ಮನರಂಜನೆ

ಫ್ಯಾಮಿಲಿ ಥ್ರಿಲ್ಲರ್‌ ಚಿತ್ರದಲ್ಲಿ, ಹೊಸ ವೇಷದಲ್ಲಿ ಅಜೇಯ್‍ ರಾವ್‍

‘ನನ್ ಮಗಳೇ ಹೀರೋಯಿನ್’, ‘ಎಂ.ಆರ್.ಪಿ’ ಚಿತ್ರಗಳನ್ನು ನಿರ್ದೇಶಿಸಿದ್ದ ಎಸ್.ಕೆ.ಬಾಹುಬಲಿ ಇದೀಗ ಅಜೇಯ್ ರಾವ್ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಪಿ.ಕೆ. ಪ್ರೊಡಕ್ಷನ್ಸ್ ಮೂಲಕ ನಿರ್ಮಾಪಕ ಕಿರಣ್ ಅವರು ಮೊದಲ ಬಾರಿಗೆ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಇನ್ನೂ ಹೆಸರಿಡದ ಈ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ನೆರವೇರಿತು.

ಈ ಚಿತ್ರವನ್ನು ನಿರ್ದೇಶಿಸುವುದರ ಜೊತೆಗೆ ಬಾಹುಬಲಿ ಕಥೆ, ಚಿತ್ರಕಥೆ ಬರೆದಿದ್ದಾರೆ. ಈ ಚಿತ್ರದ ಕುರಿತು ಮಾತನಾಡುವ ಬಾಹುಬಲಿ, ‘ಇದೊಂದು ಫ್ಯಾಮಿಲಿ ಥ್ರಿಲ್ಲರ್‌. ಚಿತ್ರದಲ್ಲಿ ರಾಷ್ಟ್ರೀಯ ಮಟ್ಟದ ಕಥೆ ಇದೆ. ಇದೊಂದು ಮಧ್ಯಮ ವರ್ಗದ ಕುಟುಂಬದ ಕಥೆ ಇದೆ. ಚಿತ್ರದಲ್ಲಿ ಅಜೇಯ್‍ ಅವರಿಗೆ ನಾಯಕಿಯಾಗಿ ಮಲೈಕಾ ವಸುಪಾಲ್‍ ಇದ್ದಾರೆ’ ಎಂದು ಮಾಹಿತಿ ನೀಡಿದರು.

ಸಾಮಾನ್ಯವಾಗಿ ಲವ್ವರ್‌ ಬಾಯ್‍ ಪಾತ್ರಗಳಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಅಜೇಯ್‍ ರಾವ್, ಈ ಚಿತ್ರದಲ್ಲಿ ನಾಲ್ಕು ಶೇಡ್‍ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆ ಪೈಕಿ ಒಂದರಲ್ಲಿ ಬೋಳು ತಲೆಯ ಲುಕ್‍ನಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಅದರ ಕುರಿತು ಮಾತನಾಡುವ ಬಾಹುಬಲಿ, ‘ಈ ಲುಕ್‍ಗಾಗಿ ಅಜೇಯ್‍ ತಲೆ ಬೋಳಿಸಿದ್ದಾರಾ? ಎಂದು ಹಲವರು ಕೇಳಿದರು. ಇಲ್ಲ, ಅದೊಂದು ವಿಗ್‍. ಅಳತೆ ತೆಗೆದುಕೊಂಡು, ಮುಂಬೈನಲ್ಲಿ ವಿಗ್‍ ಮಾಡಿಸಿದ್ದೇವೆ. ‘ಜವಾನ್‍’ ಚಿತ್ರದಲ್ಲಿ ಶಾರುಖ್‍ ಖಾನ್‍ಗೆ ವಿಗ್‍ ಮಾಡಿಕೊಟ್ಟವರೇ, ನಮ್ಮ ಚಿತ್ರಕ್ಕೂ ಮಾಡುತ್ತಿದ್ದಾರೆ. ಈ ಮೇಕಪ್‍ಗೆ ಐದು ತಾಸು ತಗಲುತ್ತದೆ. ಎಸಿಯಲ್ಲೇ ಕೆಲಸ ಮಾಡಬೇಕು. ಬೆವರು ಬಂದರೆ ವಿಗ್‍ ಹಾಳಾಗುತ್ತದೆ. ಈ ವಿಗ್‍ ಎರಡು ದಿನ ಮಾತ್ರ ಇರುತ್ತದೆ. ಈ ಗೆಟಪ್‍ನಲ್ಲಿ 10ಕ್ಕೂ ಹೆಚ್ಚು ದಿನಗಳ ಕಾಲ ಚಿತ್ರೀಕರಣ ಮಾಡಬೇಕಾಗುತ್ತದೆ’ ಎಂದರು.

ಮನರಂಜನೆಯ ಸುದ್ದಿ ಮಿಸ್‌ ಆಗಲ್ಲ ಇಲ್ಲಿ.. 

ಅಜೇಯ್ ರಾವ್ ಮಾತನಾಡಿ, ’ಯುದ್ದಕಾಂಡ’ ಚಿತ್ರೀಕರಣ ಸಮಯದಲ್ಲಿ ಬಾಹುಬಲಿ ಬಂದು ಈ ಕಥೆ ಹೇಳಿದರು. ಕೇಳಿದ ಕೂಡಲೇ ಇಷ್ಟವಾಯ್ತು. ಏನೋ ಒಂದು ಸಾಧನೆ ಮಾಡಬೇಕೆಂದು ಹೊರಟಾಗ ಆತ ಏನೆಲ್ಲಾ ಎದುರಿಸಬೇಕಾಗುತ್ತದೆ ಎಂಬುದನ್ನು ಈ ಸಿನಿಮಾ ಮೂಲಕ ಬಾಹುಬಲಿ ಅವರು ಹೇಳ ಹೊರಟಿದ್ದಾರೆ’ ಎಂದರು.

ಈ ಹೆಸರಿಡದ ಚಿತ್ರಕ್ಕೆ ಯೋಗಾನಂದ್‍ ಮುದ್ದಾನ್‍ ಸಂಭಾಷಣೆ, ಅರ್ಜುನ್ ಜನ್ಯ ಸಂಗೀತ, ಸುಜ್ಞಾನ್‍ ಛಾಯಾಗ್ರಹಣ ಮತ್ತು ಕೆ.ಎಂ. ಪ್ರಕಾಶ್‍ ಅವರ ಸಂಕಲನವಿದೆ.

ಆಂದೋಲನ ಡೆಸ್ಕ್

Recent Posts

ಚಾ.ನಗರ | ಬೇಡರಪುರದಲ್ಲಿ ಮತ್ತೊಂದು ಚಿರತೆ ಸೆರೆ

ಚಾಮರಾಜನಗರ : ತಾಲ್ಲೂಕಿನ ಬೇಡರಪುರ ಗ್ರಾಮದಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಇನ್ನೂ ಒಂದು ಚಿರತೆ ಸೆರೆಯಾಗಿದೆ. ಗ್ರಾಮದ ಮಲ್ಲಣ್ಣ…

55 mins ago

ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ದಾಖಲಾತಿ ಹೆಚ್ಚಿಸಿ : ಡಿಸಿ, ಸಿಇಓಗಳಿಗೆ ಮಧು ಬಂಗಾರಪ್ಪ ಸೂಚನೆ

ಬೆಂಗಳೂರು : 2026-27ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ದಾಖಲಾತಿ ಅಭಿಯಾನ ಯಶಸ್ವಿಯಾಗಿ ನಡೆಸುವಂತೆ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು…

1 hour ago

ಕಾರು-ಬೈಕ್‌ ನಡುರೆ ಭೀಕರ ಅಪಘಾತ : ಇಬ್ಬರು ಸ್ಥಳದಲ್ಲೇ ಸಾವು

ಸಿದ್ದಾಪುರ : ಎರಡು ಬೈಕ್‌ಗಳು ಮತ್ತು ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಮೃತಪಟ್ಟಿರುವ…

2 hours ago

ವಾಣಿಜ್ಯ ಬಳಕೆಯ ಸಿಲಿಂಡರ್‌ ಪೂರೈಕೆಯಲ್ಲಿ ಶೇ20 ರಷ್ಟು ಹೆಚ್ಚಳ

ಹೊಸದಿಲ್ಲಿ : ಎಲ್‌ಪಿಜಿ ಕೊರತೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದ ಹೋಟೆಲ್, ರೆಸ್ಟೋರೆಂಟ್ ಮತ್ತು ಆಹಾರ ಸಂಸ್ಕರಣಾ ಘಟಕಗಳಿಗೆ ಕೇಂದ್ರ ಪೆಟ್ರೋಲಿಯಂ ಮತ್ತು…

2 hours ago

ಇರಾನ್‌ ಡ್ರೋನ್‌ ಉತ್ಪಾದನಾ ಘಟಕದ ಮೇಲೆ ಅಮೆರಿಕ ದಾಳಿ : ಚಿತ್ರ ಬಿಡುಗಡೆ

ಟೆಹ್ರಾನ್ : ಇರಾನ್‌ನ ಡ್ರೋನ್ ಉತ್ಪಾದನಾ ಘಟಕದ ಮೇಲೆ ಅಮೆರಿಕ ಸೇನೆ ನಡೆಸಿದ ನಿಖರ ದಾಳಿಗೆ ಸಂಬಂಧಿಸಿದಂತೆ ಮಹತ್ವದ ಉಪಗ್ರಹ…

3 hours ago

ಹೊಸ ಜಾಹೀರಾತು ನೀತಿ ಮೂಲಕ ಪತ್ರಿಕೆಗಳ ದಮನಕ್ಕೆ ಮುಂದಾದ ಸರ್ಕಾರ : ಪುನರ್‌ ಪರಿಶೀಲನೆಗೆ ಒತ್ತಾಯ

ಮೈಸೂರು : ರಾಜ್ಯ ಸರ್ಕಾರವು ಜಾರಿಗೆ ತರಲು ಮುಂದಾಗಿರುವ ʻಕರ್ನಾಟಕ ಜಾಹೀರಾತು ನೀತಿ-2026ʼ ವಾರ್ತಾ ಇಲಾಖೆ ಅಧಿಕಾರಿಗಳ ವಕ್ರ ದೃಷ್ಟಿಯ…

3 hours ago