ಮನರಂಜನೆ

‘ಕಪಟಿ’ಯೊಂದಿಗೆ ಬಂದ ದಯಾಳ್‍; ಆ. 23ಕ್ಕೆ ಚಿತ್ರ ಬಿಡುಗಡೆ

ದಯಾಳ್‍ ಪದ್ಮನಾಭನ್‍ ಇದುವರೆಗೂ ತಮ್ಮ ಸಂಸ್ಥೆ ಡಿ ಪಿಕ್ಚರ್ಸ್‍ನಿಂದ ನಿರ್ಮಿಸಿದ ಚಿತ್ರಗಳನ್ನು ತಾವೇ ನಿರ್ದೇಶನ ಮಾಡಿದ್ದಾರೆ. ಆದರೆ, ಇದೇ ಮೊದಲ ಬಾರಿಗೆ ಅವರ ನಿರ್ಮಾಣದ ಚಿತ್ರವೊಂದನ್ನು ಬೇರೆಯವರು ನಿರ್ದೇಶನ ಮಾಡಿದ್ದಾರೆ. ಅದೇ ‘ಕಪಟಿ’.

ಡಿ ಪಿಕ್ಚರ್ಸ್ ಸಂಸ್ಥೆಯ 12ನೇ ಚಿತ್ರ ‘ಕಪಟಿ’ ಆಗಿದ್ದು, ಈ ಚಿತ್ರವನ್ನು ರವಿ ಮತ್ತು ಚೇತನ್‍ ಜೊತೆಯಾಗಿ ನಿರ್ದೇಶನ ಮಾಡಿದ್ದಾರೆ. ಸುಕೃತಾ ವಾಗ್ಲೆ, ದೇವ್‍ ದೇವಯ್ಯ, ಸಾತ್ವಿಕ್‍ ಕೃಷ್ಣನ್ ಮುಂತಾದವರು ನಟಿಸಿದ್ದಾರೆ. ಚಿತ್ರವು ಆಗಸ್ಟ್ 23ರಂದು ಬಿಡುಗಡೆಯಾಗುತ್ತಿದ್ದು, ಅದಕ್ಕೂ ಮೊದಲು ಇತ್ತೀಚೆಗೆ ಚಿತ್ರದ ಟೀಸರ್‍ ಬಿಡುಗಡೆಯಾಗಿದೆ.

‘ಕಪಟಿ’ ಚಿತ್ರದ ಕುರಿತು ಮಾತನಾಡುವ ದಯಾಳ್, ‘ರವಿ ಮತ್ತು ಚೇತನ್‍ ನನ್ನ ಹತ್ತಿರ ಬಂದಿದ್ದು ಮಾರ್ಗದರ್ಶನಕ್ಕಾಗಿ. ಅವರು ಅಷ್ಟರಲ್ಲಾಗಲೇ ಆರು ದಿನಗಳ ಕಾಲ ಚಿತ್ರೀಕರಣ ಮಾಡಿಕೊಂಡಿದ್ದರು. ಅವರು ತೋರಿಸಿದ ದೃಶ್ಯಗಳು ನನಗೆ ಇಷ್ಟವಾಯಿತು. ‘ಗುಳ್ಟೂ’ ನಂತರ ನಮ್ಮಲ್ಲಿ ಡಾರ್ಕ್‍ ನೆಟ್ ಕುರಿತು ಚಿತ್ರ ಬಂದಿರಲಿಲ್ಲ. ಹಾಗಾಗಿ, ಈ ಚಿತ್ರವನ್ನು ನಾನೇ ಏಕೆ ನಿರ್ಮಿಸಬಾರದು ಅಂತಂದುಕೊಂಡು, ಅವರನ್ನು ಕೇಳಿದೆ. ಅವರು ಒಪ್ಪಿದರು. ಚಿತ್ರ ಚೆನ್ನಾಗಿ ಮಾಡಿದ್ದಾರೆ. ಇತ್ತೀಚೆಗೆ ನಮ್ಮ ಚಿತ್ರತಂಡದವರೆಲ್ಲಾ ಚಿತ್ರ ನೋಡಿದ್ದೇವೆ. ಖುಷಿಯಾಗಿದೆ’ ಎಂದರು.

ರವಿ-ಚೇತನ್‍ ಈ ಹಿಂದೆ ‘ಕೋಮ’ ಎಂಬ ಚಿತ್ರ ಮಾಡಿದ್ದರು. ‘ಸುಮಾರು ಏಳು ವರ್ಷಗಳ (ಕೋಮ ಚಿತ್ರದ) ನಂತರ ನಾವಿಬ್ಬರು ಮತ್ತೆ ನಿರ್ದೇಶಿಸಿರುವ ಚಿತ್ರವಿದು. ಕನ್ನಡದಲ್ಲಿ ತೀರ ವಿರಳ ಎನ್ನಬಹುದಾದ ಕಥೆ ಈ ಚಿತ್ರದಲ್ಲಿದೆ. ಈ ಕಥೆಯನ್ನು ದಯಾಳ್ ಅವರ ಬಳಿ ಹೇಳಿದ ತಕ್ಷಣ ಒಪ್ಪಿ ನಿರ್ಮಾಣಕ್ಕೆ ಮುಂದಾದರು. ಒಂದು ಗಹನವಾದ ವಿಷಯವನ್ನು ಜನರಿಗೆ ಮನರಂಜನಾತ್ಮಕವಾಗಿ ಹೇಳುವ ಪ್ರಯತ್ನ ಮಾಡಿದ್ದೇವೆ. ಇದೊಂದು ಥ್ರಿಲ್ಲರ್‍ ಚಿತ್ರ. ಇದು ಎಲ್ಲರಿಗೂ ಅನ್ವಯವಾಗುವ ವಿಷಯ. ಏಕೆಂದರೆ, ಇವತ್ತು ಎಲ್ಲರ ಮಾಹಿತಿಯನ್ನು ಬಹಳ ಸುಲಭವಾಗಿ ಹ್ಯಾಕ್‍ ಮಾಡಲಾಗುತ್ತಿದೆ. ಈ ಕುರಿತು ಜಾಗೃತಿ ಮೂಡಿಸಬೇಕು. ಈ ನಿಟ್ಟಿನಲ್ಲಿ ಈ ಚಿತ್ರ ಮಾಡಿದ್ದೇವೆ’ ಎಂದರು.

ಸುಕೃತಾ ವಾಗ್ಲೆ ಚಿತ್ರರಂಗದಿಂದ ದೂರವಾಗಿ ಉಡುಪಿಯಲ್ಲಿ ಎಲ್‍.ಎಲ್‍.ಬಿ ಮಾಡುತ್ತಿದ್ದರಂತೆ. ‘ಈ ಸಂದರ್ಭದಲ್ಲಿ ನಿರ್ದೇಶಕರು ಫೋನ್‍ ಮಾಡಿದರು. ಈ ಚಿತ್ರದ ಕಥೆ ಕೇಳಿ ಮೆಚ್ಚಿಕೊಂಡು ಬಹು ದಿನಗಳ ನಂತರ ಮತ್ತೆ ನಟಿಸಿದ್ದೇನೆ. ಈ ಚಿತ್ರದಲ್ಲಿ ನನ್ನ ಪಾತ್ರ ವಿಭಿನ್ನವಾಗಿದೆ. ಇದೊಂದು ಕ್ರೈಮ್‍ ಚಿತ್ರ. ಕೆಲವೇ ಪಾತ್ರಗಳ ಸುತ್ತ ಸುತ್ತುತ್ತದೆ’ ಎಂದರು.

‘ಕಪಟಿ’ ಚಿತ್ರಕ್ಕೆ ಜೋಹನ್‍ ಶೆವನೇಶ್‍ ಸಂಗೀತ ಸಂಯೋಜಿಸಿದರೆ, ಸತೀಶ್‍ ರಾಜೇಂದ್ರನ್‍ ಛಾಯಾಗ್ರಹಣ ಮಾಡಿದ್ದಾರೆ.

ಭೂಮಿಕಾ

Recent Posts

ತಿ.‌ ನರಸೀಪುರ: ಬೈಕ್ ಡಿಕ್ಕಿ ಚಿರತೆ ಸಾವು

ತಿ. ನರಸೀಪುರ: ತಾಲೂಕಿನ ಬನ್ನೂರು ಹೋಬಳಿಯ ಬಸವನಹಳ್ಳಿ ಗ್ರಾಮದ ಸಮೀಪದ ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನ ಚಿರತೆಗೆ ಡಿಕ್ಕಿ ಹೊಡೆದ ಪರಿಣಾಮ…

7 hours ago

ತಿರುಪತಿ ಲಡ್ಡು: ತುಪ್ಪದಲ್ಲಿ ಪ್ರಾಣಿ ಕೊಬ್ಬು ಬಳಕೆ

ಅಮರಾವತಿ: ಜಗತ್‌ ಪ್ರಸಿದ್ಧ ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಹಾಗೂ ಕಳಪೆ ಗುಣಮಟ್ಟದ ಪದಾರ್ಥಗಳು ಪತ್ತೆಯಾಗಿದೆ ಎಂದು ತೆಲುಗು…

9 hours ago

ಬುರ್ಖಾಧಾರಿ ಮಹಿಳೆಯಿಂದ ಸಲ್ಮಾನ್‌ ಖಾನ್‌ ತಂದೆಗೆ ಜೀವ ಬೆದರಿಕೆ: ಮಹಿಳೆ ಸೇರಿ ಇಬ್ಬರ ಬಂಧನ

ಮುಂಬೈ:‌ ಬಾಲಿವುಡ್‌ನ ಭಾಯಿಜಾನ್ ಸಲ್ಮಾನ್‌ ಖಾನ್‌ ಅವರ ತಂದೆಗೆ ಬುರ್ಖಾ ಧರಿಸಿದ್ದ ಮಹಿಳೆ ಹಾಗೂ ಇನ್ನೊರ್ವ ವ್ಯಕ್ತಿ ಜೀವ ಬೆದರಿಕೆ…

9 hours ago

ಶಾಸಕ ಮುನಿರತ್ನಗೆ ಜಾಮೀನು: ಅತ್ಯಾಚಾರ ಪ್ರಕರಣದಲ್ಲಿ ಮತ್ತೆ ಬಂಧನ ಸಾಧ್ಯತೆ

ಬೆಂಗಳೂರು: ಗುತ್ತಿಗೆದಾರರೊಬ್ಬರಿಗೆ ಜಾತಿನಿಂದನೆ ಹಾಗೂ ಪ್ರಾಣ ಬೆದರಿಕೆ ಹಾಕಿದ ಪ್ರಕರಣದಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನಗೆ…

10 hours ago

ನುಡಿ ಹಬ್ಬಕ್ಕೆ ಆಹ್ವಾನಿಸಲು ಸಿದ್ಧವಾಗಿದೆ ಕನ್ನಡ ರಥ

ಮಂಡ್ಯ: ಜಿಲ್ಲೆಯಲ್ಲಿ ಡಿಸೆಂಬರ್ 20, 21, 22 ರಂದು ನಡೆಯಲಿರುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ…

11 hours ago

ಬಸ್‌ನಲ್ಲಿ ಪ್ರಯಾಣ: ಮಹಿಳೆಯರಿಂದ ಶಕ್ತಿಯೋಜನೆಯ ಅಭಿಪ್ರಾಯ ಪಡೆದ ಪುಷ್ಪ ಅಮರನಾಥ್‌

ಮೈಸೂರು: ರಾಜ್ಯ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಶಕ್ತಿಯೋಜನೆ ಫಲಾನುಭವಿಗಳ ಅಭಿಪ್ರಾಯ ಸಂಗ್ರಹಿಸಲು ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆಯಾದ ಡಾ…

11 hours ago