ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡ್ತಿದೆ ಕೋಟಿಗೊಬ್ಬ 3: ಕಲೆಕ್ಷನ್‌ ಎಷ್ಟು ಗೊತ್ತೆ?

ಬೆಂಗಳೂರು: ನಟ ಕಿಚ್ಚ ಸುದೀಪ್‌ ಅಭಿನಯದ ‘ಕೋಟಿಗೊಬ್ಬ 3’ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಸದ್ದು ಮಾಡುತ್ತಿದ್ದು, ಕೋಟಿ ಕೋಟಿ ಬಾಚಿಕೊಂಡಿದೆ.

ಚಿತ್ರದ ಗಳಿಕೆ ಬಗ್ಗೆ ನಟ ಸುದೀಪ್ ಅವರೇ ಟ್ವಿಟರ್​ನಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿದ್ದು, ಚಿತ್ರ ಬಿಡುಗಡೆಯಾದ ನಾಲ್ಕೇ ದಿನದಲ್ಲಿ 40.5 ಕೋಟಿ ರೂ.ಗೂ ಅಧಿಕ ಹಣವನ್ನು ಬಾಚಿಕೊಂಡಿದೆ.

ವಾರಾಂತ್ಯ ಹಾಗೂ ಸಾಲು ಸಾಲು ರಜೆಗಳಿದ್ದ ಪರಿಣಾಮ ಚಿತ್ರದ ಕಲೆಕ್ಷನ್‌ನಲ್ಲಿ ಏರಿಕೆಯಾಗಿದೆ. ಈ ವಾರ ಕೂಡ ಚಿತ್ರ ಉತ್ತಮವಾಗಿ ಪ್ರದರ್ಶನ ಕಾಣುತ್ತಿದ್ದು, ಇನ್ನಷ್ಟು ಗಳಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

‘ಕೋಟಿಗೊಬ್ಬ 3’ ಒಂದು ದಿನ ತಡವಾಗಿ ಬಿಡುಗಡೆಯಾದರೂ ಹಣ ಗಳಿಕೆಯಲ್ಲಿ ಹಿಂದೆ ಬಿದ್ದಿಲ್ಲ. ಇದೀಗ ಚಿತ್ರತಂಡದಿಂದ ಅಧಿಕೃತ ಲೆಕ್ಕ ಬಿಡುಗಡೆಯಾಗಿದ್ದು, 4 ದಿನಕ್ಕೆ 40.5 ಕೋಟಿ ರೂ. ಗಳಿಸುವುದರೊಂದಿಗೆ ಯಶಸ್ಸು ಕಂಡಿದೆ.

× Chat with us