ಡಾ.ಎನ್.ಬಿ.ಶ್ರೀಧರ
“ಇಡೀ ವೈದ್ಯಕೀಯ ವ್ಯವಸ್ಥೆನೇ ಮಾಫಿಯಾ ಕಣ್ರೀ? ಎಲ್ಲ ಆಸ್ಪತ್ರೆಯವರೂ ಬಡವರ ಪ್ರಾಣ ಹಿಂಡುವವರೇ. ಅವಶ್ಯಕತೆ ಇರದಿದ್ರೂ ಅನೇಕಾನೇಕ ಪರೀಕ್ಷೆ ಸುಮ್ ಸುಮ್ನೆ ಬರೆದು ಕೊಡ್ತಾರೆ. ಅದೆಷ್ಟು ಫೀಸು?
ಎಲ್ಲ ಔಷಧಿಗಳೂ ಸೈಡ್ ಎಫೆಕ್ಟು. ಎಷ್ಟು ದುಬಾರಿ ಅಂತೀರಾ? ಸಾಕಪ್ಪಾ ಸಾಕು ಇದರ ಸಹವಾಸ. ಯಾವಾಗ ಸರಿ ಹೋಗುತ್ತೋ ಈ ವ್ಯವಸ್ಥೆ? ನಾಟಿ ಔಷಧಿ ಮಾಡಬೇಕೆಂದು ಕೊಂಡಿದ್ದೇನೆ’ ಇವೆಲ್ಲಾ ದಿನ ನಿತ್ಯ ಅನೇಕರು ವ್ಯಕ್ತಪಡಿಸುವ ಭಾವನೆ. ಹಾಗಿದ್ದರೆ ಇದಕ್ಕೆಲ್ಲಾ ಬದಲಿ ವ್ಯವಸ್ಥೆ ಇದೆಯೇ? ನಾಟಿ ಔಷಧಿ, ಗಿಡಮೂಲಿಕೆ ಔಷಧಿ ಇವೆಲ್ಲಾ ಉತ್ತರವೇ? ಒಂದಿಷ್ಟು ತಿಳಿಯೋಣ. ?
* ಸಾಮಾನ್ಯವಾಗಿ ಕಾಯಿಲೆ ಬಂದಾಗ ಆಸ್ಪತ್ರೆಗೆ ಹೋಗುತ್ತೇವೆ. ಅಲ್ಲಿರುವ ಸ್ವಾಗತಕಾರರು ಒಂದಿಷ್ಟು ರೋಗಲಕ್ಷಣ ಕೇಳಿ ಸಾಮಾನ್ಯ ಔಷಧಿಯ ತಜ್ಞತೆಯ ವೈದ್ಯರ ಬಳಿ ಕಳಿಸಲು ನಿರ್ಧಾರ ತೆಗೆದುಕೊಳ್ಳಬಹುದು. ಆಗ ಅವರ ಸಮಾಲೋಚನಾ ಶುಲ್ಕ ನೀಡಬೇಕಾಗುತ್ತದೆ.
* ವೈದ್ಯರನ್ನು ಕಾಯುವಾಗ ಸಹಜವಾಗಿ ಅಸಹನೆ ಪ್ರಾರಂಭವಾಗುತ್ತದೆ. ಅದೆಷ್ಟೋ ಆಸ್ಪತ್ರೆಗಳಲ್ಲಿ ಹೊರರೋಗಿಗಳನ್ನು ನೋಡುವವರೇ ಒಳರೋಗಿಗಳನ್ನೂ ನೋಡಬೇಕಾ ಗಿರುವುದರಿಂದ ಕಾಯುವ ಸಮಯ ಜಾಸ್ತಿಯಾಗುತ್ತದೆ. ಆದರೆ ವೈದ್ಯರಿಗೆ ಎರಡನ್ನೂ ನಿಭಾಯಿಸುವುದು ಅನಿವಾರ್ಯ
* ಇದಾದ ಮೇಲೆ ವೈದ್ಯರು ಬಂದು ರೋಗಲಕ್ಷಣಗಳನ್ನು ಕೇಳಿ, ವೃತ್ತಾಂತಗಳನ್ನೆಲ್ಲಾ ಕೇಳಿ, ಹಳೆಯ ವರದಿಗಳನ್ನೆಲ್ಲಾ ಓದಿ, ರೋಗಿಯ ಬಾಹ್ಯ ಪರೀಕ್ಷೆಗಳನ್ನೆಲ್ಲಾ ಮಾಡಿ ಅವಶ್ಯ ಪ್ರಯೋಗಶಾಲಾ ಪರೀಕ್ಷೆಗಳನ್ನು ಬರೆದುಕೊಡುತ್ತಾರೆ.
* ಇದಕ್ಕೆ ಪುನಾ ಹಣ ನೀಡಬೇಕಾಗುತ್ತದೆ, ನೀಡಲೇಬೇಕು. ಇಲ್ಲೂ ರೋಗಿಗಳಿಗೆ ಸಂಶಯ ಹುಟ್ಟಿಯೇ ಬಿಡುತ್ತದೆ. ಈ ಪರೀಕ್ಷೆಗಳು ಬೇಕಾಗಿತ್ತೇ ಇಲ್ಲವೇ? ಸುಮ್ಮನೇ ದುಡ್ಡು ಮಾಡಲು ಬರೆದುಕೊಟ್ಟಿದ್ದಾರೆಯೇ? ಇವರ ಕಮಿಷನ್ ಎಷ್ಟು? ಇತ್ಯಾದಿ. ಸರಿ, ಎಲ್ಲಾ ಪರಿಕ್ಷೆಗಳನ್ನು ಮುಗಿಸಿ ಉಸ್ಸಪ್ಪಾ ಎಂದು ವೈದ್ಯರ ಹತ್ತಿರ ಬಂದರೆ ಪುನಾ ಸರತಿ ಸಾಲು. ಅಥವಾ ವೈದ್ಯರು ಒಳರೋಗಿಗಳನ್ನು ನೋಡಲು ಮತ್ತೊಮ್ಮೆ ಹೋಗಿರಬಹುದು. ಮೊದಲೇ ಬೇಸರ ಈಗ ಕಾಯುವಿಕೆ ಇಡೀ ಪ್ರಪಂಚದ ವೈದ್ಯಲೋಕದ ಮೇಲೆಯೇ ಸಿಟ್ಟು ಉಕ್ಕಿಸಿ ಬಿಡುತ್ತದೆ.
* ಸರತಿಯಲ್ಲಿ ಪಾಳಿ ಬಂದಾಗ ಎಲ್ಲಾ ವರದಿಗಳನ್ನು ನೋಡಿದ ವೈದ್ಯರು ಒಂದಿಷ್ಟು ಔಷಧಿಗಳನ್ನು ಬರೆದುಕೊಡಬಹುದು. ಅದನ್ನು ಆಯಾ ಆಸ್ಪತ್ರೆಯಲ್ಲಿಯೇ ಇರುವ ಔಷಧಿ ಅಂಗಡಿಯಲ್ಲಿಯೇ ಕೊಂಡರೆ ಅವೇ ಸಿಗುತ್ತವೆ. ಇಲ್ಲದಿದ್ದರೆ ಇಲ್ಲ. ಔಷಧಿಯೇನು ಉಚಿತವೇ? ಅದಕ್ಕೂ ಹಣ ನೀಡಬೇಕಲ್ಲ? ನೀಡಲೇಬೇಕು. ಇಲ್ಲೂ ರೋಗಿಯ ಅಥವಾ ಸಂಬಂಧಿಕರಿಗೆ ಪುನಾ ಸಂಶಯ. ವೈದ್ಯರಿಗೆ ಇದರಲ್ಲೆಷ್ಟು ಕಮಿಷನ್ ಎಂದು !
* ಕೆಲವೊಮ್ಮೆ ಶಸ್ತ್ರಚಿಕಿತ್ಸೆಯ ಅವಶ್ಯಕತೆ ಬೀಳಬಹುದು. ಅದಂತೂ ಭರಿಸಲಾರದ ಹೊರೆಯಲ್ಲವೇ? ನಿಜ. ಕೊನೆಗೆ ವೈದ್ಯಕೀಯ ವ್ಯವಸ್ಥೆಯ ಮೇಲೆಯೇ ರೇಜಿಗೆ ಬರುವುದು ಸಹಜ.
* ನಿಜ. ಇದೆಲ್ಲಾ ಆಕ್ರೋಶವಾಗಿ ಬದಲಾಗಿ ಇಡೀ ವೈದ್ಯಕೀಯ ವ್ಯವಸ್ಥೆಯ ಬಗ್ಗೆಯೇ ಕೋಪ ತರಿಸಿ ಬಿಡುತ್ತದೆ. ವೈದ್ಯರೆಲ್ಲಾ ಹಣ ಮಾಡಲೆಂದೇ ಅವತರಿಸಿರುವ ರಕ್ಕಸರಾಗಿ ಬದಲಾಗುತ್ತಾರೆ. ಈ ವ್ಯವಸ್ಥೆ ರೋಗಿಯನ್ನು ಸುಲಿಯಲೆಂದೇ ಇರುವ ವ್ಯವಸ್ಥೆಯಾಗಿ ಕೋಪ ಉಕ್ಕಿ ಹರಿದು ಇಡೀ ಸಾಮಾಜಿಕ ವ್ಯವಸ್ಥೆಯ ಮೇಲೆಯೇ ರೇಜಿಗೆ, ಕೋಪ ಬಂದು ಆಧುನಿಕ ವೈಜ್ಞಾನಿಕ ವೈದ್ಯಕೀಯ ಪದ್ಧತಿಯನ್ನು ದ್ವೇಷಿಸಲು ಪ್ರಾರಂಭಿಸುತ್ತೇವೆ. ಕೆಲವೊಮ್ಮೆ ಜನಪ್ರಿಯತೆಗಾಗಿ ಕೆಲವರು ಹೇಳುವ ಅರ್ಧ ಸತ್ಯ ಮತ್ತು ಇನ್ನರ್ಧ ಮಿಥ್ಯ ಇದಕ್ಕೆ ಪುಷ್ಟಿ ನೀಡಿ ವಿವೇಚನಾ ಶಕ್ತಿಯನ್ನೇ ಹೀರಿಬಿಡುತ್ತದೆ. ಇದೆಲ್ಲಾ ಮೆಡಿಕಲ್ ಮಾಫಿಯಾ ಎಂಬ ಅವರ ಮಾತು ಕಿವಿಯಲ್ಲಿ ಬೋರಿಡಲು ಪ್ರಾರಂಭಿಸಿ ಭೋರ್ಗೆರೆತವಾಗಿ ಬಿಡುತ್ತದೆ.
* ಆರೋಗ್ಯದ ವಿಚಾರವನ್ನೆಲ್ಲಾ ಅನೇಕರಲ್ಲಿ ಹಂಚಿಕೊಳ್ಳುವುದು ಒಂದಿಷ್ಟು ತಾತ್ಕಾಲಿಕ ಅನುಕಂಪ ಅಥವಾ ಸಾಂತ್ವನಕ್ಕಾಗಿ ಮಾತ್ರ. ಕೊನೆಗೆ ನಿಮ್ಮ ಜೊತೆ ಇರುವುದು ನಿಮ್ಮ ವೈದ್ಯರು, ನಿಮ್ಮ ಕುಟುಂಬ ಅಥವಾ ನಿಮ್ಮ ಆಪ್ತ ಸ್ನೇಹಿತರು ಮಾತ್ರ ಎಂಬುದು ತಿಳಿದಿರಲಿ.
* ಇದೆಲ್ಲಾ ಒಂದಿಷ್ಟು ಅಧ್ಯಯನದ ನಂತರ ಹುಟ್ಟಿದ ಸಲಹೆಗಳೇ ಹೊರತು ಒತ್ತಾಯವಲ್ಲ. ಶರೀರ, ಹಣ, ತಾಳ್ಮೆ, ಆರೋಗ್ಯ ಎಲ್ಲವೂ ತೀರಾ ವೈಯಕ್ತಿಕ ಮಟ್ಟದಲ್ಲಿರುವುದು ಬಹಳ ಒಳ್ಳೆಯದು. ಮೊಂಡುವಾದ, ಯಾವುದೋ ನಂಬಿಕೆ, ಯಾರದೋ ಹೇಳಿಕೆ ಇವೆಲ್ಲಾ ವೈಯಕ್ತಿಕ ಆರೋಗ್ಯಕ್ಕಾಗಿ ಸಹಕಾರಿಯಾಗಲ್ಲ. ನಮ್ಮ ಆರೋಗ್ಯ ನಮ್ಮ ಹೆಮ್ಮೆ !!
(ಲೇಖಕರು: ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಪಶುವೈದ್ಯಕೀಯ ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಭಾಗ, ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ)
ಮೈಸೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ನಡೆದಿದೆ ಎನ್ನಲಾದ ಹಗರಣದ ಸಂಬಂಧ ಹೆಚ್ಚಿನ ವಿಚಾರಣೆಗಾಗಿ ಮಾಜಿ ಆಯುಕ್ತ ದಿನೇಶ್…
ಮಡಿಕೇರಿ : ದುಬಾರೆ ಶಿಬಿರದ ಸಾಕಾನೆ ತಕ್ಷ ಅನಾರೋಗ್ಯದಿಂದ ಸೋಮವಾರ ರಾತ್ರಿ ಮೃತಪಟ್ಟಿದೆ. ಡಿ.೮ರಂದು ರಾತ್ರಿ ೯.೩೦ರ ಸಮಯದಲ್ಲಿ ತಕ್ಷ…
ಮೈಸೂರು : ಕೇಳಿದ ತಕ್ಷಣ ಹಣ ಕೊಡಲಿಲ್ಲ ಎಂಬ ಕಾರಣಕ್ಕಾಗಿ ಸ್ನೇಹಿತನ ಮೇಲೆ ಯುವಕನೊಬ್ಬ ಚಾಕುವಿನಿಂದ ಇರಿದಿರುವ ಘಟನೆ ನಗರದಲ್ಲಿ…
ಮೈಸೂರು : ಲೈಂಗಿಕವಾಗಿ ಸಹಕರಿಸಿದಲ್ಲಿ ಚೆನ್ನಾಗಿ ನೋಡಿಕೊಳ್ಳುತ್ತೀನಿ ಎಂದು ಮಹಿಳಾ ಉದ್ಯೋಗಿಗೆ ಕಿರುಕುಳ ನೀಡಿದ ಖಾಸಗಿ ಕಾರ್ಖಾನೆ ಮಾಲೀಕನ ವಿರುದ್ದ…
ಮೈಸೂರು : ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ದೇವಿಯ ದರ್ಶನ ಹಾಗೂ ಸಮೂಹ ದೇವಾಲಯಗಳ ಸೇವೆಗಳ ಶುಲ್ಕಗಳನ್ನು ಏರಿಸಿರುವ ರಾಜ್ಯ…
ಬೆಳಗಾವಿ : ರಾಜ್ಯದಲ್ಲಿ 545 ಪಿಎಸ್‌ಐ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದು, ಈಗಾಗಲೇ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ. ಮೂರು ತಿಂಗಳ…