ಪ್ರಶಾಂತ್ ನೀಲ್ ಮುಂದಿನ ನಡೆ ಏನು? ‘ಸಲಾರ್ 3’ ಎಂಬ ಸುದ್ದಿ ಇದೆ. ಅದೇ ರೀತಿ, ಜ್ಯೂನಿಯರ್ ಎನ್.ಟಿ.ಆರ್ ಅಭಿನಯದಲ್ಲಿ ಹೊಸ ಚಿತ್ರವನ್ನು ಪರಶಾಂತ್ ಶುರು ಮಾಡುತ್ತಾರೆ ಎಂಬ ಮಾತೂ ಇದೆ. ಹೀಗಿರುವಾಗಲೇ, ಕಾಲಿವುಡ್ ಅಂಗಳದಿಂದ ಒಂದು ಹೊಸ ಸುದ್ದಿ ಬಂದಿದೆ.
ಇದುವರೆಗೂ ಪ್ರಶಾಂತ್ ನೀಲ್ ಹೆಸರು ಕನ್ನಡ ಮತ್ತು ತೆಲುಗು ಚಿತ್ರರಂಗಗಳಲ್ಲಿ ಹೆಚ್ಚಾಗಿ ಕೇಳಿಬರುತ್ತಿತ್ತು. ಆದರೆ, ಇದೀಗ ತಮಿಳು ಚಿತ್ರರಂಗದಲ್ಲೂ ಪ್ರಶಾಂತ್ ಹೆಸರು ಜೋರಾಗಿಯೇ ಕೇಳಿಬಂದಿದೆ. ಮೂಲಗಳ ಪ್ರಕಾರ, ನಟ ಅಜಿತ್ ಅಭಿನಯದಲ್ಲಿ ಪ್ರಶಾಂತ್ ಎರಡು ಚಿತ್ರಗಳನ್ನು ನಿರ್ದೇಶಿಸುತ್ತಾರಂತೆ. ಅಷ್ಟೇ ಅಲ್ಲ, ‘ಕೆಜಿಎಫ್ 3’ ಚಿತ್ರದಲ್ಲೂ ಅಜಿತ್ ನಟಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಹೌದು, ಇತ್ತೀಚೆಗೆ ಚೆನ್ನೈನಲ್ಲಿ ಪ್ರಶಾಂತ್ ನೀಲ್ ಮತ್ತು ಅಜಿತ್ ಭೇಟಿಯಾಗಿದೆ. ಈ ಭೇಟಿಯಲ್ಲಿ ಅಜಿತ್ ಜೊತೆಗೆ ಪ್ರಶಾಂತ್ ಹೊಸ ಸಿನಿಮಾ ಬಗ್ಗೆ ಚರ್ಚೆ ಮಾಡಿದ್ದಾರಂತೆ. ಅಜಿತ್‍ಗಾಗಿಯೇ ಪ್ರಶಾಂತ್ ಒಂದು ಕಥೆ ಮಾಡಿಟ್ಟುಕೊಂಡಿದ್ದಾರಂತೆ. ಇದರ ಜೊತೆಗೆ ಯಶ್ ಅಭಿನಯದ ‘ಕೆಜಿಎಫ್ 3’ ಚಿತ್ರದಲ್ಲೂ ಒಂದು ಪಾತ್ರ ಮಾಡುವುದಕ್ಕೆ ಅಜಿತ್‍ಗೆ ಪ್ರಶಾಂತ್ ಮನವೊಲಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಎರಡೂ ಚಿತ್ರಗಳನ್ನು ಹೊಂಬಾಳೆ ಫಿಲಂಸ್ ನಿರ್ಮಾಣ ಮಾಡುತ್ತಿದೆಯಂತೆ.
ಈ ಸುದ್ದಿಗಳಲ್ಲಿ ಎಷ್ಟು ನಿಜ ಅಥವಾ ಸುಳ್ಳಿದೆ ಎಂದು ಈಗಲೇ ಹೇಳುವುದು ಕಷ್ಟ. ಏಕೆಂದರೆ, ಈ ಬಗ್ಗೆ ಪ್ರಶಾಂತ್ ಆಗಲೀ, ಅಜಿತ್ ಆಗಲೀ ಎಲ್ಲೂ ಮಾತನಾಡಿಲ್ಲ. ಒಂದು ಪಕ್ಷ ಈ ಚಿತ್ರಗಳು ಸಾಧ್ಯವಾದರೂ ಅದಕ್ಕೆ ಸಾಕಷ್ಟು ಸಮಯವಿದೆ. ಏಕೆಂದರೆ, ಪ್ರಶಾಂತ್ ಕೈಯಲ್ಲಿ ಸಾಕಷ್ಟು ಕೆಲಸವಿದ್ದು, ಮುಂದಿನ ತಿಂಗಳಿನಿಂದ ಅವರು ಹೈದರಾಬಾದ್‍ನಲ್ಲಿ ‘ಸಲಾರ್ 2’ ಚಿತ್ರದ ಚಿತ್ರೀಕರಣ ಪ್ರಾರಂಭಿಸಲಿದ್ದಾರೆ ಎಂಬ ಮಾತುಗಳು ಸಹ ಕೇಳಿಬರುತ್ತಿವೆ.
ಸದ್ಯ, ‘ವಿದಾ ಮುಯರ್ಚಿ’ ಎಂಬ ಚಿತ್ರದಲ್ಲಿ ಅಜಿತ್ ನಟಿಸುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣ ಪ್ರಗತಿಯಲ್ಲಿದ್ದು, ಅಕ್ಟೋಬರ್ ಕೊನೆಯ ವಾರದಲ್ಲಿ ಚಿತ್ರ ಬಿಡುಗಡೆ ಆಗಲಿದೆ ಎಂದು ಹೇಳಲಾಗುತ್ತಿದೆ.
' ಗ್ರೇಸ್' ಪೋಷಕರ ದಿನಾಚರಣೆಯಲ್ಲಿ ಮೈಜಿಪಸಂ ಅಧ್ಯಕ್ಷ ಕೆ.ದೀಪಕ್ ಅಭಿಮತ ಮೈಸೂರು : ಹಣ ಆಸ್ತಿಗೆ ಹೆತ್ತವರ ಉಸಿರು ತೆಗೆಯುವ…
ಕನ್ನಡ ಸಾಹಿತ್ಯ ಸಮ್ಮೇಳನ: ಪ್ರಮುಖ ರಸ್ತೆಗಳಿಗೆ ವಿದ್ಯುತ್ ದೀಪಾಲಂಕಾರ ಮಂಡ್ಯ:ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20 ರಿಂದ ಮೂರು ದಿನಗಳ ಕಾಲ…
ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಮಂಡ್ಯ ನಗರದಲ್ಲಿನ ವಿದ್ಯುತ್ ದೀಪಾಲಂಕಾರಕ್ಕೆ ಕೃಷಿ ಸಚಿವರು ಹಾಗೂ…
ಕೇರಳ ಮೂಲದ ಮಾಸ್ಟರ್ ಮೈಂಡ್ ಸೇರಿದಂತೆ 12 ಆರೋಪಿಗಳ ಬಂಧನ; ಮತ್ತೊಂದು ಮೋಸದ ಜಾಲ ಬಯಲಿಗೆಳೆದ ಕೊಡಗು ಜಿಲ್ಲಾ ಪೊಲೀಸರು…
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಮುಡಾ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಜನವರಿ…
ಮಂಡ್ಯ: ೮೭ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಹಿನ್ನೆಲೆ ಗುರುವಾರ ಸಂಜೆ ನಗರಕ್ಕೆ…