ಬೆಂಗಳೂರು : ಇನ್ಮುಂದೆ ಶಾಲೆಗಳಿಗೆ ತಡವಾಗಿ ಬರುವ ಶಿಕ್ಷಕರುಗಳಿಗೆ, ಮತ್ತು ಅನಧಿಕೃತವಾಗಿ ಗೈರಾಗುವ ಶಿಕ್ಷಕರುಗಳಿಗೆ ಕಡಿವಾಣ ಹಾಕಲು ಶಿಕ್ಷಣ ಇಲಾಖೆಯು ನೂತನವಾದ ರೂಲ್ಸ್ ಒಂದನ್ನು ಜಾರಿಮಾಡಿದೆ.
ರಾಜ್ಯದ ಎಲ್ಲ ಶಿಕ್ಷಕರುಗಳು ಇನ್ಮುಂದೆ ಶಾಲಾ ಆರಂಭದ 15 ನಿಮಿಷಕ್ಕಿಂತ ಮುಂಚೆ ಶಾಲೆಯಲ್ಲಿರಬೇಕು ಹಾಗೂ ಹಾಜರಾತಿಗೆ ಕಡ್ಡಾಯವಾಗಿ ಬಯೋಮೆಟ್ರಿಕ್ ಬಳಸುವಂತೆ ತಿಳಿಸಿದೆ.
ರಾಜ್ಯದ ಶಿಕ್ಷಕರುಗಳ ಕಾರ್ಯವೈಖರಿಯನ್ನು ಚುರುಕುಗೊಳಿಸುವ ಉದ್ದೇಶದಿಂದಾಗಿ ಈ ಕಟ್ಟುನಿಟ್ಟಿನ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಇಲಾಖೆ ತಿಳಿಸಿದೆ.
ಈ ಹಿಂದೆ ಕಠಿಣ ಕ್ರಮವನ್ನು ಜರುಗಿಸಲಾಗಿತ್ತು.
ಕಳೆದ ಆಗಸ್ಟ್ ತಿಂಗಳಿನಲ್ಲಿ ಶಿಕ್ಷಣ ಇಲಾಖೆಯ ಸಚಿವ ಬಿ.ಸಿ.ನಾಗೇಶ್ ಅವರು ಶಾಲೆಗಳಿಗೆ ತಡವಾಗಿ ಬರುವ ಶಿಕ್ಷಕರುಗಳಿಗೆ, ಮತ್ತು ಅನಧಿಕೃತವಾಗಿ ಗೈರಾಗುವ ಶಿಕ್ಷಕರುಗಳಿಗೆ ಕಠಿಣವಾದ ಕ್ರಮವನ್ನು ಜರುಗಿಸುವಂತೆ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದ್ದರು.
ನಾಗಮಂಗಲ ತಾಲ್ಲೂಕಿನ ನೆಲ್ಲಿಗೆರೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬಿ.ಸಿ.ನಾಗೇಶ್ ಅವರು ಭೇಟಿ ನೀಡಿದ ಸಂದರ್ಭದಲ್ಲಿ ವೇಳೆ 10.30 ಆದರೂ ಕೂಡ ಅಲ್ಲಿಯ ಶಾಲಾ ಶಿಕ್ಷಕರುಗಳಾರು ಬಂದಿರಲಿಲ್ಲ, ಮಕ್ಕಳು ಕೂಡ ಶಾಲಾ ಆವರಣದಲ್ಲಿಯೇ ಕುಳಿತಿದ್ದರು. ಹೀಗಾಗಿ ರಾಜ್ಯದ ಶಿಕ್ಷಕರುಗಳ ಕಾರ್ಯವೈಖರಿಯನ್ನು ಚುರುಕುಗೊಳಿಸುವ ಉದ್ದೇಶದಿಂದಾಗಿ ಈ ಕಟ್ಟುನಿಟ್ಟಿನ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಬಿ.ಸಿ.ನಾಗೇಶ್ ಈ ಹಿಂದೆ ತಿಳಿಸಿದ್ದರು. ಈ ಕ್ರಮ ಸರಿಯಾಗಿ ಪಾಲನೆಯಾಗದ ಹಿನ್ನೆಲೆ ಶಾಲಾ ಆರಂಭದ 15 ನಿಮಿಷಕ್ಕಿಂದ ಮುಂಚೆ ಶಾಲೆಯಲ್ಲಿರಬೇಕು ಹಾಗೂ ಹಾಜರಾತಿಗೆ ಕಡ್ಡಾಯವಾಗಿ ಬಯೋಮೆಟ್ರಿಕ್ ಬಳಸುವಂತೆ ಇಲಾಖೆ ಹೇಳಿದೆ.