ಪುನೀತ್ ರಾಜಕುಮಾರ್‌ಗೆ 50ನೇ ವರ್ಷದ ಹುಟ್ಟು ಹಬ್ಬ ಹಿನ್ನಲೆ, ಪವರ್‌ಸ್ಟಾರ್ ಎಂಬ ಬಿರುದು ನೀಡಿದ ಮೊದಲ ಸಿನಿಮಾ ʼಅಪ್ಪುʼ ರೀ-ರೀಲಿಸ್ ಅಗಿದ್ದು, ರಾಘವೇಂದ್ರ ರಾಜ್‌ಕುಮಾರ್ ಕುಟುಂಬ ಸಮೇತ ಸಿನಿಮಾ ನೋಡಿ ಭಾವುಕರಾಗಿದ್ದಾರೆ.
ʼಅಪ್ಪುʼ ಸಿನಿಮಾ ನೋಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ರಾಘಣ್ಣ, ಈ ಸಿನಿಮಾ ನೋಡಿ ಪುನೀತ್ ಮತ್ತೆ ವಾಪಸ್ ಬಂದು ಬಿಡುತ್ತಾನೋ ಅನ್ನಿಸಿತ್ತು ಎಂದು ಕಣ್ಣೀರಾದರು.
ಅಭಿಮಾನಿಗಳ ಹರುಷ ನೋಡಿದರೆ ಒಂದು ಕಡೆ ಖುಷಿ, ಮತ್ತೊಂದು ಕಡೆ ದುಃಖ ಆಗತ್ತದೆ. 23 ವರ್ಷದ ಹಿಂದೆ ಈ ಸಿನಿಮಾ ರಿಲೀಸ್ ಆದಾಗ ತಮ್ಮ ಜೊತೆ ಅಪ್ಪಾಜಿ, ಅಮ್ಮ, ಅಪ್ಪು ಜೊತೆಲಿದ್ದ ಆ ದಿನಗಳು ನೆನಪಾಗುತ್ತವೆ. ಇಷ್ಟು ವರ್ಷಗಳಾದರೂ ಅಪ್ಪು ಸಿನಿಮಾದ ಡೈಲಾಗ್, ಲಿರಿಕ್ಸ್‌ನನ್ನು ಅಭಿಮಾನಿಗಳು ಮರೆತಿಲ್ಲ. ಎಲ್ಲರೂ ಅಪ್ಪುನ ಸಂಭ್ರಮಿಸಿದರು ಎಂದಿದ್ದಾರೆ.
ಪುನೀತ್ ಈಗ ಇಲ್ಲ. ಅಪ್ಪು ಸಿನಿಮಾ ನೋಡಿ ವಾಪಸ್ ಬಂದು ಬಿಡ್ತನೇನೋ ಅನ್ನಸ್ತು. ಅಪ್ಪು ದೈಹಿಕವಾಗಿ ಇಲ್ಲದಿದ್ದರೂ, ಸಿನಿಮಾ ಮೂಲಕ ನಮ್ಮ ಜೊತೆಯಲ್ಲಿ ಇರುತ್ತಾರೆ. ಹೀಗೆ ಅವರ ಸಿನಿಮಾ ರಿ-ರಿಲೀಸ್ ಮಾಡಿ ನೋಡ್ತಾ ಇರೋಣ ಎಂದು ಹೇಳಿದರು.
ʼಅಪ್ಪುʼ ಸಿನಿಮಾದಲ್ಲಿ ಪುನೀತ್‌ಗೆ ರಕ್ಷಿತಾ ನಾಯಕಿಯಾಗಿ ನಟಿಸಿದ್ದು, ಪುರಿ ಜಗನ್ನಾಥ್ ನಿರ್ದೇಶನ ಮಾಡಿದ್ದರು.
ಯಳಂದೂರು: ತಾಲ್ಲೂಕಿನ ಬಿಳಿಗಿರಿರಂಗನ ಬೆಟ್ಟದ ದೇವಸ್ಥಾನದ ತೇರು ಪಕ್ಕದಲ್ಲಿರುವ ಸಂತೋಷ್ ಎಂಬುವವರಿಗೆ ಸೇರಿದ ಅಂಗಡಿಯ ಮೇಲೆ ಕಾಡಾನೆಯೊಂದು ದಾಳಿ ನಡೆಸಿ…
ನಂಜನಗೂಡು: ತಾಲ್ಲೂಕಿನ ಹಂಚೀಪುರ ಗ್ರಾಮದಲ್ಲಿ ರೈತನ ಸಾವಿಗೆ ಕಾರಣವಾಗಿದ್ದ ಆನೆಯನ್ನು ಅರಣ್ಯ ಇಲಾಖೆ ಇಂದು ಸೆರೆ ಹಿಡಿದಿದೆ. ಸಾಕಾನೆಗಳ ನೆರವಿನಿಂದ…
ಬೆಂಗಳೂರು: ಕರ್ನಾಟಕದ ನೂತನ ರಾಜ್ಯಪಾಲರಾಗಿ ಡಾ.ಸುಧಾ ಯಾದವ್ ಶುಕ್ರವಾರ ಬೆಳಗ್ಗೆ ಪ್ರಮಾಣ ವಚನ ಸ್ವೀಕರಿಸಿದರು. ಲೋಕಭವನದ ಗಾಜಿನ ಮನೆಯಲ್ಲಿ ನಡೆದ…
ನಡೆಯಲಿ ಪ್ರಶಾಂತ...! ಹೆಸರಿಗೆ ತಕ್ಕಂತೆ ಗಜ ಗಾಂಭೀರ್ಯದಿಂದ ನಡೆಯುತಿಹನು ಪ್ರಶಾಂತ ಎಲ್ಲವೂ ನಡೆಯಲಿ ಶಾಂತ... ಪ್ರಶಾಂತ ! ಅಭಿಮನ್ಯುವಿನ ಉತ್ತರಾಧಿಕಾರಿ…
ಗಂಭೀರ ಕಾಯಿಲೆಗಳ ೧೮೦ ದುಬಾರಿ ಔಷಧಗಳು ಮತ್ತು ೭೮೦ ವೈದ್ಯಕೀಯ ಸಾಮಗ್ರಿಗಳನ್ನು ಹತ್ತಾರು ಪಟ್ಟು ಹೆಚ್ಚು ಲಾಭವಿಟ್ಟುಕೊಂಡು ಮಾರಾಟ ಮಾಡುತ್ತಿರುವುದು…
ನಮ್ಮ ಮನೆಯ ಕಸವನ್ನು,ಪಕ್ಕದ ಮನೆಗೋ ,ಅವರ ಅಂಗಳಕ್ಕೋ ಸುರಿಯುವುದು ನಾಗರಿಕತೆಯ ಲಕ್ಷಣವಲ್ಲ. ಆದರೆ ಅದು ಮೈಸೂರಿನ ಆರ್.ಟಿ.ನಗರದ ಬಡಾವಣೆಯ ಮೂಲೆ…