ಕಾಂತಾರ ಕುಂದಾಪುರ ಮೂಲದ ರಿಷಭ್ ಅವರಚಿತ್ರವಾದರೆ, ಕಬ್ಜ ಚಿತ್ರದ ನಾಯಕ ಕುಂದಾಪುರ ಮೂಲದ ಉಪೇಂದ್ರ!
ಮೊನ್ನೆ ಶನಿವಾರ ಎರಡು ಸಿನಿಮಾಗಳಿಗೆ ಸಂಬಂಧಪಟ್ಟ ಕಾರ್ಯಕ್ರಮಗಳಿದ್ದವು. ಹೊಂಬಾಳೆ ಸಂಸ್ಥೆಯ ವಿಜಯ ಕಿರಗಂದೂರು ಅವರಿಗಾಗಿ ರಿಷಭ್ ಶೆಟ್ಟಿ ನಿರ್ದೇಶಿಸಿ, ಮುಖ್ಯಪಾತ್ರದಲ್ಲಿ ನಟಿಸಿದ ಕಾಂತಾರ ಚಿತ್ರದ ಪತ್ರಿಕಾಗೋಷ್ಠಿ ಮತ್ತು ಆರ್ ಚಂದ್ರು ನಿರ್ಮಿಸಿ ನಿರ್ದೇಶಿಸುತ್ತಿರುವ, ಚಿತ್ರ ತಂಡದ ಪ್ರಕಾರ ಅತ್ಯಂತ ನಿರೀಕ್ಷೆಯ ಕಬ್ಜ ಚಿತ್ರದ ಟೀಸರ್ ಬಿಡುಗಡೆ.
ಮಾರನೇ ದಿನ ಉಪೇಂದ್ರ ಅವರಿಗೆ ಜನ್ಮದಿನದ ಉಡುಗೊರೆಯಾಗಿ ಅವರು ಮುಖ್ಯಪಾತ್ರದಲ್ಲಿ ನಟಿಸುತ್ತಿರುವ ಕಬ್ಜ ಚಿತ್ರದ ಟೀಸರ್ ಬಿಡುಗಡೆ ಇತ್ತು. ತೆಲುಗು ನಟ ರಾಣಾ ದಗ್ಗುಬಾಟಿ ಈ ಟೀಸರ್ ಬಿಡುಗಡೆ ಮಾಡಿದರು. ಚಿತ್ರದಲ್ಲಿ ನಟಿಸಿದ ಶ್ರೀಯಾ ಶರಣ್ ಉಪಸ್ಥಿತರಿದ್ದರು. ಉಪೇಂದ್ರ ಅವರು ಈಗಾಗಲೇ ತೆಲುಗು ಚಿತ್ರರಸಿಕರಿಗೆ ಪರಿಚಿತರು. ಚಿತ್ರದಲ್ಲಿ ನಟ ಸುದೀಪ್ ಅವರೂ ಪ್ರಮುಖ ಪಾತ್ರವೊಂದರಲ್ಲಿದ್ದಾರೆ. ಉಪೇಂದ್ರ-ಸುದೀಪ್ ಜೋಡಿಯ ಚಿತ್ರವೆಂದರೆ ಸಹಜವಾಗಿಯೇ ಅದರ ಕುರಿತಂತೆ ನಿರೀಕ್ಷೆ ಹೆಚ್ಚೇ ಇರುತ್ತದೆ. ಈ ಚಿತ್ರಕ್ಕೂ ಅದೇ ರೀತಿಯ ಕುತೂಹಲ, ನಿರೀಕ್ಷೆ ಇದೆ ಎನ್ನುವುದು, ಟೀಸರ್ ಬಿಡುಗಡೆಯಾದ ಒಂದೇ ದಿನದಲ್ಲಿ ವೇದ್ಯವಾಯಿತು. ಅದನ್ನು ವೀಕ್ಷಿಸಿದವರ ಸಂಖೈ ಎರಡು ದಿನಗಳಲ್ಲಿ ಎರಡೂವರೆ ಕೋಟಿ ದಾಟಿತು ್ತಎನ್ನುವುದನ್ನು ಅಲ್ಲಿನ ಸಂಖ್ಯೆ ಹೇಳಿತ್ತು.
ಕೆಜಿಎಫ್ ಚಿತ್ರದ ನಂತರ ದೇಶದ ಎಲ್ಲ ಭಾಷೆಗಳ ಚಿತ್ರೋದ್ಯಮ
ಮತು ್ತಚಿತ್ರಸಿಕರ ಗಮನ ಇತ ್ತಕಡೆ ಹೊರಳಿದೆ ಎನ್ನುವುದು ಎಲ್ಲರಿಗೂ ಗೊತ್ತು. ಚಿತ್ರರಂಗದ ಒಳಗಿದ್ದವರ ಗಮನವೂ. ಕಬ್ಜ ಚಿತ್ರದ ಟೀಸರ್ ಬಿಡುಗಡೆ ಹಾಗೂ ಅದರ ಜನಪ್ರಿಯತೆ ಈ ಮಟ್ಟದ್ದಾಗುತ್ತದೆ ಎನ್ನುವುದು ಚಂದ್ರು ಅವರಾಗಲೀ, ಚಿತ್ರತಂಡದ ಇತರರಾಗಲೀ ನಿರೀಕ್ಷಿಸಿರಲಿಲ್ಲವಂತೆ. ಕೆಜಿಎಫ್ ಚಿತ್ರದೊಂದಿಗೆ ಹೋಲಿಸಿದ ಪ್ರತಿಕ್ರಿಯೆಗಳೂ ಅಲ್ಲಿದ್ದವು. ಈ ಸಂತ ಹಂಚಿಕೊಳ್ಳಲು ಮತ್ತೊಂದು ಪತ್ರಿಕಾಗೋಷ್ಠಿ ಇತ್ತು.
ಹ್ಞಾಂ, ಚಂದ್ರು ಅವರ ಪ್ರಕಾರ ಇದೊಂದು ಪಾನ್ ಇಂಡಿಯಾ ಚಿತ್ರವಾಗಿದ್ದು ಏಳು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಇದೀಗ ಇನ್ನೂ ಹೆಚ್ಚಿನ ಭಾಷೆಗಳಿಂದ ಬೇಡಿಕೆ ಬರುತ್ತಿದ್ದು, ಆ ನಿಟ್ಟಿನಲ್ಲೂ ಯೋಚನೆ ನಡೆದಿದೆಯಂತೆ. ಪತ್ರಿಕಾಗೋಷ್ಠಿಯಲ್ಲಿ ಉಪೇಂದ್ರ ಹಾಗೂ ಅವರ ಮುಂದಿನ ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ಶ್ರೀಕಾಂತ್ ಇದ್ದರು. ಈ ಚಿತ್ರದ ವ್ಯವಹಾರದ ಜವಾಬ್ದಾರಿಯನ್ನು ಅವರಿಗೆ ವಹಿಸಿದ್ದಾರಂತೆ ಚಂದ್ರು. ಚಿತ್ರದ ಬಿಡುಗಡೆಯ ದಿನವನ್ನು ಇನ್ನೂ ನಿಗದಿಪಡಿಸಿಲ್ಲವಾದರೂ, ಈ ವರ್ಷಾಂತ್ಯದಲ್ಲಿ ತೆರೆಗೆ ತರಬಹುದು ಎನ್ನುವ ಸೂಚನೆಯನ್ನು ಉಪೇಂದ್ರ ಅವರು ನೀಡಿದರು. ಕೆಜಿಎಫ್ ಚಿತ್ರವನ್ನು ನೋಡಿದ ಮೇಲೆ, ಅದರ ಯಶಸ್ಸನ್ನು ಕಂಡ ಮೇಲೆ, ತಾವೂ ಅಂತಹ ಚಿತ್ರವನ್ನು ಕೈಗೆತ್ತಿಕೊಳ್ಳಲು ನಿರ್ಧರಿಸಿದರಂತೆ ಚಂದ್ರು. ಉಪೇಂದ್ರಅವರಿಗೆ ಕಥೆ ಹೇಳಿದಾಗ, ಇದೆಲ್ಲ ಮಾಡಲು ಸಾಧ್ಯವೇ ಎನ್ನುವ ಪ್ರಶ್ನೆ ಅವರದು. ಸಾಧ್ಯ ಎಂದು ಹೇಳಿದ ಚಂದ್ರು ಅದನ್ನು ಮಾಡಿ ತೋರಿಸಿದ್ದಾರೆ ಎನ್ನುವ ಅಭಿಪ್ರಾಯ ಈಗ ಉಪೇಂದ್ರ ಅವರದು. ಮಾತ್ರವಲ್ಲ, ತಂತ್ರಜ್ಞಾನ ಮತ್ತು ಪ್ರೇಕ್ಷಕರ ಅಭಿರುಚಿ, ನಿರೀಕ್ಷೆ ಬದಲಾದ ಹಿನ್ನೆಲೆಯಲ್ಲಿ, ತಾವು ಕೂಡಾ ಕಥೆ ಹೇಳುವ ರೀತಿಯನ್ನು ಬದಲಾಯಿಸಿಕೊಳ್ಳಬೇಕಾಗಿದೆ ಎನ್ನುವುದಾಗಿ ಹೇಳಿದರು. ಚಿತ್ರದ ಗುಣಮಟ್ಟದ ಬಗ್ಗೆ ಮಾತ್ರವೇ ಹೊರತು ಅದರ ನಿರ್ಮಾಣ ವೆಚ್ಚದ ಬಗ್ಗೆ ತಲೆ ಕೆಡಿಸಿಕೊಳ್ಳದ ಚಂದ್ರು ಅವರಿಗೆ ಬಂಡವಾಳ ಹಾಕುವವರು ಸಾಕಷ್ಟು ಮಂದಿ ಇದ್ದಾರೆ ಎನ್ನುವುದನ್ನು ಆತ್ಮವಿಶ್ವಾಸದ ಅವರ ಮಾತುಗಳೇ ಹೇಳುತ್ತಿದ್ದವು. ದೇಶದ ಹೊರಗೂ ಚಿತ್ರಕ್ಕೆ ಬೇಡಿಕೆ ಇದೆ ಎನ್ನುವ ಚಂದ್ರು ಮಾತನ್ನು ಅರ್ಧದಲ್ಲೇ ತಡೆದ ಉಪೇಂದ್ರ, ಇದು ಪಾನ್ ಇಂಡಿಯಾ ಚಿತ್ರ. ಮುಂದಿನ ನನ್ನ ಚಿತ್ರ ಪ್ಯಾನ್ ವರ್ಲ್ಡ್ ಚಿತ್ರ ಎಂದರು.
ಕನ್ನಡದಲ್ಲಿ ತಯಾರಿಸಿ, ಇತರ ಭಾಷೆಗಳಿಗೆ ಡಬ್ ಮಾಡಿ ವಿಶ್ವಾದ್ಯಂತ ಬಿಡುಗ ೆಮಾಡಲಿರುವ ಚಿತ್ರ ಕಬ್ಜ. ಚಿತ್ರದ ಕುರಿತಂತೆ ಹೆಚ್ಚು ವಿವರಗಳನ್ನು ನೀಡಲು ಚಂದ್ರು ಇಷ್ಟಪಡಲಿಲ್ಲ. ಚಿತ್ರ ನೋಡಿಯೇ ತಿಳಿಯಬೇಕು ಅದನ್ನು!
ಹೊಂಬಾಳೆ ಸಂಸ್ಥೆಗಾಗಿ ರಿಷಭ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಕಾಂತಾರ ಬೇರೆ ಬೇರೆ ಕಾರಣಗಳಿಗಾಗಿ ಇದಕ್ಕಿಂತ ಭಿನ್ನ. ಕನ್ನಡದಲ್ಲಿ ತಯಾರಾದ ಈ ಚಿತ್ರ ವಿಶ್ವಾದ್ಯಂತ ಕನ್ನಡದಲ್ಲೇ ತೆರೆಗೆ ಬರಲಿದೆ. ಕನ್ನಡ ಬಾರದ ಪ್ರೇಕ್ಷರಿಗಾಗಿ ಇಂಗ್ಲಿಷ್ ಉಪಶೀರ್ಷಿಕೆಗಳಿರುತ್ತವೆ. ಚಿತ್ರವೊಂದು ತನ್ನ ಮೂಲ ಭಾಷೆಯಲ್ಲೇ ಇತರ ಕಡೆ ತೆರೆಗೆ ಬಂದಾಗ, ಆ ಭಾಷೆ, ಸಂಸ್ಕೃತಿಗಳ ಪರಿಚಯವೂ ಆಗುತ್ತದೆ. ಹಾಗಾಗಿ ಇದು ಒಂದು ರೀತಿಯಲ್ಲಿ ಒಳ್ಳೆಯ ನಿರ್ಧಾರ ಕೂಡಾ. ಇದರ ಕುರಿತಂತೆ ಭಿನ್ನ ಅಭಿಪ್ರಾಯಗಳೂ ಇವೆ. ಯಾವುದೇ ಭಾಷೆಯ ಚಿತ್ರವಿರಲಿ, ಅದು ಬಿಂಬಗಳ ಮೂಲಕ ಕಟ್ಟಿಕೊಡುವುದೇ ಹೊರತು, ಬರೀ ಮಾತುಗಳಿಂದ ಅಲ್ಲ. ಮಾತಿಲ್ಲದ ಚಿತ್ರಗಳ ದಿನಗಳಲ್ಲಿ ಅವು ಪ್ರೇಕ್ಷಕರ ಮನಮುಟ್ಟಿದ್ದವಷ್ಟೇ.
ಹೊಂಬಾಳೆ ಅವರಿಗಾಗಿ ತಯಾರಾದ ಕಾಂತಾರದಲ್ಲಿ ಪುನೀತ್ ರಾಜಕುಮಾರ್ ನಟಿಸಬೇಕಿತ್ತು. ದಿನಾಂಕಗಳು ಹೊಂದಾಣಿಕೆ ಆಗಲಿಲ್ಲ. ಪುನೀತ್ ಅವರೇ ರಿಷಭ್ ಅವರ ಹೆಸರನ್ನು ಸೂಚಿಸಿದರು, ಎನ್ನುವ ವಿಷಯ ಇತ್ತೀಚೆಗೆ, ನಿರ್ಮಾಣ ಸಂಸ್ಥೆಯ ಮೂಲಗಳಿಂದಲೇ ಬಹಿರಂಗವಾಗಿದೆ.
ಕಾಂತಾರ ಚಿತ್ರದಲ್ಲಿನ ಕೆಲವೊಂದು ಘಟನೆಗಳು ನನ್ನ ಬದುಕಿನಲ್ಲಿ ನೋಡಿದ್ದು. ಮುಖ್ಯ ಕಥೆಯೊಳಗೆ ಕೆಲವು ನಾನು ನೋಡಿದ ಅಂಶಗಳೂ ಸೇರಿಕೊಂಡಿವೆ. ದೊಡ್ಡ ಕ್ಯಾನ್ವಾಸಿನ ಚಿತ್ರವಿದು. ನನ್ನ ಈ ವರೆಗಿನ ಸಿನಿಮಾ ಜರ್ನಿಯಲ್ಲಿ ಯಾವತ್ತೂ ಇಷ್ಟು ದೊಡ್ಡ ಬಜೆಟ್ ಸಿನಿಮಾದಲ್ಲಿ ಕೆಲಸ ಮಾಡಿಲ್ಲ ಎನ್ನುತ್ತಾರೆ ರಿಷಭ್.
ಕಾಂತಾರ ಕರಾವಳಿಯ ಕಥೆ. ಪರಶುರಾಮ ಸೃಷ್ಟಿ ಎಂದೇ ಹೇಳಲಾ–ಗುತ್ತಿರುವ ಕರಾವಳಿಯ ಸಂಸ್ಕೃತಿ, ಆಚರಣೆಗಳ ಹಿನ್ನೆಲೆಯಲ್ಲಿ, ಪ್ರಕೃತಿ ಮತ್ತು ಮನುಷ್ಯನ ನಿತ್ಯಸಂಘರ್ಷದ ಈ ೯೦ರ ದಶಕದ ಕಥಾನಕದಲ್ಲಿ ಇಂದಿನ ಬದುಕಿನ ಅನಾವರಣವೂ ಇದೆ ಎನ್ನುವ ರಿಷಭ್, ತಮ್ಮೂರಿನಲ್ಲಿಯೇ ಸೆಟ್ ಹಾಕಿ ಚಿತ್ರೀಕರಣ ಮಾಡಿದ್ದಾರೆ. ಚಿತ್ರತಂಡದಲ್ಲಿ ಪ್ರತಿದಿನ ೫೦೦-೬೦೦ ಮಂದಿ ಇರುತ್ತಿದ್ದರಂತೆ. ಕರಾವಳಿಯ ಮಂದಿಯ ಬದುಕಿನಲ್ಲಿ ಹಾಸುಹೊಕ್ಕಾಗಿರುವ ದೈವಾರಾಧನೆ, ಯಕ್ಷಗಾನ, ಕಂಬಳ ಮುಂತಾದವು ಈ ಚಿತ್ರದಲ್ಲಿ ಇವೆ. ತಾವೇ ಕಂಬಳದ ಕೋಣಗಳನ್ನು ಓಡಿಸಲು ಅಭ್ಯಾಸ ಮಾಡಿ ಓಡಿಸಿದ್ದು, ದೈವಸ್ಥಾನದಲ್ಲಿ ಚಿತ್ರೀಕರಣದ ವೇಳೆ ಇಡೀ ಚಿತ್ರ ತಂಡ ಅಲ್ಲಿಗೆ ಅನುಗುಣವಾಗಿ ನಡೆದುಕೊಂಡದ್ದೇ ಮೊದಲಾದ ವಿಷಯಗಳನ್ನು ಅವರು ಹೇಳಿದರು. ಕಾಂತಾರದ ಭಾಗವಾಗಿದ್ದ ಅಚ್ಯುತ ಕುಮಾರ್, ಪ್ರಮೋದಶೆಟ್ಟಿ ,ಸಪ್ತಮಿಗೌಡ ಮೊದಲಾದವರು ಈ ಚಿತ್ರದಲ್ಲಿ ಅಲ್ಲಿನ ಭಾಷೆ, ನಡವಳಿಕೆಗಳ ಕುರಿತ ತಮ್ಮ ಅನುಭವ ಹಂಚಿಕೊಂಡರು.
ಕಾಂತಾರ ಕುಂದಾಪುರ ಮೂಲದ ರಿಷಭ್ ಅವರ ನಿರ್ದೇಶನ ನಟನೆಯ ಚಿತ್ರವಾದರೆ, ಕಬ್ಜ ಚಿತ್ರದ ಮುಖ್ಯ ಭೂಮಿಕೆಯಲ್ಲಿರುವುದು ಕುಂದಾಪುರ ಮೂಲದ ಉಪೇಂದ್ರ!
ಬೆಂಗಳೂರು: ವಿಧಾನ ಪರಿಷತ್ ಶಾಸಕ ಸಿ.ಟಿ.ರವಿ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನೀಡಿರುವ ಹೇಳಿಕೆ ಅಮಿತ್…
ಮಂಡ್ಯ: ಹೆಣ್ಣು ಕಾನೂನು ಅರಿತಕೊಂಡಾಗಷ್ಟೇ, ಹೆಣ್ಣಿನ ಮೇಲಾಗುತ್ತಿರುವ ದೌರ್ಜನ್ಯ ಎದುರಿಸಲು ಸಾಧ್ಯ ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ…
ಮೈಸೂರು: ರಾಜ್ಯದಲ್ಲಿ ಬಾಣಂತಿಯರ ಸರಣಿ ಸಾವು ಪ್ರಕರಣ ಮಾಸುವ ಮುನ್ನವೇ ಸಾಂಸ್ಕೃತಿಕ ನಗರಿ ಮೈಸೂರಲ್ಲಿ ವೈದ್ಯರ ನಿರ್ಲಕ್ಷ್ಯಕ್ಕೆ ಬಾಲಕಿ ಸಾವನ್ನಪ್ಪಿರುವ…
ಬೆಂಗಳೂರು: ಸ್ಯಾಂಡಲ್ವುಡ್ ನಟ ಡಾಲಿ ಧನಂಜಯ್ ಅವರು ತಮ್ಮ ಮದುವೆ ಕರೆಯೋಲೆಯನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಡಿ.ಕೆ.ಸುರೇಶ್ ಅವರಿಗೆ ನೀಡಿ…
ಕಲಬುರಗಿಯಲ್ಲಿ 371 ಹಾಸಿಗೆಗಳ ಜಯದೇವ ಹೃದ್ರೋಗ ಆಸ್ಪತ್ರೆಯ ನೂತನ ಕಟ್ಟಡವನ್ನು ಉದ್ಘಾಟಿಸಿ ಸಿಎಂ ಮಾತು.. ಕಲಬುರಗಿ: ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ…
ಬೆಳಗಾವಿ: ಎಂಎಲ್ಸಿ ಸಿ.ಟಿ.ರವಿ ಬಂಧನಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಪೊಲೀಸರ ವಿರುದ್ಧ ಫೇಕ್ ಎನ್ಕೌಂಟರ್ ಹೇಳಿಕೆ…