ಮನರಂಜನೆ

ದಿಢೀರ್‌ ಫೇಮಸ್‌ ಆದ ಯುವತಿ…. ಸೋಶಿಯಲ್‌ ಮಿಡಿಯಾದಲ್ಲಿ ಈ ಹಾಡಿನದ್ದೆ ಹವಾ…!

ಮೈಸೂರು : ಸಾಮಾಜಿಕ ಜಾಲತಾಣವೇ ಹಾಗೆ, ಜನಸಾಮಾನ್ಯರನ್ನು ರಾತ್ರಿ ಬೆಳಗಾಗುವಷ್ಟರಲ್ಲಿ ಫೇಮಸ್ ಮಾಡಿಬಿಡುತ್ತದೆ. ಕೆಲವರು ರೀಲ್ಸ್ ಸೇರಿದಂತೆ ನಾನಾ ರೀತಿಯ ವೀಡಿಯೋ ಮಾಡಿ ಫೇಮಸ್ ಆಗಲು ನೋಡುತ್ತಾರೆ. ಇನ್ನು ಕೆಲವರು ಒಂದೇ ಒಂದು ವೀಡಿಯೋದಿಂದನೇ ಹವಾ ಸೃಷ್ಟಿಸಿ ಬಿಡುತ್ತಾರೆ. ಇದಕ್ಕೆ ಈ ಹುಡುಗಿಯೇ ಸಾಕ್ಷಿ. ಹೌದು, ಕನ್ನಡ ಸಿನಿಮಾದ ಹಾಡೊಂದನ್ನು ತನ್ನದೇ ಧಾಟಿಯಲ್ಲಿ ಹಾಡಿದ ಹುಡುಗಿಯೊಬ್ಬಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದಾಳೆ. ಈ ವೀಡಿಯೋಗೆ ನೆಟ್ಟಿಗರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿವೆ.

ಕಳೆದ ಮೂರ್ನಾಲ್ಕು ದಿನಗಳಿಂದ ಸಾಮಾಜಿಕ ಜಾಲತಾಣ ಸೇರಿದಂತೆ ಎಲ್ಲರ ಬಾಯಲ್ಲಿ ಹೂವಿನ ಬಾಣದಂತೆ ಹಾಡು ಕೇಳಿಬರುತ್ತಿದೆ. ಬಿರುಗಾಳಿ ಚಿತ್ರದ ಈ ಹಾಡು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ಈ ಹಾಡು ಇಷ್ಟೊಂದು ಫೇಮಸ್ ಆಗಲು ಕಾರಣ ನಿತ್ಯಾಶ್ರೀ ಎಂಬ ಹುಡುಗಿ. ಸ್ನೇಹಿತರ ಗುಂಪಿನಲ್ಲಿ ತಮಾಷೆಗೆಂದು ಹಾಡಿದ ‘ಹೂವಿನ ಬಾಣದಂತೆ’ ಹಾಡು ಸದ್ಯ ಎಲ್ಲೆಡೆ ವೈರಲ್ ಆಗಿದೆ. ಇನ್ಸ್ಟಗ್ರಾಮ್‌ನಲ್ಲಿಮೊದಲು 150 ಮಂದಿ ಫಾಲೋವರ್ಸ್ ಅನ್ನು ಹೊಂದಿದ್ದ ನಿತ್ಯಾಶ್ರೀ ಈ ಹಾಡು ವೈರಲ್ ಆದ ಬಳಿಕ 40 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಅನ್ನು ಹೊಂದಿದ್ದಾಳೆ.

ತನ್ನ ಅಕ್ಕಪಕ್ಕದಲ್ಲಿ ನಿಂತಿರುವ ಸ್ನೇಹಿತರು ಈಕೆ ಹಾಡು ಹಾಡುವ ರೀತಿಗೆ ನಕ್ಕಿದ್ದಾರೆ. ಆದರೆ ಈಕೆ ಮಾತ್ರ ಹಾಡು ಹಾಡುವುದನ್ನು ಯಾವುದೇ ಕಾರಣಕ್ಕೂ ನಿಲ್ಲಿಸಿಲ್ಲ. ಈ ವೀಡಿಯೋದ ಕೊನೆಗೆ ಎಲ್ಲರೂ ಚಪ್ಪಾಳೆ ತಟ್ಟಿ ಹುರಿದುಂಬಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಭಿನ್ನ ಧಾಟಿಯಲ್ಲಿ ನಿತ್ಯಾಶ್ರೀ ಈ ಹಾಡು ಹಾಡಿದ್ದು, ಒರಿಜಿನಲ್ ಹಾಡೇ ಮರೆತು ಹೋಗುವಂತೆ ಮಾಡಿದ್ದಾಳೆ. ಈ ಮುದ್ದಾದ ಹಾಡಿನ ವಿಡಿಯೋ ಸದ್ಯ ನೆಟ್ಟಿಗರ ಮನಸ್ಸನ್ನು ಗೆದ್ದುಕೊಂಡಿದೆ.

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಮೊಸಳೆಕೊಪ್ಪ ಗ್ರಾಮದ ನಿತ್ಯಾಶ್ರೀ ಪದವಿ ಶಿಕ್ಷಣ ಪಡೆಯಲು ಮೈಸೂರಿನಲ್ಲಿ ನೆಲೆಸಿದ್ದಾಳೆ. ಇನ್ನು ವೈರಲ್ ಹಾಡಿನ ಬಗ್ಗೆ ಮಾತನಾಡಿದ ನಿತ್ಯಾಶ್ರೀ, ನಾನು ನನ್ನ ಸ್ನೇಹಿತರನ್ನು ಖುಷಿ ಪಡಿಸಲು ಹಾಡಿದ್ದೆ. ಇದು ಇಷ್ಟು ವೈರಲ್ ಆಗತ್ತೆ ಎಂದು ಗೊತ್ತಿರಲಿಲ್ಲ. ತುಂಬಾ ಖುಷಿ ಆಗಿದೆ ಎಂದು ಸಂತೋಷವನ್ನು ವ್ಯಕ್ತಪಡಿಸಿದ್ದಾಳೆ. ನನ್ನ ಗುರುಗಳು ಕೃಷ್ಣಮೂರ್ತಿ ಸರ್ ಹಾಡನ್ನು ರೆಕಾರ್ಡ್ ಮಾಡಿ ಇನ್ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ರು. ಅದು ರಾತ್ರೋರಾತ್ರಿ ಸಕ್ಕತ್ ವೈರಲ್ ಆಗಿದೆ. ಎಲ್ಲರೂ ಕೂಡ ನನ್ನ ಗುರುತು ಹಿಡಿತಿದ್ದಾರೆ. ನನ್ನ ಜೊತೆ ಸೆಲ್ಫಿ ಕೇಳಿದ್ದಾರೆ. ನನಗೆ ನಟಿ ಆಗಬೇಕು, ಆ್ಯಕ್ಟಿಂಗ್ ಮಾಡಬೇಕು ಎಂಬ ಆಸೆ ಇದೆ. ಯಶ್ ನನ್ನ ಫೇವರಿಟ್ ನಟ. ಅವರ ಜೊತೆ ಒಂದು ಸೈಡ್ ರೋಲ್ ಮಾಡಬೇಕೆಂಬ ಆಸೆಯಿದೆ ಎಂದು ತನ್ನ ಆಸೆಯನ್ನು ವ್ಯಕ್ತಪಡಿಸಿದ್ದಾಳೆ.

ಇದಿಷ್ಟು ಮಾತ್ರವಲ್ಲದೇ ಆಕೆಯ ರೀತಿಯೇ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಕೂಡ ವೇದಿಕೆಯಲ್ಲಿ ಹಾಡಲು ಪ್ರಯತ್ನಿಸಿದ್ದಾರೆ. ಅಲ್ಲದೇ, ನಿತ್ಯಾಶ್ರೀ ಗಾಯನಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಆ ಮಗು ತುಂಬ ಕ್ಯೂಟ್ ಆಗಿ ಎಲ್ಲ ಕಡೆ ಹಾಡುತ್ತಿದ್ದಾಳೆ. ಅವಳ ವಿಡಿಯೋಗಳು ದಿನಕ್ಕೆ 10 ಸಲ ನನಗೆ ಬರುತ್ತಿವೆ. ಎಲ್ಲೇ ಇದ್ದರೂ ಅವಳಿಗೆ ದೇವರು ಆಶೀರ್ವಾದ ಮಾಡಲಿ. ತುಂಬ ಮುಗ್ಧವಾಗಿದ್ದೀಯ ಕಂದ. ಹಾಗೆಯೇ ಇನೋಸೆಂಟ್ ಆಗಿರು. ಒಳ್ಳೆಯದಾಗಲಿ ಎಂದು ಅರ್ಜುನ್ ಜನ್ಯ ಆಶೀರ್ವಾದ ಮಾಡಿದ್ದಾರೆ.

ಆಂದೋಲನ ಡೆಸ್ಕ್

Recent Posts

ಹನೂರು: ಏಕಕಾಲದಲ್ಲೇ ಕಾಣಿಸಿಕೊಂಡ ಎರಡು ಚಿರತೆಗಳು

ಹನೂರು: ತಾಲೂಕಿನ ಲೊಕ್ಕನಹಳ್ಳಿ ಹೋಬಳಿ ವ್ಯಾಪ್ತಿಯ ಮಲೆ ಮಹದೇಶ್ವರ ಅರಣ್ಯ ಪ್ರದೇಶ ವ್ಯಾಪ್ತಿಯ ಬಳಗುಡ್ಡ ಬಿಟ್ ವ್ಯಾಪ್ತಿಯಲ್ಲಿ ಏಕಕಾಲಕ್ಕೆ ಎರಡು…

1 hour ago

ನಾಳೆಯೊಳಗೆ ಪ್ರಯಾಣಿಕರಿಗೆ ಮರುಪಾವತಿ ಮಾಡಿ: ಇಂಡಿಗೋ ಏರ್‌ಲೈನ್ಸ್‌ಗೆ ಗಡುವು ನೀಡಿದ ಕೇಂದ್ರ ಸರ್ಕಾರ

ನವದೆಹಲಿ: ನಾಗರಿಕ ವಿಮಾನಯಾನ ಸಚಿವಾಲಯವು ಇಂಡಿಗೋದ ಬಾಕಿ ಇರುವ ಎಲ್ಲಾ ಪ್ರಯಾಣಿಕರ ಮರುಪಾವತಿಗಳನ್ನು ವಿಳಂಬವಿಲ್ಲದೇ ಪಾವತಿಸಲು ಆದೇಶಿಸಿದೆ. ರದ್ದಾದ ಅಥವಾ…

2 hours ago

ಡಿ.ಕೆ.ಶಿವಕುಮಾರ್‌ ಸಂಪುಟದಲ್ಲಿ ನನಗೆ ಸಚಿವ ಸ್ಥಾನ ಬೇಡ: ಮಾಜಿ ಸಚಿವ ಕೆ.ಎನ್.ರಾಜಣ್ಣ

ತುಮಕೂರು: ರಾಜ್ಯದಲ್ಲಿ ಸಿಎಂ ಸ್ಥಾನ ಬದಲಾವಣೆ ಚರ್ಚೆ ಬೆನ್ನಲ್ಲೇ ಮಾಜಿ ಸಚಿವ ಕೆ.ಎನ್.ರಾಜಣ್ಣ ಮಹತ್ವದ ಹೇಳಿಕೆ ಕೊಟ್ಟಿದ್ದಾರೆ. ಈ ಕುರಿತು…

2 hours ago

ನನ್ನನ್ನು ಹೆದರಿಸ್ತೀನಿ ಅಂದ್ರೆ ಅದು ಸಾಧ್ಯವಿಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್‌ ಪ್ರತಿಕ್ರಿಯೆ

ಹಾಸನ: ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದಲ್ಲಿ ದೆಹಲಿ ಪೊಲೀಸರು ನೋಟಿಸ್‌ ಕೊಟ್ಟ ವಿಚಾರಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು…

3 hours ago

ಹೇಮಾವತಿ ಜಲಾಶಯದ ಬಳಿ ಉದ್ಯಾನವನ ನಿರ್ಮಿಸಲು ಸಿಎಂ ಸಿದ್ದರಾಮಯ್ಯ ಭರವಸೆ

ಹಾಸನ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಒಂದು ವರ್ಷದೊಳಗೆ ಎಲ್ಲ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದು, ಕರ್ನಾಟಕದ ಇತಿಹಾಸದಲ್ಲಿಯೇ ಕಾಂಗ್ರೆಸ್…

3 hours ago

ಮೈಸೂರು| ಜಮೀನಿನಲ್ಲಿ ಭಾರೀ ಗಾತ್ರದ ಹೆಬ್ಬಾವು ಪತ್ತೆ

ನಂಜನಗೂಡು: ಜಮೀನಿನಲ್ಲಿ ಭಾರೀ ಗಾತ್ರದ ಹೆಬ್ಬಾವು ಪತ್ತೆಯಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿಗಳು ರಕ್ಷಿಸಿ ಸುರಕ್ಷಿತ ಪ್ರದೇಶಕ್ಕೆ ಬಿಟ್ಟಿದ್ದಾರೆ. ಜಿಲ್ಲೆಯ ನಂಜನಗೂಡು…

3 hours ago