ಮನರಂಜನೆ

ಬೆಂಗಳೂಲ್ಲಿ 300 ಎಕರೆ ಜಮೀನು ಖರೀದಿಸಿದ್ದ ಧರ್ಮೆಂದ್ರ

ಬೆಂಗಳೂರು : ಬಾಲಿವುಡ್ ನಟ ಧರ್ಮೇಂದ್ರ ಬೆಂಗಳೂರಲ್ಲಿ 300 ಎಕರೆ ಜಮೀನು ಖರೀದಿಸಿದ್ದರು ಎಂದು ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಧರ್ಮೇಂದ್ರ ಜೊತೆಗಿನ ಒಡನಾಟವನ್ನು ಮೆಲುಕು ಹಾಕಿದ್ದಾರೆ.

ಧರ್ಮೇಂದ್ರ ನಿಧನದ ಕುರಿತು ಮಾತನಾಡಿದ ಅವರು, ಎಲೆಕ್ಟ್ರಾನಿಕ್ ಸಿಟಿ ಹತ್ತಿರ ಧರ್ಮೇಂದ್ರ 300 ಎಕರೆ ಜಮೀನು ಖರೀದಿಸಿದ್ದರು. ಆಮೇಲೆ ಅದನ್ನು ಮಾರಿಬಿಟ್ಟರು. ಅದನ್ನು ಮಾರಾಟ ಮಾಡಿದ ಮೇಲೆ ಆ ಜಾಗಕ್ಕೆ ಚಿನ್ನದಂತಹ ಬೆಲೆ ಬಂತು. ಧರ್ಮೇಂದ್ರ ತುಂಬಾ ಒಳ್ಳೆಯ ಮನುಷ್ಯ. ಯಾವುದಕ್ಕೂ ಆಸೆ ಪಡುತ್ತಿರಲಿಲ್ಲ. ದೇವರು ಅವರಿಗೆ ಎಲ್ಲವನ್ನೂ ಕೊಟ್ಟ. ಯಾರು ಏನೇ ಹೇಳಿದರೂ ಹೇಮಮಾಲಿಯನ್ನ ತುಂಬಾ ಚೆನ್ನಾಗಿ ನೋಡಿಕೊಂಡರು. ಅವರಿಬ್ಬರ ಲವ್ ಸ್ಟೋರಿಯನ್ನ ನಾನು ನೋಡಿದ್ದೇನೆ ಎಂದರು.

ಮೊದಲು ಬಣ್ಣ ಹಚ್ಚಿದ್ದೆ ಮೈಸೂರಲ್ಲಿ
ಧರ್ಮೇಂದ್ರ ನನಗೆ ತುಂಬಾ ಹತ್ತಿರದವರು. ಕರ್ನಾಟಕಕ್ಕೆ ಬಂದ ಸಂದರ್ಭ ಅಶೋಕಾ ಹೋಟೆಲ್‌ನಲ್ಲಿ ಇರುತ್ತಿದ್ದರು. ನಾನು, ಅಂಬರೀಷ್, ವಿಷ್ಣುವರ್ಧನ್ ಎಲ್ಲಾ ಜೊತೆಯಲ್ಲಿ ಇರುವ ಫೋಟೋಗಳು ವಿಷ್ಣುವರ್ಧನ್ ಬಳಿ ಇತ್ತು. ಅವರು ಮೊದಲಿಗೆ ಬಣ್ಣ ಹಚ್ಚಿ ಹೀರೋ ಆಗಿದ್ದೇ ಮೈಸೂರಿನ ಪ್ರೀಮಿಯರ್ ಸ್ಟುಡಿಯೋದಲ್ಲಿ. ಅಲ್ಲಿಂದ ಅವರು ನಮಗೆ ಪರಿಚಯ. 8 ತಿಂಗಳ ಹಿಂದೆ ಅವರನ್ನು ಭೇಟಿ ಮಾಡಲು ಹೋಗಿದ್ದೆವು. ಅವರೊಂದಿಗೆ ಒಂದು ಸಿನಿಮಾ ಮಾಡುವ ಯೋಚನೆ ಕೂಡ ಇತ್ತು. ಆದರೆ ಅದು ಸಾಧ್ಯವಾಗಲಿಲ್ಲ ಎಂದು ಹೇಳಿದರು.

ಇದನ್ನೂ ಓದಿ:-ಬೆಂಗಳೂಲ್ಲಿ 300 ಎಕರೆ ಜಮೀನು ಖರೀದಿಸಿದ್ದ ಧರ್ಮೆಂದ್ರ

ಮೈಸೂರಿನ ದೋಸೆ ಅವರಿಗಿಷ್ಟ
ಧರ್ಮೇಂದ್ರ ಅಷ್ಟು ದೊಡ್ಡ ಮನುಷ್ಯರಾದರೂ ಸಹ ಬಂಗಾರದ ಮನುಷ್ಯ. ಅವರಿಗೆ ಯಾವುದೇ ರೀತಿಯ ಅಹಂಕಾರ ಇರಲಿಲ್ಲ. ಯಾವುದೇ ನಿರ್ಮಾಪಕರು ಕೂಡ ಅವರನ್ನು ದೂರಲಿಲ್ಲ. ಇವತ್ತು ಅಮಿತಾಬ್ ಬಚ್ಚನ್ ದೊಡ್ಡ ಹೀರೋ ಆಗಿದ್ದಾರೆ ಅಂದ್ರೆ ಅದಕ್ಕೆ ಧರ್ಮೇಂದ್ರ ಕಾರಣ. ಅವರು ದೋಸೆ ಪ್ರಿಯರು. ಮೈಸೂರಿನ ಹೋಟೆಲ್‌ನಲ್ಲಿ ಸಾದಾ ದೋಸೆ ಎಲ್ಲ ಕೊಡಿಸಿದ್ದೆ. ಅದೆಲ್ಲಾ ಅವರಿಗೆ ಇಷ್ಟವಾಗುತ್ತಿತ್ತು. ಸಾಮಾನ್ಯವಾಗಿ ಎಂಟಿಆರ್‌ಗೆ ಹೋಗುತ್ತಿದ್ದರು. ಮೈಸೂರಿಗೆ ಹೋದರೆ ರಾಜ್ ಹೋಟೆಲ್‌ನಲ್ಲಿ ಇರುತ್ತಿದ್ದರು. ಇವರು ತುಂಬಾ ಒಳ್ಳೆಯ ಮನುಷ್ಯ. ಇಂತಹ ಮನುಷ್ಯ ಸಿಗೋದೇ ಕಷ್ಟ. ಯಾವಗ್ಲೋ ನೋಡಿದ್ರೂ ಯಾವತ್ತಿಗೂ ಮರೆಯುತ್ತಿರಲಿಲ್ಲ. ಸದಾ ನೆನಪಿನಲ್ಲಿಟ್ಟುಕೊಳ್ಳುತ್ತಿದ್ದರು ಎಂದು ನೆನಪಿಸಿಕೊಂಡರು.

ಆಂದೋಲನ ಡೆಸ್ಕ್

Recent Posts

ಸೆಲ್ಫಿ ವಿಡಿಯೋ ಮಾಡಿ ಆಟೋ ಚಾಲಕ ಆತ್ನಹತ್ಯೆಗೆ ಯತ್ನ

ನಂಜನಗೂಡು: 5 ಸಾವಿರ ರೂ ಸಾಲ ಪಾವತಿಗಾಗಿ ಮಾನಸಿಕವಾಗಿ ಕಿರುಕುಳ ನೀಡಿದ ವ್ಯಕ್ತಿ ಮನೆ ಮುಂದೆ ಸೆಲ್ಫಿ ವಿಡಿಯೋ ಮಾಡಿ…

6 hours ago

ಮಂಡ್ಯದಲ್ಲಿ ಭೀಕರ ಅಪಘಾತ: ಮೂವರು ಸ್ಥಳದಲ್ಲೇ ಸಾವು

ಮಂಡ್ಯ: ಡಿವೈಡರ್‌ಗೆ ಡಿಕ್ಕಿ ಹೊಡೆದ ಕಾರು ಪಲ್ಟಿಯಾಗಿ ಬಿದ್ದ ಪರಿಣಾಮ ಸ್ಥಳದಲ್ಲೇ ಮೂವರು ಸಾವನ್ನಪ್ಪಿರುವ ಧಾರುಣ ಘಟನೆ ಮಂಡ್ಯದಲ್ಲಿ ನಡೆದಿದೆ.…

8 hours ago

ರಾಜ್ಯದಲ್ಲಿ ಮೂರು ದಿನ ದಟ್ಟ ಮಂಜು ಕವಿದ ವಾತಾವರಣ: ತೀವ್ರ ಚಳಿ ಮುನ್ಸೂಚನೆ

ಬೆಂಗಳೂರು: ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಬೆಳಗಿನ ಜಾವ ದಟ್ಟವಾದ ಮಂಜು ಕವಿದ ವಾತಾವರಣ ಇರಲಿದೆ.…

8 hours ago

ಯೂರಿಯಾ ಗೊಬ್ಬರ ತಿಂದು 11 ಮೇಕೆಗಳು ಸಾವು

ಕೊಳ್ಳೇಗಾಲ: ಮೇಯಲು ಬಿಟ್ಟಿದ್ದ ಮೇಕೆಗಳು ಯೂರಿಯಾ ಗೊಬ್ಬರ ತಿಂದು ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ಜಾಗೇರಿ ಹಳೆ…

8 hours ago

ಚಾಮರಾಜನಗರ| ಹುಚ್ಚುನಾಯಿ ದಾಳಿಯಿಂದ 7 ಮಂದಿಗೆ ಗಾಯ

ಚಾಮರಾಜನಗರ: ಪಾದಾಚಾರಿಗಳ ಮೇಲೆ ಏಕಾಏಕಿ ಹುಚ್ಚುನಾಯಿ ದಾಳಿ ನಡೆಸಿದ ಪರಿಣಾಮ 7 ಮಂದಿ ಗಾಯಗೊಂಡಿರುವ ಘಟನೆ ಯಳಂದೂರು ಪಟ್ಟಣದಲ್ಲಿ ನಡೆದಿದೆ.…

9 hours ago

ದುಬಾರಿ ಗಿಫ್ಟ್‌ ತೆಗೆದುಕೊಳ್ಳುವುದು ತಪ್ಪಾಗುತ್ತದೆ: ಸಂಸದ ಯದುವೀರ್‌ ಒಡೆಯರ್‌

ಮಡಿಕೇರಿ: ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ತಮ್ಮ ವಸ್ತುಗಳು ಏನೇ ಇದ್ದರೂ ಅಫಿಡವಿಟ್‌ನಲ್ಲಿ ತೋರಿಸಿದ್ದರೆ ಯಾವುದೇ ಸಮಸ್ಯೆ ಆಗಲ್ಲ. ಈ ಹಿಂದೆ…

9 hours ago