ಮನರಂಜನೆ

ವಿಜಯ್‍ ಕೊನೆಯ ಚಿತ್ರಕ್ಕೆ ವಿಲನ್‍ ಆದ ಬಾಬಿ ಡಿಯೋಲ್‍

ತಮಿಳು ನಟ ‘ಇಳಯ ದಳಪತಿ’ ವಿಜಯ್‍ ಅಭಿನಯದಲ್ಲಿ ಕನ್ನಡದ ಕೆವಿಎನ್‍ ಪ್ರೊಡಕ್ಷನ್ಸ್ ಸಂಸ್ಥೆಯ ವೆಂಕಟ್ ‍ಕೆ. ನಾರಾಯಣ್‍ ಒಂದು ಚಿತ್ರ ನಿರ್ಮಿಸುತ್ತಿರುವುದು ಗೊತ್ತೇ ಇದೆ. ಇತ್ತೀಚೆಗಷ್ಟೇ ಚಿತ್ರದ ಘೋಷಣೆಯೂ ಆಗಿದೆ. ಇದೀಗ ಈ ಚಿತ್ರದಲ್ಲಿ ಬಾಲಿವುಡ್‍ ನಟ ಬಾಬ್ಬಿ ಡಿಯೋಲ್‍ ಖಳನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಇದೆ.

ಬಾಬ್ಬಿ ಡಿಯೋಲ್‍ ಕಳೆದ 29 ವರ್ಷಗಳಿಂದ ಚಿತ್ರರಂಗದಲ್ಲಿದ್ದಾರೆ. 1995ರಲ್ಲಿ ಬಿಡುಗಡೆಯಾದ ‘ಬರ್ಸಾತ್‍’ ಚಿತ್ರದ ಮೂಲಕ ಹೀರೋ ಆದ ಅವರು, ಮುಂದಿನ ಒಂದು ದಶಕ ಸತತವಾಗಿ ಚಿತ್ರಗಳಲ್ಲಿ ನಾಯಕನಾಗಿ ಕಾಣಿಸಿಕೊಂಡರು. ಹಲವು ಚಿತ್ರಗಳ ಸೋಲು ಮತ್ತು ಮಾಸಿದ ಜನಪ್ರಿಯತೆಯಿಂದಾಗಿ ಕ್ರಮೇಣ ಅವರು ನಟಿಸಿದ ಚಿತ್ರಗಳ ಸಂಖ್ಯೆ ಕಡಿಮೆಯಾಯಿತು.

ಹೀಗಿರುವಾಗಲೇ, ಕಳೆದ ವರ್ಷ ಬಿಡುಗಡೆಯಾದ ರಣಬೀರ್‍ ಕಪೂರ್‍ ಅಭಿನಯದ ‘ಅನಿಮಲ್‍’ ಚಿತ್ರದಲ್ಲಿ ಅವರು ಮೊದಲ ಬಾರಿಗೆ ವಿಲನ್‍ ಆಗಿ ಕಾಣಿಸಿಕೊಂಡರು. ಈ ಚಿತ್ರ ದೊಡ್ಡ ಯಶಸ್ಸು ಪಡೆಯುವುದರ ಜೊತೆಗೆ, ಅದರಲ್ಲಿನ ಅವರ ಅಬ್ರಾರ್‍ ಪಾತ್ರ ಹಿಟ್ಟ ಆಯಿತು. ಅಲ್ಲಿಂದ ಬಾಬ್ಬಿ ಬೇಡಿಕೆಯ ನಟನಾಗಿದ್ದಾರೆ. ತೆಲುಗಿನ ‘ಹರಿಹರ ವೀರಮಲ್ಲು’ ಚಿತ್ರದಲ್ಲಿ ನಟಿಸಿದ ಅವರು, ತಮಿಳಿನ ‘ಕಂಗುವಾ’ದಲ್ಲೂ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡರು. ಈಗ ವಿಜಯ್‍ ಅಭಿನಯದ 69ನೇ ಚಿತ್ರದಲ್ಲೂ ಅವರು ವಿಲನ್‍ ಪಾತ್ರ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಹೆಸರಿಡದ ಚಿತ್ರವನ್ನು ಎಚ್‍. ವಿನೋದ್‍ ನಿರ್ದೇಶನ ಮಾಡುತ್ತಿದ್ದಾರೆ. 500 ಕೋಟಿಗೂ ಅಧಿಕ ಬಜೆಟ್ ನಲ್ಲಿ ಈ ಚಿತ್ರ ತಯಾರಾಗುತ್ತಿದ್ದು, ವಿಜಯ್ ಚಿತ್ರಬದುಕಿನ ಕೊನೆಯ ಚಿತ್ರವಾಗಲಿದೆ ಎಂದು ಹೇಳಲಾಗುತ್ತಿದೆ. ವಿಜಯ್‍ ಈಗಾಗಲೇ ‘ತಮಿಳಿಗ ವೆಟ್ರಿ ಕಳಗಂ’ ಎಂಬ ರಾಜಕೀಯ ಪಕ್ಷವೊಂದನ್ನು ಸ್ಥಾಪಿಸಿದ್ದು, ಈ ಚಿತ್ರದ ನಂತರ ಅವರು ಪೂರ್ಣಪ್ರಮಾಣವಾಗಿ ರಾಜಕೀಯದಲ್ಲಿ ತೊಡಗಿಸಿಕೊಳ್ಳಲಿದ್ದಾರಂತೆ. ವಿಜಯ್ ರಾಜಕೀಯ ಜೀವನಕ್ಕೆ ಹತ್ತಿರವಿರುವ ಕಥೆ ಈ ಚಿತ್ರದಲ್ಲಿದ್ದು, ವಿಜಯ್ ರಾಜಕೀಯ ಭವಿಷ್ಯಕ್ಕೆ ಈ ಚಿತ್ರ ಭವ್ಯ ಮೆಟ್ಟಿಲಾಗಲಿದೆ ಎಂಬ ಸುದ್ದಿ ಇದೆ.

ಕೆವಿಎನ್‍ ಪ್ರೊಡಕ್ಷನ್ಸ್ ಸಂಸ್ಥೆಯು ಸದ್ಯ ಧ್ರುವ ಸರ್ಜಾ ಅಭಿನಯದ ‘ಕೆಡಿ – ದಿ ಡೆವಿಲ್‍’ ಮತ್ತು ಯಶ್‍ ಅಭಿನಯದ ‘ಟಾಕ್ಸಿಕ್‍’ ಚಿತ್ರಗಳನ್ನು ನಿರ್ಮಿಸುತ್ತಿದೆ. ಇವೆರಡೂ ಚಿತ್ರಗಳು ಪ್ಯಾನ್‍ ಇಂಡಿಯಾ ಚಿತ್ರಗಳಾಗಿದ್ದು, ಇದರ ಜೊತೆಗೆ ತಮಿಳಿನಲ್ಲಿ ದೊಡ್ಡ ಬಜೆಟ್‍ನ ಚಿತ್ರವೊಂದನ್ನು ನಿರ್ಮಿಸುವುದಕ್ಕೆ ಸಜ್ಜಾಗಿದೆ.

ಭೂಮಿಕಾ

Recent Posts

ಓದುಗರ ಪತ್ರ: ಜನರ ಹಿತ ಕಾಯಲಿ!

ಜನರ ಹಿತ ಕಾಯಲಿ! ನಕಲಿ ವೈದ್ಯರು, ಕಲಬೆರಿಕೆ ಔಷಧದ ಹಾವಳಿಯಿಂದ ಜನ ಬೇಸ್ತುಬಿದ್ದಿರುವಾಗ ನೈಜ ದರಕ್ಕಿಂತ ಅತ್ಯಧಿಕ ದರಕ್ಕೆ ಔಷಧಿ ಮಾರಾಟ…

17 mins ago

ಓದುಗರ ಪತ್ರ: ಜಾಗೃತಿ, ನಿಯಂತ್ರಣ ಇರಬೇಕು

ಆಹಾರದಲ್ಲಿ ಬಳಸುವ ಉಪ್ಪು, ಸಕ್ಕರೆ ಬಳಕೆ ಪ್ರಮಾಣಕ್ಕೆ ಕಡಿವಾಣ ಹಾಕಲು ಅರೋಗ್ಯ ಇಲಾಖೆ ಚಿಂತನೆ ನಡೆಸಿದೆ ಎಂದು ವರದಿಯಾಗಿದೆ. ಹಾಗೆಯೇ…

20 mins ago

ಓದುಗರ ಪತ್ರ: ಚಾ.ನಗರ ಜಿಲ್ಲೆಗೆ ವಿಶೇಷ ಅನುದಾನ ನೀಡಲು ಮುಖ್ಯಮಂತ್ರಿಗಳು ಕ್ರಮ ಕೈಗೊಳ್ಳಲಿ

ಚಾಮರಾಜನಗರ ಜಿಯ ಕೊಳ್ಳೇಗಾಲ ಮತ್ತು ಹನೂರು ವಿಧಾನಸಭಾ ಕ್ಷೇತ್ರಗಳಲ್ಲಿ ಸುಮಾರು ರೂ.೫೦೦ ಕೋಟಿಗೂ ಅಧಿಕ ಮೊತ್ತದ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ…

22 mins ago

ಆಯಾ ಕೆಲಸ ಮಾಡಿ ಮಕ್ಕಳನ್ನು ಮಾಸ್ಟರ್ಸ್‌ ಮಾಡಿದ ಸತ್ಯಮ್ಮ

ಪಂಜುಗಂಗೊಳ್ಳಿ ಅವರ ವಾರದ ಅಂಕಣ  ಮಕ್ಕಳು ದೊಡ್ಡ ಹುದ್ದೆಗಳಿಗೆ ಹೋದರೂ ತನ್ನ ಕಾಯಕ ಮುಂದುವರಿಸಿರುವ ‘ಮಹಾತಾಯಿ’ ತೆಲಂಗಾಣದ ಸಂಗಾರೆಡ್ಡಿಯ ರಾಕೇಶ್…

26 mins ago

ಮಂಜಿನ ನಗರಿಯಲ್ಲಿ ರಸ್ತೆಗಳ ದುಸ್ಥಿತಿ

ಪುನೀತ್ ಮಡಿಕೇರಿ ಮಡಿಕೇರಿ ದಸರಾ ಸಮೀಪಿಸುತ್ತಿದ್ದರೂ ಗುಂಡಿಗಳಿಗೆ ಸಿಗದ ಮುಕ್ತಿ ಮಡಿಕೇರಿ ದಸರಾ ಜನೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಆದರೆ, ದಸರಾ…

34 mins ago

ಅ.೧, ೨ರಂದು ಶ್ರೀ ಗುರುಮಲ್ಲೇಶ್ವರ ದಾಸೋಹ ಭವನ ಉದ್ಘಾಟನೆ

ಮಹೇಂದ್ರ ಹಸಗೂಲಿ ದೇಪಾಪುರದಲ್ಲಿ ಗುಡಿಸಲಿನಲ್ಲಿ ಆರಂಭವಾದ ಅನ್ನ ದಾಸೋಹಕ್ಕೆ ಈಗ ದಾಸೋಹ ಭವನದ ರೂಪ ಗುಂಡ್ಲುಪೇಟೆ: ಸಣ್ಣ ಗುಡಿಸಲಿನಲ್ಲಿ ಆರಂಭಗೊಂಡ…

39 mins ago