‘ಕಾಟೇರ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಮಾಲಶ್ರೀ ಅವರ ಮಗಳು ಆರಾಧನಾ ರಾಮ್ ಮುಂದೇನು ಮಾಡುತ್ತಾರೆ ಎಂಬ ಪ್ರಶ್ನೆ ಎಲ್ಲರಲ್ಲೂ ಇದೆ. ಚಿತ್ರ ಬಿಡುಗಡೆಯಾಗಿ ಆರು ತಿಂಗಳಾದರೂ ಯಾವೊಂದು ಚಿತ್ರದಲ್ಲೂ ಆರಾಧನಾ ಹೆಸರು ಕೇಳಿಬರುತ್ತಿಲ್ಲ. ಅದೇನು ಅವಕಾಶಗಳ ಕೊರತೆಯೋ ಅಥವಾ ಒಳ್ಳೆಯ ಕಥೆಗಾಗಿ ಆರಾಧನಾ ಕಾದಿದ್ದಾರೋ ಗೊತ್ತಿಲ್ಲ. ಒಟ್ಟಿನಲ್ಲಿ ‘ಕಾಟೇರ’ ನಂತರ ಯಾವೊಂದು ಚಿತ್ರದಲ್ಲೂ ಆರಾಧನಾ ಕಾಣಿಸಿಕೊಂಡಿಲ್ಲ.
ಹೀಗಿರುವಾಗಲೇ ಆರಾಧನಾ ಫೋಟೋಶೂಟ್ ಮೂಲಕ ಗಮನ ಸೆಳೆಯುತ್ತಿದ್ದಾರೆ. ಶಾರುಖ್ ಖಾನ್, ಐಶ್ವರ್ಯ ರೈ, ಸಲ್ಮಾನ್ ಖಾನ್, ಹೃತಿಕ್ ರೋಶನ್ ಸೇರಿದಂತೆ ಬಾಲಿವುಡ್‍ನ ಜನಪ್ರಿಯ ನಟ-ನಟಿಯರ ಸುಂದರ ಫೋಟೋಗಳನ್ನು ಸೆರೆಹಿಡಿದಿರುವ ಡಬೂ ರತ್ನಾನಿ ಇದೀಗ ಕನ್ನಡದ ಕಲಾವಿದೆಯನ್ನು ತಮ್ಮ ಕ್ಯಾಮರಾ ಮೂಲಕ ಅದ್ಭುತವಾಗಿ ಸೆರೆ ಹಿಡಿದಿದ್ದಾರೆ.
ಅಂದಹಾಗೆ, ಆರಾಧನಾ ಇತ್ತೀಚೆಗೆ ‘ದಿ ಜ್ಯುವೆಲರಿ ಶೋ’ಗಾಗಿ ಮಾಡಲ್ ಆಗಿದ್ದು, ಈ ಸಂಬಂಧ ಆಭರಣಗಳನ್ನು ತೊಟ್ಟು ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಮೊದಲ ಬಾರಿಗೆ ಖ್ಯಾತ ಫೋಟೋಗ್ರಾಫರ್ ಡಬೂ ರತ್ನಾನಿ ಅವರ ಕ್ಯಾಮರಾಗೆ ಪೋಸ್ ನೀಡಿರುವ ಆರಾಧನಾ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ.
‘ಕಾಟೇರ’ ನಂತರ ಧ್ರುವ ಸರ್ಜಾ ಅಭಿನಯದ ‘ಕೆಡಿ – ದಿ ಡೆವಿಲ್’ ಚಿತ್ರದಲ್ಲಿ ಆರಾಧನಾ ನಟಿಸುವ ಸಾಧ್ಯತೆ ಇದೆ ಎಂಬ ಮಾತು ಕೇಳಿ ಬಂದಿತ್ತು. ಆದರೆ, ಆ ಜಾಗಕ್ಕೆ ರೀಶ್ಮಾ ನಾಣಯ್ಯ ಬಂದರು. ಆ ನಂತರ ತೆಲುಗಿಗೆ ಮಾಲಾಶ್ರೀ ಮಗಳು ಹೋಗುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ, ಮಾಲಾಶ್ರೀ ಮಗಳ ಎರಡನೆಯ ಚಿತ್ರ ಇದುವರೆಗೂ ಅಧಿಕೃತವಾಗಿ ಘೋಷಣೆಯಾಗಿಲ್ಲ.
ಸುಂಟಿಕೊಪ್ಪದಲ್ಲಿ ೧೮ ಲಕ್ಷ ರೂ. ವೆಚ್ಚದ ಮಂಟಪ ನಿರ್ಮಾಣ ೩ ದಿನಗಳ ಧಾರ್ಮಿಕ ಕಾರ್ಯಕ್ರಮ ಸುಂಟಿಕೊಪ್ಪ: ಇಲ್ಲಿನ ಶ್ರೀ ಪುರಂ…
ಪಿರಿಯಾಪಟ್ಟಣ: ದೇಸಿ ಬೀಜಗಳನ್ನು ಉಳಿಸಿದರೆ ಮಾತ್ರ ಮುಂದಿನ ಯುವ ಜನಾಂಗಕ್ಕೆ ವಿಷಮುಕ್ತ ಆಹಾರ ನೀಡಲು ಸಾಧ್ಯ ಎಂದು ಸಾವಯವ ರೈತ…
ಮೈಸೂರು: ಕ್ರಿಸ್‌ಮಸ್ ಆಚರಣೆಗೆ ಕ್ಷಣಗಣನೆ ಶುರುವಾಗಿದ್ದು, ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಜೋರಾಗಿದ್ದರೆ, ಚರ್ಚ್‌ಗಳ ಅಂಗಳವನ್ನು ವಿದ್ಯುತ್ ದೀಪಗಳಿಂದ ಸಿಂಗರಿಸುವ ಕಾರ್ಯ…
ಕೆ.ಬಿ.ರಮೇಶನಾಯಕ ಟಿಎಚ್‌ಒ ಹುದ್ದೆಗೆ ಡಿಎಚ್‌ಒ ವರ್ಗಾವಣೆ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ತಡೆ ಮೈಸೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ…
ಮಂಡ್ಯ: ಆಸ್ತಿಗಾಗಿ ತಂದೆಯನ್ನೇ ಪಾಪಿ ಮಗನೋರ್ವ ಕೊಲೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ದಳವಾಯಿಕೋಡಿಯಲ್ಲಿ ನಡೆದಿದೆ. ಗ್ರಾಮದ…