ಸುದೀಪ್ ಅಭಿನಯದಲ್ಲಿ ‘ವಿಕ್ರಾಂತ್ ರೋಣ’ ನಂತರ ಅನೂಪ್ ಭಂಡಾರಿ ಒಂದು ಹೊಸ ಚಿತ್ರ ಮಾಡುತ್ತಾರೆ ಎಂದು ಹೇಳಲಾಗಿತ್ತು. ಮೊದಲು ‘ಬಿಲ್ಲ ರಂಗ ಭಾಷಾ’ ಚಿತ್ರ ಮಾಡುತ್ತಾರೆ ಎಂದು ಸುದ್ದಿಯಾಗಿತ್ತು. ನಂತರ ‘ಅಶ್ವತ್ಥಾಮ’ ಎಂಬ ಇನ್ನೊಂದು ಚಿತ್ರ ಮಾಡಬಹುದು ಎಂದು ಹೇಳಲಾಗಿತ್ತು. ಆದರೆ, ಎರಡೂ ಚಿತ್ರಗಳು ಸೆಟ್ಟೇರಲೇ ಇಲ್ಲ.
ಇನ್ನೇನು, ಸುದೀಪ್ ಹುಟ್ಟುಹಬ್ಬಕ್ಕೆ (ಸೆ 02) ದಿನಗಣನೆ ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ಅನೂಪ್ ಭಂಡಾರಿ ಕಡೆಯಿಂದ ಹೊಸದೊಂದು ಸುದ್ದಿ ಬಂದಿದೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುರುವ ಅನೂಪ್ ಭಂಡಾರಿ, The Men will be right back ಎಂದು ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲ,’ ಸುದೀಪ್ ಸರ್ ಹುಟ್ಟುಹಬ್ಬದಂದು ಮತ್ತೆ ಭೇಟಿ ಆಗೋಣ’ ಎಂದು ಹೇಳಿಕೊಂಡಿದ್ದಾರೆ. ಸುದೀಪ್ ಜೊತೆಗೆ ಮತ್ತೊಮ್ಮೆ ಕೈಜೋಡಿಸುತ್ತಿರುವುದಾಗಿ ಹೇಳಿರುವ ಅನೂಪ್ ಭಂಡಾರಿ, ಸೆಪ್ಟೆಂಬರ್ 02ರಂದು ಹೊಸ ಸುದ್ದಿಯೊಂದನ್ನು ಘೋಷಿಸುವುದಾಗಿ ಹೇಳಿದ್ದಾರೆ.
ಇಷ್ಟಕ್ಕೂ ಆ ಸುದ್ದಿ ಏನು? ಈ ಮೊದಲು ಹೇಳಿದಂತೆ ಸುದೀಪ್ ಅಭಿನಯದಲ್ಲಿ ‘ಬಿಲ್ಲ ರಂಗ ಭಾಷ’ ಅಥವಾ ‘ಅಶ್ವತ್ಥಾಮ’ ಚಿತ್ರಗಳ ಬಗ್ಗೆ ಅನೂಪ್ ಭಂಡಾರಿ ಏನಾದರೂ ಹೇಳುತ್ತಾರಾ? ಅಥವಾ ಇವೆರಡೂ ಚಿತ್ರಗಳನ್ನು ಬಿಟ್ಟು ಸುದೀಪ್ ಅಭಿನಯದಲ್ಲಿ ಇನ್ನೊಂದು ಹೊಸ ಚಿತ್ರವನ್ನು ಅವರು ಘೋಷಿಸುತ್ತಾರಾ? ಅಥವಾ ಸುದೀಪ್ ನಿರ್ಮಾಣದಲ್ಲಿ ಅನೂಪ್ ಭಂಡಾರಿ ಏನಾದರೂ ಬೇರೆ ಚಿತ್ರ ಮಾಡುತ್ತಾರಾ? ಎಂಬ ಕುತೂಹಲ ಅವರ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.
ಸುದೀಪ್ ಅಭಿನಯದ ‘ಮ್ಯಾಕ್ಸ್’ ಚಿತ್ರವು ಇನ್ನಷ್ಟೇ ಬಿಡುಗಡೆ ಆಗಬೇಕಿದೆ. ಈಗಾಗಲಲೇ ಸುದೀಪ್ ಅಭಿನಯದಲ್ಲಿ ತಮಿಳು ನಿರ್ದೇಶಕ ಚೇರನ್, ಆರ್. ಚಂದ್ರು, KRG ಸ್ಟುಡಿಯೋಸ್ ಮುಂತಾದವರು ಹೊಸ ಚಿತ್ರಗಳನ್ನು ಘೋಷಿಸಿದ್ದಾರೆ. ಅವೆಲ್ಲವೂ ಯಾವಾಗ ಶುರುವಾಗುತ್ತವೋ ಗೊತ್ತಿಲ್ಲ. ಹೀಗಿರುವಾಗಲೇ, ಸುದೀಪ್ ಕಡೆಯಿಂದ ಇನ್ನೊಂದು ಹೊಸ ಚಿತ್ರ ಬರುವ ಸಾಧ್ಯತೆ ಇದೆ. ಇಷರಟಕ್ಕೂ ಯಾವುದಾ ಚಿತ್ರ? ಸೆ. 02ರವರೆಗೂ ಕಾಯಬೇಕು.
ಕೊಡಗಿನ ಖ್ಯಾತಿ ಹೆಚ್ಚಿಸುವಲ್ಲಿ ಕ್ರೀಡಾಪಟುಗಳ ಕೊಡುಗೆ ಅಪಾರ: ಸುಜಾ ಕುಶಾಲಪ್ಪ ಪೊನ್ನಂಪೇಟೆ: ಕೊಡಗು ಜಿಲ್ಲೆ ರಾಷ್ಟ್ರಮಟ್ಟದಲ್ಲಿ ವಿಭಿನ್ನವಾಗಿ ಗುರುತಿಸಿಕೊಂಡಿದೆ. ಎಲ್ಲ…
ಮುಚ್ಚಲ್ಪಟ್ಟಿರುವ ಶಾಲೆಯ ಕೊಠಡಿಯಲ್ಲಿ ರಾರಾಜಿಸುತ್ತಿರುವ ಮದ್ಯದ ಬಾಟಲಿಗಳು; ನಾಗರಿಕರ ಆಕ್ರೋಶ ಹನೂರು: ನಿಗದಿತ ಸಂಖ್ಯೆಯ ಮಕ್ಕಳಿಲ್ಲ ಎಂಬ ಕಾರಣಕ್ಕೆ ಮುಚ್ಚಲ್ಪಟ್ಟಿರುವ…
ಕೆ.ಬಿ.ರಮೇಶನಾಯಕ ಅಪೆಕ್ಸ್ ಬ್ಯಾಂಕ್ ಉಪಾಧ್ಯಕ್ಷರ ಹುದ್ದೆಯತ್ತ ಶಾಸಕ ಅನಿಲ್ ಚಿತ್ತ ತಂದೆಗೆ ಅಧ್ಯಕ್ಷ ಹುದ್ದೆ ಕೊಡಿಸಲು ಶಾಸಕ ಡಿ.ರವಿಶಂಕರ್ ಯತ್ನ …
ನಂಜನಗೂಡು : ಜಾತೀಯತೆ ಎಂಬುದು ಸಂಪೂರ್ಣವಾಗಿ ತೊಲಗಬೇಕು. ಎಲ್ಲ ಸಮುದಾಯದವರು ನಮ್ಮವರೇ ಎಂದು ತಿಳಿದಾಗ ಮಾತ್ರ ಜಾತೀಯತೆ ದೂರವಾಗಲು ಸಾಧ್ಯ…
ಮೈಸೂರು : ನಿರಂತರ ರಂಗ ತಂಡದ ‘ನಿರಂತರ ರಂಗ ಉತ್ಸವ-2025-26’ರ ಐದು ದಿನಗಳ ರಂಗೋತ್ಸವದ ಕೊನೆಯ ದಿನ ‘ಕೊಡಲ್ಲ ಅಂದ್ರೆ…