Categories: ಮನರಂಜನೆ

ದಿ’ ಎಂಬ ಹೆಸರಿಡಲು ಆ ಮೂರು ಕಾರಣಗಳು …

ಕನ್ನಡದಲ್ಲಿ ‘ದಿ’ ಎನ್ನುವ ಹೆಸರೊಂದು ಸದ್ದಿಲ್ಲದೆ ತಯಾರಾಗಿ ಬಿಡುಗಡೆಯಾಗಿದೆ. ಚಿತ್ರ ಮೇ.16ರಂದು ಬಿಡುಗಡೆಯಾಗುತ್ತಿದ್ದು, ಅದಕ್ಕೂ ಮೊದಲು ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಹಿರಿಯ ನಟ ಮಂಡ್ಯ ರಮೇಶ್ ‘ದಿ’ ಚಿತ್ರದ ಟ್ರೇಲರ್ ಅನಾವರಣ ಮಾಡಿ, ಚಿತ್ರ ಯಶಸ್ವಿ ‌ಪ್ರದರ್ಶನ ಕಾಣಲಿ ಎಂದು ಹಾರೈಸಿದರು.

ಈ ಚಿತ್ರಕ್ಕೆ ‘ದಿ’ ಎಂದು ಹೆಸರಿಡಲು ಮೂರು ಕಾಣಗಳಿವೆಯಂತೆ. ಈ ಕುರಿತು ಮಾತನಾಡುವ ನಿರ್ದೇಶಕ ಕಂ ನಾಯಕ ವಿನಯ್‍ ವಾಸುದೇವ್‍, ‘ಚಿತ್ರಕ್ಕೆ ‘ದಿ’ ಎಂದು ಹೆಸರಿಡಲು ಮೂರು ಜನ ಮುಖ್ಯ ಕಾರಣ. ಒಂದು ನಟ ಸುದೀಪ್. ಇನ್ನೊಬ್ಬರು ನನ್ನ ಗುರುಗಳು. ನಾನು ಸುದೀಪ್ ಅವರ ಅಭಿಮಾನಿ ಹಾಗೂ ನಮ್ಮ ಗುರುಗಳ ಹೆಸರಿನಲ್ಲೂ ದಿ ಅಕ್ಷರವಿದೆ. ಚಿತ್ರದಲ್ಲೂ ನಾಯಕನ ಹೆಸರು ದೀಪು. ನಮ್ಮ ‘ದಿ’ ಚಿತ್ರದ ನಾಯಕಿ ಹೆಸರು ದಿಶಾ ರಮೇಶ್. ಈ ಎಲ್ಲಾ ಕಾರಣಗಳಿಂದ ನಮ್ಮ ಚಿತ್ರಕ್ಕೆ ‘ದಿ’ ಎಂದು ಶೀರ್ಷಿಕೆ ಇಡಲಾಗಿದೆ‌. ಹಾಗಾಗಿ ಇದು ಇಂಗ್ಲೀಷ್ ‘The’ ಅಲ್ಲ‌. ಕನ್ನಡದ ‘ದಿ’ ಎಂದರು.

ಈ ಚಿತ್ರದ ಶೇಕಡ 80% ರಷ್ಟು ಭಾಗದ ಚಿತ್ರೀಕರಣ ಕಾಡಿನಲ್ಲೇ ನಡೆಯುತ್ತದೆಯಂತೆ. ‘ದೇವರಾಯನ ದುರ್ಗ, ದೇವರಮನೆ ಮುಂತಾದ ಕಡೆ ಚಿತ್ರೀಕರಣ ನಡೆದಿದೆ‌. ಚಿತ್ರೀಕರಣವಾದ ಸ್ಥಳಗಳ ಹೆಸರಿನಲ್ಲೂ ದ ಅಕ್ಷರವಿದೆ. ಈ ಚಿತ್ರಕ್ಕೆ ನಾನೇ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದೇನೆ ಜೊತೆಗೆ ನಾಯಕನಾಗೂ ನಟಿಸಿದ್ದೇನೆ. ಚಿತ್ರತಂಡದ ಎಲ್ಲರ ಸಹಕಾರದಿಂದ ಚಿತ್ರ ಉತ್ತಮವಾಗಿ ಮೂಡಿಬಂದಿದೆ. ಇದೇ ಮೇ.16 ರಂದು ತೆರೆ ಕಾಣಲಿದೆ’ ಎಂದರು.

ಇದನ್ನೂ ಓದಿ:- ತಮಿಳುನಾಡು| ವೇದಿಕೆ ಮೇಲೆಯೇ ಕುಸಿದು ಬಿದ್ದ ತಮಿಳು ನಟ ವಿಶಾಲ್‌

ನಾಯಕಿ ದಿಶಾ ರಮೇಶ್‍ ಮಾತನಾಡಿ, ‘ನನಗೆ ವಿನಯ್ ಅವರು ಕಥೆ ಹೇಳಿದಾಗ ಕಥೆ ಕೇಳಿ ಬಹಳ ಇಷ್ಟವಾಯಿತು. ನಂತರ ಟೀಸರ್ ನೋಡಿದ ಮೇಲಂತೂ ಅವರು ಹೇಳಿದಕ್ಕಿಂತ ಇನ್ನೂ ಚೆನ್ನಾಗಿ ಮೂಡಿ ಬಂದಿತ್ತು. ಒಳ್ಳೆಯ ತಂಡದ ಜೊತೆಗೆ ಕೆಲಸ ಮಾಡಿದ್ದು ಖುಷಿಯಿದೆ. ನನ್ನ ಪಾತ್ರ ಕೂಡ ಚೆನ್ನಾಗಿದೆ’ ಎಂದರು.

‘ದಿ’ ಚಿತ್ರದಲ್ಲಿ ಹರಿಣಿ ಶ್ರೀಕಾಂತ್, ನಾಗೇಂದ್ರ ಅರಸ್, ಡಾಲಾ ಶರಣ್, ಕಲಾರತಿ ಮಹಾದೇವ್ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಅಲೆನ್‍ ಭರತ್‍ ಛಾಯಾಗ್ರಹಣ, ಯು.ಎಂ. ಸ್ಟೀವನ್ ಸತೀಶ್ ಸಂಗೀತವಿದೆ.

ಆಂದೋಲನ ಡೆಸ್ಕ್

Recent Posts

ತಿರುವಿನಲ್ಲಿ ಉರುಳಿಬಿದ್ದ ಲಾರಿ: ತಪ್ಪಿದ ಭಾರೀ ಅನಾಹುತ

ಕೊಡಗು: ಕೊಡಗು ಜಿಲ್ಲೆ ಶನಿವಾರಸಂತೆ ಬಳಿಯ ಗುಡುಗಳಲೆಯಲ್ಲಿ ಸಿಮೆಂಟ್ ತುಂಬಿದ್ದ ಲಾರಿ ಉರುಳಿಬಿದ್ದಿದೆ. ಶನಿವಾರಸಂತೆ–ಅರಕಲಗೂಡು ರಸ್ತೆಯ ಗುಡುಗಳಲೆ ತಿರುವಿನಲ್ಲಿ ಘಟನೆ…

2 hours ago

ದುಬಾರೆ ಆನೆ ಶಿಬಿರದಲ್ಲಿ19 ವರ್ಷದ ಗಂಡಾನೆ ಸಾವು

ಕುಶಾಲನಗರ: ದುಬಾರೆ ಆನೆ ಶಿಬಿರದಲ್ಲಿದ್ದ ಸುಮಾರು 19 ವರ್ಷ ಪ್ರಾಯದ ಗಂಡಾನೆಯೊಂದು ಐದು ತಿಂಗಳಿಗೂ ಹೆಚ್ಚು ಕಾಲ ನಿರಂತರ ಚಿಕಿತ್ಸೆ…

3 hours ago

ಪ್ರೀತಿಗೆ ನಿರಾಕರಣೆ: ಮೈಸೂರಿನಲ್ಲಿ ಬೆಚ್ಚಿಬೀಳಿಸಿದ ಒನ್‌ ಸೈಡ್‌ ಲವ್‌ ಕೃತ್ಯ

ಮೈಸೂರು: ಪ್ರೀತಿಗೆ ನಿರಾಕರಿಸಿದ ಪರಿಣಾಮ ಯುವಕನೋರ್ವ ಯುವತಿಯನ್ನು ತಬ್ಬಿಕೊಂಡು ಪೆಟ್ರೋಲ್‌ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮೈಸೂರಿನ ವಿಜಯನಗರದ ಬಳಿ…

5 hours ago

ಮನ್​​ಮುಲ್​ ಹಾಲಿನ ಪುಡಿ ಕಲಬೆರಕೆ ಪ್ರಕರಣ: ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಅಧ್ಯಕ್ಷ ಶಿವಕುಮಾರ್ ಅರೆಸ್ಟ್​!

ಮಂಡ್ಯ: ಮನ್​​ಮುಲ್​ ಹಾಲಿನ ಪುಡಿ ಕಲಬೆರಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಮನ್ ಮುಲ್ ಅಧ್ಯಕ್ಷ ಶಿವಕುಮಾರ್(ಶಿವಪ್ಪ)…

7 hours ago

ಭಾರೀ ಮಳೆಗೆ ರೈತರ ಬೆಳೆ ನಾಶ: ಲಕ್ಷಾಂತರ ರೂ. ನಷ್ಟ, ಮನೆ ಗೋಡೆ ಕುಸಿತ

ಹನೂರು: ಸೋಮವಾರ ತಡರಾತ್ರಿ ಸುರಿದ ಭಾರಿ ಮಳೆಗೆ ಕ್ಷೇತ್ರದ ಹಲವು ಜಮೀನುಗಳಲ್ಲಿ ಬೆಳೆದಿದ್ದ ಬೆಳೆಗಳು ಸಂಪೂರ್ಣ ಜಲಾವೃತಗೊಂಡು ಲಕ್ಷಾಂತರ ರೂಪಾಯಿ…

7 hours ago

ಸ್ಕೂಲ್ ಬಸ್‌ ಹರಿದು ಒಂದೂವರೆ ವರ್ಷದ ಮಗು ಸಾವು

ಮೈಸೂರು: ಜಿಲ್ಲೆಯ ಹುಣಸೂರು ತಾಲೂಕಿನ ನಂಜಾಪುರ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ರಸ್ತೆ ಬದಿ ನಿಂತಿದ್ದ ಒಂದೂವರೆ ವರ್ಷದ ಪುಟ್ಟ…

8 hours ago