ಮುಂಬೈ : ‘ಧುರಂಧರ್-2’ ಚಿತ್ರದ ಯಶಸ್ವಿ ನಟಿ ಸಾರಾ ಅರ್ಜುನ್ ಅವರಿಗೆ ಸದ್ಯ ಖ್ಯಾತಿ ಹೆಚ್ಚಾಗಿದೆ. ಭಾನುವಾರ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಕ್ರಿಕೆಟ್ ವೀಕ್ಷಿಸಲು ಆಗಮಿಸಿದ್ದರು. ಆದರೆ, ಪಂದ್ಯ ಮುಗಿದು ಹೊರಬರುವಾಗ ಸಾರಾ ಅರ್ಜುನ್ ಅವರು ಅಭಿಮಾನಿಗಳ ನಡುವೆ ಸಿಲುಕಿಕೊಂಡಿರುವ ಘಟನೆ ನಡೆದಿದೆ.
20 ವರ್ಷ ವಯಸ್ಸಿನ ಸಾರಾ ತನ್ನ ತಂದೆ ರಾಜ್ ಅರ್ಜುನ್ ಮತ್ತು ತಾಯಿ ಸನ್ಯಾ ಅರ್ಜುನ್ ಜೊತೆಗೆ ಮುಂಬೈ ಇಂಡಿಯನ್ಸ್ ಜೆರ್ಸಿ ಧರಿಸಿ ಪಂದ್ಯವನ್ನು ವೀಕ್ಷಿಸಿದರು. ಸಾರಾ, ಪಂದ್ಯ ಮುಗಿದ ನಂತರ ಹೊರಬರುತ್ತಿರುವಾಗ ಅಭಿಮಾನಿಗಳ ಗುಂಪು ಅವರನ್ನು ಗುರುತಿಸಿ ಸುತ್ತುವರಿದಿತು.
ಸೆಲ್ಫಿ ಮತ್ತು ಆಟೋಗ್ರಾಫ್‌ಗಳಿಗಾಗಿ ಅಭಿಮಾನಿಗಳು ಮುಗಿಬಿದ್ದಿದ್ದರಿಂದ ಪರಿಸ್ಥಿತಿ ಕೆಲಕಾಲ ಕೈ ಕೈಮೀರಿತ್ತು. ಈ ವೇಳೆ ನಟಿ ಸಾರಾ ಸ್ವಲ್ಪ ಭಯಭೀತರಾದರು. ಪಕ್ಕದಲ್ಲೇ ಇದ್ದ ತಂದೆ ರಾಜ್ ಅರ್ಜುನ್ ತಕ್ಷಣವೇ ಮಗಳ ರಕ್ಷಣೆಗೆ ಮುಂದಾಗಿ, ಬಾಡಿಗಾರ್ಡ್‌ನಂತೆ ವರ್ತಿಸುತ್ತಾ ಅಭಿಮಾನಿಗಳ ಗುಂಪನ್ನು ಸರಿಸುತ್ತಾ ಸಾರಾಳನ್ನು ಸುರಕ್ಷಿತವಾಗಿ ಕಾರಿನವರೆಗೆ ಕರೆದೊಯ್ದರು.
ಸದ್ಯ ಈ ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣ ವೈರಲ್ ಆಗುತ್ತಿವೆ. ನೆಟ್ಟಿಗರು ರಾಜ್ ಅರ್ಜುನ್ ಅವರ ತಂದೆಯ ಕಾಳಜಿ ಮತ್ತು ತ್ವರಿತ ಪ್ರತಿಕ್ರಿಯೆಯನ್ನು ಮೆಚ್ಚುತ್ತಿದ್ದಾರೆ. “ತಂದೆ ಎಂದರೆ ಹೀಗಿರಬೇಕು”, “ಮಗಳ ರಕ್ಷಣೆಗೆ ರಾಜ್ ಅರ್ಜುನ್ ತೋರಿದ ಜಾಗ್ರತೆ ಮೆಚ್ಚುವಂತದ್ದ” ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನೂ ‘ಧುರಂಧರ್ 2’ ಚಿತ್ರದ ಯಶಸ್ಸಿನ ಬೆನ್ನಲ್ಲೇ ಸಾರಾ ಅರ್ಜುನ್ ಅವರ ಜನಪ್ರಿಯತೆಯೂ ಸಹ ಹೆಚ್ಚಾಗಿದೆ.
ಬೆಂಗಳೂರು : ದೇಶದಲ್ಲಿ ಮೊದಲ ಬಾರಿಗೆ ಮಕ್ಕಳಿಗೆ ಮೀಸಲಾಗಿ 450 ಹಾಸಿಗೆಗಳ ಬೃಹತ್, ಅತ್ಯಾಧುನಿಕ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಇಂದಿರಾ…
ಬೈಲಕುಪ್ಪೆ : ನಿನ್ನೆ ರಾತ್ರಿ ನಡೆದ ಹಿಟ್ ಅಂಡ್ ರನ್ ಅಪಘಾತದಲ್ಲಿ ಬೈಕ್ ಸವಾರ ಸಾವನ್ನಪ್ಪಿದ ಘಟನೆಗೆ ಆಕ್ರೋಶ ವ್ಯಕ್ತಪಡಿಸಿದ…
ಹೈದರಬಾದ್ : ಬಹುಭಾಷಾ ನಟ ಪ್ರಕಾಶ್ ರಾಜ್ ಅವರ ತಾಯಿ ಸುವರ್ಣಲತಾ ಅವರು ನಿಧನರಾಗಿದ್ದಾರೆ. 85 ವರ್ಷದ ಸುವರ್ಣಲತಾ ಅವರು…
ಚೆನ್ನೈ : ಏಪ್ರಿಲ್ 23 ರಂದು ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಗೆ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಮತ್ತು ಪ್ರತಿಸ್ಪರ್ಧಿ ಟಿವಿಕೆ…
ಮಡಿಕೇರಿ : ಸರ್ಕಾರಿ ಬಸ್‌ವೊಂದು ನಿಯಂತ್ರಣ ತಪ್ಪಿ ಬಸ್ ನಿಲ್ದಾಣದಲ್ಲಿದ್ದ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ನಗರದ ಕೆಎಸ್‌ಆರ್‌ಟಿಸಿ ಬಸ್…
ವಿಶಾಖಪಟ್ಟಣ : ಭಾರತೀಯ ನೌಕಾಪಡೆಯ ಅಧಿಕಾರಿಯೊಬ್ಬರು ತನ್ನ ಪ್ರೇಯಸಿಯನ್ನು ಕೊಲೆ ಮಾಡಿ, ಆಕೆಯ ದೇಹವನ್ನು ತುಂಡಾಗಿ ಕತ್ತರಿಸಿ ಫ್ರಿಡ್ಜ್‌ನಲ್ಲಿಟ್ಟಿದ್ದಾನೆ. ಅಲ್ಲದೇ,…