ಎಡಿಟೋರಿಯಲ್

ಯಾರು ಹಿತವರು ನಿಮಗೆ ಈ ನಾಲ್ವರೊಳಗೆ?

ನಾಳೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ವಾರ್ಷಿಕ ಸರ್ವಸದಸ್ಯರ ಸಭೆ ಮತ್ತು ಚುನಾವಣೆ ನಡೆಯಲಿದೆಈ ಬಾರಿಯ ಚುನಾವಣೆ ಹಿಂದೆಂದಿಗಿಂತಲೂ ಭಿನ್ನವಾಗಿದೆರಾಜಕೀಯ ಪಕ್ಷಗಳ ಮಂದಿ ತಮ್ಮ ಕ್ಷೇತ್ರಗಳ ಮತದಾರರನ್ನು ಓಲೈಸುವ ಪರಿಯಲ್ಲೇ ಇಲ್ಲೂ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಆಗುತ್ತಿದೆ ಎನ್ನುವುದೀಗ ಬಹಿರಂಗ ಗುಟ್ಟು.

ಈ ಚುನಾವಣೆಅದರಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಹುರಿಯಾಳುಗಳುಅವರ ಯೋಚನೆಯೋಜನೆಗಳು ಇವುಗಳ ಕುರಿತ ಪ್ರಸ್ತಾಪಕ್ಕೆ ಮೊದಲು ಹಿಂದಿನ ಒಂದೆರಡು ಸಾಲಿನ ಚುನಾವಣೆಆಯ್ಕೆಅವರು ಮಾಡಿದ ಕೆಲಸಗಳತ್ತ ಒಮ್ಮೆ ತಿರುಗಿ ನೋಡುವುದು ಅಗತ್ಯಕಳೆದ ಸಾಲಿನಲ್ಲಿ ಅಧ್ಯಕ್ಷರಾಗಿ ಆಯ್ಕೆಯಾದವರು ಭಾ..ಹರೀಶ್ಅವರು ನಿರ್ಮಾಪಕರ ವಲಯದಿಂದ ಆರಿಸಿ ಬಂದಿದ್ದರುಚುನಾವಣೆಯಲ್ಲಿ ತಮ್ಮ ವಿರುದ್ಧ ಸ್ಪರ್ಧಿಸಿದ್ದ ಸಾ.ರಾ.ಗೋವಿಂದು ಅವರನ್ನು ಪರಾಭವಗೊಳಿಸಿ ಗೆದ್ದು ಬಂದಿದ್ದರುಚುನಾವಣೆ ಸರಿಯಾಗಿ ನಡೆದಿಲ್ಲ ಎಂದು ಸಾ.ರಾ.ಗೋವಿಂದು ಮತ್ತವರ ಬಳಗದ ಗೆಳೆಯರು ತಕರಾರು ಮಾಡಿ ಕಾನೂನು ಮೊರೆ ಹೋಗಿದ್ದರುಅದರ ಪರಿಣಾಮವಾಗಿಯಾವುದೇ ಕಾರ್ಯಕ್ರಮಗಳನ್ನು ವಿಶೇಷವಾಗಿಹೆಚ್ಚು ಆರ್ಥಿಕ ವೆಚ್ಚವಾಗುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳದಂತೆ ವಾಣಿಜ್ಯ ಮಂಡಳಿಗೆ ಆಯ್ಕೆಯಾದ ಭಾ..ಹರೀಶ್ ಮತ್ತು ತಂಡಕ್ಕೆ ಆದೇಶವಿತ್ತು.

ಇದಕ್ಕೂ ಮೊದಲು ಪ್ರದರ್ಶಕ ವಲಯದಿಂದ ಜೈರಾಜ್ವಿತರಕರ ವಲಯದಿಂದ ಎಸ್..ಚಿನ್ನೇಗೌಡ ಮತ್ತು ನಿರ್ಮಾಪಕರ ವಲಯದಿಂದ ಸಾ.ರಾ.ಗೋವಿಂದು ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದರುಯಾರದೇ ಅವಽಯಲ್ಲಿ ವಾರ್ಷಿಕ ಚುನಾವಣೆಯಲ್ಲಿ ತಡವಾದರೂಭಾ..ಹರೀಶ್ ಸಹಕಾರ ಸಂಘಗಳ ಪ್ರಬಂಧಕರ ಕಚೇರಿಗೆ ದೂರು ನೀಡಿ ನೋಟಿಸ್ ಕೊಡಿಸಿ ಕೂಡಲೇ ಆಗುವಂತೆ ಮಾಡುತ್ತಿದ್ದರು ಎನ್ನುವುದನ್ನು ವಾಣಿಜ್ಯ ಮಂಡಳಿಯ ಸದಸ್ಯರು ಹೇಳುತ್ತಾರೆಈ ಬಾರಿ ಅಧ್ಯಕ್ಷ ಸ್ಥಾನಕ್ಕೆ ವಿತರಕರ ಸರದಿಇದೇ ಮೊದಲ ಬಾರಿಗೆ ನಾಲ್ವರು ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದಾರೆ.

ಕಳೆದ ನಾಲ್ಕು ದಶಕಗಳಿಂದಲೂ ವಿತರಕರಾಗಿರುವ ವಿ.ಎಚ್.ಸುರೇಶ್ (ಮಾರ್ಸ್ ಸುರೇಶ್), ಶಿಲ್ಪಾ ಶ್ರೀನಿವಾಸ್ (ಇವರು ನಿರ್ಮಾಪಕರು ಕೂಡ), ನಿರ್ಮಾಪಕರಾಗಿಯೇ ಹೆಸರಾಗಿರುವ ಎನ್.ಎಂ.ಸುರೇಶ್ (ಎಕ್ಸ್‌ಕ್ಯೂಸ್ ಮಿ ಖ್ಯಾತಿಹಾಗೂ ನಿರ್ಮಾಪಕ ಎ.ಗಣೇಶ್ ಸ್ಪರ್ಧಾ ಕಣದಲ್ಲಿದ್ದಾರೆಈ ನಾಲ್ವರಲ್ಲಿ ಎ.ಗಣೇಶ್ತಮಗೆ ರಾಘವೇಂದ್ರ ರಾಜಕುಮಾರ್ ಸೇರಿದಂತೆ ಸಾಕಷ್ಟು ಮಂದಿ ನಿರ್ಮಾಪಕರುಉದ್ಯಮಿಗಳು ಬೆಂಬಲವಾಗಿ ಇದ್ದಾರೆ ಎಂದು ಸಾಮಾಜಿಕ ತಾಣಗಳ ಮೂಲಕ ಹೇಳಿಕೊಂಡಿದ್ದಾರೆಎನ್.ಎಂ.ಸುರೇಶ್ ಅವರಿಗೆ ಸಾ.ರಾ.ಗೋವಿಂದು ಅವರ ಸಕಾರಣ ಬೆಂಬಲ ಇದೆಯಂತೆತಾವು ಮತ್ತು ಎಸ್..ಚಿನ್ನೇಗೌಡ ಅವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಸಂದರ್ಭದಲ್ಲಿ ಸುರೇಶ್ ತಮ್ಮ ನಾಮಪತ್ರವನ್ನು ಹಿಂತೆಗೆದು ಕೊಂಡದ್ದು ಇದಕ್ಕೆ ಕಾರಣ ಎಂದು ಅವರೇ ಹೇಳಿಕೊಂಡಿದ್ದಾರೆ.

ನಾಲ್ವರು ಸ್ಪರ್ಧಿ ಗಳಲ್ಲಿ ವಿತರಕ ಮಾರ್ಸ್ ಸುರೇಶ್ ಅವರನ್ನು ಹೊರತುಪಡಿಸಿಉಳಿದ ಮೂವರು ಸಾರ್ವಜನಿಕ ಚುನಾವಣೆಯ ರೀತಿಯಲ್ಲಿಯೇ ಪ್ರಚಾರ ನಡೆಸುತ್ತಿದ್ದಾರೆಎನ್.ಎಂ.ಸುರೇಶ್ ಅವರು ಮೊನ್ನೆ ಮೈಸೂರಿನಲ್ಲೂ ವಾಣಿಜ್ಯ ಮಂಡಳಿಯ ಸದಸ್ಯರ ಸಭೆ ಕರೆದು ಸಂತೋಷ ಕೂಟ ಏರ್ಪಡಿಸಿದ್ದರುಅಲ್ಲಿ ಸುಮಾರು ಪ್ರದರ್ಶಕರುವಿತರಕರು ಮತ್ತು ನಿರ್ಮಾಪಕರು ಸೇರಿದಂತೆ ಎಪ್ಪತ್ತು ಮಂದಿ ಮತದಾರರು ಇದ್ದಾರೆಈ ಸಂತೋಷ ಕೂಟ ಬೆಂಗಳೂರಿನಲ್ಲಿ ನಿತ್ಯ ನಡೆಯುತ್ತಿರುತ್ತದೆ.

ಮೈಸೂರು ಮೂಲದ.ಗಣೇಶ್ ಅವರ ಸಂತೋಷ ಕೂಟಸಕಲೇಶಪುರ ದಲ್ಲಿನ ರೆಸಾರ್ಟ್ ಸೇರಿದಂತೆ ಬೆಂಗಳೂರಿನಿಂದ ಆಚೆಗೂ ವಿಸ್ತರಿಸಿಕೊಂಡಿರುವುದು ಅವರ ಜೊತೆಗಾರ ಮತದಾರರಿಗೆ ಖುಷಿ ತಂದ ವಿಷಯಇನ್ನು ವಿತರಕರಾಗಿನಿರ್ಮಾಪಕರಾಗಿ ಸಾಕಷ್ಟು ಏರಿಳಿತಗಳನ್ನು ಕಂಡುಕಳೆದ ಬಾರಿ ವಾಣಿಜ್ಯ ಮಂಡಳಿಯಲ್ಲಿ ಉಪಾಧ್ಯಕ್ಷರಾಗಿದ್ದ ಶಿಲ್ಪಾ ಶ್ರೀನಿವಾಸ್ ಅವರು ಮತಯಾಚನೆಗೆ ಮತದಾರರ ಮನೆಗೇ ತೆರಳುತ್ತಿದ್ದಾರೆ ಮಾತ್ರವಲ್ಲಪುಟ್ಟದೊಂದು ಉಡುಗೊರೆಯೊಂದಿಗೆ ತಮಗೆ ಮತ ನೀಡಬೇಕು ಎಂದು ಕೋರುತ್ತಿದ್ದಾರೆಉಡುಗೊರೆಯಲ್ಲಿ ಬೆಳ್ಳಿತಟ್ಟೆದೀಪಗಳುಸಿಹಿ ತಿನಿಸುಶಾಲು ಇತ್ಯಾದಿ ಇವೆ ಎನ್ನಲಾಗಿದೆ.

ಎರಡು ಬಾರಿ ಗೌರವ ಕಾರ್ಯದರ್ಶಿಯಾಗಿಎರಡು ಬಾರಿ ಉಪಾಧ್ಯಕ್ಷರಾಗಿ ವಾಣಿಜ್ಯ ಮಂಡಳಿಯಲ್ಲಿ ಸೇವೆ ಸಲ್ಲಿಸಿರುವ ಮಾರ್ಸ್ ಸುರೇಶ್ ಚುನಾವಣಾ ರಾಜಕೀಯದಿಂದ ದೂರವಿದ್ದವರುವಿತರಕ ವಲಯದ ಹಿರಿಯರ ಒತ್ತಾಯದ ಮೇರೆಗೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದುಸಂತೋಷಕೂಟಉಡುಗೊರೆಗಳಿಂದ ಅವರು ದೂರಅವರ ತಂಡದಲ್ಲಿ ಹಂಚಿಕಾ ವಲಯದ ಹಿರಿಯರಾದ ನಾರಾಯಣ ರೆಡ್ಡಿಕರಿಸುಬ್ಬು ಮತ್ತು ನಿರ್ಮಾಪಕರ ವಲಯದ ರೂಪಾ ಅಯ್ಯರ್ ಇದ್ದಾರೆ.

ಮೊನ್ನೆ ಈ ತಂಡದ ಪತ್ರಿಕಾಗೋಷ್ಠಿಯ ನಂತರ ರೂಪಾ ಅಯ್ಯರ್ ಅವರು, ‘ಸಂತೋಷ ಕೂಟ ಹಮ್ಮಿಕೊಳ್ಳುವುದು ನಮಗೆ ಸಾಧ್ಯವಿಲ್ಲದೆ ಏನಲ್ಲಸಂತೋಷ ಕೂಟ ಮಾಡಿ ಗೆಲ್ಲುವುದು ಬೇಕಾಗಿಲ್ಲಗೆದ್ದ ಮೇಲೆ ಬೇಕಾದರೆ ಸಂತೋಷ ಕೂಟ ಮಾಡೋಣ’ ಎಂದ ಮಾತು ಉಳಿದ ಸ್ಪಽಗಳಿಗೆ ಅಷ್ಟೇನೂ ಪಥ್ಯವಾಗುವಂತಹದಲ್ಲರೂಪಾ ಅಯ್ಯರ್ ಕೊರೊನಾ ದಿನಗಳಲ್ಲಿ ಚಿತ್ರೋ ದ್ಯಮಿಗಳಿಗೆ ಮಾಡಿದ ನೆರವನ್ನು ಚುನಾವಣೆಯ ವೇಳೆ ಉದ್ಯಮದ ಮಂದಿ ನೆನಪಿಸಿಕೊಳ್ಳುತ್ತಿದ್ದಾರೆ.

ಹ್ಞಾಂಅಧ್ಯಕ್ಷರಾಗಿ ಆಯ್ಕೆಯಾಗಿ ಬಂದರೆ ತಾವೇನು ಮಾಡುತ್ತೇವೆ ಎನ್ನುವುದನ್ನು ಹೇಳಿದ್ದಾರೆ ಸ್ಪರ್ಧಿ ಗಳು.ಗಣೇಶ್ ಅವರು ನಿರ್ಮಾಪಕಹಂಚಿಕೆದಾರ ಮತ್ತು ಪ್ರದರ್ಶಕ ವಲಯಗಳಿಗೆ ಕಲ್ಯಾಣ ನಿಧಿಯೊಂದನ್ನು ಸ್ಥಾಪಿಸಿಆ ಮೂಲಕ ಅರವತ್ತು ವರ್ಷ ದಾಟಿದ ಸದಸ್ಯರಿಗೆ ನೆರವಾಗುವ ಕೆಲಸ ಮಾಡುವುದರ ಜೊತೆಗೆಸರ್ಕಾರದ ಮಟ್ಟದಲ್ಲಿ ಸಾಕಷ್ಟು ಸಂಪರ್ಕ ತಮಗೆ ಇರುವುದರಿಂದ ಅಲ್ಲಿ ಆಗಬೇಕಾದ ಕೆಲಸಗಳನ್ನು ಸುಲಭವಾಗಿ ಮಾಡಿಸುತ್ತೇನೆಅಲ್ಲದೇ ವಾಣಿಜ್ಯ ಮಂಡಳಿಯ ಕಾನೂನಿನಲ್ಲಿ ಇಲ್ಲದೆ ಇದ್ದರೂಹೊರಗಡೆಯಿಂದ ಆರ್ಥಿಕ ನೆರವನ್ನು ಪಡೆದು ತಮ್ಮ ಯೋಜನೆಗಳನ್ನು ಜಾರಿಗೆ ತರುವುದಾಗಿಯೂ ಹೇಳುತ್ತಾರೆ.

ವಿತರಕರಾಗಿ ಸಾಕಷ್ಟು ಚಿತ್ರಗಳನ್ನು ಹಂಚಿಕೆ ಮಾಡಿರುವನಿರ್ಮಾಪಕರೂ ಆಗಿರುವ ಶಿಲ್ಪಾ ಶ್ರೀನಿವಾಸ್ ಹೇಳುತ್ತಾರೆನಾವು ಚಿತ್ರ ನಿರ್ಮಾಣ ಮಾಡುವಾಗ ಬಂಡವಾಳ ಹಾಕಿರುತ್ತೇವೆನಿರ್ಮಾಣ ನಿರ್ವಾಹಕರು ಮತ್ತು ನಿರ್ದೇಶಕರು ಹೇಳಿದ ಹಾಗೆ ಖರ್ಚು ಮಾಡುತ್ತೇವೆನಮಗೆ ಅದರ ಸರಿಯಾದ ರೀತಿ ಗೊತ್ತಿರುವುದಿಲ್ಲಹಾಗಾಗಿ ಚುನಾವಣೆಗೆ ಅಂತಲೇ ಒಂದು ಸಲಹೆಗಾರರ ತಂಡ ಇದೆಅವರು ಹೇಳಿದಂತೆ ಪ್ರಚಾರ ಮಾಡುತ್ತಿದ್ದೇನೆಗೆದ್ದರೆಚಿತ್ರೋದ್ಯಮಕ್ಕೆ ಸಹಕಾರಿಯಾಗುವ ಒಂದಷ್ಟು ಕೆಲಸಗಳನ್ನು ಮಾಡಬೇಕು ಎಂದುಕೊಂಡಿದ್ದೇನೆವಿಶೇಷವಾಗಿ ವಾಣಿಜ್ಯ ಮಂಡಳಿಯ ಸದಸ್ಯರ ಕುಟುಂಬದ ಕ್ಷೇಮಾಭಿವೃದ್ಧಿ ಟ್ರಸ್ಟ್ ಸ್ಥಾಪಿಸಿ ಆ ಮೂಲಕ ನೆರವಾಗಬೇಕು.

ಗಣೇಶ್ ಅವರಿಗೆ ನಿರ್ಮಾಪಕರಿಗೆ ಆಗುವ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಯೋಚನೆ ಇದೆಚಿತ್ರ ಬಿಡುಗಡೆಗೆ ಪ್ರತಿವಾರ ಯುಎಫ್‌ಒಗೆ ಹನ್ನೊಂದು ಸಾವಿರ ರೂಶುಲ್ಕ ನೀಡಬೇಕಾಗುತ್ತದೆಕೇರಳದಲ್ಲಿ ಈಗಾಗಲೇ ಅಲ್ಲಿನದೇ ಆದ ಒಂದು ವ್ಯವಸ್ಥೆ ಇದೆಇಲ್ಲೂ ಹಾಗೆ ಮಾಡುವುದರ ಜೊತೆಗೆ ಚಿತ್ರಮಂದಿರಗಳಲ್ಲಿ ಶೇಕಡಾವಾರು ಬಾಡಿಗೆ ವ್ಯವಸ್ಥೆವಾಣಿಜ್ಯ ಮಂಡಳಿಯ ಸದಸ್ಯರಲ್ಲಿ ಪ್ರತಿಶತ 35ರಷ್ಟು ಮಂದಿಗೆ ಅರವತ್ತು ವರ್ಷ ವಯಸ್ಸು ದಾಟಿದ್ದು ಅವರಿಗೆ ವಿಶ್ರಾಂತಿ ವೇತನ ನೀಡುವ ಯೋಜನೆ ಕೂಡ ಇವರ ಕಾರ್ಯಕ್ರಮದಲ್ಲಿದೆ.

ಸಿನಿಮಾ ವಿತರಣೆಪ್ರದರ್ಶನಗಳ ವೇಳೆ ಎದುರಾಗುವ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಪ್ರಯತ್ನವಾಣಿಜ್ಯ ಮಂಡಳಿಯಿಂದ ದೂರ ಉಳಿ ದಿರುವ ಪ್ರದರ್ಶಕರನ್ನು ಮರಳಿಸುವ ಯೋಜನೆಹಿಂದೆ ಡಾ.ಜಯಮಾಲ ಅವರ ಅವಽಯಲ್ಲಿ ಆರಂಭಿಸಿ ನಂತರದ ದಿನಗಳಲ್ಲಿ ಸ್ಥಗಿತವಾದ ಗೃಹನಿರ್ಮಾಣ ಸಹಕಾರ ಸಂಘಕ್ಕೆ ಚಾಲನೆಪ್ರವೇಶ ಶುಲ್ಕ ನಿಯಂತ್ರಣಕಾರ್ಮಿಕರೂ ಸೇರಿದಂತೆ ಚಿತ್ರೋದ್ಯಮದ ಎಲ್ಲ ವಲಯಗಳ ಮಂದಿಗೆ ಸರ್ಕಾರಗಳಿಂದ ಸಿಗುವ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಪ್ರಯತ್ನ ಹೀಗೆ ಮೂಲಭೂತ ಯೋಜನೆ ಮಾರ್ಸ್ ಸುರೇಶ್ ಮತ್ತವರ ತಂಡದ್ದು.

ಚುನಾವಣೆಯಲ್ಲಿ ಮತದಾರರು ಯಾರನ್ನು ಅಧ್ಯಕ್ಷ ಸ್ಥಾನಕ್ಕೆ ತರುತ್ತಾರೆ ಎನ್ನುವುದು ನಾಳೆ ಸಂಜೆಯ ವೇಳೆಗೆ ತಿಳಿಯಲಿದೆಸಂತೋಷ ಕೂಟ ಮೇಜವಾನಿಉಡುಗೊರೆಗಳು ಮತಗಳಾಗಿ ಪರಿವರ್ತನೆ ಆಗುವುದೇ ನೋಡಬೇಕುಈ ಬಾರಿ ಒಂದು ಸಾವಿರಕ್ಕೂ ಹೆಚ್ಚು ನಿರ್ಮಾಪಕರು೩೫೦ಕ್ಕೂ ಹೆಚ್ಚು ವಿತರಕರುಒಂದು ನೂರಕ್ಕೂ ಹೆಚ್ಚು ಪ್ರದರ್ಶಕರು ಮತದಾರರ ಪಟ್ಟಿಯಲ್ಲಿದ್ದಾರೆ.

ನಾನೇ ಗೆಲ್ಲುತ್ತೇನೆ’ ಎನ್ನುವ ಗಣೇಶ್ಗೆದ್ದರೆ ಕೆಲಸ ಮಾಡುತ್ತೇನೆ’ ಎನ್ನುವ ಶಿಲ್ಪಾ ಶ್ರೀನಿವಾಸ್ಹಿಂದೆ ಎರಡು ಬಾರಿ ನಾಮಪತ್ರ ಹಿಂತೆಗೆದುಕೊಂಡಿದ್ದೇನೆಈ ಬಾರಿ ಸ್ಪ ರ್ಧಿ  ಸಿದ್ದೇನೆಮಾರ್ಸ್ ಸುರೇಶ್ ಕೂಡ ಒಳ್ಳೆಯ ಅಭ್ಯರ್ಥಿಸಮರ್ಥರು’ ಎನ್ನುವ ಎನ್.ಎಂ.ಸುರೇಶ್ಈ ಬಾರಿ ಸುರೇಶ್ ವರ್ಸಸ್ ಸುರೇಶ್ ಎನ್ನುತ್ತಿರುವ ಗಾಂಧಿನಗರ… ಗೆಲುವಿನ ನಗೆ ಬೀರುವುದು ಯಾರು ಎಂಬುದನ್ನು ಕಾದು ನೋಡೋಣ.

andolanait

Share
Published by
andolanait

Recent Posts

ತಿ.‌ ನರಸೀಪುರ: ಬೈಕ್ ಡಿಕ್ಕಿ ಚಿರತೆ ಸಾವು

ತಿ. ನರಸೀಪುರ: ತಾಲೂಕಿನ ಬನ್ನೂರು ಹೋಬಳಿಯ ಬಸವನಹಳ್ಳಿ ಗ್ರಾಮದ ಸಮೀಪದ ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನ ಚಿರತೆಗೆ ಡಿಕ್ಕಿ ಹೊಡೆದ ಪರಿಣಾಮ…

6 hours ago

ತಿರುಪತಿ ಲಡ್ಡು: ತುಪ್ಪದಲ್ಲಿ ಪ್ರಾಣಿ ಕೊಬ್ಬು ಬಳಕೆ

ಅಮರಾವತಿ: ಜಗತ್‌ ಪ್ರಸಿದ್ಧ ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಹಾಗೂ ಕಳಪೆ ಗುಣಮಟ್ಟದ ಪದಾರ್ಥಗಳು ಪತ್ತೆಯಾಗಿದೆ ಎಂದು ತೆಲುಗು…

8 hours ago

ಬುರ್ಖಾಧಾರಿ ಮಹಿಳೆಯಿಂದ ಸಲ್ಮಾನ್‌ ಖಾನ್‌ ತಂದೆಗೆ ಜೀವ ಬೆದರಿಕೆ: ಮಹಿಳೆ ಸೇರಿ ಇಬ್ಬರ ಬಂಧನ

ಮುಂಬೈ:‌ ಬಾಲಿವುಡ್‌ನ ಭಾಯಿಜಾನ್ ಸಲ್ಮಾನ್‌ ಖಾನ್‌ ಅವರ ತಂದೆಗೆ ಬುರ್ಖಾ ಧರಿಸಿದ್ದ ಮಹಿಳೆ ಹಾಗೂ ಇನ್ನೊರ್ವ ವ್ಯಕ್ತಿ ಜೀವ ಬೆದರಿಕೆ…

8 hours ago

ಶಾಸಕ ಮುನಿರತ್ನಗೆ ಜಾಮೀನು: ಅತ್ಯಾಚಾರ ಪ್ರಕರಣದಲ್ಲಿ ಮತ್ತೆ ಬಂಧನ ಸಾಧ್ಯತೆ

ಬೆಂಗಳೂರು: ಗುತ್ತಿಗೆದಾರರೊಬ್ಬರಿಗೆ ಜಾತಿನಿಂದನೆ ಹಾಗೂ ಪ್ರಾಣ ಬೆದರಿಕೆ ಹಾಕಿದ ಪ್ರಕರಣದಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನಗೆ…

9 hours ago

ನುಡಿ ಹಬ್ಬಕ್ಕೆ ಆಹ್ವಾನಿಸಲು ಸಿದ್ಧವಾಗಿದೆ ಕನ್ನಡ ರಥ

ಮಂಡ್ಯ: ಜಿಲ್ಲೆಯಲ್ಲಿ ಡಿಸೆಂಬರ್ 20, 21, 22 ರಂದು ನಡೆಯಲಿರುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ…

10 hours ago

ಬಸ್‌ನಲ್ಲಿ ಪ್ರಯಾಣ: ಮಹಿಳೆಯರಿಂದ ಶಕ್ತಿಯೋಜನೆಯ ಅಭಿಪ್ರಾಯ ಪಡೆದ ಪುಷ್ಪ ಅಮರನಾಥ್‌

ಮೈಸೂರು: ರಾಜ್ಯ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಶಕ್ತಿಯೋಜನೆ ಫಲಾನುಭವಿಗಳ ಅಭಿಪ್ರಾಯ ಸಂಗ್ರಹಿಸಲು ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆಯಾದ ಡಾ…

10 hours ago