ಎಡಿಟೋರಿಯಲ್

ದಶಕಗಳ ಕಾಲ ವಿಜ್ಞಾನಿಗಳ ಕಂಗೆಡಿಸಿದ wow singnalನ ಕುರಿತು

ಕಾರ್ತಿಕ್ ಕೃಷ್ಣ

ಬುವಿಯ ಹೊರಗೆ ನೆಲದಾಚೆಗಿನ ಉಸುರಿಗಳು ಇದೆಯೋ? ಇಲ್ಲವೋ? ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ. ಇದೆ ಎಂದು ಪ್ರತಿಪಾದಿಸುವುದಕ್ಕೆ ಎಷ್ಟು ಸಿದ್ಧಾಂತಗಳಿವೆಯೋ ಅವುಗಳನ್ನು ತಳ್ಳಿಹಾಕಲೂ ಅಷ್ಟೇ ವಾದಗಳಿವೆ. ಕೆಲವರಂತೂ ಅನ್ಯಲೋಕ ಜೀವಿಗಳು ಇವೆಯೆಂದೂ, ಅವುಗಳು ನಮ್ಮನ್ನು ಸಂಪರ್ಕಿಸದೇ ಅಜ್ಞಾತವಾಗಿರಲು ಇರಬಹುದಾದ ಕಾರಣಗಳ ಪಟ್ಟಿಯನ್ನೂ ನೀಡುತ್ತಾರೆ. ಅವುಗಳ ಥಿಯರಿಗಳ ಮೂಲಕ ಪ್ರತಿಪಾದಿಸುತ್ತಾರೆ ಕೂಡ. the rare earth theory  ಎಂಬ ಒಂದು ಸಿದ್ಧಾಂತವು, ಇಡೀ ಬ್ರಹ್ಮಾಂಡದಲ್ಲಿ ‘ಬುದ್ಧಿವಂತ’ ಜೀವಿಗಳು ಮಾತ್ರ ಇರುವುದರಿಂದ ಏಲಿಯನ್‌ಗಳು ನಮ್ಮನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ ಎಂದು ವಾದಿಸುತ್ತದೆ.  the great filter theory  ಎಂಬ ಇನ್ನೊಂದು ಸಿದ್ಧಾಂತವು, ಸಾಮೂಹಿಕ ಅಳಿವು ಬೇರೆಲ್ಲಾ ಬುದ್ಧಿವಂತ ಜೀವಿಗಳನ್ನು ನಾಶಮಾಡಿರುವ ವಾದವನ್ನು ಮುಂದಿಡುತ್ತದೆ. the silence theory ಎಂಬ ಮತ್ತೊಂದು ಸಿದ್ಧಾಂತ ಕುತೂಹಲ ಕೆರಳಿಸುವಷ್ಟು ರೋಚಕವಾಗಿದೆ. ಅದರ ಪ್ರಕಾರ, ಏಲಿಯನ್‌ಗಳು ಅಸಾಧಾರಣ ಬುದ್ಧಿಮತ್ತೆ ಉಳ್ಳವರಾಗಿದ್ದು, ಮನುಕುಲದ ಮೇಲೆ ಸಮಯ ವ್ಯರ್ಥ ಮಾಡಲು ಅವರು ತಯಾರಾಗಿಲ್ಲವಂತೆ! ಮನುಷ್ಯರನ್ನೇ ದಡ್ದರೆನ್ನುವ ಸಿದ್ಧಾಂತವಿದು. ಅದಕ್ಕೇ ಏನೋ ೧೯೫೦ರ ಆಸುಪಾಸಿನಲ್ಲಿ ಹಾರುವ ತಟ್ಟೆಗಳು ಕಾಣಿಸಿಕೊಂಡು, ಆಮೇಲೆ ಬರುವುದನ್ನೇ ನಿಲ್ಲಿಸಿದ್ದು. ನಾವೇ ಪ್ರಚಂಡರು ಎನ್ನುವ ಇನ್ನೊಂದು ಸಿದ್ಧಾಂತವಿದೆ. ಹೆಚ್ಚುಕಡಿಮೆ rare earth theory ಯನ್ನೇ ಹೋಲುವ ಈ ಸಿದ್ಧಾಂತವನ್ನು the early bird theory ಎನ್ನುತ್ತಾರೆ. ಅದರ ಪ್ರಕಾರ ಬ್ರಹ್ಮಾಂಡದಲ್ಲಿ ಜೀವ ವೈವಿಧ್ಯ ಮೊದಲು ಶುರುವಾಗಿದ್ದೇ ಭೂಮಿಯ ಮೇಲೆ. ಬೇರೆ ಗ್ರಹಗಳಲ್ಲಿ ಇನ್ನೂ ಜೀವ ಚಿಗುರೊಡೆಯುತ್ತಿದ್ದು, ಎಷ್ಟೋ ವರುಷಗಳ ನಂತರ ಆ ಜೀವಿಗಳು ಭೂಮಿಯನ್ನು ಸಂಪರ್ಕಿಸುವ ಪ್ರಯತ್ನ ಮಾಡಬಹುದಂತೆ.

ಇಷ್ಟೆಲ್ಲ ವಾದಗಳಿದ್ದರೂ ಏಲಿಯನ್‌ಗಳ ಹುಡುಕಾಟದ ಪ್ರಯತ್ನಕ್ಕಂತೂ ಯಾವುದೇ ಚ್ಯುತಿಬಂದಿಲ್ಲ. ಅದಂತೂ ನಿರಂತರವಾಗಿ ಸಾಗುತ್ತಲೇ ಇದೆ. ಈ ಕಾರ್ಯಕ್ಕಾಗಿಯೇ search for extrater restrialinelligence  (SETI) ಎಂಬ ಸಂಸ್ಥೆ ಹಗಲಿರುಳು, ಭೂಮಿಯ ಹೊರಗಿನಿಂದ ಬರುವ ತರಂಗಗಳ ಮೇಲೆ ಅಧ್ಯಯನ ನಡೆಸುತ್ತಲೇ ಇದೆ. ಇತರೆ ಗ್ರಹಗಳಲ್ಲಿನ ನಾಗರಿಕತೆಗಳು ವಿದ್ಯುತ್ಕಾಂತೀಯ ವಿಕಿರಣಗಳ ಮೂಲಕ ಸಂದೇಶ ರವಾನಿಸಬಹುದಾ ಎಂದು ಯಾವ ಅಲೆಗಳನ್ನೂ ಬಿಡದೆ ಕೂಲಂಕಷವಾಗಿ ಆಕಾಶವನ್ನು ಗಮನಿಸುತ್ತಿದೆ  SETIಸಂಸ್ಥೆ. ಈ ಕಸರತ್ತು ಶುರುವಾಗಿದ್ದು ೧೯೦೦ರ ಹಾದಿಯಲ್ಲಿ. ಆಗ  sensation ಆಗಿದ್ದ ರೇಡಿಯೋದ ಆಗಮನದ ಜೊತೆಗೆ ಆಕಾಶದಿಂದ ಬರುವ ತರಂಗಗಳ ವೈಜ್ಞಾನಿಕ ತನಿಖೆ ಕೂಡ ಪ್ರಾರಂಭವಾಗಿತ್ತು. ಅದಕ್ಕೂ ಮೊದಲು ೧೯೮೦ರಿಂದಲೂ ಹೊರ ಜಗತ್ತಿನ ತರಂಗಗಳ ಅಧ್ಯಯನದ ಪ್ರಯತ್ನ ನಡೆಯುತ್ತಲೇ ಇತ್ತು. ೨೦೧೫ರಲ್ಲಿ, ಸ್ಟೀಫನ್ ಹಾಕಿಂಗ್ ಮತ್ತು ಇಸ್ರೇಲಿ ಬಿಲಿಯನೇರ್ ಯೂರಿ ಮಿಲ್ನರ್ ಎನ್ನುವವರು breakthrough listen ಎಂಬ ಯೋಜನೆಯನ್ನು ಘೋಷಿಸಿ ನೆಲದಾಚೆಗಿನ ಜೀವಿಗಳ ಹುಡುಕಾಟಕ್ಕೆ ಮತ್ತಷ್ಟು ಬಲ ನೀಡಿದರು.

ಇಂದು ನಾನು ಹೇಳಲು ಹೊರಟಿರುವುದು ಇಂತಹದ್ದೇ ಒಂದು ಅಧ್ಯಯನದ ಬಗ್ಗೆ. ೧೯೭೭ರ ಬೇಸಿಗೆಯ ರಾತ್ರಿಯಲ್ಲಿ, ಓಹಿಯೋ ಸ್ಟೇಟ್ ಯೂನಿವರ್ಸಿಟಿ ಪ್ರೊಫೆಸರ್ ಜೆರ್ರಿ ಎಹ್ಮಾನ್, ಕಂಪ್ಯೂಟರ್ ಪ್ರಿಂಟ್‌ಔಟ್‌ಗಳನ್ನು ಪರಿಶೀಲಿಸುತ್ತಾ ಕೂತಿದ್ದರು. ಸಾಮಾನ್ಯ ಮನುಷ್ಯನ ಕಣ್ಣಿಗೆ ಬರೀ ಅಂಕೆ ಹಾಗೂ ಅಕ್ಷರಗಳ ಜೋಡಣೆಯಂತೆ ಕಾಣುತ್ತಿದ್ದ ಆ ಕಾಗದಗಳು, ತಜ್ಞರಿಗೆ ಭೂಮ್ಯತೀತ ಜೀವಿಗಳ ಹುಡುಕಾಟದಲ್ಲಿ ಹಲವಾರು ಮಾಹಿತಿ ನೀಡುವ ಖಜಾನೆಯಾಗಿತ್ತು. ಎಹ್ಮಾನ್ ಅವರು ಭೂಮ್ಯತೀತ ಗುಪ್ತಚರ ಹುಡುಕಾಟದ SETIಯ ಸ್ವಯಂಸೇವಕರಾಗಿದ್ದವರು. ಅನ್ಯಗ್ರಹ ಜೀವಿಗಳ ಪುರಾವೆಗಾಗಿ ತಡಕಾಟ ಮಾಡುವುದು ಅವರ ಕೆಲಸವಾಗಿತ್ತು. ಆದರೆ ಅಂದು ಮಾತ್ರ ಆ ಕಾಗದಗಳಲ್ಲಿ ವಿಶಿಷ್ಟವಾದುದೊಂದು ಅವರ ಕಣ್ಣಿಗೆ ಬಿದ್ದು, ಕೆಂಪು ಪೆನ್ನನ್ನು ಎತ್ತಿಕೊಂಡು, ಆರು ಸಂಖ್ಯೆಗಳು ಮತ್ತು ಅಕ್ಷರಗಳ ಸರಣಿಯನ್ನು ಗುರುತಿಸಿ, ಅಂಚಿನಲ್ಲಿ ‘ವಾವ್!’ ಎಂದು ಬರೆದರು. ಆರ್ಕಿಮಿಡಿಸ್ ‘ಯುರೇಕಾ’ ಎಂದು ಚೀರಿದಂತೆ, ಎಹ್ಮಾನ್ WOW  ಎಂದು ಆ ಕಾಗದದಲ್ಲಿ ಬರೆದಿದ್ದಾದರೂ ಏಕೆ? ತಿಳಿಯೋಣ ಬನ್ನಿ.

‘ವಾವ್ ಸಿಗ್ನಲ್’ ಎಂದು ಕರೆಯಲ್ಪಡುವ ಈ ಸಂಕೇತದ ಕಥೆ SETI ಯಿಂದ ಪ್ರಾರಂಭವಾಗುತ್ತದೆ. ೧೯೬೦ರ ದಶಕದಲ್ಲಿ, ಅನ್ಯಲೋಕದ ಜೀವಿಗಳ ಬಗ್ಗೆ ಕುತೂಹಲ ಹೊಂದಿದ್ದ ವಿಜ್ಞಾನಿಗಳು, ದೂರದ ನಾಗರಿಕತೆಯು ಭೂಮಿ ಯೊಂದಿಗೆ ಹೇಗೆ ಸಂಪರ್ಕ ಸಾಽಸಬಹುದು ಎಂದು ತಲೆಕೆಡಿಸಿಕೊಂಡು, ಕೊನೆಗೆ ಅವರು ರೇಡಿಯೋ ಸಂಕೇತಗಳೇ ಅದಕ್ಕೆ ಸೂಕ್ತವಾದದ್ದು ಎಂದು ನಿರ್ಧರಿಸಿದರು. ನಿಮಗೆ ತಿಳಿದಿರಲಿ, ನಮ್ಮ ರೇಡಿಯೋ ಬಾನುಲಿಗಳ ತರಂಗಗಳು ಬಾಹ್ಯಾಕಾಶದ ಮೂಲಕವೂ ಪ್ರಯಾಣಿಸುತ್ತವೆ. ಹೀಗಾಗಿ ಅನ್ಯಗ್ರಹ ಜೀವಿಗಳೂ ಕೂಡ ಅಂತರತಾರಾ ರೇಡಿಯೋ ಪ್ರಸರಣವನ್ನು ಕಳುಹಿಸಲು ಸಾಧ್ಯವಾಗ ಬಹುದು ಎಂದು ವಿಜ್ಞಾನಿಗಳು ಊಹಿಸಿದ್ದಾರೆ. ಇಂತಹ ಪ್ರಸರಣಗಳಿಗಾಗಿ ಆಕಾಶವನ್ನು ಸ್ಕ್ಯಾನ್ ಮಾಡಲು, ಓಹಿಯೋದಲ್ಲಿ ‘ಬಿಗ್ ಇಯರ್’ ಎಂಬ ಬೃಹತ್ ರೇಡಿಯೋ ದೂರದರ್ಶಕವನ್ನು SETI ಸ್ಥಾಪಿಸಿತು. ‘ವಾವ್ ಸಂಕೇತ’ವನ್ನು ಸೆರೆಹಿಡಿದದ್ದು ಇದೇ ರೇಡಿಯೋ ದೂರದರ್ಶಕ!

ಎಹ್ಮಾನ್ ಕೆಲವು ಸಂಖ್ಯೆ ಹಾಗೂ ಅಕ್ಷರಗಳನ್ನು ಗುರುತು ಮಾಡಿದ್ದರು ಎಂದು ಹೇಳಿದ್ದೆನಲ್ಲವೇ, ನಮ್ಮ ಕಣ್ಣಿಗೆ ಅದು ೧, ೨ ಹೀಗೆ ಕೆಲವು ಅಂಕೆಗಳಿಂದ ಸುತ್ತುವರಿದಿದ್ದ 6EQUJ5 ಎಂಬ ಗುಪ್ತ ಪದದಂತೆ ಕಾಣಿಸುತ್ತದೆ. ಹಾಗಾದ್ರೆ ಅದರ ಅರ್ಥವೇನು? SETI ಸಂಸ್ಥೆಯು ತರಂಗಗಳ ಶಕ್ತಿಯನ್ನು ಅಳೆಯಲು ಒಂದು ಮಾಪನವನ್ನು ಬಳಸುತ್ತದೆ. ಸ್ತಬ್ಧ ಶಬ್ದಗಳಿಗಾಗಿ ೧-೯ ಸಂಖ್ಯೆಗಳು ಹಾಗೂ ಶಬ್ದಗಳು ಜೋರಾಗಿ ಬೆಳೆಯುತ್ತಿದ್ದಂತೆ A-Z  ಅಕ್ಷರಗಳನ್ನು ಬಳಸಿಕೊಂಡು ಪ್ರಸರಣಗಳ ಬಲವನ್ನು ಅಳೆಯುತ್ತದೆ. ‘A‘ ಅಂದರೆ ೧೦, ‘ಆ‘ ೧೧, ಇತ್ಯಾದಿ. ನೀವು ಕೋಡ್ ಅನ್ನು ಇನ್ನೊಮ್ಮೆ ಗಮನಿಸಿ, ಅಲ್ಲಿ U ಇದೆಯಲ್ಲವೇ? ಅದರರ್ಥ ಅದೇನೂ ಮಹಾನ್ ಶಕ್ತಿಶಾಲಿ ತರಂಗವೇ ಭೂಮಿಗೆ ಬಂದಿದೆ. ಬಾಹ್ಯಾಕಾಶದ ಹಿನ್ನೆಲೆ ಶಬ್ದಕ್ಕಿಂತ ೩೦ ಪಟ್ಟು ಹೆಚ್ಚು ಜೋರಾದ ದನಿಯದು. ಅದಕ್ಕೆ ಎಹ್ಮಾನ್ ಅವರು ವಾವ್ ಎಂದು ಗೀಚಿದ್ದು!

ವಾವ್ ಸಂಕೇತದ ಸುತ್ತ ಕೆಲವೊಂದು ಸಂಶಯಗಳಿವೆ. ಅದು ಉಪಗ್ರಹದಿಂದ ಬಂದದ್ದೋ ಅಥವಾ ವಿಮಾನದ್ದೇ ಅಥವಾ ಮಿಲಿಟರಿ ಸಿಗ್ನಲ್ ಇರಬಹುದೇ? ಇದು ದೂರದ ಪಲ್ಸರ್‌ನಿಂದ ಬಂದ ನೈಸರ್ಗಿಕ ಶಬ್ದವಾಗಿರಲೂಬಹುದು ಎಂದು ಕೆಲವರು ಹೇಳುತ್ತಾರೆ. ಆದರೆ ಅದರ ಶಕ್ತಿಯನ್ನು ಪರಿಶೀಲಿಸಿದ ವಿಜ್ಞಾನಿಗಳು ಬೇರೆಲ್ಲಾ ವಾದಗಳನ್ನು ತಳ್ಳಿಹಾಕಿ, ಇದ್ಯಾವುದೋ ಅಜ್ಞಾತ ಮೂಲದಿಂದ ಬಂದದ್ದು ಎಂದು ಪುನರುಚ್ಚರಿಸಿದ್ದಾರೆ. ಇನ್ನೊಂದು ವಿಷಯ ೧೯೭೭ರಲ್ಲಿ ಸಿಕ್ಕಿದ ೭೧ಸೆಕೆಂಡುಗಳ ಈ ಸಂಕೇತ ಮತ್ಯಾವತ್ತೂ ಭೂಮಿಯತ್ತ ಸುಳಿಯಲೇ ಇಲ್ಲ.

ವಿಜ್ಞಾನಿಗಳ ಪ್ರಕಾರ, ರಾತ್ರಿಯ ಆಕಾಶವನ್ನು ತಮ್ಮ ಕಿರಣಗಳಿಂದ ಸ್ಕ್ಯಾನ್ ಮಾಡುವ ಏಲಿಯನ್‌ಗಳ ಟ್ರಾನ್ಸ್‌ಮಿಟರ್ನಿಂದ ಹೊರಟ ಸಂಕೇತವು ಅಂದು ಭೂಮಿಯನ್ನು ತಲುಪಿತ್ತು. ಅದು ಇಡೀ ಕ್ಷೀರಪಥವನ್ನು ಸ್ಕ್ಯಾನ್ ಮಾಡಿ, ಮತ್ತೊಮ್ಮೆ ಭೂಮಿಯೆಡೆ ತಿರುಗುವಾಗ ಇನ್ನೆಷ್ಟು ವರುಷ ಉರುಳಬಹುದೋ? ಅಲ್ಲಿಯ ತನಕ ಭೂಮಿಯ ಮೇಲೆ ಮತ್ತೆ ಅಂತಹದೊಂದು ವಾವ್ ಸಂಕೇತ ಕೇಳಿಸುವುದಿಲ್ಲ!

andolanait

Recent Posts

ಕಳಪೆ ಪ್ರಗತಿ ಸಾಧಿಸಿದ 5 ಪಿಡಿಒಗಳಿಗೆ ಕಾರಣ ಕೇಳಿ ನೋಟಿಸ್ ನೀಡಿದ ಸಿಇಒ ನಂದಿನಿ

ಮಂಡ್ಯ : ಜಲ ಶಕ್ತಿ ಜನ ಭಾಗೀದಾರಿ, ಮಹಾತ್ಮ ಗಾಂಧಿ ನರೇಗಾ, ತೆರಿಗೆ ವಸೂಲಾತಿ ಸೇರಿದಂತೆ ಇತರೆ ಯೋಜನೆ ಮತ್ತು…

7 hours ago

ಅಕ್ರಮ ನಾಟ ಸಾಗಾಟ : ಲಾರಿ ಸಮೇತ ಮೂವರ ಬಂಧನ

ಸೋಮವಾರಪೇಟೆ : ಮರದ ನಾಟಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವಾಹನವನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಹೊಸಳ್ಳಿ ಗ್ರಾಮದಲ್ಲಿ ವಶಪಡಿಸಿಕೊಂಡಿದ್ದಾರೆ. ಹುದುಗೂರು…

7 hours ago

ಡೆವಿಲ್‌ ಅಬ್ಬರ | ಮೊದಲ ದಿನದ ಗಳಿಗೆ ಎಷ್ಟು?

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೈಲಿನಲ್ಲಿ ಇದ್ರೂ ಗುರುವಾರ ಬಿಡುಗಡೆಯಾದ ಅವರ ಅಭಿನಯದ ಡೆವಿಲ್…

7 hours ago

ಮಳವಳ್ಳಿ | ವಿದ್ಯುತ್‌ ಸ್ಪರ್ಶ ; ಕಾರ್ಮಿಕ ಸಾವು

ಮಳವಳ್ಳಿ : ವಿದ್ಯುತ್ ಸ್ಪರ್ಶಿಸಿ ಕಾರ್ಮಿಕನೋರ್ವ ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ತಾಲ್ಲೂಕಿನ ಕಲ್ಕುಣಿ ಗ್ರಾಮದ ಬಳಿ ನಡೆದಿದ್ದು, ಸೆಸ್ಕ್ ಅಧಿಕಾರಿಗಳ…

7 hours ago

2027ರ ಜನಗಣತಿ | 11,718 ಕೋಟಿ ನೀಡಲು ಕೇಂದ್ರ ಸಂಪುಟ ಅನುಮೋದನೆ

ಹೊಸದಿಲ್ಲಿ : ದೇಶದಾದ್ಯಂತ ನಡೆಸಲು ಉದ್ದೇಶಿಸಿರುವ ೨೦೨೭ರ ಜನಗಣತಿಗೆ ರೂ. ೧೧,೭೧೮ ಕೋಟಿ ಅನುದಾನ ನೀಡಲು ಕೇಂದ್ರ ಸಚಿವ ಸಂಪುಟವು…

7 hours ago

ಇಂಡಿಗೋ ಬಿಕ್ಕಟ್ಟು | ನಾಲ್ವರು ವಿಮಾನ ನಿರ್ವಹಣಾ ಇನ್ಸ್‌ಪೆಕ್ಟರ್‌ಗಳ ಅಮಾನತ್ತು

ಮುಂಬೈ : ಇಂಡಿಗೊ ವಿಮಾನ ಕಾರ್ಯಾಚರಣೆ ವ್ಯತ್ಯಯ ಪ್ರಕರಣ ಸಂಬಂಧ ನಾಲ್ವರು ವಿಮಾನ ನಿರ್ವಹಣಾ ಇನ್ಸ್‌ಪೆಕ್ಟರ್‌ಗಳನ್ನು (ಎಫ್.ಒ.ಐ) ನಾಗರಿಕ ವಿಮಾನಯಾನ…

8 hours ago