ಗಾಯಕ ಮತ್ತು ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಚಿತ್ರರಂಗಕ್ಕೆ ಬಂದು 16 ವರ್ಷಗಳಾಗಿವೆಯಂತೆ. ಇನ್ನು, ಅವರು ಜೆಪಿ ಮ್ಯೂಸಿಕ್ ಎಂಬ ಆಡಿಯೋ ಸಂಸ್ಥೆ ಪ್ರಾರಂಭಿಸಿ 10 ವರ್ಷಗಳಾಗಿವೆಯಂತೆ. ಇವೆರಡೂ ಸಂಭ್ರಮವನ್ನುಉ ಹಂಚಿಕೊಳ್ಳುವುದಕ್ಕೆ ಅವರೊಂದು ಆಲ್ಬಂ ಸಾಂಗ್ ಮಾಡಿದ್ದಾರೆ.
‘ಪ್ರೀತಿ ಅನ್ನೋ ದ್ಯಾವ್ರು’ ಎಂಬ ಹಾಡು ಬುಧವಾರ ಸಂಜೆ ಜೆಪಿ ಮ್ಯೂಸಿಕ್ ಯೂಟ್ಯೂಬ್ ಚಾನಲ್‍ನಲ್ಲಿ ಬಿಡುಗಡೆ ಆಗಿದೆ. ಅನೂಪ್ ಪತ್ನಿ ಕೃತಿ ಶೆಟ್ಟಿ ಈ ಹಾಡನ್ನು ಬಿಡುಗಡೆ ಮಾಡಿ, ಶುಭಕೋರಿದ್ದಾರೆ.
‘ಪ್ರೀತಿ ಅನ್ನೊ ದ್ಯಾವ್ರು ನಮ್ಮ ಒಳಗೆ ಬಂದು ಕುಂತವ್ನೆ …’ ಎಂದು ಸಾಗುವ ಈ ಹಾಡಿಗೆ ಪ್ರಮೋದ್ ಮರವಂತೆ ಸಾಹಿತ್ಯ ಬರೆದಿದ್ದು, ಅನೂಪ್ ಸಂಗೀತ ಸಂಯೋಜಿಸುವುದರ ಜೊತೆಗೆ ಹಾಡಿಗೆ ಧ್ವನಿಯಾಗಿದ್ದಾರೆ. ಅಷ್ಟೇ ಅಲ್ಲ, ಈ ಹಾಡಿಗೆ ಅವರೇ ಅಭಿನಯಿಸಿದ್ದಾರೆ. ಅನೂಪ್ ಪತ್ನಿ ಕೃತಿ ಈ ವಿಡಿಯೋ ಆಲ್ಬಂ ಹಾಡನ್ನ ನಿರ್ಮಿಸಿದ್ದಾರೆ. ಸುಜ್ಞಾನ್ ಮೂರ್ತಿ ಛಾಯಾಗ್ರಹಣ ಈ ಹಾಡಿಗಿದೆ.
ಈ ಹಾಡಿನ ಕುರಿತು ಮಾತನಾಡಿರುವ ಅನೂಪ್ ಸೀಳಿನ್, ‘ಈ ತರಹದ ಮ್ಯೂಸಿಕ್ ಆಲ್ಬಂ ಮಾಡಬೇಕು ಎಂಬ ಆಸೆ ಮೊದಲಿಂದ ಇತ್ತು. ‘ಪ್ರೀತಿ ಅನ್ನೋ ದ್ಯಾವ್ರು’ ಮನುಷ್ಯ ಮತ್ತು ಪ್ರಕೃತಿ ನಡುವಿನ ಪರಿಕಲ್ಪನೆಯಿಂದ ಮಾಡಿದ ಹಾಡು. ಹುಟ್ಟಿಂದ ಸಾವಿನವರೆಗೆ ಒಂದಷ್ಟು ವಿಚಾರಗಳನ್ನ ಈ ಹಾಡಿನ ಮೂಲಕ ಹೇಳಲಾಗಿದೆ. ಇದು ಆರಂಭ ಅಷ್ಟೇ. ಮುಂದಿನ ದಿನಗಳಲ್ಲಿ ಇನ್ನಷ್ಟು ಹಾಡುಗಳನ್ನು ಮಾಡುವ ಉದ್ದೇಶವಿದೆ’ ಎಂದರು.
ಈ ಹಾಡು ಯುಟ್ಯೂಬ್ ಜೊತೆಗೆ ಎಲ್ಲಾ ಹಾಡಿನ ವೇಡಿಕೆಗಳಲ್ಲೂ ಲಭ್ಯವಿದೆ.
ಮೈಸೂರು : ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಹನುಮ ಜಯಂತ್ಯೋತ್ಸವ ಸಮಿತಿ ವತಿಯಿಂದ ಶನಿವಾರ ನಡೆದ ಏಳನೇ ವರ್ಷದ ಹನುಮೋತ್ಸವ ಮೆರವಣಿಗೆಯು…
ಮನೆಯಲ್ಲಿ ರಾತ್ರಿಯಿಡೀ ಕೂಡಿಹಾಕಿ ಹಲ್ಲೆ ನಡೆಸಿದ ಮೂವರು ಆರೋಪಿಗಳು; ಹನಿಟ್ರ್ಯಾಪ್ ಶಂಕೆ, ತನಿಖೆ ಚುರುಕು ಮಡಿಕೇರಿ : ಸಾಮಾಜಿಕ ಜಾಲತಾಣದಲ್ಲಿ…
ಮೈಸೂರು : ನಗರದಲ್ಲಿ ಯುನಿಟಿ ಮಾಲ್ ನಿರ್ಮಿಸಲು ನಮ್ಮ ವಿರೋಧ ಇಲ್ಲ. ಆದರೆ, ಸರ್ಕಾರ ಗೊಂದಲವಿಲ್ಲದ ಸ್ಥಳ ನೀಡದೆ ದಿಕ್ಕು…
ಮೈಸೂರು : ಚುಮು ಚುಮು ಚಳಿಯ ನಡುವೆ ನಗರದ ನಂಜರಾಜ ಬಹದ್ದೂರ್ ಛತ್ರದಲ್ಲಿ ಗ್ರಾಹಕರ ಆಕರ್ಷಿಸುವ ಹಾಗೂ ಗ್ರಾಮೀಣ ಸೊಗಡಿನ…
ಮಂಡ್ಯ : ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸುತ್ತೂರಿನ ಆದಿ ಜಗದ್ಗುರು ಶ್ರೀ ಶಿವರಾತ್ರಿ ಶಿವ ಯೋಗಿಗಳರವರ 1066ನೇ ಜಯಂತಿ…
ಸಿದ್ದಾಪುರ : ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಗ್ರಾ.ಪಂ. ಮಾಜಿ ಅಧ್ಯಕ್ಷನ ವಿರುದ್ಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ…