ಮನರಂಜನೆ

ಸ್ವಾತಂತ್ರ್ಯ ದಿನಕ್ಕಿಲ್ಲ ‘ಭೈರತಿ ರಣಗಲ್‍’; ಹೊಸ ದಿನಾಂಕ ಸದ್ಯದಲ್ಲೇ ಘೋಷಣೆ

ಶಿವರಾಜಕುಮಾರ್‍ ಅಭಿನಯದ ಬಹುನಿರೀಕ್ಷಿತ ಚಿತ್ರವಾದ ‘ಭೈರತಿ ರಣಗಲ್‍’, ಸ್ವಾತಂತ್ರ್ಯ ದಿನದಂದು ಬಿಡುಗಡೆ ಆಗುವುದು ಸಂಶಯ ಎಂಬ ಮಾತು ಕೆಲವು ದಿನಗಳಿಂದ ಕೇಳಿ ಬರುತ್ತಲೇ ಇತ್ತು. ಆದರೆ, ಚಿತ್ರತಂಡದವರು ಮಾತ್ರ ಈ ಕುರಿತು ಯಾವುದೇ ಘೋಷಣೆ ಮಾಡಿರಲಿಲ್ಲ. ಈಗ ಚಿತ್ರ ಮುಂದಕ್ಕೆ ಹೋಗಿರುವ ವಿಷಯವನ್ನು ಸ್ವತಃ ಶಿವರಾಜಕುಮಾರ್ ಸ್ಪಷ್ಟಪಡಿಸಿದ್ದಾರೆ.

‘ಭೈರತಿ ರಣಗಲ್‍’ ಚಿತ್ರವು ಆಗಸ್ಟ್ 15ರಂದು ಬಿಡಗುಡೆಯಾಗಲಿದೆ ಎಂದು ಚಿತ್ರತಂಡ ಕೆಲವು ತಿಂಗಳುಗಳ ಹಿಂದೆಯೇ ಘೋಷಿಸಿತ್ತು. ಆ ವಾರ ಲಾಂಗ್‍ ವೀಕೆಂಡ್‍ ಇರುವುದರಿಂದ ಮತ್ತು ಸತತವಾಗಿ ರಜೆಗಳು ಸಿಗುವ ಕಾರಣ, ಅಂದು ಚಿತ್ರ ಬಿಡುಗಡೆ ಮಾಡುವುದಕ್ಕೆ ಬರೀ ಕನ್ನಡವಷ್ಟೇ ಅಲ್ಲ, ಬೇರೆ ಭಾಷೆಗಳ ಚಿತ್ರತಂಡಗಳು ಪೈಪೋಟಿ ನಡೆಸಿದ್ದವು. ಆಗಸ್ಟ್ 15ರ ಗುರುವಾರ ಸ್ವಾತಂತ್ರ್ಯ ದಿನಾಚರಣೆಯಾದರೆ, ಆಗಸ್ಟ್ 16ರ ಶುಕ್ರವಾರ ವರಮಹಾಲಕ್ಷ್ಮೀ ಹಬ್ಬವಿದೆ. ಇನ್ನು, ಶನಿವಾರ ಮತ್ತು ಭಾನುವಾರ ರಜೆಗಳಿವೆ.

ಹಾಗಾಗಿ, ಅಂದು ಚಿತ್ರ ಬಿಡುಗಡೆ ಮಾಡುವುದಕ್ಕೆ ಬರೀ ಕನ್ನಡವಷ್ಟೇ ಅಲ್ಲ, ಬೇರೆ ಭಾಷೆಗಳ ನಿರೀಕ್ಷಿತ ಚಿತ್ರಗಳು ಪೈಪೋಟಿ ನಡೆಸಿದ್ದವು. ಅಂದು ರೋಹಿತ್‍ ಶೆಟ್ಟಿ ನಿರ್ದೇಶನದ, ಅಜಯ್‍ ದೇವಗನ್‍ ಅಭಿನಯದ ‘ಸಿಂಗಂ ಅಗೇನ್‍’, ಅಲ್ಲು ಅರ್ಜುನ್‍ ಅಭಿನಯದ ಬಹುನಿರೀಕ್ಷೆಯ ಚಿತ್ರವಾದ ‘ಪುಷ್ಪ 2’ ಮತ್ತು ‘ಭೈರತಿ ರಣಗಲ್‍’ ಚಿತ್ರಗಳನ್ನು ಬಿಡುಗಡೆ ಮಾಡುವುದಾಗಿ ಆ ಚಿತ್ರತಂಡಗಳು ಘೋಷಿಸಿದ್ದವು.

ಆ ನಂತರ ‘ಸಿಂಗಂ ಅಗೇನ್‍’ ಅಂದುಕೊಂಡಂತೆಯೇ ಬಿಡುಗಡೆ ಆಗುವುದಿಲ್ಲ ಎಂದು ಹೇಳಲಾಯ್ತು. ಆ ನಂತರ ‘ಪುಷ್ಪ 2’ ಚಿತ್ರ ಸಹ ಡಿಸೆಂಬರ್‍ ಮೊದಲ ವಾರಕ್ಕೆ ಮುಂದೂಡಲಾಯ್ತು. ಈಗ ‘ಭೈರತಿ ರಣಗಲ್‍’ ಸಹ ಮುಂದಕ್ಕೆ ಹೋಗಿದೆಯಂತೆ.

ಈ ಕುರಿತು ಮಾತನಾಡಿರುವ ಶಿವರಾಜಕುಮಾರ್‍, ‘ಚಿತ್ರದ ಕೆಲಸಗಳು ಇನ್ನೂ ನಡೆಯುತ್ತಿರುವುದರಿಂದ ಮತ್ತು ಆಗಸ್ಟ್ 15ರ ಹೊತ್ತಿಗೆ ಮುಗಿಯುವುದು ಸಂಶಯವಿರುವುದರಿಂದ ಚಿತ್ರವನ್ನು ಎರಡ್ಮೂರು ವಾರ ಮುಂದಕ್ಕೆ ಹೋಗಲಿದೆ. ಸದ್ಯಕ್ಕೆ ಹೊಸ ದಿನಾಂಕ ಇನ್ನೂ ಘೋಷಣೆಯಾಗಿಲ್ಲ. ಸಮಯ ನೋಡಿಕೊಂಡು ತಿಳಿಸುತ್ತೇವೆ’ ಎಂದು ಹೇಳಿದ್ದಾರೆ.

‘ಭೈರತಿ ರಣಗಲ್‍’ ಚಿತ್ರೀಕರಣ ಹಾಗೂ ಬೇರೆ ಕೆಲಸಗಳು ಮುಗಿದಿಲ್ಲ. ಈಗಾಗಲೇ ಅರ್ಧಕ್ಕೂ ಹೆಚ್ಚು ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ. ಈ ಮಧ್ಯೆ, ಶಿವರಾಜಕುಮಾರ್‍ ತಮ್ಮ ಪತ್ನಿ ಗೀತಾ ಶಿವರಾಜಕುಮಾರ್‍ ಅವರ ಚುನಾವಣಾ ಪ್ರಚಾರಕ್ಕೆ ಶಿವಮೊಗ್ಗದಲ್ಲಿ ಬೀಡುಬಿಟ್ಟಿದ್ದರಿಂದ, ಅವರ ಭಾಗದ ಚಿತ್ರೀಕರಣ ಮುಗಿದಿಲ್ಲ. ಹಾಗಾಗಿ, ಚಿತ್ರವನ್ನು ಮುಂದೂಡುವ ಯೋಚನೆಗೆ ಚಿತ್ರತಂಡ ಬಂದಿದೆ.

‘ಭೈರತಿ ರಣಗಲ್‍’ ಮುಂದಕ್ಕೆ ಹೋಗಿರುವುದರಿಂದ, ಕಣದಲ್ಲಿ ಎರಡು ಚಿತ್ರಗಳು ಮಾತ್ರ ಉಳಿದಿವೆ. ಸ್ವಾತಂತ್ರ್ಯದ ದಿನ ಗಣೇಶ್‍ ಅಭಿನಯದ ‘ಕೃಷ್ಣಂ ಪ್ರಣಯ ಸಖಿ’ ಮತ್ತು ಇಂದ್ರಜಿತ್‍ ಲಂಕೇಶ್‍ ನಿರ್ದೇಶನದ ‘ಗೌರಿ’ ಚಿತ್ರಗಳು ಮಾತ್ರ ಬಿಡುಗಡೆ ಆಗಲಿವೆ.

ಭೂಮಿಕಾ

Recent Posts

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

1 hour ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

2 hours ago

ಮುಡಾ: ಇಡಿ ದಾಳಿಗೆ ರಾಜಕೀಯ ಕಾರಣವಲ್ಲ; ಅಶೋಕ್

ಜಾರಿ ನಿರ್ದೇಶನಾಲಯದ ದಾಳಿಗೆ ರಾಜಕೀಯ ಕಾರಣವಲ್ಲ, 3-4 ಸಾವಿರ ಕೋಟಿ ರೂ. ಅಕ್ರಮ ನಡೆದಿದೆ ಎಂದು ಹೇಳಿದ್ದೇ ಕಾಂಗ್ರೆಸ್‌ನವರು: ಪ್ರತಿಪಕ್ಷ…

2 hours ago

BJP ಟಿಕೆಟ್‌ ವಂಚನೆ: ಆರೋಪ ತಳ್ಳಿ ಹಾಕಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ

ನವದೆಹಲಿ: ನನಗೆ ಸಹೋದರಿಯೇ ಇಲ್ಲ ಮತ್ತು ಗೋಪಾಲ್ ಜೋಶಿ ಮೇಲಿನ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಕೇಂದ್ರ ಸಚಿವ…

2 hours ago

ಮಂಡ್ಯ ಟೂ ಇಂಡಿಯಾ: ಬೃಹತ್‌ ಉದ್ಯೋಗ ಮೇಳಕ್ಕೆ ಮೊದಲ ದಿನ ಅಭೂತಪೂರ್ವ ಸ್ಪಂದನೆ

ಮಂಡ್ಯ ಟೂ ಇಂಡಿಯಾ; ಸಕ್ಕರೆ ನಾಡಿನಲ್ಲಿ 2 ದಿನಗಳ ಬೃಹತ್ ಉದ್ಯೋಗ ಮೇಳ 150ಕ್ಕೂ ಹೆಚ್ಚು ಕಂಪನಿಗಳ ಭಾಗಿ, ಸಾವಿರಾರು…

3 hours ago

ಮುಡಾ ಮೇಲೆ ಇಡಿ ದಾಳಿ: ಸಿಬಿಐ ತನಿಖೆ ನಡೆಸುವರೆಗೂ ಹೋರಾಟ ಮುಂದುವರಿಕೆ: ಸ್ನೇಹಮಯಿ ಕೃಷ್ಣ

ಮೈಸೂರು: ಮುಡಾ ಮೇಲಿನ ಇಡಿ ಕಾರ್ಯಾಚರಣೆ ಕೇವಲ ಸಿಎಂ ಸಿದ್ದರಾಮಯ್ಯ ಅವರ ಕುಟುಂಬದವರ ಪ್ರಕರಣವಲ್ಲ. ಸಂಪೂರ್ಣ ಮುಡಾ ಅಕ್ರಮದ ಬಗ್ಗೆ…

3 hours ago