ಕಿರು ಬಾವಿಯಲ್ಲಿ ಬಿದ್ದ ಆನೆ ಮರಿ ಪರದಾಟ

ಕೊಡಗು: ಇಲ್ಲಿನ ಗೋಣಿಕೊಪ್ಪ ಬಳಿಯ ದೇವರಪುರ ಭದ್ರಗೊಳದ ತೋಟವೊಂದರ ಕಿರು ಬಾವಿಗೆ ಆನೆ ಮರಿ ಬಿದ್ದು ರಕ್ಷಣೆಗಾಗಿ ಪರದಾಡುತ್ತಿದೆ.

ಭದ್ರಗೊಳದ ಎಂ.ಎಂ.ಸುಬ್ರಮಣಿ ಅವರ ತೋಟದ ಕಿರು ಬಾವಿಗೆ ಆನೆ ಮರಿ ಆಕಸ್ಮಿಕವಾಗಿ ಬಿದ್ದಿದೆ. ಬಾವಿಯಲ್ಲಿ ಸಿಲುಕಿಕೊಂಡ ಆನೆ ಮರಿ ಹೊರ ಬರಲಾಗದೇ ಒದ್ದಾಡುತ್ತಿದೆ.

ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ಮೂಲಕ ಆನೆ ಮರಿ ರಕ್ಷಿಸುವ ಪ್ರಯತ್ನ ನಡೆಸುತ್ತಿದ್ದಾರೆ.