ಎಡಿಟೋರಿಯಲ್

ನಿನ್ನೆ ಮೊನ್ನೆ ನಮ್ಮ ಜನ : ಗೇಲಿ ಮಾಡದೆ ಯಾರೊಬ್ಬರನ್ನೂ ಬಿಡದ ಚಂಪಾ

ಆಟೋಗ್ರಾಫ್ ಕೇಳಿದರೆ ಬರೆಯುತ್ತಿದ್ದುದು ‘ಸಂಕ್ರಮಣಕ್ಕೆ ಚಂದಾದಾರರಾಗಿ!’

-ಜೆ.ಬಿ.ರಂಗಸ್ವಾಮಿ, ವಿಶ್ರಾಂತ ಪೊಲೀಸ್ ಅಧಿಕಾರಿ, ಮೈಸೂರು

‘ಯಾವುದನ್ನೇ ಆಗಲಿ ನಾನು ಪ್ರೀತಿಯಿಂದಲೇ ಮಾಡುತ್ತೇನೆ. – ದ್ವೇಷಿಸುವುದನ್ನೂ ಕೂಡಾ!’ ಎಂದು ಸಾರಿದ ಕವಿ ಚಂದ್ರಶೇಖರ ಪಾಟೀಲ (ಚಂಪಾ) ಯಾರೊಂದಿಗೂ ಜಗಳಾಡದೆ, ಟೀಕಿಸದೆ ಬಿಟ್ಟವರಲ್ಲ. ಆದರದು ವೈಯೂಕ್ತಿಕವಲ್ಲ. ವೈಚಾರಿಕ. ಆದ್ದರಿಂದಲೇ ಎಲ್ಲರ ಜೊತೆಗೂ ಗೆಳೆತನ ಉಳಿಸಿಕೊಂಡವರು. ಅವರು ಇಲ್ಲವಾಗಿ ವರ್ಷವಾಗುತ್ತಾ ಬಂತು (೧೦-೦ -೨೦೨೨).
ಜೀವನವಿಡೀ ಹೋರಾಟದ ಬದುಕು ಅವರದು. ಜೆಪಿ ಸಂಪೂರ್ಣ ಕ್ರಾಂತಿ, ಗೋಕಾಕ್, ಬಂಡಾಯ… ಹೀಗೆ ನಾನಾ ಚಳವಳಿಗಳಲ್ಲಿ ತೊಡಗಿಸಿಕೊಂಡೇ ಬಂದರು. ತಾವು ನಂಬಿದ ಸಮಾಜವಾದಿ ಧೋರಣೆಯನ್ನು ಬದುಕಿನುದ್ದಕ್ಕೂ ಅಳವಡಿಸಿಕೊಂಡು ಬದುಕಿದವರು ಅವರು.
ಚಂಪಾರ ವ್ಯಕ್ತಿತ್ವಕ್ಕೆ ಅನೇಕ ಆಯಾಮಗಳಿವೆ. ಕವಿ, ನಟ, ನಾಟಕಕಾರ, ವಿಮರ್ಶಕ, ಅಧ್ಯಾಪಕ, ಸಂಪಾದಕ, ಸಂಘಟಕ, ಚಳವಳಿಗಾರ… ಹೀಗೆ ಎಲ್ಲದರಲ್ಲೂ ಬೆಸೆದುಕೊಂಡವರು. ನವ್ಯ, ದಲಿತ, ಬಂಡಾಯ, ಒಕ್ಕೂಟ… ಹೀಗೆ ಅನೇಕ ಪಂಥಗಳ ಮುಂಚೂಣಿಯಲ್ಲಿ ನಿಂತವರು. ಕನ್ನಡ ನಾಡು-ನುಡಿಯ ಹೋರಾಟದಲ್ಲಿ ಗೋಕಾಕ್ ಚಳವಳಿ, ಕನ್ನಡ ಪ್ರಾಧಿಕಾರ, ಪರಿಷತ್ತು… ಹೀಗೆ ಹಲವು ಹತ್ತು ನೆಲೆಗಳಲ್ಲಿ ದುಡಿದವರು. ಇವುಗಳೊಂದಿಗೆ ಬದುಕಿನೆಡೆಗೂ ಅಪಾರ ಪ್ರೀತಿ ಇಟ್ಟುಕೊಂಡು ವೈಚಾರಿಕ ಸಾಹಿತ್ಯ, ಮೂಢನಂಬಿಕೆ, ಮತ ಮೌಢ್ಯ ವಿರುದ್ಧದ ಹೋರಾಟ ಮಾಡಿದವರು. ಜೊತೆಗೆ ಒಲವಿನ ಮದುವೆಗಳಿಗೂ ಒತ್ತಾಸೆಯಾಗಿ ನಿಂತವರು.
ಓರ್ವ ಸಾಹಿತಿಯಾಗಿ, ಸಂಘಟಕರಾಗಿ ಬರವಣಿಗೆ, ಭಾಷಣಗಳ ಮೂಲಕವೇ ಅವರದು ನಿಲ್ಲದ ಚಳವಳಿ. ಚಳವಳಿಗಳ ಮೂಲಕವೇ ತಮ್ಮ ಮಾತು, ಅಕ್ಷರ ಕ್ರಿಯೆ ಎಲ್ಲವೂ ರೂಪಿತವಾದವು ಎಂಬ ನಂಬಿಕೆ. ನಾಸ್ತಿಕರಾಗಿದ್ದ ಅವರು ಡಾ.ಕೊವೂರ್, ಪೆರಿಯಾರ್‌ ಆಂದೋಲನಗಳಲ್ಲೂ ಸಕ್ರಿಯರಾಗಿದ್ದರು.
‘ನನ್ನ ಹಣೆ ಬರಹಕ್ಕೆ ನಾನೇ ಹೊಣೆಯಾಗಿರಲು
ನಿನ್ನ ಒಣ ಆಸರವು ನನಗೆ ಬೇಡ’ ಇದವರ ನಿಲುವು.
ಮೊದಲೆಲ್ಲಾ ಅಕಾಡೆಮಿ, ಪರಿಷತ್ತು ಇತ್ಯಾದಿಗಳನ್ನು ಕಟುವಾಗಿ ಟೀಕಿಸುತ್ತಿದ್ದವರು ಕೊನೆಗೆ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಸೋತರು. ‘ನಿಮ್ಮ ಸೋಲಿಗೆ ಕಾರಣ? ‘ಪತ್ರಕರ್ತರ ಪ್ರಶ್ನೆಗೆ ಅವರಿತ್ತ ಉತ್ತರ: ‘ಪುನರೂರರ ಗೆಲುವೇ ನನ್ನ ಸೋಲಿಗೆ ಕಾರಣ!‘
ಓರ್ವ ವ್ಯಕ್ತಿ ಇಷ್ಟೆಲ್ಲಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಸಾಧ್ಯವೇ? ಪದೇ ಪದೆ ಜೈಲು, ಲಾಕಪ್ಪು, ಲಾಠಿ ಕಂಡರೂ ಹೋರಾಟ ಮುಂದುವರಿಸಿಕೊಂಡು ಹೋಗಲು ಸಾಧ್ಯವೇ? ಎಂದು ಯಾರಾದರೂ ಬೆರಗಾಗಿ ಬಿಡಬೇಕು. ಚಂಪಾರೇ ಹಾಗೆ. ಸದಾ ಚಟಪಟ ಚಟುವಟಿಕೆ. ಎಂದೂ ಕೈಚೆಲ್ಲಿ ಸುಮ್ಮನೆ ಕೂತವರಲ್ಲ. ಹಿಡಿದ ಕೆಲಸ ಬಿಡದೆ ಸಾಧಿಸಿ ತೋರಿಸಿದವರು. ಸಂಕ್ರಮಣ ಸಾಹಿತ್ಯಿಕ ಪತ್ರಿಕೆಯನ್ನು 52 ವರ್ಷಗಳ ಕಾಲ ಏಕಾಂಗಿಯಾಗಿ ನಿರಂತರ ನಡೆಸಿಕೊಂಡು ಬಂದದ್ದು ಅವರ ಛಲಕ್ಕೆ ಸಾಕ್ಷಿ. ಆರ್ಥಿಕ ಬಲವಿಲ್ಲದ ಸಂಕ್ರಮಣಕ್ಕೆ ಓದುಗರೇ ಶಕ್ತಿ. ಅದಕ್ಕೆ ಚಂದಾ ವಸೂಲಿ ಕೂಡ ಸ್ವತಃ ಚಂಪಾರದ್ದೇ. ‘ಚಂದಾ ಪಾಟೀಲ’ ಎಂದು ತಮ್ಮನ್ನೇ ಗೇಲಿ ಮಾಡಿಕೊಂಡರು. ಯಾರಾದರೂ ಆಟೋಗ್ರಾಫ್ ಕೇಳಿದರೆ ಬರೆಯುತ್ತಿದ್ದ ಮಾತು: ಸಂಕ್ರಮಣಕ್ಕೆ ಚಂದಾದಾರರಾಗಿ!
ಇಷ್ಟೆಲ್ಲಾ ಹೋರಾಟಗಳಲ್ಲಿದ್ದರೂ ವೈಯೂಕ್ತಿಕವಾಗಿ ತುಂಬ ಸರಸಿ. ಕುರತೇಟು ಹೊಡೆದಂತಿದ್ದ ಅವರ ready wit ಮಾತುಗಳಲ್ಲಿದ್ದ ಹೊಳಹು flashes ಜಾಜ್ವಲತೆ ಚಂಪಾಗೆ ಮಾತ್ರವೇ ಸಾಧ್ಯ.
ಮೊದಲು ಲಕ್ಷ್ಮಣ ಗೆರೆ ಹೊಡೆದ. ಅದರ ಮೇಲೆ ನಿಂತ ರಾವಣ line ಹೊಡೆದ
ಆಕೆ ಓಕೆ. ಈಕೆ? ಜೋಕೆ!
ಟಿಂಗರ ಬುಡ್ಡಣ್ಣ ನಾಟಕದಲ್ಲಿ ಪ್ರೊಫೆಸರ್ ಕೊಟ್ಟ ಶಿಫಾರಸು ಪತ್ರ:
‘ಇಂವಗೆ ರಾಷ್ಟ್ರಪತಿ ಕೆಲಸದಿಂದ ಫ್ಯೂನನ ಕೆಲಸದವರೆಗೆ ಏನು ಬೇಕಾದ್ರೂ ಧಾರಾಳವಾಗಿ ಕೊಡಬಹುದು!’ ಎಂದು ಬರೆದುಕೊಟ್ಟು
ಆಮೇಲೆ ಅಂದರು: ‘ರಾಷ್ಟ್ರಪತಿಯಾದ್ರ ಮರೆಯಾದೆ ಏರ್ ಟಿಕೆಟ್ ಕಳಿಸು. ನಿನ್ನ ನೋಡೋದಿಕ್ಕೆ ಡೆಲ್ಲಿಗೆ ನಾವೇ ಬರ್ತೀವಿ. ಪ್ಯೂನ ಗೀನ ಆದ್ರೆ ನೀನಾ ಬಂದು ನೋಡು!’.
ಉಪ್ಪು ತಿಂದವ ನೀರು ಕುಡಿಯಲೇಬೇಕು ಅಂದರೆ ಅದು ಒಳ್ಳೆಯ ಗಾದೆ ಮಾತು.
ನೀರು ಕುಡದಾಂವ … ಹುಯ್ಯ ಬೇಕು ಅಂದ್ರೆ ಅದೆಂಗೆ ಪೋಲಿ ಮಾತು? ಕೇಳ್ತಾರೆ ಚಂಪಾ.
ಜೆಪಿ ಚಳವಳಿ ವೇಳೆ, ಸಾವಿರದ ಒಂಬೈನೂರ ಎಪ್ಪತ್ತರ ದಶಕದಲ್ಲಿ ನಮ್ಮ ಯುವಕರ ಮಾತುಗಳಲ್ಲಿ ಅತಿ ಹೆಚ್ಚು ಪ್ರಸ್ತಾಪವಾಗುತ್ತಿದ್ದ ಹೆಸರೆಂದರೆ ಚಂಪಾ. ನಾವೆಲ್ಲಾ ಅವರ ಬರಹಕ್ಕಿಂತ ಮಾತಿನ ಮೋಡಿಗೆ ಮರುಳಾದದ್ದೇ ಹೆಚ್ಚು. ಗಂಭೀರ ಗೋಷ್ಠಿಗಳಲ್ಲಿ ಮಾತಾಡಿದರೂ ಅಲ್ಲೊಂದು ನಗೆ ಚಿಮ್ಮಿಸುವ ಜಾಣ್ಮೆ ಅವರಿಗಿತ್ತು. ರಣ ಗಂಭೀರ ಪ್ರೊ.ಎಂಡಿಎನ್ ಕೂಡ ಹಲ್ಲು ಬಿಟ್ಟಿದ್ದುಂಟು. ಅವರು ಆಡಿಕೊಳ್ಳದ, ಲೇವಡಿ ಮಾಡದ ವ್ಯಕ್ತಿ, ವಸ್ತುಗಳೇ ಇರಲಿಲ್ಲ. ಒಬ್ಬೊಬ್ಬರಿಗೆ ಒಂದೊಂದು ಅಡ್ಡೆಸರು ಇಡುತ್ತಿದ್ದ ಮಹಾನ್ ಜೋಯಿಸರು ಅವರು.

ಓರ್ವ ವ್ಯಕ್ತಿ ಇಷ್ಟೆಲ್ಲಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಸಾಧ್ಯವೇ? ಪದೇ ಪದೆ ಜೈಲು, ಲಾಕಪ್ಪು, ಲಾಠಿ ಕಂಡರೂ ಹೋರಾಟ ಮುಂದುವರಿಸಿಕೊಂಡು ಹೋಗಲು ಸಾಧ್ಯವೇ? ಎಂದು ಯಾರಾದರೂ ಬೆರಗಾಗಿ ಬಿಡಬೇಕು. ಚಂಪಾರೇ ಹಾಗೆ. ಸದಾ ಚಟಪಟ ಚಟುವಟಿಕೆ. ಎಂದೂ ಕೈಚೆಲ್ಲಿ ಸುಮ್ಮನೆ ಕೂತವರಲ್ಲ. ಹಿಡಿದ ಕೆಲಸ ಬಿಡದೆ ಸಾಧಿಸಿ ತೋರಿಸಿದವರು.

(ಮುಂದುವರಿಯುವುದು)

 

andolanait

Recent Posts

ಓದುಗರ ಪತ್ರ: ಬಂಡೀಪುರದಲ್ಲಿ ರಾತ್ರಿ ವಾಹನ ಸಂಚಾರ ನಿಷೇಧಿಸಿ

ಬಂಡೀಪುರ ಉಷ್ಟ್ರೀಯ ಉದ್ಯಾನದೊಳಗೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ವೇಳೆ ವಾಹನಗಳ ಸಂಚಾರ ನಿಷೇಧವನ್ನು ರಾಜಕೀಯ ಮುಖಂಡರ ಒತ್ತಡಕ್ಕೆ…

2 hours ago

IPL 2025: 159ಕ್ಕೆ ರಾಜಸ್ಥಾನ್‌ ಆಲೌಟ್: ಗುಜರಾತ್‌ಗೆ 58 ರನ್‌ಗಳ ಭರ್ಜರಿ ಗೆಲುವು

ಅಹಮದಾಬಾದ್‌: ಸಂಘಟಿತ ಬ್ಯಾಟಿಂಗ್‌ ಮತ್ತು ಬೌಲಿಂಗ್‌ ಸಹಾಯದಿಂದ ರಾಜಸ್ಥಾನ್‌ ರಾಯಲ್ಸ್‌ ತಂಡವನ್ನು ಮಣಿಸಿದ ಗುಜರಾತ್‌ ಟೈಟನ್ಸ್‌ 2025ರ 18 ಆವೃತ್ತಿಯ…

3 hours ago

ಯಡಿಯೂರಪ್ಪ ಸರ್ಕಾರವಿದ್ದರೆ ನೆಟ್ಟಾರು ಹಂತಕನಿಗೆ ಮುತ್ತಿಕ್ಕಿದವನಿಗೆ ಗುಂಡಿಕ್ಕುತ್ತಿದ್ದೆವು: ಬಿ.ವೈ.ವಿಜಯೇಂದ್ರ

ಮಂಗಳೂರು: ಪ್ರವೀಣ್ ನೆಟ್ಟಾರು ಹಂತಕ ದೇಶದ್ರೋಹಿಗೆ ಮತ್ತೊಬ್ಬ ದೇಶದ್ರೋಹಿ ಮುತ್ತಿಡುತ್ತಾನೆ. ನಮ್ಮ ಸರ್ಕಾರ, ಯಡಿಯೂರಪ್ಪ ಸರ್ಕಾರವಿದ್ದಿದ್ದರೆ ಆ ದೇಶದ್ರೋಹಿಗೆ ಅಲ್ಲೇ…

4 hours ago

ಮಂಡ್ಯ ಮೈಶುಗರ್ ಕಾರ್ಖಾನೆಗೆ ನೂತನ‌ ಎಂ‌ಡಿ ಆಗಿ ಮಂಗಲ್‌ ದಾಸ್‌ ನೇಮಕ

ಮಂಡ್ಯ: ಮಂಡ್ಯ ಮೈಶುಗರ್ ಕಾರ್ಖಾನೆಗೆ ನೂತನ ಎಂಡಿಯಾಗಿ ಮಂಗಲ್‌ ದಾಸ್‌ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.…

5 hours ago

ಏಪ್ರಿಲ್‍.16ರಿಂದ ಶುರುವಾಗಲಿದೆ ಸುದೀಪ್‍ ಅಭಿನಯದ ‘ಬಿಲ್ಲ ರಂಗ ಭಾಷಾ’

‘ಏಪ್ರಿಲ್‍ 16’ ಎಂದಷ್ಟೇ ಬರೆದು ಕಿಚ್ಚ ಸುದೀಪ್‌ ಮೂರು ಫೋಟೋಗಳನ್ನು ಕೆಲವು ದಿನಗಳ ಹಿಂದೆ ಸೋಷಿಯಲ್‍ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಏಪ್ರಿಲ್‍.16ರಂದು…

5 hours ago

ಇದು ‘ಪ್ರೀತಿಯ ಹುಚ್ಚ’ನ ಕಥೆ: ನೈಜ ಘಟನೆ ಆಧರಿಸಿದ ಚಿತ್ರ ಏಪ್ರಿಲ್.18ಕ್ಕೆ ತೆರೆಗೆ

‘ಪ್ರೀತಿಯ ಹುಚ್ಚ’ ಎಂದರೆ ಮೊದಲಿಗೆ ನೆನಪಿಗೆ ಬರುವುದು ‘ಹುಚ್ಚ’ ಚಿತ್ರದ ಸುದೀಪ್‍ ಪಾತ್ರ. ಆ ನಂತರ ‘ಚೆಲುವಿನ ಚಿತ್ತಾರ’ ಚಿತ್ರದ…

5 hours ago