ಕನ್ನಡದ ಜನಪ್ರಿಯ ನಟ-ನಿರ್ದೇಶಕ ಕಾಶೀನಾಥ್ ಅವರ ಮಗ ಅಭಿಮನ್ಯು ಚಿತ್ರರಂಗಕ್ಕೆ ಬಂದು 15 ವರ್ಷಗಳಾದರೂ ಒಂದೊಳ್ಳೆಯ ಗೆಲುವು ನೋಡುವುದಕ್ಕೆ ಸಾಧ್ಯವಾಗುತ್ತಲೇ ಇಲ್ಲ. ಒಂದು ದೊಡ್ಡ ಬ್ರೇಕ್‍ಗೆ ಕಾಯುತ್ತಿರುವ ಅಭಿಮನ್ಯು, ಇದೀಗ ಸದ್ದಿಲ್ಲದೆ ಹೊಸ ಚಿತ್ರದಲ್ಲಿ ನಟಿಸುವುದಕ್ಕೆ ಸಜ್ಜಾಗಿದ್ದಾರೆ.
ಅಭಿಮನ್ಯು ಅಭಿನಯದ ಹೊಸ ಚಿತ್ರ ‘ಅಭಿಮನ್ಯು S/O ಕಾಶಿನಾಥ್’. ಈ ಚಿತ್ರದ ಮುಹೂರ್ತ ಇತ್ತೀಚೆಗೆ ಬೆಂಗಳೂರಿನ ಸಹಕಾರ ನಗರದ ಛೇರ್ಮನ್ ಕ್ಲಬ್ ನಲ್ಲಿ ನಡೆಯಿತು. ಈ ಚಿತ್ರದ ಮುಹೂರ್ತಕ್ಕೆ ವಿಶೇಷ ಅತಿಥಿಯಾಗಿ ಕೋಮಲ್ ಕುಮಾರ್ ಆಗಮಿಸಿ, ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭ ಹಾರೈಸಿದರು.
ಈ ಹಿಂದೆ ಜಗ್ಗೇಶ್ ಅಭಿನಯದ ‘8MM’ ಸೇರಿದಂತೆ ಒಂದಿಷ್ಟು ಚಿತ್ರಗಳಲ್ಲಿ ಸಹನಿರ್ದೇಶಕರಾಗಿ ಕೆಲಸ ಮಾಡಿರುವ ರಾಜ್ ಮುರಳಿ ಈಗ ಪೂರ್ಣ ಪ್ರಮಾಣದ ನಿರ್ದೇಶಕರಾಗಿ ಹೆಜ್ಜೆ ಇಡುತ್ತಿದ್ದಾರೆ. ‘ಅಭಿಮನ್ಯು S/O ಕಾಶಿನಾಥ್’ ಚಿತ್ರದ ಮೂಲಕ ರಾಜ್ ಕಾಮಿಡಿ ಡ್ರಾಮಾ ಕಥೆ ಹೇಳೋದಿಕ್ಕೆ ಹೊರಟ್ಟಿದ್ದಾರೆ. ೀ ಚಿತ್ರವನ್ನು ಐಸಿರಿ ಪ್ರೊಡಕ್ಷನ್ ನಡಿ ಮಾರಪ್ಪ ಶ್ರೀನಿವಾಸ್ ನಿರ್ಮಾಣ ಮಾಡುತ್ತಿದ್ದಾರೆ.
‘ಅಭಿಮನ್ಯು S/O ಕಾಶಿನಾಥ್’ ಚಿತ್ರವು ಕಾಶೀನಾಥ್ ಶೈಲಿಯ ಚಿತ್ರವಂತೆ. ಈ ಕುರಿತು ಮಾತನಾಡುವ ಅಭಿಮನ್ಯು, ‘ರಾಜ್‌ಮುರಳಿ ಅಪ್ಪನ ಜಾನರ್ ಇಟ್ಕೊಂಡು ಈಗಿನ ಕಾಲದ ಹುಡುಗರಿಗೆ ಚಿತ್ರ ಮಾಡುತ್ತಿದ್ದಾರೆ. ಅಪ್ಪ ಇದ್ದಾಗ ನನಗೆ ಬರುತ್ತಿದ್ದ ಆಫರ್ ಇಂತಹದ್ದೇ. ಅಪ್ಪನ ನಿರ್ದೇಶನದಲ್ಲಿ ನಾನು ನಟನೆ ಮಾಡಬೇಕು ಎಂದು ಪ್ರಯತ್ನಗಳಾದವು. ‘ಅನಂತನ ಅವಾಂತರ – 2’, ‘ಅನುಭವ – 2’ ತರಹದ ಆಫರ್‍ಗಳು ಬರುತ್ತಿದ್ದವು. ಆ ತರಹದ ಪಾತ್ರಗಳು ನನಗೆ ಹೊಂದುವುದಿಲ್ಲ ಎಂದು ಅಪ್ಪನಿಗೂ ಅನಿಸುತ್ತಿತ್ತು. ನನಗೂ ಅದನ್ನು ಮಾಡುತ್ತೇನೆ ಅನ್ನೋ ವಿಶ್ವಾಸ ಇರಲಿಲ್ಲ. ಈಗ ಅಂಥದ್ದೇ ಒಂದು ಪ್ರಯತ್ನ ಮಾಡುತ್ತಿದ್ದೇವೆ’ ಎಂದರು.
‘ಅಭಿಮನ್ಯು S/O ಕಾಶಿನಾಥ್’ ಚಿತ್ರಕ್ಕೆ ‘ಹೊಸ ಅನುಭವ’ ಎಂಬ ಅಡಿಬರಹ ಇದೆ. ಚಿತ್ರದಲ್ಲಿ ಅಭಿಮನ್ಯುಗೆ ಸ್ಪಂದನ ಸೋಮಣ್ಣ, ವಿಜಯಶ್ರೀ ಕಲ್ಬುರ್ಗಿ ನಾಯಕಿಯರಾಗಿ ನಟಿಸುತ್ತಿದ್ದಾರೆ. ಸಂದೀಪ್ ವಲ್ಲೂರಿ ಛಾಯಾಗ್ರಹಣ, ಅಭಿನಂದನ್ ಕಶ್ಯಪ್ ಸಂಗೀತ ಈ ಚಿತ್ರಕ್ಕಿದೆ.
ನವೆಂಬರ್ ತಿಂಗಳಿನಿಂದ ‘ಅಭಿಮನ್ಯು S/O ಕಾಶಿನಾಥ್’ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದ್ದು, ಚಿಕ್ಕಮಗಳೂರು, ಮೈಸೂರು, ಹೈದ್ರಾಬಾದ್ ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ.
ಮೈಸೂರು: ಸಕ್ಕರೆ ನಾಡು ಮಂಡ್ಯದಲ್ಲಿ ಇಂದಿನಿಂದ (ಡಿ.20) 87ನೇ ಕನ್ನಡ ಸಾಹಿತ್ಯ ಸಮ್ಮೇಳನ ಶುರುವಾಗಿದೆ. ಆದರೆ ಈ ಸಮ್ಮೇಳನವನ್ನು ಯಾವ…
ಮಂಡ್ಯ: ಹಾಸ್ಯ ಸಾಹಿತ್ಯ ಆಧುನಿಕ ಬದುಕಿನಗೆ ಔಷಧಿಯಾಗಿದೆ ಎಂದು ಪ್ರಾಧ್ಯಾಪಕ ಡಾ.ಜೆ.ಕರಿಯಪ್ಪ ಮಾಳಿಗೆ ಹೇಳಿದರು. 87ಅಖಿಲ ಭಾರತ ಕನ್ನಡ ಸಾಹಿತ್ಯ…
ಮಡಿಕೇರಿ: ಸಿ ಮತ್ತು ಡಿ ಭೂಮಿಗೆ ಸಂಬಂಧಿಸಿದಂತೆ ಕಂದಾಯ ಸಚಿವರು ಉನ್ನತ ಮಟ್ಟದ ಸಮಿತಿ ರಚನೆಗೆ ಮುಂದಾಗಿದ್ದು, ಸಮಸ್ಯೆ ಪರಿಹಾರವಾಗಲಿ…
ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅಕ್ಷೇಪಾರ್ಹ ಪದ ಬಳಸಿದ್ದಾರೆ ಎಂಬ ಆರೋಪದ ಮೇಲೆ ಎಂಎಲ್‌ಸಿ ಸಿ.ಟಿ.ರವಿಯವರನ್ನು ಪೊಲೀಸರೇ ಕೊಲೆ…
ವಿರಾಜಪೇಟೆ: ಗೋಣಿಕೊಪ್ಪ-ಕೇರಳ ಹೆದ್ದಾರಿಯ ಬಿಟ್ಟಂಗಾಲ ಆಟೋ ನಿಲ್ದಾಣದ ಬಳಿ ಚಿರತೆ ಬೆಕ್ಕೊಂದು ಅಪಘಾತಕೀಡಾಗಿ ಸಾವನಪ್ಪಿದ ಘಟನೆ ಶುಕ್ರವಾರ ರಾತ್ರಿ 9…
ಮೈಸೂರು: ನಟ ದರ್ಶನ್ ಅವರು ಮೈಸೂರಿನ ತಿ.ನರಸೀಪುರ ಮುಖ್ಯರಸ್ತೆಯಲ್ಲಿರುವ ಕೆಂಪಯ್ಯನಹುಂಡಿ ಬಳಿಯ ತಮ್ಮ ಫಾರ್ಮ್‌ಹೌಸ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಶುಕ್ರವಾರ ಇಲ್ಲಿಗ…