ಮಂಡ್ಯ: ಮಂಡ್ಯ ಲೋಕಸಭಾ ಚುನಾವಣಾ ಅಖಾಡ ರಂಗೇರಿದೆ. ಈ ಬಾರಿ ಜೆಡಿಎಸ್ ನೇರ ಸ್ಪರ್ಧೇ ಮಾಡದೇ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಕಣಕ್ಕಿಳಿದಿದೆ. ಇತ್ತ ಕಾಂಗ್ರೆಸ್, ಬಿಜೆಪಿ-ಜೆಡಿಎಸ್ ಅಸ್ತ್ರಕ್ಕೆ ಪ್ರತ್ಯಾಸ್ತ್ರ ಹೂಡಿದ್ದು, ಬಲಿಷ್ಠ ಅಭ್ಯರ್ಥಿಯನ್ನೇ ನೇಮಿಸಿದೆ.
ಇತ್ತ ಬಿಜೆಪಿಯಿಂದ ಟಿಕೆಟ್ ಸಿಗುವ ಭರವಸೆ ಹೊಂದಿದ್ದ ಸಂಸದೆ ಸುಮಲತಾ ಅಂಬರೀಶ್‌ಗೆ ಬಿಜೆಪಿ ಶಾಕ್ ನೀಡಿತ್ತು. ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯನ್ನಾಗಿ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿತು.
ಇದರ ಬೆನ್ನಲ್ಲೇ ಸುಮಲತಾ ಪಕ್ಷ ಹೇಳಿದರೇ ಚುನಾವಣಾ ಪ್ರಚಾರದಲ್ಲಿ ಭಾಗವಹಿಸುತ್ತೇನೆ ಎಂದು ಹೇಳಿದರು. ಇವರ ಮಾತಿಗೆ ಧನಿ ಗೂಡಿಸಿದ್ದ ದಾಸ, ಅಮ್ಮ ಬಾವಿಗೆ ಬೀಳು ಎಂದರೂ ಬೀಳಲು ಸಿದ್ದನಾಗಿರುವೆ ಎಂದು ಹೇಳಿಕೆ ನೀಡಿದ್ದರು.
ಈ ಎಲ್ಲಾ ಪ್ರಕರಣಗಳಿಂದ ಈ ಬಾರಿ ಮಂಡ್ಯದಲ್ಲಿ ದರ್ಶನ್, ಎಚ್‌ಡಿಕೆ ಪರವಾಗಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಲಿದ್ದಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಡಿಬಾಸ್ ಏಕಾಏಕಿ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರ ಮತ ಶಿಕಾರಿಗೆ ಸಜ್ಜಾಗಿಬಿಟ್ಟಿದ್ದರು.
ಇದು ಎಚ್‌ಡಿಕೆ ಹಾಗೂ ಮೈತ್ರಿ ಪಕ್ಷದ ದ್ವಂದ್ವಕ್ಕೆ ಕಾರಣವಾಗಿತ್ತು. ಇದಕ್ಕೆ ಸುಮಲತಾ ಹಾಗೂ ಡಿ ಬಾಸ್ ಇಬ್ಬರು ಸ್ಪಷ್ಟನೆ ಕೂಡಾ ನೀಡದ್ದಾರೆ. ಸುಮಲತಾ ಪ್ರಚಾರದ ಬಗ್ಗೆ ಮಾತನಾಡಿ, ಅದು ಅವರ ವಯಕ್ತಿಕ ಎಲ್ಲದಕ್ಕೂ ನಮ್ಮನ್ನೇ ಕೇಳಿ ಎನ್ನವುದು ಸರಿಯಲ್ಲ ಎಂದರೆ, ಡಿಬಾಸ್ ನಾನು ಪಕ್ಷದ ಪರವಾಗಿ ಬಂದಿಲ್ಲ ವ್ಯಕ್ತಿಗಾಗಿ ಬಂದಿದ್ದೇನೆ ಎಂದಿದ್ದರು.
ಇವತ್ತು (ಏ.23, ಮಂಗಳವಾರ) ಒಂದು ಹೆಜ್ಜೆ ಮುಂದೆ ಹೋಗಿ ಕೃಷಿ ಸಚಿವ ಚೆಲುವರಾಯ ಸ್ವಾಮಿ ಅವರನ್ನು ಕೊಂಡಾಡಿದ್ದಾರೆ. ಇದು ಎಲ್ಲರಲ್ಲಿಯೂ ಅಚ್ಚರಿಗೆ ಕಾರಣವಾಗಿದೆ.
ಜಿಲ್ಲೆಯ ನಾಗಮಂಗಲ ಕ್ಷೇತ್ರದ ಬೆಳ್ಳೂರು ಗ್ರಾಮದಲ್ಲಿ ಮತ ಯಾಚಿಸಿ ರೋಡ್ ಶೋ ನಡೆಸುವ ಸಂದರ್ಭದಲ್ಲಿ ಮಾತನಾಡಿರುವ ನಟ ದರ್ಶನ್, ಮಂಡ್ಯದಲ್ಲಿ ಚೆಲುವರಾಯಸ್ವಾಮಿ ಅವರ ಕೈ ಬಲಪಡಿಸಲು ಸ್ಟಾರ್ ಚಂದ್ರು ಬೆಂಬಲಿಸುವಂತೆ ಮನವಿ ಮಾಡಿದರು.
ನಾನು ಇವತ್ತು ಕಾಂಗ್ರೆಸ್ ಪರ ಮತ ಯಾಚಿಸಲು ಒಂದು ನಿರ್ಧಿಷ್ಟ ಕಾರಣವಿದೆ. 2019ರ ಚುನಾವಣೆ ವೇಳೆ ಚೆಲುವಣ್ಣ ನಮಗೆ ಸಹಾಯ ಮಾಡಿದರು. ಈ ಸಹಾಯವನ್ನು ನಾನು 7 ಜನ್ಮ ಎತ್ತಿದರು ತೀರಿಸಲು ಆಗವುದಿಲ್ಲ. ಹಾಗಾಗಿ ನಾನು ಕಾಂಗ್ರೆಸ್ ಪರ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದೇನೆ ಎಂದು ಅಸಲಿ ಕಾರಣವನ್ನು ವಿವರಿಸಿದರು.
2019 ರಲ್ಲಿ ಮೊದಲ ಬಾರಿಗೆ ಸಂಸದೆ ಸುಮಲತಾ ಅಂಬರೀಶ್ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದ್ರು. ಈ ವೇಳೆ ನಟ ದರ್ಶನ್ ಹಾಗೂ ಯಶ್ ಜಿಲ್ಲೆಯಾದ್ಯಂತ ಪ್ರಚಾರ ಮಾಡಿ, ಸುಮಲತಾ ಗೆಲುವಿಗೆ ಬೆನ್ನೆಲುಬಾಗಿದ್ದರು.
ಬಾರಾಮತಿ : ಭಾರತೀಯ ರಾಜಕಾರಣದಲ್ಲಿ ಅನೇಕ ರಾಜಕೀಯ ನಾಯಕರು ವಿಮಾನ ದುರಂತದಲ್ಲಿ ಮೃತಪಟ್ಟಿದ್ದಾರೆ. ಈ ಹಿಂದೆ ವಿಮಾನ ಅಪಘಾತದಲ್ಲಿ ಯಾವೆಲ್ಲಾ…
ಮೈಸೂರು : ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿ ಡ್ರಗ್ಸ್ ಲ್ಯಾಬ್ ಇರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ರಾಷ್ಟ್ರಿಯ ಮಾದಕ ದ್ರವ್ಯ ನಿಯಂತ್ರಣ…
ಬೆಂಗಳೂರು : 25 ನಿಗಮ ಮಂಡಳಿಗಳ ಅಧ್ಯಕ್ಷರ ಅಧಿಕಾರಾವಧಿ ಮುಂದುವರಿಕೆ ಮಾಡಿ ರಾಜ್ಯ ಸರ್ಕಾರ ಆದೇಶ ಮಾಡಿದೆ. ಶಾಸಕರಿಗೆ ಮಾತ್ರ…
ಮೈಸೂರು : ಸೈಬರ್ ವಂಚಕರು ವಾಟ್ಸಾಪ್ ಕರೆ ಮೂಲಕ ಹೂಡಿದ ಡಿಜಿಟಲ್ ಅರೆಸ್ಟ್ ಕುತಂತ್ರಕ್ಕೆ ಬಲಿಯಾಗಿ ವಿವೇಕಾನಂದ ನಗರದ ಹಿರಿಯ…
ಬೆಂಗಳೂರು : ಕೆಎಸ್‌ಆರ್‌ಟಿಸಿ ಸ್ಟಾಫ್ ವರ್ಕರ್ಸ್ ಫೆಡರೇಷನ್ ಅಧ್ಯಕ್ಷ, ಕಾರ್ಮಿಕ ಮುಖಂಡ ಎಚ್.ವಿಅನಂತ್ ಸುಬ್ಬರಾವ್ (85) ಬುಧವಾರ ಸಂಜೆ ನಿಧನರಾಗಿದ್ದಾರೆ.…
ಮೈಸೂರು : ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿದ್ದ 25 ವರ್ಷದ ಗಂಡು ಜಿರಾಫೆ ‘ಯುವರಾಜ’ ಬುಧವಾರ ಬೆಳಿಗ್ಗೆ ಸಾವನ್ನಪ್ಪಿದೆ. 1987ರಲ್ಲಿ ಜರ್ಮನಿಯಿಂದ…