ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಸದ್ಯ ಬಳ್ಳಾರಿ ಜೈಲಿನಲ್ಲಿದ್ದಾರೆ. ಈ ವರ್ಷ ದರ್ಶನ್ ಅಭಿನಯದ ಯಾವೊಂದು ಚಿತ್ರವು ಬಿಡುಗಡೆಯಾಗಿಲ್ಲ. ಸದ್ಯಕ್ಕೆ ಯಾವ ಹೊಸ ಚಿತ್ರ ಬಿಡುಗಡೆ ಆಗುವ ಹಾಗೆ ಕಾಣುತ್ತಿಲ್ಲ. ಈ ಮಧ್ಯೆ, ಒಂದೇ ದಿನ ದರ್ಶನ್ ಅಭಿನಯದ ಎರಡು ಚಿತ್ರಗಳು ಮರುಬಿಡುಗಡೆ ಆಗುವುದಕ್ಕೆ ಸಜ್ಜಾಗಿದೆ.
ಹೌದು, ದರ್ಶನ್ ಅವರ ಹೊಸ ಚಿತ್ರಗಳ ಗೈರು ಹಾಜರಿಯಲ್ಲಿ ಅವರ ಹಳೆಯ ಚಿತ್ರಗಳು ಬಿಡುಗಡೆಯಾಗುತ್ತಿವೆ. ಈಗಾಗಲೇ ‘ಶಾಸ್ತ್ರಿ’, ‘ಕರಿಯ’ ಮತ್ತು ‘ಪೊರ್ಕಿ’ ಚಿತ್ರಗಳು ಮರುಬಿಡುಗಡೆಯಾಗಿವೆ. ಈ ಪೈಕಿ ‘ಶಾಸ್ತ್ರಿ’ ಚಿತ್ರವು ಸ್ವಲ್ಪ ಸದ್ದು ಮಾಡಿದ್ದು ಬಿಟ್ಟರೆ, ಮಿಕ್ಕಂತೆ ಎರಡೂ ಚಿತ್ರಗಳು ಸದ್ದು ಮಾಡಲಿಲ್ಲ. ಹೀಗಿರುವಾಗಲೇ ದರ್ಶನ್ ಅಭಿನಯದ ಎರಡು ಚಿತ್ರಗಳು ಮರುಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ.
ನವೆಂಬರ್ 09ರಂದು ದರ್ಶನ್ ಅಭಿನಯದ ಎರಡು ಜನಪ್ರಿಯ ಚಿತ್ರಗಳಾದ ‘ನವಗ್ರಹ’ ಮತ್ತು ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ಚಿತ್ರಗಳು ಬಿಡುಗಡೆಯಾಗುವುದಕ್ಕೆ ಸಜ್ಜಾಗಿವೆ. ಆ ವಾರ ಸದ್ಯ ಯಾವುದೇ ದೊಡ್ಡ ಚಿತ್ರ ಬಿಡುಗಡೆಯಾಗದಿರುವುದರಿಂದ ಈ ಎರಡೂ ಚಿತ್ರಗಳು ಒಂದೇ ದಿನ ತೆರೆಕಾಣಲಿದೆ.
ಅಂದಹಾಗೆ, ‘ನವಗ್ರಹ’ ಚಿತ್ರವು 2008ರ ನವೆಂಬರ್ 07ರಂದು ಬಿಡುಗಡೆಯಾಗಿತ್ತು. ಈಗ ಚಿತ್ರವು 09ರಂದು ಬಿಡುಗಡೆಯಾಗುತ್ತಿದೆ. ತೂಗುದೀಪ ಪ್ರೊಡಕ್ಷನ್ಸ್ ಬ್ಯಾನರ್‍ನಡಿ ಮೀನಾ ತೂಗುದೀಪ ಚಿತ್ರದಲ್ಲಿ ದರ್ಶನ್ ನಟಿಸಿದರೆ, ಅವರ ಸಹೋದರ ದಿನಕರ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದರು. ಕನ್ನಡ ಚಿತ್ರರಂಗದಲ್ಲಿ ವಿಲನ್ ಪಾತ್ರದಲ್ಲಿ ಗುರುತಿಸಿಕೊಂಡಿದ್ದ ಜನಪ್ರಿಯ ನಟರಾದ ಪ್ರಭಾಕರ್, ಸುಧೀರ್, ಕೀರ್ತಿರಾಜ್, ದಿನೇಶ್, ಸುಂದರಕೃಷ್ಣ ಅರಸ್ ಮತ್ತು ತೂಗುದೀಪ ಶ್ರೀನಿವಾಸ್ ಅವರ ಮಕ್ಕಳು ಈ ಚಿತ್ರದಲ್ಲಿ ನಟಿಸಿದ್ದರು.
ಇನ್ನು, 2012ರಲ್ಲಿ ಬಿಡುಗಡೆಯಾದ ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ಚಿತ್ರವೂ ಅದೇ ದಿನ ಬಿಡುಗಡೆಯಾಗುತ್ತಿದೆ. ಬ್ರಿಟಿಷರ ಆಳ್ವಿಕೆಯ ವಿರುದ್ಧ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರಾದ ಸಂಗೊಳ್ಳಿ ರಾಯಣ್ಣ ಅವರ ಜೀವನವನ್ನಾಧರಿಸಿದ ಈ ಚಿತ್ರವನ್ನು ಆನಂದ್ ಅಪ್ಪುಗೋಳ್ ನಿರ್ಮಿಸಿದರೆ, ನಾಗಣ್ಣ ನಿರ್ದೇಶನ ಮಾಡಿದ್ದರು. ಈ ಚಿತ್ರವು ಬಿಡುಗಡೆಯಾದ ಒಂದು ವರ್ಷ ಕಾಲ ಪ್ರದರ್ಶನ ಕಂಡಿತ್ತು.
ಈಗ ಎರಡೂ ಚಿತ್ರಗಳು ಒಂದೇ ದಿನ ಬಿಡುಗಡೆಯಾಗುತ್ತಿದೆ. ಈ ಎರಡರಲ್ಲಿ ಯಾವುದನ್ನು ಮೊದಲು ನೋಡಬೇಕು ಎಂಬ ಗೊಂದಲದಲ್ಲಿ ಅಭಿಮಾನಿಗಳು ಇದ್ದಾರೆ.
ವಕ್ಫ್ ನಲ್ಲಿ ಜಮೀನು ಲೂಟಿಯಾಗಿದ್ದರೆ ಸಿಬಿಐ ತನಿಖೆಗೆ ವಹಿಸಿ: ಪ್ರತಿಪಕ್ಷ ನಾಯಕ ಕೋಲಾರ: ವಕ್ಫ್ ಅಧಿಕಾರಿಗಳು ರೈತರ ಬಳಿ ಬಂದರೆ…
ಮಂಡ್ಯ: ಇಲ್ಲಿನ ಬೂದನೂರು ಗ್ರಾಮದ ಬಳಿ ಅನ್ಯಕ್ರಾಂತವಾಗದ ಜಮೀನಿನಲ್ಲಿ ಹುಕ್ಕಾ ಬಾರ್ ನಡೆಸಲು ಅನಧಿಕೃತ ಲೈಸೆನ್ಸ್ ನೀಡಿದ ಪಿಡಿಓ ವಿನಯ್‌ಕುಮಾರ್‌ನನ್ನು…
ಮಡಿಕೇರಿ: ಶನಿವಾರಸಂತೆಯ ವಿಜಯ ವಿನಾಯಕ ದೇವಾಲಯದಲ್ಲಿ ಭಾನುವಾರ ರಾತ್ರಿ ಬಾಗಿಲು ಮುರಿದು ದೇವಾಲಯದ ಒಳಗಡೆ ಇದ್ದ ಹುಂಡಿ ಹೊತ್ತು ಕಳ್ಳರು…
ಬೆಂಗಳೂರು: ಇನ್ನೂ ತಮ್ಮ ತಮ್ಮ ವಾಹನಗಳಿಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್(ಎಚ್‌ಎಸ್‌ಆರ್‌ಪಿ) ಅಳವಡಿಕೆ ಮಾಡದ ವಾಹನ ಸವಾರರಿಗೆ ರಾಜ್ಯ ಸರ್ಕಾರ…
ಮೈಸೂರು : ಸಾಂಸ್ಕೃತಿಕ ನಗರದಲ್ಲಿ ಇದೀಗ ಮತ್ತೊಂದು ಸಾಮೂಹಿಕ ಅತ್ಯಾಚಾರ ಪ್ರಕರಣ ನಡೆದಿದ್ದು ಯುವತಿಯ ಸ್ನೇಹಿತರಿಬ್ಬರು ವಿಜಯನಗರದ ಖಾಸಗಿ ಹೋಟೆಲ್…
ಚನ್ನಪಟ್ಟಣ: ಚನ್ನಪಟ್ಟಣ ಉಪಚುನಾವಣೆಯಲ್ಲಿ ಸಿ.ಪಿ.ಯೋಗೇಶ್ವರ್ ಗೆದ್ದರೆ ಚನ್ನಪಟ್ಟಣ ತಾಲೂಕಿನ ಸಮಗ್ರ ಅಭಿವೃದ್ಧಿಯಾಗಲಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಭರವಸೆ ನೀಡಿದರು.…