kannada new movie video
‘ಬ್ಲಿಂಕ್’ ಯಶಸ್ಸಿನ ನಂತರ ಮತ್ತೆ ಒಂದಾದ ದೀಕ್ಷಿತ್ ಶೆಟ್ಟಿ ಹಾಗೂ ಶ್ರೀನಿಧಿ ಬೆಂಗಳೂರು ಇದೀಗ ‘ವಿಡಿಯೋ’ ಎಂಬ ಚಿತ್ರದ ಮೂಲಕ ಮತ್ತೆ ಒಂದಾಗಿದ್ದಾರೆ. ಈ ಚಿತ್ರದ ಮೂಲಕ ದೀಕ್ಷಿತ್ ಶೆಟ್ಟಿ ತಮ್ಮ ನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಧೀ ಸಿನಿಮಾಸ್ ಹೆಸರಿನ ಈ ಸಂಸ್ಥೆಯ ಮೊದಲ ಚಿತ್ರವಾಗಿ ‘ವೀಡಿಯೋ’ ಬರಲಿದೆ.
ಈ ಚಿತ್ರವು Found Footage Genre ಚಿತ್ರವಾಗಿದ್ದು, Vlog ಮತ್ತು Documentary ಶೈಲಿಯದ್ದಾಗಿದೆ. ಈಗಾಗಲೇ ಶೇ. 80ರಷ್ಟು ಭಾಗದ ಚಿತ್ರೀಕರಣ ಮುಗಿಸಿದ್ದು, ಆದಷ್ಟು ಬೇಗ ಚಿತ್ರ ಬಿಡುಗಡೆಯಾಗಲಿದೆ. ಭಾರತದಲ್ಲಿ ಈ ತರಹದ ಪ್ರಯತ್ನಗಳಾಗಿರುವುದು ಕಡಿಮೆಯೇ. ಕನ್ನಡದಲ್ಲೂ ‘6-5=2’ ನಂತರ ಯಾರೂ ಈ ತರಹದ್ದೊಂದು ಪ್ರಯತ್ನ ಮಾಡಿರಲಿಲ್ಲ.
ಈ ಚಿತ್ರಕ್ಕೆ ಐದಾರು ಕ್ಯಾಮೆರಾಗಳನ್ನು ಸತತವಾಗಿ ಬಳಸಿ ಚಿತ್ರೀಕರಣ ಮಾಡಲಾಗುತ್ತಿದೆ. ಇದೊಂದು ವ್ಲಾಗರ್‍ನ ಕಥೆಯಾಗಿದ್ದು, ಒಂದು ಹಾಂಟೆಡ್ ಸ್ಥಳಕ್ಕೆ ವ್ಲಾಗರ್ ಹೋದಾಗ, ಅಲ್ಲಿ ಏನೆಲ್ಲಾ ಆಗುತ್ತದೆ ಎಂಬುದನ್ನು ಈ ಚಿತ್ರ ಹೇಳುತ್ತದಂತೆ.
ಈ ಕುರಿತು ಮಾತನಾಡುವ ಶ್ರೀನಿಧಿ, ‘ನನ್ನ ಮೊದಲ ಚಿತ್ರ ‘ಬ್ಲಿಂಕ್’ ಚಿತ್ರ ಜನರ ಮೆಚ್ಚುಗೆ ಪಡೆಯಿತು. ಆದರೆ, ಅದಕ್ಕೆ ಒಂದು ಸೀಮಿತವಾದ ಪ್ರೇಕ್ಷಕವರ್ಗ ಇತ್ತು. ಈ ಚಿತ್ರವನ್ನು ಎಲ್ಲರಿಗೂ ತಲುಪಿಸುವ ನಿಟ್ಟಿನಲ್ಲಿ, ಅದರಲ್ಲೂ ಯುವಕರು ಚಿತ್ರಮಂದಿರಗಳಿಗೆ ಬಂದು ಚಿತ್ರ ನೋಡಬೇಕೆಂದು ಒಂದು ಬೇರೆ ಶೈಲಿಯ ಕಥೆ ಮಾಡಿಕೊಂಡಿದ್ದೇನೆ’ ಎಂದು ಹೇಳುತ್ತಾರೆ.
ಕಳೆದ 11 ವರ್ಷಗಳಿಂದ ನಟನಾಗಿ ಕನ್ನಡ ಮಾತ್ರವಲ್ಲದೆ, ತೆಲುಗು, ತಮಿಳು, ಮಲಯಾಳಂ ಚಿತ್ರಗಳಲ್ಲೂ ಅಭಿನಯಿಸುತ್ತಿರುವ ದೀಕ್ಷಿತ್ ಶೆಟ್ಟಿ ಈ ಚಿತ್ರದ ಮೂಲಕ ನಿರ್ಮಾಪಕರಾಗುತ್ತಿದ್ದಾರೆ. ನಿರ್ಮಾಪಕರನ್ನು ಹೊರತುಪಡಿಸಿದರೆ ‘ಬ್ಲಿಂಕ್’ ಚಿತ್ರಕ್ಕೆ ಕೆಲಸ ಮಾಡಿದ ತಂಡವೇ ಇಲ್ಲೂ ಕೆಲಸ ಮಾಡಲಿದೆಯಂತೆ.
ಆ ಚಿತ್ರದಲ್ಲಿ ನಾಯಕನಾಗಿದ್ದ ದೀಕ್ಷಿತ್ ಶೆಟ್ಟಿ, ಇಲ್ಲೂ ನಾಯಕನಾಗಿದ್ದು, ಜೊತೆಗೆ ಐವರು ಹೊಸ ನಟ-ನಟಿಯರು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರಕ್ಕೆ ಅವಿನಾಶ್ ಶಾಸ್ತ್ರಿ ಛಾಯಾಗ್ರಹಣ ಮತ್ತು ಪ್ರಸನ್ನ ಕುಮಾರ್ ಸಂಗೀತವಿದೆ.
ವಿಐಪಿಗಳು ಬಂದಾಗ ಇಲ್ಲವೆ, ದೊಡ್ಡ ಸಮಾರಂಭಗಳು ಇಲ್ಲವೆ ಪ್ರತಿಭಟನೆಗಳನ್ನು ಹಮ್ಮಿಕೊಂಡಿದ್ದ ಸಂದರ್ಭದಲ್ಲಿ ಮಾಧ್ಯಮಗಳಲ್ಲಿ ಬಿಗಿ ಬಂದೋಬಸ್ತ್ ಪದ ಬಳಕೆಯ ಪರಿಚಯ…
ರಾಜ್ಯದ ನೂತನ ರಾಜ್ಯಪಾಲರಾಗಿ ಡಾ.ಸುಧಾ ಯಾದವ್ ಅವರನ್ನು ನೇಮಕ ಮಾಡಿ ರಾಷ್ಟ್ರಪತಿ ದ್ರೌಪದಿ ಮುರ್ಮು ಆದೇಶ ಹೊರಡಿಸಿದ್ದು, ರಾಜ್ಯದ ರಾಜ್ಯಪಾಲರಾಗಿ…
ಔಷಧಿಗಳ ನೈಜ ದರಕ್ಕೂ ಮತ್ತು ಮಾರಾಟ ದರಕ್ಕೂ ಅಜಗಜಾಂತರ ವ್ಯತ್ಯಾಸ ಇರುವುದನ್ನು ಇತ್ತೀಚೆಗೆ ದೇಶದ ಸರ್ವೋಚ್ಚ ನ್ಯಾಯಾಲಯ ಗಮನಿಸಿ ತೀವ್ರ…
ಪಂಜುಗಂಗೊಳ್ಳಿ ಅವರ ವಾರದ ಅಂಕಣ ಬಡಪಾಯಿಗಳ ಸೇವೆ ಮಾಡಿ ಜನರ ಹೃದಯ ಗೆದ್ದ ಮಾತೆ ಮದರ್ ಥೆರೇಸಾ ಈಗ ನಮ್ಮ…
ವರದಿ ರೂಪ: ರವಿಚಂದ್ರ ಚಿಕ್ಕೆಂಪಿಹುಂಡಿ ಅಂತೂ ನಾಲ್ಕು ಹುಡುಗರು ಸ್ಟೇಷನ್ ಒಳಗೆ ಹೋದರು ಎಂದರೆ ಮತ್ತೊಂದು ಸಂಕಟ ಶುರು ಪಿಎಸ್ಐ…
ನವೀನ್ ಡಿಸೋಜ ಒಂದೇ ದಿನದಲ್ಲಿ ಕೊಡಗಿನ ಪ್ರಮುಖ ಪ್ರವಾಸಿ ತಾಣಗಳ ವೀಕ್ಷಣೆ; ವಯಸ್ಕರಿಗೆ ೪೦೦, ಮಕ್ಕಳಿಗೆ ೩೦೦ ರೂ.ದರ ಮಡಿಕೇರಿ:…