ಹುಡುಗ, ಹುಡುಗಿ ಸುತ್ತ ಹಲವು ಚಿತ್ರಗಳು ಬಂದಿವೆ. ಅವರಿಬ್ಬರ ಕಥೆಯನ್ನು ಪರಿಸರದ ಹಿನ್ನೆಲೆಯಲ್ಲಿ ಹೇಳುವ ಪ್ರಯತ್ನವನ್ನು ಹೊಸ ಚಿತ್ರವೊಂದರಲ್ಲಿ ಮಾಡಲಾಗಿದೆ. ಅದೇ ‘ಸೋಲ್ ಮೇಟ್ಸ್’. ಈ ಚಿತ್ರವನ್ನು ಶಂಕರ್ ಪಿ.ವಿ ನಿರ್ದೇಶಿಸುವುದರ ಜೊತೆಗೆ ನಿರ್ಮಾಣವನ್ನೂ ಮಾಡಿದ್ದಾರೆ.
ಈ ಚಿತ್ರಕ್ಕೆ ಹಂಸಲೇಖ ಸಾಹಿತ್ಯ ಮತ್ತು ಸಂಗೀತವನ್ನು ಸಂಯೋಜಿಸಿದ್ದು, ಈ ಪೈಕಿ ಮೊದಲ ಹಾಡು ಇತ್ತೀಚೆಗೆ ಬಿಡುಗಡೆಯಾಗಿದೆ. ‘ಕಿಲಕಿಲ…’ ಎಂದು ಸಾಗುವ ಈ ಹಾಡಿಗೆ ಅನಿರುದ್ಧ್ ಶಾಸ್ತ್ರಿ, ಅಂಕಿತಾ ಕುಂಡು ಧನಿಯಾಗಿದ್ದಾರೆ. ಚಿತ್ರದಲ್ಲಿ ಶ್ರೀಜಿತ್ ಸೂರ್ಯ, ಪ್ರಸನ್ನ ಶೆಟ್ಟಿ, ಯಶ್ವಿಕಾ ನಿಷ್ಕಲ, ರಜನಿ, ಯಶ್ ಶೆಟ್ಟಿ, ಶರತ್ ಲೋಹಿತಾಶ್ವ, ಅರವಿಂದ್ ರಾವ್, ಅರುಣಾ ಬಾಲರಾಜ್, ನವೀನ್ ಡಿ ಪಡೀಲ್ ಮುಂತಾದವರು ನಟಿಸಿದ್ದಾರೆ.
‘ಸೋಲ್ ಮೇಟ್ಸ್’ ಕುರಿತು ಮಾತನಾಡುವ ನಿರ್ದೇಶಕ ಶಂಕರ್ ಪಿ.ವಿ, ‘ನನಗೆ ಚಿಕ್ಕ ವಯಸ್ಸಿನಿಂದ ಸಿನಿಮಾ ಹುಚ್ಚು. ನಾನು ಮೊದಲಿಗೆ ನೋಡಿದ ಸಿನಿಮಾ ಅಂದ್ರೆ ಅದು ‘ಪುಟ್ನಂಜ. ಅಲ್ಲಿಂದ ನನ್ನ ಮತ್ತು ಹಂಸಲೇಖ ಅವರ ನಂಟು ಬೆಳೆಯಿತು ಎಂಬುದು ನನ್ನ ನಂಬಿಕೆ.
ನನ್ನ ಮೊದಲ ಸಿನಿಮಾಗೆ ಅವರೇ ಸಂಗೀತ ಸಂಯೋಜಿಸಬೇಕು ಎಂಬುದು ನನ್ನ ಆಸೆಯಾಗಿತ್ತು. ಈ ಚಿತ್ರಕ್ಕೆ ಅವರು ಐದು ಹಾಡುಗಳನ್ನು ಸಂಯೋಜಿಸಿದ್ದಾರೆ. ಚಿತ್ರದ ಕೆಲಸಗಳು ಮುಗಿಯುತ್ತಾ ಬಂದಿದ್ದು, ಸೆಪ್ಟೆಂಬರ್ ತಿಂಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ’ ಎಂದರು,
ಪರಿಸರದ ಹಿನ್ನೆಲೆಯಲ್ಲಿ ಸಾಗುವ ಕಥೆ ಇದು ಎನ್ನುವ ಶಂಕರ್, ‘ನಾನು ಈ ಹಿಂದೆ ಯಾರ ಜೊತೆಗೆ ಕೆಲಸ ಮಾಡಿಲ್ಲ. ಹುಡುಗ, ಹುಡುಗಿ ಪರಿಸರವನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬುದು ಈ ಚಿತ್ರದ ಮೂಲಕ ಹೇಳಿದ್ದೇವೆ. ಪರಿಸರದ ಹಿನ್ನೆಲೆಯಲ್ಲಿ ಒಂದು ಪ್ರೇಮ ಮತ್ತು ಕೌಟುಂಬಿಕ ಕಥೆ ಹೇಳುವುದಕ್ಕೆ ಹೊರಟಿದ್ದೇವೆ.
ಕನ್ನಡದಲ್ಲೇ ಒಂದು ಶೀರ್ಷಿಕೆ ಇಡುವುದಕ್ಕೆ ಬಹಳ ಯೋಚನೆ ಮಾಡಿದೆವು. ಆದರೆ, ಸೂಕ್ತ ಪದಗಳು ಸಿಗಲಿಲ್ಲ. ಇವತ್ತಿನ ತಲೆಮಾರಿನವರಿಗೆ ಆಕರ್ಷಿಸುವಂತಹ ಶೀರ್ಷಿಕೆ ಇಡಬೇಕು ಎಂಬ ಕಾರಣಕ್ಕೆ ಈ ಶೀರ್ಷಿಕೆ ಇಟ್ಟಿದ್ದೇವೆ’ ಎಂದರು.
ಶ್ರೀಜಿತ್ ಶೆಟ್ಟಿ ಈ ಚಿತರದಲ್ಲಿ ಸತ್ಯ ಸತ್ಯ ಎಂಬ ಪಾತ್ರವನ್ನು ಮಾಡಿದ್ದಾರಂತೆ. ‘ಹೆಸರಿಗೆ ತಕ್ಕಂತೆ ಆತ ಸತ್ಯವಂತನೇ ಅಲ್ಲದೆ ಮಹಾ ಪರಿಸರ ಪ್ರೇಮಿ. ಇಲ್ಲಿ ‘ಸೋಲ್ ಮೇಟ್ಸ್’ ಅಂದ್ರೆ ಪರಿಸರ ಮತ್ತು ಅವನ ಹುಡುಗಿ. ಇಬ್ಬರೂ ಅವನ ‘ಸೋಲ್ ಮೇಟ್ಸ್’ಗಳಾಗಿ ಇರುತ್ತಾರೆ. ಹಾಗಾಗಿ, ಈ ಶೀರ್ಷಿಕೆ ಚಿತ್ರಕ್ಕೆ ಸರಿಯಾಗಿ ಹೊಂದುತ್ತದೆ’ ಎಂದರು.
‘ಗನ್ಸ್ ಆ್ಯಂಡ್ ರೋಸಸ್’ ಚಿತ್ರದಲ್ಲಿ ನಟಿಸಿದ್ದ ನಿಷ್ಕಲಾ, ಇಲ್ಲಿ ಮೃದು ಮನಸ್ಸಿನ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ. ‘ಈ ಚಿತ್ರದಲ್ಲಿ ಭೂಮಿ ಎಂಬ ಮೃದು ಮನಸಿನ ಹುಡುಗಿ ಪಾತ್ರವನ್ನು ಮಾಡಿದ್ದೇನೆ. ಈ ಚಿತ್ರದ ಪ್ರತಿಯೊಂದು ಹಾಡು ಬಹಳ ಚೆನ್ನಾಗಿ ಮೂಡಿ ಬಂದಿದೆ’ ಎಂದರು.
ಮೈಸೂರು : ವಿದ್ಯಾರ್ಥಿಗಳು ಮಾದಕ ವಸ್ತುಗಳಿಂದ ದೂರವಿದ್ದು, ಶಿಕ್ಷಣಕ್ಕೆ ಹೆಚ್ಚು ಮಹತ್ವ ಕೊಟ್ಟು ಉತ್ತಮ ಭವಿಷ್ಯ ರೂಪಿಸಿಕೊಳ್ಳಿ ಎಂದು ನಗರ…
ಟೆಹ್ರಾನ್ : ಅಮೆರಿಕ-ಇಸ್ರೇಲ್-ಇರಾನ್ ನಡುವಿನ ಘರ್ಷಣೆ 11ನೇ ದಿನಕ್ಕೆ ಕಾಲಿಟ್ಟಿದೆ. ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಪಡೆಗಳು…
ಜೆರುಸಲೆಮ್ : ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಇರಾನ್ ವಿರುದ್ಧದ ತಮ್ಮ ದೇಶದ ಸೈನಿಕ ಕಾರ್ಯಾಚರಣೆ ಇನ್ನೂ ಮುಗಿದಿಲ್ಲ…
ಬೆಂಗಳೂರು : ರಾಜ್ಯದ ಗ್ರಾಮಾಂತರ ಪ್ರದೇಶಗಳಲ್ಲಿ ಬೇಸಿಗೆಯಲ್ಲಿ ಎದುರಾಗಲಿರುವ ಕುಡಿಯುವ ನೀರಿನ ಅಭಾವವನ್ನು ಎದುರಿಸಲು ಮೊದಲ ಆದ್ಯತೆಯಾಗಿ ಖಾಸಗಿ ಬೋರ್‌ವೆಲ್‌ಗಳನ್ನು…
ಹೊಸದಿಲ್ಲಿ : ಇರಾನ್-ಇಸ್ರೇಲ್-ಅಮೆರಿಕಾ ನಡುವೆ ಹೆಚ್ಚುತ್ತಿರುವ ಸಂಘರ್ಷದ ಪರಿಣಾಮವಾಗಿ ದೇಶದಲ್ಲಿ ಎಲ್‌ಪಿಜಿ (ಅಡುಗೆ ಗ್ಯಾಸ್) ಸರಬರಾಜುವಿನಲ್ಲಿ ಸಂಕಷ್ಟ ಉಂಟಾಗಿರುವ ಹಿನ್ನೆಲೆಯಲ್ಲಿ…
ಚಾಮರಾಜನಗರ: ಅಡುಗೆ ಅನಿಲ ಸೋರಿಕೆಯಾಗಿ ಅಗ್ನಿ ಅವಘಡ ಸಂಭವಿಸಿದ ಪರಿಣಾಮ ದಂಪತಿಗೆ ಗಂಭೀರ ಗಾಯಗಳಾಗಿರುವ ಘಟನೆ ಚಾಮರಾಜನಗರದ ರೈಲ್ವೆ ಬಡಾವಣೆಯಲ್ಲಿ…