ಕನ್ನಡ ಧ್ವಜದಲ್ಲಿ ಪುನೀತ್‌ ಚಿತ್ರ ಬಿಡಿಸಿದ ಆಂಧ್ರ ಮೂಲದ ಅಭಿಮಾನಿ

ಆಂಧ್ರಪ್ರದೇಶ: ಆಂಧ್ರಪ್ರದೇಶದ ಕಲಾವಿದರೊಬ್ಬರು ಅಕಾಲಿಕ ಮರಣ ಹೊಂದಿರುವ ಯೂತ್‌ ಐಕಾನ್‌ ಪುನೀತ್‌ ರಾಜ್‌ಕುಮಾರ್‌ ಚಿತ್ರವನ್ನು ವಿಶೇಷ ರೀತಿಯಲ್ಲಿ ಬಿಡಿಸಿ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ.

ನಟ ಪುನೀತ್‌ ರಾಜ್‌ಕುಮಾರ್‌ ಅಕಾಲಿಕ ಮರಣಕ್ಕೆ ದೇಶದ ಸೆಲೆಬ್ರಿಟಿ ಮಾತ್ರವಲ್ಲದೆ ಇತರ ರಾಜ್ಯಗಳಲ್ಲಿ ಪುನೀತ್‌ ಅಭಿಮಾನಿಗಳು ವಿಷಾದ ವ್ಯಕ್ತಪಡಿಸುತ್ತಿದ್ದಾರೆ. ನೆರೆಯ ಕೇರಳ, ತಮಿಳುನಾಡು ಮತ್ತು ಮಹಾರಾಷ್ಟ್ರಗಳಲ್ಲಿ ಪುನೀತ್ ಅವರಿಗೆ ದೊಡ್ಡ ಸಂಖ್ಯೆಯ ಅಭಿಮಾನಿಗಳಿದ್ದರು. ದೇಶದಲ್ಲೆಡೆಯು ಪುನೀತ್‌ ಮರಣಕ್ಕೆ ಶೋಕ ವ್ಯಕ್ತಪಡಿಸುತ್ತಿದ್ದಾರೆ.

ಆಂದ್ರ ಮೂಲದ ಚಿತ್ತೂರು ಜಿಲ್ಲೆಯ ಕುಪ್ಪಂನ ಪೂರಿ ಆರ್ಟ್ಸ್​ನ ಪುರುಷೋತ್ತಮ್ ಕನ್ನಡ ಧ್ವಜದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಚಿತ್ರ ಬಿಡಿಸಿ, ವಿ ಮಿಸ್ ಯೂ ಅಪ್ಪು ಎಂದು ಬರೆದಿದ್ದಾರೆ. ಕುಪ್ಪಂ ಪಟ್ಟಣದ ನೂರಾರು ಮಂದಿ ಈ ಚಿತ್ರ ನೋಡಿ ಮೆಚ್ಚುಗೆ ಸೂಚಿಸಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಕನ್ನಡ ಸಿನಿಮಾಗಳನ್ನು ಮಾತ್ರವೇ ಮಾಡಿದ್ದರೂ ತೆಲುಗು, ತಮಿಳಿನಲ್ಲೂ ಅಪಾರ ಅಭಿಮಾನಿಗಳನ್ನು ಹೊಂದಿದ್ದರು ಎನ್ನುವುದಕ್ಕೆ ಈ ಚಿತ್ರಕಲೆ ಸಾಕ್ಷಿಯಾಗಿದೆ.

× Chat with us