ಮನರಂಜನೆ

ಸಿದ್ಧಾರ್ಥ್‍ಗೆ ಚೈತ್ರಾ ಆಚಾರ್ ನಾಯಕಿ; ತಮಿಳಿನಲ್ಲಿ ಎರಡನೇ ಚಿತ್ರ

ಕನ್ನಡದ ಚೈತ್ರಾ ಆಚಾರ್, ತಮಿಳಿನ ಚಿತ್ರವೊಂದರಲ್ಲಿ ಶಶಿಕುಮಾರ್ ಗೆ  ನಾಯಕಿಯಾಗಿ ನಟಿಸುತ್ತಿರುವ ಸುದ್ದಿಯೊಂದು ಇತ್ತೀಚೆಗಷ್ಟೇ ಬಂದಿತ್ತು. ಆ ಚಿತ್ರದ ಕೆಲಸಗಳೇ ಇನ್ನು ಮುಗಿದಿಲ್ಲ, ಚೈತ್ರಾ ಇನ್ನೊಂದು ಹೊಸ ತಮಿಳು ಚಿತ್ರಕ್ಕೆ ನಾಯಕಿಯಾಗಿರುವ ಸುದ್ದಿ ಬಂದಿದೆ.

ಅಂದಹಾಗೆ, ಚೈತ್ರಾ ಆಚಾರ್ ಈ ಬಾರಿ ನಾಯಕಿಯಾಗುತ್ತಿರುವುದು ಸಿದ್ಧಾರ್ಥ್ ಗೆ. ಇತ್ತೀಚೆಗಷ್ಟೇ ಬಿಡುಗಡೆಯಾ ‘ಇಂಡಿಯನ್‍ 2’ ಚಿತ್ರದಲ್ಲಿ ಸಿದ್ಧಾರ್ಥ್ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈಗ ಶ್ರೀಗಣೇಶ್‍ ಅಭಿನಯದ ಹೊಸ ಚಿತ್ರವೊಂದರಲ್ಲಿ ಅವರು ನಟಿಸುತ್ತಿದ್ದು, ಈ ಚಿತ್ರಕ್ಕೆ ಚೈತ್ರಾ ನಾಯಕಿಯಾಗಿ ಆಯ್ಕೆಯಾಗಿದ್ದಾರಂತೆ.

ಇದು ಸಿದ್ಧಾರ್ಥ್ ಅಭಿನಯದ 40ನೇ ಚಿತ್ರವಾಗಿರುವುದರಿಂದ, ಚಿತ್ರಕ್ಕೆ ಸದ್ಯಕ್ಕೆ ‘ಸಿದ್ಧಾರ್ಥ್ 40’ ಎಂಬ ಹೆಸರಿಡಲಾಗಿದೆ. ಚಿತ್ರದಲ್ಲಿ ಶರತ್‍ ಕುಮಾರ್ ಮತ್ತು ದೇವಯಾನಿ ಸಹ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಇಂದಿನಿಂದ ಚಿತ್ರೀಕರಣ ಪ್ರಾರಂಭವಾಗಲಿದೆ.

ಹಾಗೆ ನೋಡಿದರೆ, ಇದು ಚೈತ್ರಾ ಒಪ್ಪಿಕೊಂಡ ಮೊದಲ ಚಿತ್ರವಂತೆ. ಆದರೆ, ಸ್ವಲ್ಪ ತಡವಾಗಿದ್ದರಿಂದ ಮೊದಲು ಶಶಿಕುಮಾರ್ ಅಭಿನಯದ ಚಿತ್ರ ಪ್ರಾರಂಭವಾಗಿ, ಇದು ಎರಡನೆಯ ಚಿತ್ರವಾಗಿ ಪ್ರಾರಂಭವಾಗುತ್ತಿದೆ. ಮೂರು ತಿಂಗಳ ಹಿಂದೆಯೇ ಈ ಚಿತ್ರವನ್ನು ಒಪ್ಪಿದ್ದು, ಈಗ ಚಿತ್ರ ಶುರುವಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ.

ಇದಲ್ಲದೆ, ಶಿವರಾಜಕುಮಾರ್ ಮತ್ತು ಧನಂಜಯ್‍ ಅಭಿನಯದ ‘ಉತ್ತರಕಾಂಡ’, ಚಿತ್ರದಲ್ಲೂ ಚೈತ್ರಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅದಿನ್ನಷ್ಟೇ ಬಿಡುಗಡೆಯಾಗಬೇಕಿದೆ. ಇನ್ನು, ‘ಹ್ಯಾಪಿ ಬರ್ಥ್‍ಡೇ ಟು ಮಿ’ ಎಂಬ ಇನ್ನೊಂದು ಚಿತ್ರದಲ್ಲೂ ಅವರು ನಟಿಸಿದ್ದು, ಅದು ಇತ್ತೀಚೆಗೆ ಓಟಿಟಿಯಲ್ಲಿ ನೇರವಾಗಿ ಬಿಡುಗಡೆ ಆಗಿದೆ.

ಭೂಮಿಕಾ

Recent Posts

ಬೆಳಗಾವಿ-ಮುಂಬೈ ಇಂಡಿಗೋ ವಿಮಾನ ಸೇವೆ: ದಿನಾಂಕ ಫಿಕ್ಸ್‌

ಬೆಳಗಾವಿ: ಗಡಿನಾಡು ಬೆಳಗಾವಿ ಜಿಲ್ಲೆಯ ಜನರ ಬಹುದಿನದ ಬೇಡಿಕೆ ಈಡೇರಿದೆ. ಬೆಳಗಾವಿ ಮತ್ತು ನವಿ ಮುಂಬೈ ನಡುವೆ ನೇರ ವಿಮಾನ…

13 mins ago

ಬಾಲ್ಯವಿವಾಹ, ವರದಕ್ಷಿಣೆ ಕಾಯ್ದೆ ಕುರಿತು ಅರಿವು ಮೂಡಿಸಿ: ಜಿಲ್ಲಾಧಿಕಾರಿ ಡಾ.ಕುಮಾರ

ಮಂಡ್ಯ: ಜಿಲ್ಲೆಯಲ್ಲಿ ಬಾಲ್ಯವಿವಾಹ ಮತ್ತು ವರದಕ್ಷಿಣೆ ನಿಷೇಧ ಕಾಯ್ದೆ ಕುರಿತು ಸಮಗ್ರ ಶಿಶು ಅಭಿವೃದ್ಧಿ ಯೋಜನೆಗಳ ವತಿಯಿಂದ ಗ್ರಾಮಗಳಲ್ಲಿ ಬೀದಿ…

26 mins ago

ಮೊದಲ ಬಾರಿ ಗೆದ್ದ 5 ಶಾಸಕರಿಗೆ ಮಂತ್ರಿ ಸ್ಥಾನ ಕೊಡಬೇಕು: ಪ್ರದೀಪ್‌ ಈಶ್ವರ್‌

ಬೆಂಗಳೂರು: ಮೊದಲ ಬಾರಿ ಗೆದ್ದ 31 ಶಾಸಕರ ಪೈಕಿ ಜನರಿಗಾದರೂ ಸಚಿವ ಸ್ಥಾನ ಕೊಡಬೇಕು. ಹೀಗಾಗಿ ನಾವೆಲ್ಲರೂ ಸೇರಿ ಹೈಕಮಾಂಡ್‌ಗೆ…

39 mins ago

ಗ್ಯಾರಂಟಿಗಳಿಂದ ಸರ್ಕಾರಕ್ಕೆ ಹೊರೆ ಆಗುತ್ತಿದೆ: ಡಿಸಿಎಂ ಡಿ.ಕೆ.ಶಿವಕುಮಾರ್‌

ಬೆಂಗಳೂರು: ಗ್ಯಾರಂಟಿಗಳು ಸರ್ಕಾರಕ್ಕೆ ಹೊರೆಯಾಗುತ್ತಿವೆ ಎಂದು ಖುದ್ದು ಡಿಸಿಎಂ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಅವರು, 200…

49 mins ago

ನಮಗೂ ಸಚಿವ ಸ್ಥಾನ ಕೊಡಿ: ಸಂಪುಟ ಪುನಾರಚನೆಗೆ 24 ಎಂಎಲ್‌ಸಿಗಳಿಂದ ಪತ್ರ

ಬೆಂಗಳೂರು: ಸಚಿವ ಸಂಪುಟ ಪುನಾರಚನೆಗೆ 31 ಶಾಸಕರು ಒತ್ತಾಯ ಮಾಡಿ ಹೈಕಮಾಂಡ್ ನಾಯಕರಿಗೆ ಪತ್ರ ಬರೆದಿದ್ದ ಬೆನ್ನಲ್ಲೇ, ಇದೀಗ 24…

60 mins ago

ಮುಖ್ಯಮಂತ್ರಿ ಸ್ಥಾನಕ್ಕೆ ನಾನು ಸಮರ್ಥನಿದ್ದೇನೆ: ಗೃಹ ಸಚಿವ ಪರಮೇಶ್ವರ್‌

ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ನಾನು ಸಮರ್ಥನಿದ್ದೇನೆ. ಈವರೆಗೂ ವಹಿಸಿದ ಎಲ್ಲಾ ಜವಾಬ್ದಾರಿಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸಿ, ಅದನ್ನು ಸಾಬೀತು ಪಡಿಸಿದ್ದೇನೆ ಎಂದು…

1 hour ago