ಚಂದನ್ ಶೆಟ್ಟಿ ಅಭಿನಯದ ‘ಸೂತ್ರಧಾರಿ’ ಚಿತ್ರದ ಚಿತ್ರೀಕರಣ ಮುಗಿದೇ ಒಂದೂವರೆ ವರ್ಷಗಳಾಗಿವೆ. ಆದರೆ, ಕಾರಣಾಂತರಗಳಿಂದ ಚಿತ್ರದ ಬಿಡುಗಡೆ ಆಗಿರಲಿಲ್ಲ. ಇದೀಗ ಕೊನೆಗೂ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದ್ದು, ಮೇ.9ರಂದು ಬಿಡುಗಡೆಯಾಗುತ್ತಿದೆ.
ಈ ಚಿತ್ರದ ‘ಡ್ಯಾಶ್’ ಎಂಬ ಹಾಡಿನಲ್ಲಿ ಚಂದನ್ ಮತ್ತು ಸಂಜನಾ ಜೊತೆಯಾಗಿ ಕಾಣಿಸಿಕೊಂಡಿದ್ದು ನೆನಪಿರಬಹುದು. ಈ ಹಾಡು ಬಿಡುಗಡೆಯಾಗಿ 26 ಮಿಲಿಯನ್‍ಗೂ ಹೆಚ್ಚು ವೀಕ್ಷಣೆ ಕಂಡಿದೆ. ಒಂದು ಕಡೆ ಹಾಡು ಯಶಸ್ವಿಯಾದ ಖುಷಿಯಲ್ಲಿ ಚಂದನ್ ಇದ್ದರೆ, ಇನ್ನೊಂದು ಕಡೆ ಚಂದನ್ ಮತ್ತು ಸಂಜನಾ ಪರಸ್ಪರ ಪ್ರೀತಿಸುತ್ತಿದ್ದಾರೆ, ಅವರ ನಿಶ್ಚಿತಾರ್ಥವಾಗಿದೆ ಎಂಬೆಲ್ಲಾ ಸುದ್ದಿಗಳು ಕೇಳಿಬಂದಿದ್ದವು. ಆದರೆ, ಇವೆಲ್ಲವೂ ಸುಳ್ಳು, ತಮ್ಮ ಹಾಗೂ ಸಂಜನಾ ನಡುವೆ ಏನೂ ಇಲ್ಲ ಎಂದು ಚಂದನ್ ಹೇಳಿಕೊಂಡಿದ್ದಾರೆ.
ಇತ್ತೀಚೆಗೆ ನಡೆದ ‘ಸೂತ್ರಧಾರಿ’ ಚಿತ್ರದ ಪತ್ರಿಕಾಗೋಷ್ಠಿಯ ಸಂದರ್ಭದಲ್ಲಿ ಮಾತನಾಡಿರುವ ಚಂದನ್, ‘ಸಂಜನಾ ಜೊತೆಗೆ ಡ್ಯಾಶ್ ಹಾಡು ಮಾಡಿ, ನನ್ನ ಜೀವನದಲ್ಲಿ ಏನೇನೋ ಆಯ್ತು. ಇಷ್ಟು ದಿನ ನಾವು ವೇದಿಕೆ ಮೇಲೆ ಕಾಣಿಸಿಕೊಳ್ಳದಿದ್ದರೂ, ನಾವು ಮದುವೆಯಾಗುತ್ತಿದ್ದೇವೆ ಅಂತೆಲ್ಲಾ ಸುದ್ದಿಯಾಗಿತ್ತು. ನನ್ನ ಪರಿಚಯದವರೊಬ್ಬರು ಫೋನ್ ಮಾಡಿ, ಸಂಜನಾ ಜೊತೆಗೆ ಮದುವೆಯಂತೆ ಎಂದರು. ನಾನು ಇಲ್ಲ ಎಂದರೂ ಅವರು ನಂಬುತ್ತಿಲ್ಲ. ತನಗೆಲ್ಲವೂ ಗೊತ್ತಿದೆ ಎಂದರು. ನನ್ನ ಮದುವೆ ಬಗ್ಗೆ ನನಗೆ ಗೊತ್ತಿಲ್ಲದಿದ್ದರೂ, ಅವರಿಗೆ ಗೊತ್ತಿತ್ತು. ನಮ್ಮ ನಡುವೆ ಏನಿಲ್ಲ’ ಎಂದು ವ್ಯಂಗ್ಯ ಮಾಡಿದರು ಚಂದನ್.
‘ಡ್ಯಾಶ್’ ಹಾಡಿಗೆ ಬಿಟ್ಟರೆ, ನಾವಿಬ್ಬರೂ ಮಾತಾಡಿದ್ದೇ ಕಡಿಮೆ ಎನ್ನುವ ಸಂಜನಾ, ‘ಚಂದನ್ ನನ್ನ ಸ್ನೇಹಿತ ಎನ್ನುವುದಕ್ಕಿಂತ ಹೆಚ್ಚಾಗಿ, ಅವರು ನನ್ನ ಸಹೋದರನಿದ್ದಂತೆ. ನಮ್ಮ ನಡುವೆ ಏನೂ ಇಲ್ಲ. ಡ್ಯಾಶ್ ಹಾಡಿಗೆ ಬಿಟ್ಟರೆ, ನಾವಿಬ್ಬರೂ ಮಾತಾಡಿದ್ದೇ ಕಡಿಮೆ. ಹಾಗಾಗಿ, ಇವೆಲ್ಲವೂ ಸುಳ್ಳು’ ಎಂದರು.
‘ಸೂತ್ರಧಾರಿ’ ಚಿತ್ರಕ್ಕೆ ಕಿರಣ್ ಕುಮಾರ್ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದು, ನವರಸನ್ ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ಚಂದನ್ ಶೆಟ್ಟಿ, ಸಂಜನಾ ಆನಂದ್, ಅಪೂರ್ವ, ಪ್ರಶಾಂತ್ ನಟನ ಮುಂತಾದವರು ನಟಿಸಿದ್ದು, ಚಿತ್ರಕ್ಕೆ ಪಿ.ಕೆ.ಎಚ್. ದಾಸ್ ಛಾಯಾಗ್ರಹಣವಿದೆ.
ಚಿತ್ರದುರ್ಗದ ಪೇಟೆ ಬೀದಿಯ ಉಡುಗೊರೆ (ಗಿಫ್ಟ್) ಮಾರಾಟ ಮಳಿಗೆ ಮಕ್ಕಳು ಮತ್ತು ಪೋಷಕರಿಂದ ತುಂಬಿ ಹೋಗಿತ್ತು. ಅಲ್ಲಿದ್ದ ಹುಡುಗರನ್ನು ಏಕೆ…
- ಡಾ.ಐ.ಸೇಸುನಾಥನ್ ‘ಒಬ್ಬ ನಿನ್ನ ಬಲಗೆನ್ನೆಗೆ ಹೊಡೆದರೆ ಅವನಿಗೆ ನಿನ್ನ ಇನ್ನೊಂದು ಕೆನ್ನೆಗೂ ಹೊಡೆಯಲು ಅನುವು ಮಾಡಿಕೊಡು; ನಿನ್ನ ಮೇಲಂಗಿಯನ್ನು…
‘ಸ್ಯಾಂಡಲ್ ವುಡ್’ ಎಂದೇ ಹೆಸರಾಗಿರುವ ಕನ್ನಡ ಚಿತ್ರರಂಗ ಇಂದು ಭಾರತದ ಒಂದು ಪ್ರಮುಖ ಚಿತ್ರೋದ್ಯಮವಾಗಿ ಬೆಳೆದಿದೆ. ಈ ಮೊದಲು ಪ್ರತಿ…
ಲಕ್ಷ್ಮಿಕಾಂತ್ ಕೊಮಾರಪ್ಪ ೨೦೨೩ರ ಡಿ.೪ರಂದು ಕಾಡಾನೆ ಕಾರ್ಯಾಚರಣೆ ವೇಳೆ ಮೃತಪಟ್ಟಿದ್ದ ಅರ್ಜುನ; ೨ ವರ್ಷ ಕಳೆದರೂ ಅರ್ಜುನನ ಸ್ಮಾರಕ, ಪ್ರತಿಮೆಗಿಲ್ಲ…
ಮೈಸೂರು: ಸಂಭ್ರಮ, ಸಡಗರ, ವಿಶೇಷ ಪ್ರಾರ್ಥನೆಯೊಂದಿಗೆ ಕ್ರೈಸ್ತ ಧರ್ಮದ ದೈವ ಬಾಲಏಸುವಿನ ಜಯಂತಿಯ ಸ್ಮರಣೆಯು ಅದ್ಧೂರಿಯಾಗಿ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ…
ಪ್ರಶಾಂತ್ ಎಸ್. ಗ್ರಾಮೀಣ ಭಾಗದ ರಸ್ತೆಗಳಲ್ಲಿ ಸಮಸ್ಯೆ ಕಣ್ಣಿಗೆ ದೂಳು ಬಿದ್ದರೆ ಅನಾಹುತ ಸಾಧ್ಯತೆ ವಾಹನ ಸವಾರರಿಗೆ ಸವಾಲು; ಎಚ್ಚರ…