ಆಪ್ತನಿಂದಲೇ ನಟಿ ಸಂಜನಾ ಗಲ್ರಾನಿಗೆ ವಂಚನೆ

ಬೆಂಗಳೂರು: ಆಪ್ತನಿಂದಲೇ ನನಗೆ ವಂಚನೆಯಾಗಿದೆ ಎಂದು ಆರೋಪಿಸಿ ನಟಿ ಸಂಜನಾ ಗಲ್ರಾನಿ ಸಲ್ಲಿಸಿದ್ದ ಪಿಸಿಆರ್‌ ವಿಚಾರಣೆ ನಡೆಸಿರುವ 4ನೇ ಎಸಿಎಂಎಂ ನ್ಯಾಯಾಲಯವು ಸೂಕ್ತ ತನಿಖೆ ನಡೆಸುವಂತೆ ಇಂದಿರಾನಗರ ಪೊಲೀಸರಿಗೆ ಆದೇಶಿಸಿದೆ.

ತನಗೆ ಅತ್ಯಾಪ್ತನಾಗಿರುವ ರಾಹುಲ್ ತೋನ್ಸೆಯಿಂದ ವಂಚನೆಯಾಗಿದೆ. ಆತನ ವಿರುದ್ಧ ದೂರು ದಾಖಲಿಸಲು ಸಂಜನಾ ನ್ಯಾಯಾಲಯದಲ್ಲಿ ಪಿಸಿಆರ್ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ನ್ಯಾಯಾಲಯ ತನಿಖೆಗೆ ಆದೇಶಿಸಿದೆ. ಈ ಸಂಬಂಧ ಇಂದಿರಾನಗರ ಪೊಲೀಸರು ರಾಹುಲ್ ಸೇರಿದಂತೆ ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

‘ತಾನು ಗೋವಾ ಮತ್ತು ಶ್ರೀಲಂಕಾದ ಕೊಲಂಬೊದಲ್ಲಿರುವ ಕ್ಯಾಸಿನೊಗಳಲ್ಲಿ ವ್ಯವಸ್ಥಾಪಕ ನಿರ್ದೇಶಕನಾಗಿರುವುದಾಗಿ ರಾಹುಲ್‌ ತಿಳಿಸಿದ್ದ. ಕ್ಯಾಸಿನೊಗಳಲ್ಲಿ ಹಣ ವಿನಿಯೋಗಿಸಿದರೆ ಹೆಚ್ಚಿನ‌ ಲಾಭ ಗಳಿಸಬಹುದೆಂದು ಆಮಿಷ ಒಡ್ಡಿದ್ದ. ಆತನ ಮಾತು ನಂಬಿ ಕಳೆದ ಮೂರು ವರ್ಷಗಳಿಂದ ರಾಹುಲ್ ಸೇರಿದಂತೆ ಮೂವರ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ 45 ಲಕ್ಷ ರೂ. ಹಣ ಹಾಕಿದ್ದೆ. ರಾಹುಲ್ ಇದುವರೆಗೂ ಯಾವುದೇ ಲಾಭಾಂಶ ನೀಡಿಲ್ಲ. ಹಣ ಕೇಳಿದರೂ ಹಿಂದಿರುಗಿಸಿಲ್ಲ. ತಾನು ಕೊಟ್ಟ ಹಣವನ್ನು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿ ಲಾಭ ಮಾಡಿಕೊಂಡಿದ್ದಾನೆ. ನನ್ನ ಘನತೆಗೆ ಧಕ್ಕೆ ತರುವಂತಹ ಆರೋಪಗಳನ್ನೂ ಮಾಡಿದ್ದಾನೆ’ ಎಂದು ಸಂಜನಾ ದೂರಿನಲ್ಲಿ ಆರೋಪಿಸಿದ್ದಾರೆ.

× Chat with us