ಡ್ರಗ್ಸ್‌ ಪ್ರಕರಣ: ಶಾರೂಖ್‌ ಖಾನ್‌ ಪುತ್ರನ ಜಾಮೀನು ಅರ್ಜಿ ವಜಾ

ಮುಂಬೈ: ಐಷಾರಾಮಿ ನೌಕೆಯಲ್ಲಿ ನಡೆದ ಡ್ರಗ್ಸ್ ಸೇವನೆ ಪ್ರಕರಣದ ಸಂಬಂಧ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಸೇರಿ ಎಂಟು ಮಂದಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಮುಂಬೈ ಸೆಷನ್ಸ್ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ. ಇದರೊಂದಿಗೆ ೧೪ ದಿನಗಳ ಕಾಲ ಆರೋಪಿಗಳು ನ್ಯಾಯಾಂಗ ಬಂಧನದಲ್ಲೇ ಮುಂದುವರಿಯುವಂತಾಗಿದೆ.

ಈ ಪ್ರಕರಣದಲ್ಲಿ ತಮಗೆ ಜಾಮೀನು ನೋಡುವಂತೆ ಆರ್ಯನ್ ಖಾನ್, ಆಪ್ತ ಸ್ನೇಹಿತ ಅರ್ಬಾಜ್ ಖಾನ್ ಮತ್ತು ಇತರ ಆರು ಮಂದಿ ಮುಂಬೈ ಸೆಷನ್ಸ್ ನ್ಯಾಯಾಲಯಕ್ಕೆ ಮನವಿ ಮಾಡಿ ಅರ್ಜಿಗಳನ್ನು ಸಲ್ಲಿಸಿದ್ದರು

ಈ ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್ ಜಾಮೀನು ಅರ್ಜಿಗಳನ್ನು ತಳ್ಳಿ ಹಾಕಿತು. ಗುರುವಾರವಷ್ಟೇ ಆರ್ಯನ್ ಮತ್ತು ಇತರ ಆರೋಪಿಗಳಿಗೆ ನ್ಯಾಯಾಲಯ ೧೪ ದಿನಗಳ ನ್ಯಾಯಾಂಗ ಕಸ್ಟಡಿಗೆ ಒಪ್ಪಿಸಿತ್ತು. ಖಾನ್ ಮತ್ತು ಇತರ ಆರೋಪಿಗಳು ಈಗ ಅರ್ಥರ್ ರಸ್ತೆಯ ಜೈಲಿನಲ್ಲಿದ್ದಾರೆ.

× Chat with us