 2’ ಚಿತ್ರವು ಮೊದಲ ದಿನ 80 ಕೋಟಿ ರೂ.ನಷ್ಟು ಗಳಿಕೆ ಮಾಡಿದ್ದು, ಈ ಪೈಕಿ ಭಾರತದಲ್ಲಿ ಸುಮಾರು 52.5 ಕೋಟಿ ರೂ. ಗಳಿಕೆಯಾಗಿದೆ. ಮಿಕ್ಕಂತೆ ಹೊರದೇಶಗಳಲ್ಲಿ 30 ಕೋಟಿ ರೂ.ಗಳು ಗಳಿಕೆಯಾಗಿದೆ. ‘ವಾರ್ 2’ ಚಿತ್ರವು ಯಶ್‍ ರಾಜ್‍ ಫಿಲಂಸ್‍ ಸ್ಪೈ ಯೂನಿವರ್ಸ್‍ನ ಹೊಸ ಚಿತ್ರವಾಗಿದ್ದು, ಈ ಹಿಂದೆ ಈ ಸರಣಿಯಲ್ಲಿ ‘ಟೈಗರ್’, ‘ಪಠಾಣ್‍’, ‘ವಾರ್’ ಮುಂತಾದ ಹಲವು ಚಿತ್ರಗಳು ಬಿಡುಗಡೆಯಾಗಿವೆ. ‘ವಾರ್ 2’ ಚಿತ್ರವನ್ನು ಅಯಾನ್ ‍ಮುಖರ್ಜಿ ನಿರ್ದೇಶನ ಮಾಡಿದ್ದು, ಆದಿತ್ಯ ಜೋಪ್ರಾ ನಿರ್ಮಿಸಿದ್ದಾರೆ. ಜೊತೆಗೆ ಕಥೆಯನ್ನು ಸಹ ರಚಿಸಿದ್ದಾರೆ.

 

 

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಗ್ರಹಣ..!

ಗ್ರಹಣ..! ಸೂರ್ಯ-ಚಂದ್ರರ ನಡುವೆ ಭೂಮಿ ಬಂದರೆ ಚಂದ್ರ ಗ್ರಹಣ ! ಭಾರತ-ರಷ್ಯಾ ನಡುವೆ ಅಮೆರಿಕ ಬಂದರೆ ‘ಸುಂಕ ’ ಗ್ರಹಣ…

4 hours ago

ಓದುಗರ ಪತ್ರ: ಪೆಟ್ರೋಲ್ ಬಂಕ್‌ಗಳಲ್ಲಿ ಮೋಸ: ಗರಿಷ್ಟ ಕ್ರಮ ಕೈಗೊಳ್ಳಲಿ

ರಾಜ್ಯದ ೮೦೫ ಪೆಟ್ರೋಲ್ ಬಂಕ್‌ಗಳ ತಪಾಸಣೆಯಲ್ಲಿ ಬರೋಬ್ಬರಿ ೭೬೮ ಬಂಕ್‌ಗಳಲ್ಲಿ (ಶೇ. ೮೫ ರಷ್ಟು) ಅಳತೆಯಲ್ಲಿ ಮೋಸ ಕಂಡುಬಂದಿರುವುದು ಸಾರ್ವಜನಿಕರಿಗೆ…

4 hours ago

ಓದುಗರ ಪತ್ರ: ಉದ್ಯೋಗ ಸೃಷ್ಟಿ : ಫ್ಲಿಪ್‌ಕಾರ್ಟ್ ನಡೆ ಸ್ವಾಗತಾರ್ಹ

ಒಂದು ಕಡೆ ಒರಾಕಲನಂತಹ ಕಂಪೆನಿಗಳು ತಮ್ಮ ನೌಕರರನ್ನು ಯಾವುದೇ ಮುನ್ಸೂಚನೆ ನೀಡದೇ ಕೇವಲ ಒಂದೇ ಒಂದು ಇ ಮೇಲ್ ಸಂದೇಶದ…

4 hours ago

ಸುಗಮ ಸಂಗೀತದ ಅದ್ಬುತ ಗಾಯಕ ಮಡಿಕೇರಿ ನಾಗೇಂದ್ರ

ಡಾ.ಕೆ.ವಿ.ಲಕ್ಷ್ಮೀದೇವಿ, ಗುರುಕೃಪಾ ಸಂಗೀತ ಕೇಂದ್ರ, ಮೈಸೂರು ಇಂದು ಗುರು ನಮನ ಮಡಿಕೇರಿ ನಾಗೇಂದ್ರರೆಂದೇ ಪ್ರಖ್ಯಾತರಾದ ‘ಗುರು ಕೃಪಾ ಸಂಗೀತ ಕೇಂದ್ರ’ದ…

7 hours ago

ಸುಮ್ಮನಿದ್ದರೂ ಪರಿಣಮಿಸುವ ರಂಗಭೂಮಿಯ ಝೆನ್ ಗುರು – ಜಂಬೆ ಮೇಷ್ಟ್ರು

ಸತೀಶ್ ತಿಪಟೂರು ಕರ್ನಾಟಕದ ಯಾವುದೇ ಭಾಗದಲ್ಲಿ ಜಂಬೆ ಮೇಷ್ಟ್ರ ಹಿರಿ - ಕಿರಿಯ ವಿದ್ಯಾರ್ಥಿಗಳು ಮೂರ್ನಾಲ್ಕು ಜನ ಒಂದೆಡೆ ಸೇರಿದರೆಂದರೆ…

7 hours ago

ಮಕ್ಕಳ ಮನದಂಗಳದಲ್ಲಿ ಗಾಂಧಿ ಚಿಂತನೆಯ ಬೇರುಗಳು

ಪ್ರತಿ ಭಾರತೀಯರ ಎದೆ ಬಡಿತದ ಚೇತನ ಗಾಂಧೀಜಿ:  ಕೈಯಲ್ಲೊಂದು ಕೋಲು ಹಿಡಿದು, ದುಂಡು ಕನ್ನಡಕ ಧರಿಸಿ, ಸತ್ಯ, ಅಹಿಂಸೆಯ ಅಸದಿಂದ…

7 hours ago