ಬೆಂಗಳೂರು: ಸಾರ್ವಜನಿಕ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶಾತಿ ಪಡೆದ ವಿದ್ಯಾರ್ಥಿಗಳು ಕಾಲೇಜು ಬದಲಾಯಿಸುವ ಅವಕಾಶವನ್ನು ಉನ್ನತ ಶಿಕ್ಷಣ ಇಲಾಖೆ ನೀಡಿದೆ.
ಈ ಸಂಬಂಧ ಉನ್ನತ ಶಿಕ್ಷಣ ಇಲಾಖೆಯು ಆದೇಶ ಹೊರಡಿಸಿದೆ. ಆದೇಶದಲ್ಲಿ ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಮೂರು, ಐದು, ಏಳನೇ ಸೆಮಿಸ್ಟರ್ಗಳ ಪ್ರವೇಶಕ್ಕೂ ಮೊದಲು ವಿಶ್ವವಿದ್ಯಾಲಯ ವ್ಯಾಪ್ತಿಯ ಕಾಲೇಜುಗಳು ಅಥವಾ ಇತರೆ ಯಾವುದೇ ಸಾರ್ವಜನಿಕ ವಿಶ್ವವಿದ್ಯಾಲಯಗಳ ಕಾಲೇಜುಗಳಿಗೆ ವರ್ಗಾವಣೆ ಪಡೆಯಲು ಅವಕಾಶ ಕಲ್ಪಿಸಿರುವುದಾಗಿ ತಿಳಿಸಿದೆ.
ಪಾಸಾಗದೆ ಉಳಿದ ವಿಷಯಗಳನ್ನು ವರ್ಗಾವಣೆಗೊಂಡ ಕಾಲೇಜಿನಲ್ಲಿಯೇ ಮುಂದುವರೆಸಲು ಅವಕಾಶ ಕಲ್ಪಿಸಿ ಕೊಡಬೇಕು. ಒಂದು ವಿಶ್ವವಿದ್ಯಾಲಯದ ಸಂಯೋಜಿತ ಕಾಲೇಜಿಗೆ ವರ್ಗಾವಣೆ ಬಯಸಿದಲ್ಲಿ ಯುಯುಸಿಎಂಎಸ್ ತಂತ್ರಾಂಶ ಬಳಸಿ ವರ್ಗಾವಣೆ ಹಾಗೂ ಪಾಸಾಗದೆ ಉಳಿದ ವಿಷಯಗಳನ್ನು ವರ್ಗಾವಣೆಗೊಂಡ ಕಾಲೇಜಿನಲ್ಲಿಯೇ ಮುಂದುವರೆಸಲು ಅವಕಾಶ ನೀಡಬೇಕು ಎಂದು ಹೇಳಿದೆ.
ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಕಾರ ಎರಡು ಸೆಮಿಸ್ಟರ್ ಪೂರೈಸಿದವರು ಓದು ಅರ್ಧಕ್ಕೆ ನಿಲ್ಲಿಸಿದರೆ ಅವರಿಗೆ ಕೆಳಹಂತದ ಪದವಿ ಪ್ರಮಾಣಪತ್ರ ನೀಡಲಾಗುತ್ತದೆ. ನಾಲ್ಕು ಸೆಮಿಸ್ಟರ್ ಪೂರೈಸಿದವರಿಗೆ ಡಿಪ್ಲೋಮಾ ಪದವಿ, ಆರು ಸೆಮಿಸ್ಟರ್ ಪೂರೈಸಿದರೆ ಪದವಿ, ಎಂಟು ಸೆಮಿಸ್ಟರ್ ಪೂರೈಸಿದರೆ ಆನರ್ಸ್ ಪದವಿ ಪ್ರದಾನ ಮಾಡಲು ಸೂಚಿಸಿದೆ.
ವಿದ್ಯಾರ್ಥಿ ಬಯಸಿದರೆ ಏಕಕಾಲಕ್ಕೆ ಎರಡು ಪದವಿ ಅಧ್ಯಯನ ಮಾಡಲು ಅವಕಾಶ ಕಲ್ಪಿಸಬೇಕು ಎಂದು ಆದೇಶದಲ್ಲಿ ವಿವರಿಸಲಾಗಿದೆ. ಈ ಅವಕಾಶ ಇರುವುದರಿಂದ ಒಂದೇ ವಿದ್ಯಾರ್ಥಿ ಎರಡು ಪದವಿಗಳನ್ನು ಪಡೆಯಬಹುದು. ವಿದ್ಯಾರ್ಥಿ ಬಯಸಿದರೆ ಏಕ ಕಾಲಕ್ಕೆ ಎರಡು ಪದವಿ ಅಧ್ಯಯನ ಮಾಡಲು ಅವಕಾಶ ಕಲ್ಪಿಸಬೇಕು ಎಂದು ಆದೇಶದಲ್ಲಿ ವಿವರಿಸಲಾಗಿದೆ. ಈ ಅವಕಾಶ ಇರುವುದರಿಂದ ಒಂದೇ ವಿದ್ಯಾರ್ಥಿ ಎರಡು ಪದವಿಗಳನ್ನು ಪಡೆಯಬಹುದಾಗಿದೆ.
ಒಂದು ವಿದ್ಯಾರ್ಥಿಗಳು ಕಾಲೇಜು ಬದಲಿಸುವ ಆಲೋಚನೆ ಹೊಂದಿದ್ದರೆ ಸೆಮಿಸ್ಟರ್ ಅಂತ್ಯಕ್ಕೆ ಬೇರೆ ಕಾಲೇಜಿಗೆ ಸೇರ್ಪಡೆಗೊಳ್ಳಬಹುದಾಗಿದೆ. ಪದವಿ ವಿದ್ಯಾರ್ಥಿಗಳು ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಯಾರೇ ಆದರೂ ಕಾಲೇಜು ಬದಲಿಸುವ ಅವಕಾಶ ಹೊಂದಿರುತ್ತಾರೆ ಎಂದು ತಿಳಿಸಿದೆ.
ಯಾವುದೇ ಸೆಮಿಸ್ಟರ್ನ ಮಧ್ಯದಲ್ಲಿ ವಿದ್ಯಾರ್ಥಿ ಓದುವುದನ್ನು ನಿಲ್ಲಿಸಿದರೂ ಪ್ರವೇಶ ಪಡೆದ ದಿನದಿಂದ 7 ವರ್ಷಗಳ ಒಳಗೆ ಮರು ಪ್ರವೇಶ ಪಡೆಯಬಹುದಾಗಿದೆ.
ವಿದ್ಯಾರ್ಥಿ ಪಡೆದ ಕ್ರೆಡಿಟ್ ಪಾಯಿಂಟ್ಸ್ಗಳನ್ನು ಅಕಾಡೆಮಿಕ್ ಬ್ಯಾಂಕ್ ಆಫ್ ಕ್ರೆಡಿಟ್ಸ್ ಖಾತೆಯೊಂದಿಗೆ ಸಂಯೋಜಿಸಬೇಕು. ಈ ಪಾಯಿಂಟ್ಸ್ ವಿದ್ಯಾರ್ಥಿಗೆ ಸೂಕ್ತ ಪ್ರಮಾಣಪತ್ರ ನೀಡಲು ಸಂಬಂಧಪಟ್ಟ ವಿವಿಗಳು ಪರಿಗಣಿಸಬೇಕು. ಯುಜಿಸಿ ನಿಯಮಾವಳಿಯಂತೆ ಏಕಕಾಲದಲ್ಲಿ ಬಹುಪದವಿ ಪಡೆಯಲು ಅವಕಾಶವಿದ್ದು, ವಿದ್ಯಾರ್ಥಿಯ ಹಾಜರಾತಿ ಖಚಿತ ಪಡಿಸಿಕೊಂಡು ಅಧ್ಯಯನಕ್ಕೆ ಅವಕಾಶ ಕಲ್ಪಿಸಬೇಕೆಂದು ಉನ್ನತ ಶಿಕ್ಷಣ ಇಲಾಖೆ ಆದೇಶಿಸಿದೆ.
- ಮುಖಪುಟ
- ಮೈಸೂರು
- ಜಿಲ್ಲೆಗಳು
- ರಾಜ್ಯ
- ದೇಶ- ವಿದೇಶ
- ರಾಜಕೀಯ
- ಅಪರಾಧ
- ಮಹಿಳೆ
- ಕೃಷಿ
- ವಿಜ್ಞಾನ ತಂತ್ರಜ್ಞಾನ
- ಕ್ರೀಡೆ
- ವಾಣಿಜ್ಯ
- ಚಿತ್ರಸಂತೆ
- ವಿಶೇಷ
- ಆಂದೋಲನ ಪುರವಣಿ
- ಎಡಿಟೋರಿಯಲ್
- ಆಂದೋಲನ 50
- ಜಾಹೀರಾತು
- Cricket
Subscribe to Updates
Get the latest creative news from FooBar about art, design and business.
ವಿದ್ಯಾರ್ಥಿಗಳ ಕಲಿಕಾ ದೃಷ್ಟಿಯಿಂದ ವಿವಿಗಳಲ್ಲಿ ಕಾಲೇಜು ಬದಲಾವಣೆಗೆ ಅವಕಾಶ: ಉನ್ನತ ಶಿಕ್ಷಣ ಇಲಾಖೆ
Previous Articleಕುಮಾರಸ್ವಾಮಿ ಅವರ ಅನುಪಸ್ಥಿತಿಯಲ್ಲಿ ರಾಮನಗರ ನೂತನ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನೆ: ಜೆಡಿಎಸ್ ಕಾರ್ಯಕರ್ತರಿಂದ ಆಕ್ರೋಶ
Next Article ಕೆಎಸ್ಐಸಿಗೆ ಪ್ರಸಕ್ತ ವರ್ಷ 31 ಕೋಟಿ ಲಾಭ: ಸಚಿವ ನಾರಾಯಣಗೌಡ