ಮನರಂಜನೆ

‘ಬ್ಯಾಂಕ್‍ ಆಫ್‍ ಭಾಗ್ಯಲಕ್ಷ್ಮಿ’ ಒಂದು ವಾರ ಮುಂದಕ್ಕೆ: ದಾಖಲೆ ಬರೆಯಲಿಲ್ಲ ಬೃಂದಾ

ಈ ವಾರ ಬಿಡುಗಡೆಯಾದ ಆರು ಚಿತ್ರಗಳ ಜೊತೆಗೆ ದೀಕ್ಷಿತ್‍ ಶೆಟ್ಟಿ ಮತ್ತು ಬೃಂದಾ ಆಚಾರ್ಯ ಅಭಿನಯದ ‘ಬ್ಯಾಂಕ್‍ ಆಫ್‍ ಭಾಗ್ಯಲಕ್ಷ್ಮಿ’ ಚಿತ್ರ ಸಹ ಬಿಡುಗಡೆಯಾಗಬೇಕಿತ್ತು. ಆದರೆ, ಚಿತ್ರವು ಒಂದು ವಾರಕ್ಕೆ ಮುಂದಕ್ಕೆ ಹೋಗಿದ್ದು, ನವೆಂಬರ್ 27ರಂದು ಚಿತ್ರ ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ.

ಹೌದು, ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ‘ಬ್ಯಾಂಕ್‍ ಆಫ್‍ ಭಾಗ್ಯಲಕ್ಷ್ಮಿ’ ಚಿತ್ರವು ನ.21ರಂದು ಬಿಡುಗಡೆಯಾಗಬೇಕಿತ್ತು. ನಟಿ ಬೃಂದಾ ಆಚಾರ್ಯ ತಮ್ಮ ಎರಡು ಚಿತ್ರಗಳು (‘ಬ್ಯಾಂಕ್‍ ಆಫ್‍ ಭಾಗ್ಯಲಕ್ಷ್ಮಿ’ ಮತ್ತು ‘ಮಾರುತ’) ಒಂದೇ ದಿನ ಬಿಡುಗಡೆಯಾಗುತ್ತದೆ ಎಂದು ಖುಷಿಯಿಂದ ಹೇಳಿಕೊಂಡಿದ್ದರು. ಇದು ತಮ್ಮ ವೃತ್ತಿಜೀವನದಲ್ಲೇ ಒಂದು ದಾಖಲೆ ಆಗಲಿದೆ ಎಂದು ಖುಷಿಪಟ್ಟಿದ್ದರು. ಆದರೆ, ತಾಂತ್ರಿಕ ಕಾರಣಗಳಿಂದ ಚಿತ್ರ ಒಂದು ವಾರ ಮುಂದಕ್ಕೆ ಹೋಗಿದೆ. ನ.21ರ ಬದಲು ನ.27ರಂದು ಬಿಡುಗಡೆಯಾಗುತ್ತಿದೆ.

ಇದನ್ನು ಓದಿ: ನವೆಂಬರ್ 21ರಂದು ಎರಡು ಚಿತ್ರಗಳ ಜೊತೆಗೆ ಬರ್ತಿದ್ದಾರೆ ಬೃಂದಾ ಆಚಾರ್ಯ

ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ಸಿದ್ಧವಾಗಿರುವ ಈ ಚಿತ್ರವನ್ನು ‘ರಂಗಿ ತರಂಗ’, ‘ಅವನೇ ಶ್ರೀಮನ್ನಾರಾಯಣ’ ಮುಂತಾದ ಚಿತ್ರಗಳನ್ನು ನಿರ್ಮಿಸಿರುವ ಎಚ್.ಕೆ. ಪ್ರಕಾಶ್ ನಿರ್ಮಿಸಿದ್ದು, ಅಭಿಷೇಕ್‍ ಎಂ ನಿರ್ದೇಶನ ಮಾಡಿದ್ದಾರೆ. ಅಭಿಷೇಕ್‍ ಇದಕ್ಕೂ ಮೊದಲು ‘ಸಿಂಪಲ್’ ಸುನಿ ಅವರ ಜೊತೆಗೆ ಸಹ ನಿರ್ದೇಶಕನಾಗಿ ಕೆಲಸ ಮಾಡಿದ್ದವರು. ಜೊತೆಗೆ ರಕ್ಷಿತ್ ಶೆಟ್ಟಿ ಹಾಗೂ ಸಚಿನ್ ಶೆಟ್ಟಿ ಸೇರಿ ಪಿನಾಕ ಎಂಬ VFX ಸ್ಟುಡಿಯೋ ಸಹ ನಡೆಸುತ್ತಿದ್ದಾರೆ. ಈಗ ‘ಬ್ಯಾಂಕ್‍ ಆಫ್‍ ಭಾಗ್ಯಲಕ್ಷ್ಮೀ’ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ.

‘ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ’ ಚಿತ್ರದಲ್ಲಿ ದೀಕ್ಷಿತ್‍ಗೆ ಮತ್ತು ಬೃಂದಾ ಆಚಾರ್ಯ ಜೊತೆಗೆ, ಉಷಾ ಭಂಡಾರಿ, ಗೋಪಾಲಕೃಷ್ಣ ದೇಶಪಾಂಡೆ, ಶ್ರೀವತ್ಸ, ಅಶ್ವಿನ್‍ ರಾವ್ ಪಲ್ಲಕ್ಕಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಜ್ಯೂಡಾ ಸ್ಯಾಂಡಿ ಸಂಗೀತ, ಅಭಿಷೇಕ್ ಜಿ ಕಾಸರಗೋಡು ಛಾಯಾಗ್ರಹಣವಿದೆ.

ಆಂದೋಲನ ಡೆಸ್ಕ್

Recent Posts

ಮಲಗಿದ್ದ ವ್ಯಕ್ತಿಗಳ ಮೇಲೆ ಕಾರು ಹರಿದ ಪ್ರಕರಣ: ಗಾಯಾಳು ರವಿಗೆ ಮುಂದುವರಿದ ಚಿಕಿತ್ಸೆ

ಪ್ರಶಾಂತ್‌ ಎನ್‌ ಮಲ್ಲಿಕ್‌  ಮೈಸೂರು: ಸುತ್ತೂರು ಜಾತ್ರೆ ವೇಳೆ ರಾತ್ರಿ ಗದ್ದೆಯಲ್ಲಿ ಮಲಗಿದ್ದ ವ್ಯಕ್ತಿಗಳ ಮೇಲೆ ಕಾರು ಹರಿದ ಪರಿಣಾಮ…

5 hours ago

ಕಾಫಿ ಮಳಿಗೆಯಲ್ಲಿದ್ದ ಹಣ ಕಳವು: ಆರೋಪಿ ಬಂಧನ

ಸಿದ್ದಾಪುರ: ವಿರಾಜಪೇಟೆ ರಸ್ತೆಯಲ್ಲಿರುವ ಎಸ್‌ವೈಎಸ್ ಕಾಫಿ ಅಂಗಡಿಯಲ್ಲಿ ನಡೆದ ನಗದು ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದಾಪುರ ಪೊಲೀಸರು ಕೇರಳ ಮೂಲದ…

6 hours ago

ಕಾಡಾನೆ ದಾಳಿ: ಅಪಾರ ಪ್ರಮಾಣದ ಬೆಳೆ ನಾಶ

ಮಹಾದೇಶ್‌ ಎಂ ಗೌಡ  ಹನೂರು: ತಾಲ್ಲೂಕಿನ ಕೆವಿಎನ್ ದೊಡ್ಡಿ ಗ್ರಾಮದ ಜಮೀನೊಂದರಲ್ಲಿ ಕಾಡಾನೆ ಲಗ್ಗೆ ಇಟ್ಟು ಅಪಾರ ಪ್ರಮಾಣದ ಬೆಳೆ…

6 hours ago

ಬೆಂಗಳೂರಿನಲ್ಲೇ ಐಪಿಎಲ್ ಉದ್ಘಾಟನಾ ಪಂದ್ಯ

ಬೆಂಗಳೂರು: ಕಾಲ್ತುಳಿತ ಪ್ರಕರಣದಿಂದಾಗಿ ಈ ಬಾರಿಯ ಬಹು ನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಪಂದ್ಯಗಳು ನಡುವುದೇ ಡೋಲಾಯಮಾನ ಸ್ಥಿತಿಯಲ್ಲಿರುವಾಗಲೇ ಉದ್ಘಾಟನಾ…

6 hours ago

ಪೌರಾಯುಕ್ತೆಗೆ ಧಮ್ಕಿ ಹಾಕಿದ್ದ ಪ್ರಕರಣ: ರಾಜೀವ್‌ ಗೌಡಗೆ ಹೈಕೋರ್ಟ್‌ ತರಾಟೆ

ಬೆಂಗಳೂರು: ಶಿಡ್ಲಘಟ್ಟ ಪೌರಾಯುಕ್ತೆ ಅಮೃತಾ ಅವರಿಗೆ ಜೀವ ಬೆದರಿಕೆ ಹಾಕಿದ್ದ ಪ್ರಕರಣ ಸಂಬಂಧ ಕಾಂಗ್ರೆಸ್‌ ಮುಖಂಡ ರಾಜೀವ್‌ಗೌಡಗೆ ಹೈಕೋರ್ಟ್‌ ತೀವ್ರ…

6 hours ago

ರೇಣುಕಾಸ್ವಾಮಿ ಕೊಲೆ ಪ್ರಕರಣ: ಪವಿತ್ರಾಗೌಡಗೆ ವಾರಕ್ಕೊಮ್ಮೆ ಮನೆ ಊಟ ಆದೇಶಕ್ಕೆ ತಡೆ

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿರುವ ಪ್ರಮುಖ ಆರೋಪಿ ಪವಿತ್ರಾ ಗೌಡಗೆ ವಾರಕ್ಕೊಮ್ಮೆ ಮನೆ ಊಟ…

7 hours ago